Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ತಮ್ಮವರ ಏಳಿಗೆಯನ್ನು ಸಹಿಸುವುದು ಕಷ್ಟವಾದೀತು
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 07) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 07 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶೂಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:53 ರಿಂದ 09:28ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:38ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:13 ರಿಂದ 03:48ರ ವರೆಗೆ.
ಧನು ರಾಶಿ: ಅನಗತ್ಯ ತಿರುಗಾಟದಿಂದ ಬೇಸರವಾಗಬಹುದು. ನಿಮ್ಮ ಕಾರ್ಯಗಳನ್ನು ಮುಂದೂಡುವಿರಿ. ಒತ್ತಡ ವಿಚಾರವು ಬಂದಾಗ ಅದರಿಂದ ದೂರ ಇರಲು ಪ್ರಯತ್ನಿಸುವಿರಿ. ಲಾಭವಿರುವ ಕೆಲಸಗಳನ್ನು ಮಾತ್ರ ಮಾಡಲು ಇಚ್ಛೆಯು ಇರಲಿದೆ. ಮನಸ್ಸಿನ ಚಾಂಚಲ್ಯವನ್ನು ಯೋಗದ ಮೂಲಕ ನಿಯಂತ್ರಿಸುವಿರಿ. ಬಂಧುಗಳು ನಿಮಗೆ ಆರ್ಥಿಕ ಸಹಾಯವನ್ನು ಮಾಡಲು ಬಂದರೂ ನೀವು ಅದನ್ನು ಸ್ವಾಭಿಮಾನದಿಂದ ನಿರಾಕರಿಸುವಿರಿ. ಸರ್ಕಾರದ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಕರೆಯು ಬರಬಹುದು. ನಿಮ್ಮವರ ಏಳಿಗೆಯನ್ನು ಸಹಿಸುವುದು ನಿಮಗೆ ಕಷ್ಟವಾದೀತು. ಕಲಾವಿದರು ಉತ್ತಮ ಅವಕಾಶಗಳನ್ನು ಪಡೆದು ಪ್ರಸಿದ್ಧರಾಗುವರು.
ಮಕರ ರಾಶಿ: ಇಂದು ಸ್ತ್ರೀಯರು ನಾನಾ ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡಬಹುದು. ನೆರೆಹೊರೆಯರ ನಡುವೆ ವಾಗ್ವಾದವು ಆಗಬಹುದು. ಬಾಡಿಗೆ ಮನೆಯ ಯಜಮಾನನು ನಿಮ್ಮ ಬಗ್ಗೆ ತಪ್ಪಾದ ಮಾತುಗಳನ್ನು ಆಡುವನು. ಸರ್ಕಾರದ ಕಡೆಯಿಂದ ನಿಮ್ಮ ಕೆಲಸಕ್ಕೆ ಒಪ್ಪಿಗೆ ಸಿಗಬಹುದು. ಉದ್ಯೋಗದಲ್ಲಿ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇವೆ. ಉದ್ಯೋಗದ ಮಿತ್ರನನ್ನು ಭೇಟಿಯಾಗುವಿರಿ. ಆದಾಯವು ನಿಮ್ಮ ಯೋಜನೆಯಷ್ಟು ಇದ್ದರೂ ಆದಾಯವು ಹೆಚ್ಚಿನ ಖರ್ಚಿಗೆ ಕಾರಣವಾಗಬಹುದು. ದಾಂಪತ್ಯದಲ್ಲಿ ಕಲಹವು ಸಾಮಾನ್ಯವಾದರೂ ಇಂದು ಇದು ಬೇರೆ ಪರಿಣಾಮವನ್ನು ಬೀರುವುದು.
ಕುಂಭ ರಾಶಿ: ಇಂದು ನಿಮಗೆ ಬೇರೆ ಬೇರೆ ಮೂಲಗಳಿಂದ ಸಂಪಾದನೆಗೆ ಅವಕಾಶಗಳು ಸಿಗಬಹುದು. ವಿದೇಶೀ ವ್ಯವಹಾರದಲ್ಲಿ ನಿಮಗೆ ಲಾಭವು ಬರಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವು ಇರುವುದು. ಇಷ್ಟಮಿತ್ರರ ಭೇಟಿಯು ನಿಮ್ಮನ್ನು ಖುಷಿಯಾಗಿ ಇಡುವುದು. ಇನ್ನೊಬ್ಬರ ಕ್ಷೇಮ ಸಮಾಚಾರವನ್ನು ಕೇಳುವಿರಿ. ನಿಮ್ಮ ಕೆಲಸಗಳಿಗೇ ನೀವು ಇಂದು ಹೆಚ್ಚು ಪ್ರಾಮುಖ್ಯ ನೀಡಿ ಮುಗಸುವಿರಿ. ಬಹಳ ದಿನಗಳ ಅನಂತರ ಸಂತಾನದ ಸುಖದ ನಿರೀಕ್ಷೆಯಲ್ಲಿ ಸಫಲರಾಗುವಿರಿ. ಸಾಹಸದ ಕೆಲಸಗಳನ್ನು ಮಾಡುವಾಗ ಎಚ್ಚರ ಅಗತ್ಯ. ಆಪ್ತರಿಂದ ಸಂಪತ್ತನ್ನು ಪಡೆದುಕೊಳ್ಳುವಿರಿ. ಇನ್ನೊಬ್ಬರ ಒತ್ತಾಯದ ಹೊಸ ಕಲಿಕೆಯನ್ನು ಆರಂಭಿಸುವಿರಿ.
ಮೀನ ರಾಶಿ: ಹಣಕಾಸಿನ ವಿಷಯದಲ್ಲಿ ನೀವು ಎಷ್ಟೇ ಎಚ್ಚರದಿಂದ ಇದ್ದರೂ ವ್ಯಯವಾಗುವ ಸಾಧ್ಯತೆ ಹೆಚ್ಚು ಇರಲಿದೆ. ಆಸ್ತಿ ಹಂಚಿಕೆಯು ಇತ್ಯರ್ಥವಾಗಬಹುದು. ಉನ್ನತ ಅಧ್ಯಯನವನ್ನು ಬಯಸಿ ವಿದೇಶಕ್ಕೆ ತೆರಳುವ ಸಾಧ್ಯತೆ ಇರಲಿದೆ. ನಿಮ್ಮ ನಿರೀಕ್ಷೆಯ ಗುರಿಯನ್ನು ತಲುಪುವುದು ಕಷ್ಟವಾದೀತು. ನಿಮ್ಮ ಸಂಗಾತಿಯ ವಿಚಾರದಲ್ಲಿ ಪ್ರೀತಿಯು ಅಧಿಕವಾಗಬಹುದು. ಬಂಧುಗಳ ಮಾತು ನಿಮ್ಮನ್ನು ದಾರಿ ತಪ್ಪಿಸಬಹುದು. ಹಣಕಾಸಿನ ವ್ಯವಹಾರವನ್ನು ಈಗಲೇ ಸರಿಮಾಡಿಕೊಳ್ಳುವುದು ಉತ್ತಮ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀವು ಹೆಚ್ಚು ಶ್ರಮಪಡಬೇಕಾದೀತು.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ