AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಯೋಗಗಳು ನಿಮ್ಮ ಜಾತಕದಲ್ಲಿಯೂ ಇರಬಹುದು, ನೋಡಿಕೊಳ್ಳಿ

ಈ ಯೋಗಗಳು ಸಾವಿರಕ್ಕೆ ಒಬ್ಬರಿಗೆ ಇರುವ ಸಾಧ್ಯತೆ ಇದೆ. ಜನಸಾಮಾನ್ಯರಲ್ಲಿ ಈ ಯೋಗವು ಸುಲಭವಾಗಿ ಗೋಚರಿಸದು.

ಈ ಯೋಗಗಳು ನಿಮ್ಮ ಜಾತಕದಲ್ಲಿಯೂ ಇರಬಹುದು, ನೋಡಿಕೊಳ್ಳಿ
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 06, 2023 | 10:03 PM

Share

ಜನನ ಕಾಲದಲ್ಲಿ ಗ್ರಹಗಳ ಸ್ಥಿತಿಯನ್ನು ಅನುಸರಿಸಿ ಯೋಗ (yoga) ಗಳು ಉಂಟಾಗುತ್ತವೆ. ಅವು ಒಳ್ಳೆಯ ಯೋಗವೂ ಆಗಬಹುದು, ಕೆಟ್ಟವೂ ಆಗಬಹುದು. ಜನ್ಮ ಕಾಲದ ಲಗ್ನದ ಆಧಾರದ ಮೇಲೆ ಒಳಿತು ಕೆಡುಕುಗಳು ನಿರ್ಧಾರವಾಗುತ್ತವೆ. ಅಂತಹ ಯೋಗಗಳಲ್ಲಿ ಗದಾ, ಶಕಟ ಮತ್ತು ವಿಹಗಯೋಗಳು ಇರಲಿವೆ.

ಗದಾ ಯೋಗ: ಎರಡು ಕೇಂದ್ರ ಸ್ಥಾನಗಳಲ್ಲಿ ಎಲ್ಲ ಗ್ರಹರೂ ಇದ್ದರೆ, ಅದು ಗದಾಯೋಗ. ಕೇಂದ್ರ ಸ್ಥಾನವು ಲಗ್ನದಿಂದ 1, 4, 7 ಹಾಗೂ 10 ನೇ ಸ್ಥಾನಗಳಾಗಿರುತ್ತವೆ. ಇವುಗಳಲ್ಲಿ 1 – 4 ಅಥವಾ 4 – 7 ಅಥವಾ 7 – 10, ಇಲ್ಲವೇ 10 – 1 ಈ ಎರಡು ಸ್ಥಾನಗಳಲ್ಲಿ ಎಲ್ಲ ಗ್ರಹರೂ ಇದ್ದರೆ ಈ ಯೋಗವಾಗುವುದು.

ಯೋಗ ಫಲ: ಈ ಯೋಗದಲ್ಲಿ ಜನಿಸಿದವನು ಯಜ್ಞವೇ ಮೊದಲಾದ ದೇವಕಾರ್ಯದಲ್ಲಿ ಆಸಕ್ತಿ ಉಳ್ಳವನಾಗನು. ಸದಾ ಸಂಪತ್ತು ಉಳ್ಳವನಾಗಿರುವನು. ಈ ಯೋಗದ ವಿಶೇಷತೆ ಎಂದರೆ ಉದ್ಯೋಗವು ಇಲ್ಲ ಎಂದಾಗುವುದೇ ಇಲ್ಲ.‌‌‌ ಒಂದಲ್ಲ ಒಂದು ಉದ್ಯೋಗವು ಪ್ರಾಪ್ತವಾಗುತ್ತಲೇ ಇರುವುದು.

ಈ ಯೋಗವು ಪುರುಷತ್ವದ ಲಕ್ಷಣಗಳನ್ನು ಹೇಳುವ ಕಾರಣ ಉದ್ಯೋಗವು ಪುರುಷನ ಮೂಲಭೂತ ಲಕ್ಷಣ. ಹಾಗಾಗಿ ಈ ಯೋಗದಿಂದ ಕೂಡಿರುವ ಪುರುಷ ಎಂದಿಗೂ ನಿರುದ್ಯೋಗಿ ಆಗಲಾರ.

ಶಕಟ ಯೋಗ: ಕೇಂದ್ರಸ್ಥಾನಗಳೇ ಹೆಚ್ಚು ಯೋಗವನ್ನು ಉಂಟುಮಾಡುವವಾಗಿವೆ. ಇಲ್ಲಿಯೂ ಹಾಗೆಯೇ. ಲಗ್ನ ಅಂದರೆ ಒಂದನೇ ಸ್ಥಾನ ಹಾಗೂ ಏಳನೇ ಸ್ಥಾನದಲ್ಲಿ ಎಲ್ಲ ಗ್ರಹರಿದ್ದರೆ ಶಕಟ ಯೋಗ ಎನಿಸಿಕೊಳ್ಳುವುದು.

ಯೋಗ ಫಲ: ಈ ಯೋಗದಲ್ಲಿ ಜನಿಸಿದವನು ವಾಹನವೃತ್ತಿಯನ್ನು ಮಾಡುತ್ತಾ ಜೀವನವನ್ನು ಕಳೆಯುವನು. ಯಾವಾಗಲೂ ಒಂದಿಲ್ಲೊಂದು ರೋಗದಿಂದ ಪೀಡಿತನೂ, ದುಷ್ಟ ಪತ್ನಿ ಅಥವಾ ಪತಿಯನ್ನು ಹೊಂದಿದವರು ಆಗುವರು.

ಶಕಟ ಎಂದರೆ ಬಂಡಿ ಎಂದರ್ಥ. ಈ ಯೋಗದಲ್ಲಿ ಜನಿಸಿದರೆ ಅದು ಆಮರಣಪರ್ಯಂತ ಇರುವ ಕಾರಣ ವಾಹನಕ್ಕೆ ಸಂಬಂಧಿಸಿದ ವೃತ್ತಿಯನ್ನೇ ಅವರು ಹೆಚ್ಚು ಆಶ್ರಯಿಸುವರು.

ವಿಹಗ ಯೋಗ: ಲಗ್ನದಿಂದ ನಾಲ್ಕು ಮತ್ತು ಹತ್ತರಲ್ಲಿ ಎಲ್ಲ ಗ್ರಹರಿದ್ದರೆ ಅದನ್ನು ಶಕಟ ಯೋಗ ಎಂದು ಕರೆಯುತ್ತಾರೆ.

ಯೋಗ ಫಲ: ದೂತ ಕಾರ್ಯದಲ್ಲಿ ನಿರತನಾಗಿರುನು. ಸದಾ ಸಂಚಾರದಲ್ಲಿ ಆಸಕ್ತಿ ಉಳ್ಳವನಾಗಿರುವನು. ಕಲಹವನ್ನು ಮಾಡಲು ಇವರಿಗೆ ಬಹಳ ಇಷ್ಟವಾಗುವುದು.

ವಿಹಗ ಎಂದರೆ ಪಕ್ಷಿ. ಈ ಯೋಗವು ಮನುಷ್ಯರಿಗೆ ಬಂದಾಗ ಅವರೂ ಮನುಷ್ಯ ಹಾಗೂ ಪಕ್ಷಿಯ ಅಂಶಗಳನ್ನು ರೂಢಿಸಿಕೊಳ್ಳುತ್ತಾರೆ.

ಲೋಹಿತ ಶರ್ಮಾ

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ