ಈ ಐದು ರಾಶಿಯವರು ಸಿಟ್ಟಿನಿಂದ ತಮ್ಮ ನೆಮ್ಮದಿ ಮಾತ್ರವಲ್ಲ ಇತರರ ಸಂತೋಷವನ್ನೂ ಹಾಳುಮಾಡುವರು
Angry zodiac signs: ಜ್ಯೋತಿಷ್ಯದ ಪ್ರಕಾರ ಈ ಐದು ರಾಶಿಯವರ ಸಿಟ್ಟು ಬಹಳ ದೊಡ್ಡ ಸಮಸ್ಯೆ ತರುತ್ತದೆ. ಅತಿಯಾದ ಸಿಟ್ಟಿನಿಂದ ಮೇಷ, ವೃಷಭ, ಕನ್ಯಾ, ಸಿಂಹ, ವೃಶ್ಚಿಕ ರಾಶಿಯ ಜನರು ತಮ್ಮ ನೆಮ್ಮದಿಯನ್ನಷ್ಟೇ ಅಲ್ಲದೇ ಇತರರ ಸಂತೋಷವನ್ನೂ ಹಾಳುಮಾಡುವರು. ಕ್ಷಣಿಕದ ಸಿಟ್ಟಿನಿಂದ ಇತರರ ಮೇಲೆ ಕೂಗಾಡಿ, ಅವರ ಮನಸ್ಸನ್ನೂ ನೋಯಿಸಿ, ವಾತಾವರಣವನ್ನು ಪ್ರಕ್ಷುಬ್ದಗೊಳಿಸುವಲ್ಲಿ ತಮಗರಿವಿಲ್ಲದೇ ಸಫಲರಾಗುತ್ತಾರೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.
ಸಿಟ್ಟು ಯಾರಿಗೆ ಬರುವುದಿಲ್ಲ ಹೇಳಿ? ಆದರೆ ಜ್ಯೋತಿಷ್ಯದ ಪ್ರಕಾರ ಈ ಐದು ರಾಶಿಯವರ (Zodiac signs) ಸಿಟ್ಟು ಬಹಳ ದೊಡ್ಡ ಸಮಸ್ಯೆ ತರುತ್ತದೆ. ಈ ಲೇಖನದಲ್ಲಿ ತಿಳಿಸುವುದಕ್ಕೆ ಹೊರಟಿರುವುದು ಐದು ರಾಶಿಗಳ ಬಗ್ಗೆ. ಅಂದ ಹಾಗೆ ಸಿಟ್ಟು ಮಾಡಿಕೊಳ್ಳಬೇಡಿ ಎಂದು ಹೇಳುವುದು ಹೇಗೆ? ಅದರ ಬದಲಿಗೆ ನಿಯಂತ್ರಣ ಮಾಡಿಕೊಳ್ಳುವ ಕಡೆಗೆ ಗಮನಿಸಬೇಕು. ಇನ್ನು ಸಿಟ್ಟು ತರುವಂಥ ಅಂಶ ಯಾವುದು ಎಂಬುದನ್ನು ಮನಸ್ಸಲ್ಲಿ ಇಟ್ಟುಕೊಳ್ಳಬೇಕು. ಆಗಲಾದರೂ ಅಂಥ ಪರಿಸ್ಥಿತಿ ಎದುರಾಗುವಾಗ ಒಂದಿಷ್ಟು ಮುಂಜಾಗ್ರತೆ ವಹಿಸಬಹುದು. ಆ ಐದು ರಾಶಿಗಳ ಬಗ್ಗೆ ತಿಳಿಯುವುದಕ್ಕೆ ಮುಂದೆ ಓದಿ.
ಮೇಷ: ಮೇಷ ರಾಶಿಯವರ ಅಧಿಪತಿ ಕುಜ ಗ್ರಹ. ರಾಶಿಚಕ್ರದ ಮೊದಲ ರಾಶಿ ಇದು. ಈ ರಾಶಿಯವರಿಗೆ ಸಿಟ್ಟು ಬರುವುದು ಬಹಳ ಬೇಗ. ಇವರು ಏನಾದರೂ ಹೇಳಿದ ತಕ್ಷಣ ಅದನ್ನು ಮಾಡುವುದಕ್ಕೆ ಆರಂಭಿಸಬೇಕು ಎಂಬುದು ನಿರೀಕ್ಷೆ ಆಗಿರುತ್ತದೆ. ಒಂದು ವೇಳೆ ಪ್ರಶ್ನೆ ಮಾಡುವುದೋ ಅಥವಾ ಅದರ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ಮಾಡುವುದೋ ಆದಲ್ಲಿ ಸಿಕ್ಕಾಪಟ್ಟೆ ಸಿಟ್ಟಾಗಿಬಿಡುತ್ತಾರೆ. ಈ ರಾಶಿಯವರು ಏನು ಹೇಳಿದರೆ ಅದನ್ನು ಕೇಳಿ, ಕೆಲಸ ಮಾಡುವಂಥವರನ್ನು ಕಂಡರೆ ಬಲು ಪ್ರೀತಿ. ತಮ್ಮ ಹಠ ನಡೆಯಲೇಬೇಕು ಎಂಬ ಪ್ರಯತ್ನದಲ್ಲಿ ಆಗಾಗ ಪೆಟ್ಟು ತಿನ್ನುವುದು ಸಹ ಉಂಟು, ಜತೆಗೆ ಕೈಯಿಂದ ಹಣ ಕಟ್ಟಿಕೊಡುವುದು ಸಹ ಉಂಟು. ಹೀಗೇನೇ ಆದರೂ ತಮ್ಮ ಹಠವನ್ನು ಬಿಡುವ ಜನರು ಇವರಲ್ಲ.
ಇದನ್ನೂ ಓದಿ: Daily Horoscope Video: ಸೋಮವಾರ ರಾಶಿ ಭವಿಷ್ಯ, ಇಂದಿನ ರಾಶಿ ಫಲ ತಿಳಿದುಕೊಳ್ಳಲು ವಿಡಿಯೋ ನೋಡಿ
ವೃಷಭ: ವೃಷಭ ರಾಶಿಯ ಅಧಿಪತಿ ಶುಕ್ರ. ರಾಶಿ ಚಕ್ರದಲ್ಲಿ ಎರಡನೇ ರಾಶಿ ಇದು. ಇವರ ಸಮಸ್ಯೆ ಏನೆಂದರೆ ಮೊಂಡು ವಾದ ಹೂಡುವುದು ಜಾಸ್ತಿ. ನಿಮ್ಮಲ್ಲಿ ಏನು ಪ್ರಶ್ನೆ ಇದೆಯೋ ಕೇಳಿ ಎಂದು ಅವರಾಗಿಯೇ ಹೇಳುತ್ತಾರೆ. ಎದುರಿನಲ್ಲಿ ಇರುವವರು ಪ್ರಶ್ನೆ ಕೇಳಿದ ನಂತರದಲ್ಲಿ ತಮ್ಮ ವಾದವನ್ನು ಮಂಡಿಸುವುದಕ್ಕೆ ಶುರು ಮಾಡುತ್ತಾರೆ. ಆರಂಭದಲ್ಲಿ ಸಣ್ಣದಾಗಿ, ಸಮಾಧಾನವಾಗಿ ಇರುವಂತೆ ಕಂಡವರು ಏಕಾಏಕಿ ಧ್ವನಿಯನ್ನು ಎತ್ತರಿಸಿ ಮಾತನಾಡುತ್ತಾರೆ. ಆ ನಂತರ ಆಕ್ರಮಣಕಾರಿಯಾಗಿ ಹೇಳುವುದಕ್ಕೆ ಶುರು ಮಾಡುತ್ತಾರೆ. ಆ ಸಂದರ್ಭದಲ್ಲಿ ಅದು ಬೇಕೋ ಬೇಡವೋ ಸೂಕ್ತವೋ ಅಲ್ಲವೋ ಏನನ್ನೂ ನೋಡದೆ ಉದಾಹರಣೆಗಳನ್ನು ನೀಡುತ್ತಾರೆ. ಆದರೆ ಅದೃಷ್ಟ ಏನೆಂದರೆ, ಇವರ ಸಿಟ್ಟು ಬಹಳ ಕಾಲ ಇರುವುದಿಲ್ಲ.
ಕನ್ಯಾ: ಕನ್ಯಾ ರಾಶಿಯ ಅಧಿಪತಿ ಬುಧ. ರಾಶಿಚಕ್ರದ ಆರನೇ ರಾಶಿ ಇದು. ಬಹಳ ಪರ್ಫೆಕ್ಷನಿಸ್ಟ್ ಇವರು. ಕೆಲಸ ಅಂದಾಗ ಎದ್ದುಬಿದ್ದು ಇವರು ಹೇಗೆ ಮಾಡುತ್ತಾರೋ ಅದೇ ರೀತಿ ಇತರರಿಂದಲೂ ನಿರೀಕ್ಷೆ ಮಾಡುತ್ತಾರೆ. ತುಂಬ ತುಂಬ ಪರ್ಫೆಕ್ಟ್ ಆಗಿ ಕೆಲಸ ಮಾಡಬೇಕು ಅಂದುಕೊಳ್ಳುವ ಇವರು, ಇತರರಿಂದಲೂ ಅದನ್ನು ಅಪೇಕ್ಷಿಸುತ್ತಾರೆ. ಅದಕ್ಕಾಗಿ ತಾವು ಪಡೆಯುತ್ತಿರುವ ಸಂಬಳ, ಸವಲತ್ತು ಹಾಗೂ ಪಡೆದಿರುವ ಅಧಿಕಾರ ಇದ್ಯಾವುದನ್ನೂ ಆಲೋಚನೆ ಮಾಡುವುದೇ ಇಲ್ಲ. ಬದಲಿಗೆ ಇತರರು ಸಹ ಅದೇ ಮಟ್ಟದ- ಗುಣಮಟ್ಟದ ಕೆಲಸವನ್ನು ಮಾಡಲಿ ಎಂದುಕೊಳ್ಳುತ್ತಾರೆ. ಹಾಗೆ ಮಾಡದಿದ್ದಾಗ ಕೂಗಾಟ, ಕಿರುಚಾಟ, ಸಿಟ್ಟು ವಿಪರೀತ ಆಗುತ್ತದೆ. ಆದರೆ ಆ ನಂತರ ಸಿಕ್ಕಾಪಟ್ಟೆ ಪ್ರೀತಿ- ವಿಶ್ವಾಸ ತೋರಿಸುತ್ತಾರೆ. ಅದರಿಂದ ಏನೂ ಪ್ರಯೋಜನ ಆಗುವುದಿಲ್ಲ.
ಇದನ್ನೂ ಓದಿ: ಈ ಯೋಗಗಳು ನಿಮ್ಮ ಜಾತಕದಲ್ಲಿಯೂ ಇರಬಹುದು, ನೋಡಿಕೊಳ್ಳಿ
ಸಿಂಹ: ಸಿಂಹ ರಾಶಿಯ ಅಧಿಪಿ ರವಿ. ರಾಶಿಚಕ್ರದಲ್ಲಿನ ಐದನೇ ರಾಶಿ ಇದು. ಇವರಿಗೆ ಒಂದು ವಿಚಾರದಲ್ಲಿ ಹೀಗೆ ಅಂತನ್ನಿಸಿಬಿಟ್ಟರೆ ಅಲ್ಲಿಗೆ ಮುಗಿಯಿತು, ಆ ಅಭಿಪ್ರಾಯದಿಂದ ಆಚೆಗೆ ಬರುವುದಿಲ್ಲ. ಇನ್ನು ಸರಿಯೋ ತಪ್ಪೋ ತಾನು ಹೇಳಿದ್ದನ್ನೇ ಮಾಡಬೇಕು ಅನ್ನುವ ಸ್ವಭಾವದವರು. ಆ ಕಾರಣದಿಂದ ತಾನು ಹೇಳಿದಂತೆಯೇ ಆಗಬೇಕು ಎಂದು ವಾದ ಮಾಡುತ್ತಾರೆ, ಪಟ್ಟು ಹಿಡಿಯುತ್ತಾರೆ. ಎದುರಿನಲ್ಲಿ ಮಾತನಾಡುವವರಿಗೆ ಬೇರೆ ಆಯ್ಕೆಗಳು ಅನ್ನೋದನ್ನೇ ನೀಡುವುದಿಲ್ಲ. ಜತೆಗೆ ಸಿಟ್ಟಿನ ಭರದಲ್ಲಿ ಬಳಸುವಂಥ ಪದಗಳಿಂದಾಗಿ ಸಂಬಂಧಗಳು ಶಾಶ್ವತವಾಗಿ ಹಾಳಾಗುವಂತಾಗುತ್ತದೆ. ಆದ್ದರಿಂದ ಇವರ ಜತೆಗೆ ಕೆಲಸ ಮಾಡುವವರು ಹೊಂದಿಕೊಂಡು ಹೋಗಬೇಕೇ ವಿನಾ ಸಿಂಹ ರಾಶಿಯವರು ಬದಲಾಗುವುದಿಲ್ಲ.
ವೃಶ್ಚಿಕ: ವೃಶ್ಚಿಕ ರಾಶಿಯ ಅಧಿಪತಿ ಕುಜ. ಇನ್ನು ರಾಶಿಚಕ್ರದಲ್ಲಿ ಇದು ಎಂಟನೇ ರಾಶಿ. ಈ ರಾಶಿಯವರು ಸುಲಭಕ್ಕೆ ಸಿಟ್ಟು ಮಾಡಿಕೊಳ್ಳುವವರಲ್ಲ. ಎಲ್ಲವೂ ತಣ್ಣಗಿದೆ ಎಂಬಂತೆಯೇ ವಾತಾವರಣ ಇರುತ್ತದೆ. ಆದರೆ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಆಗಬೇಕಾದ ಕೆಲಸ ಒಂಚೂರು ಆಚೆ- ಈಚೆ ಆದರೂ ಭಾರೀ ಸಿಟ್ಟು ತೋರಿಸುತ್ತಾರೆ. ಇವರ ಮತ್ತೊಂದು ಸಮಸ್ಯೆ ಏನೆಂದರೆ ಆ ಸಿಟ್ಟನ್ನು ಸಾಧಿಸುತ್ತಾ ಹೋಗುತ್ತಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕೋಪವನ್ನು ತೋರಿಸುತ್ತಾರೆ
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:40 pm, Mon, 7 August 23