ರಾಶಿ ಭವಿಷ್ಯ: ನಿಮ್ಮ ಸ್ವಂತ ವಾಹನದಲ್ಲಿ ಇಂದು ಎಲ್ಲಿಗೂ ಪ್ರಯಾಣ ಮಾಡಬೇಡಿ

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 12 ಜೂನ್​​ 2024ರ​​ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

ರಾಶಿ ಭವಿಷ್ಯ: ನಿಮ್ಮ ಸ್ವಂತ ವಾಹನದಲ್ಲಿ ಇಂದು ಎಲ್ಲಿಗೂ ಪ್ರಯಾಣ ಮಾಡಬೇಡಿ
ದಿನಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 12, 2024 | 12:15 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಬುಧವಾರ (ಜೂನ್. 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ವ್ಯಾಘಾತ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 00 ನಿಮಿಷಕ್ಕೆ, ರಾಹು ಕಾಲ 2:33 ರಿಂದ 14:10ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:42 ರಿಂದ 09:19ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:56 ರಿಂದ ಮಧ್ಯಾಹ್ನ 12:33ರ ವರೆಗೆ.

ಮೇಷ ರಾಶಿ :ಎಲ್ಲವನ್ನೂ ಕಳೆದುಕೊಳ್ಳುವುದಕ್ಕಿಂತ ಅಲ್ಪವನ್ನು ಉಳಿಸಿಕೊಳ್ಳುವುದು ಜಾಣತನ. ನಿಮ್ಮನ್ನು ಯಾರಾದರೂ ಬಳಸಿಕೊಂಡು ಕೈಬಿಡಬಹುದು. ನೀವಿಂದು ಮಂಗಲಕಾರ್ಯಗಳಿಗೆ ಹಣವನ್ನು ನೀಡುವಿರಿ. ದೂರದ ಊರಿಗೆ ಪ್ರಯಾಣಹೊಗುವ ಸಾಧ್ಯತೆ ಇದೆ. ಕೆಲಸವು ಬಹಳ ನಿಧಾನವಾಗುವುದು. ಬೇಸರವೂ ಬರಬಹುದು. ಉದ್ಯೋಗಕ್ಕೆ ಸಂಬಂಧಪಟ್ಟ ನಿರ್ಧಾರವನ್ನು ಒಬ್ಬರೇ ತೆಗೆದುಕೊಳ್ಳಬೇಡಿ. ವಿದ್ಯಾಭ್ಯಾಸದ ಬಗದಗೆ ಅತಿಯಾದ ಚಿಂತೆ ಬೇಡ. ಆಗುವುದು ಆಗಿಯೇ ಆಗುವುದು ಎಂಬ ಸತ್ಯ ತಿಳಿದಿರಿಲಿ. ಆರೋಗ್ಯವು ಹಾಳಾಗಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಹಿನ್ನಡೆಯಾಗುವುದು. ಸಹೋದ್ಯೋಗಿಗಳ ವರ್ತನೆಯು ಇಷ್ಟವಾಗದೇ ಸಿಟ್ಟಾಗುವಿರಿ. ಆಕಸ್ಮಿಕ ದ್ರವ್ಯ ಲಾಭದಿಂದ ಖುಷಿ ಪಡುವಿರಿ. ನಿಮ್ಮ ಉಪಕರಣಗಳು ದುರಸ್ತಿಗೆ ಬರಬಹುದು.

ವೃಷಭ ರಾಶಿ :ಆದಾಯವನ್ನು ಭೂಮಿಯ ಖರೀದಿಗೆ ಹಾಕುವ ಯೋಜನೆ ಬರುವುದು. ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಲ್ಲ ಕಡೆ ಎಂದು ಅನ್ನಿಸುತ್ತಿರಬಹುದು. ಅದನ್ನು ಆಲೋಚನೆಯಿಂದ ದೂರವಿರಿಸಿ. ಇಂದು ದುಃಸ್ವಪ್ನವು ನಿಮ್ಮನ್ನು ಚಿಂತಿತರನ್ನಾಗಿ ಮಾಡುವುದು. ಸೌಂದರ್ಯಪ್ರಜ್ಞೆಯು ನಿಮಗೆ ವರದಾನವೆಂದೇ ತಿಳಿಯುತ್ತದೆ. ನಿಮ್ಮ ಬಗ್ಗೆ ನಿಮ್ಮ ಶತ್ರಗಳು ವಿವರವನ್ನು ಕಲೆಹಾಕಬಹುದು. ಅತಿಯಾದ ನಿರ್ಲಕ್ಷ್ಯ ಬೇಡ. ಯಾವ ನಕಾರಾತ್ಮಕ ಆಲೋಚನೆಗಳಿಗೂ ಸ್ಪಂದಿಸಲಾರಿರಿ. ನಿಯಮ‌ಪಾಲನೆಯಲ್ಲಿ ನೀವು ನಿಸ್ಸೀಮರು. ಅನಾದರದಿಂದ ನಿಮಗೆ ಬೇಸರವಾದೀತು. ಎಲ್ಲ ಸಮಸ್ಯೆಯೂ ನಿಮ್ಮದೇ ಎಂಬಂತೆ ಇರುವಿರಿ. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು.

ಮಿಥುನ ರಾಶಿ :ಇಂದು ಶ್ರಮಕ್ಕೆ ಯೋಗ್ಯವಾದ ಫಲವು ಸಿಗದೇ ಬೇಸರಬರಬಹುದು. ಕೃಷಿಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ಬಯಸುತ್ತೀರಿ. ನಿಮ್ಮ ಸ್ವಂತ ವಾಹನದಲ್ಲಿ ಇಂದು ಎಲ್ಲಿಗೂ ಪ್ರಯಾಣ ಮಾಡಬೇಡಿ. ನ್ಯಾಯಸಮ್ಮತವಲ್ಲದ ಕೆಲಸದಲ್ಲಿ ತೊಡಗುವಿರಿ. ನಿಮಗೆ ಅದನ್ನು ಹಿತಶತ್ರುಗಳೇ ಮಾಡುವಂತೆ ಮಾಡುತ್ತಾರೆ. ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಕೀಳರಿಮೆ ಬರಬಹುದು. ಅನ್ಯರು ಮಾಡುವ ಕುಚೋದ್ಯವು ನಿಮಗೆ ಸಹಿಸಲಾಗದು. ಉತ್ತಮವಾದ ವಿದ್ಯಾಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ. ಹೊಸದಾದ ವಾಹನವನ್ನು ಖರೀದಿಸುವಿರಿ. ಪ್ರಭಾವೀವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು. ಉದ್ಯಮದಲ್ಲಿ ಕ್ರಿಯಾಶೀಲತೆಯನ್ನು ಬಯಸುವಿರಿ. ನೂತನ ವಸ್ತುಗಳಿಂದ ಸಂತೋಷವು ಸಿಗುವುದು.

ಕಟಕ ರಾಶಿ :ಇಂದು ನೀವು ಯಾರ ಮಾತಿನ ಮೇಲೂ ಪೂರ್ವಾಗ್ರಹದಿಂದ ಪೀಡಿತರಾದವರ ಮನಃಸ್ಥಿತಿಯನ್ನು ಇರಿಸಿಕೊಳ್ಳಬೇಡಿ‌. ಅಧ್ಯಾತ್ಮದಲ್ಲಿ ಒಲವು ಮೂಡಬಹುದು. ನಿಮಗೆ ಗೌರವ ಸಿಗದ ಜಾಗದಲ್ಲಿ ಹೆಚ್ಚು ಕಾಲ ಇರಲಾರಿರಿ. ಎತ್ತರದ ಯಾವುದಾರೂ ಪ್ರದೇಶಕ್ಕೆ ಹೋಗಬೇಕು ಎಂದು ಅನ್ನಿಸಬಹುದು. ಉದ್ಯೋಗದ ಸ್ಥಳದಲ್ಲಿ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಬೇಕೆನಿಸಿದ ವಸ್ತುವನ್ನು ಶ್ರಮದಿಂದ ಪಡೆಯುವಿರಿ. ನಿಮಗೆ ಹಿತವಚನವು ಮನಸ್ಸಿಗೆ ಬೇಸರವನ್ನೇ ತರಿಸುವುದು. ವಾಹನ ಖರೀದಿಯು ನಿಮಗೆ ಅನಿವಾರ್ಯ ಎನಿಸುವುದು. ಅಪಕ್ವಮನುಷ್ಯರ ಜೊತೆ ಮಾತುಕತೆಗಳು ಬೇಡ. ಅಪಮಾನವಾದೀತು. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ. ಕೃತಿಯಿಂದ ತೋರಿಸಿ. ಮನೆಯಿಂದ ನಿಮಗೆ ಶುಭಸಂದೇಶದ ಬರಲಿದೆ.

ತಾಜಾ ಸುದ್ದಿ
ಚನ್ನಪಟ್ಟಣ ತಾಲೂಕು ಪಂಚಾಯತಿ ಸಭಾಂಗಣದಲ್ಲೇ ವಿದ್ಯುತ್ ಸಮಸ್ಯೆ
ಚನ್ನಪಟ್ಟಣ ತಾಲೂಕು ಪಂಚಾಯತಿ ಸಭಾಂಗಣದಲ್ಲೇ ವಿದ್ಯುತ್ ಸಮಸ್ಯೆ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌
ಕಾಸರಗೋಡಿನಲ್ಲಿ ಕೋಣದ ಆರ್ಭಟಕ್ಕೆ ಮನೆ, ಗೇಟು, ಕಾರು ನಜ್ಜುಗುಜ್ಜು
ಕಾಸರಗೋಡಿನಲ್ಲಿ ಕೋಣದ ಆರ್ಭಟಕ್ಕೆ ಮನೆ, ಗೇಟು, ಕಾರು ನಜ್ಜುಗುಜ್ಜು
ವಿಭಿನ್ನತೆಯಿಂದಲೇ ಜನರ ಮನ ಗೆದ್ದ ಈ ಕೋಳಿಯನ್ನೊಮ್ಮೆ ನೋಡಿ
ವಿಭಿನ್ನತೆಯಿಂದಲೇ ಜನರ ಮನ ಗೆದ್ದ ಈ ಕೋಳಿಯನ್ನೊಮ್ಮೆ ನೋಡಿ
ಬಸ್​​ಲ್ಲಿ ಸಿಕ್ತು 2.5 ಲಕ್ಷ ರೂ ಹಣ: ಹಿಂದಿರುಗಿಸಿದ KSRTC ಸಿಬ್ಬಂದಿ
ಬಸ್​​ಲ್ಲಿ ಸಿಕ್ತು 2.5 ಲಕ್ಷ ರೂ ಹಣ: ಹಿಂದಿರುಗಿಸಿದ KSRTC ಸಿಬ್ಬಂದಿ
ದರ್ಶನ್ ಅಂಧಾಭಿಮಾನಿ ಜೊತೆಗಿನ ಫೋನ್ ಮಾತುಕತೆ ಬಿಚ್ಚಿಟ್ಟ ಪ್ರಥಮ್
ದರ್ಶನ್ ಅಂಧಾಭಿಮಾನಿ ಜೊತೆಗಿನ ಫೋನ್ ಮಾತುಕತೆ ಬಿಚ್ಚಿಟ್ಟ ಪ್ರಥಮ್
ನಭೋ ಮಂಡಲದಲ್ಲಿ ವಿಸ್ಮಯ, ಸೂರ್ಯನ ಸುತ್ತ ಕಂಡು ಬಂದ ಕಾಮನಬಿಲ್ಲಿನ ಉಂಗುರ
ನಭೋ ಮಂಡಲದಲ್ಲಿ ವಿಸ್ಮಯ, ಸೂರ್ಯನ ಸುತ್ತ ಕಂಡು ಬಂದ ಕಾಮನಬಿಲ್ಲಿನ ಉಂಗುರ
KRS ನಾರ್ಥ್ ಬ್ಯಾಂಕಿನಿಂದ ಹುಲಿಕೆರೆವರೆಗೆ ನಾಲಾ ಕಾಮಗಾರಿ ವೀಕ್ಷಿಸಿದ ಸಚಿವ
KRS ನಾರ್ಥ್ ಬ್ಯಾಂಕಿನಿಂದ ಹುಲಿಕೆರೆವರೆಗೆ ನಾಲಾ ಕಾಮಗಾರಿ ವೀಕ್ಷಿಸಿದ ಸಚಿವ