Ganesh Chaturthi: ನಿಮ್ಮ ರಾಶಿ ಪ್ರಕಾರ ಈ ಬಣ್ಣದ ಗಣೇಶನನ್ನು ಪ್ರತಿಷ್ಠಾಪಿಸಿ ಮತ್ತು ಈ ಕಾರ್ಯಗಳನ್ನು ಮಾಡಿ
Zodiac Signs: ಈ ಭಾರಿ ಗಣೇಶ ಚತುರ್ಥಿಗೆ ನಿಮ್ಮ ರಾಶಿಚಕ್ರದ ಪ್ರಕಾರ ಯಾವ ಕಾರ್ಯಗಳನ್ನು ಮಾಡಬೇಕು, ಯಾವ ಬಣ್ಣದ ಗಣೇಶನನ್ನು ಕೂಡಿಸಬೇಕು ಎಂಬುವುದರ ಕುರಿತು ಇಲ್ಲಿದೆ ಮಾಹಿತಿ.
ಈ ವರ್ಷ ಆಗಸ್ಟ್ 31 ರಂದು ಗಣೇಶ ಚತುರ್ಥಿ ಬರಲಿದೆ. ಗಣೇಶ ಚತುರ್ಥಿಯ ಹಬ್ಬವನ್ನು ಸಂಭ್ರಮ ಮತ್ತು ಸಡಗರಿಂದ ಆಚರಿಸಲಾಗುತ್ತದೆ. ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದ್ದು, ಮನೆ ಮತ್ತು ಗಲ್ಲಿಗಳಲ್ಲಿ ಹಬ್ಬದ ಕಳೆ ರಂಗೇರಿರುತ್ತದೆ. ಮನೆಗಳಲ್ಲಿ ಪ್ರತಿಷ್ಟಾಪಿಸುವ ಗಣಪತಿ ಬಹಳ ಮಹತ್ವ ಪಡೆದಿರುತ್ತಾನೆ. ಮನೆಗಳಲ್ಲಿ ಕೂಡಿಸುವ ಗಣಪನನ್ನು ಮಣ್ಣಿನಿಂದ ಮಾಡಲಾಗಿರುತ್ತದೆ.
ಮನೆಗಳಲ್ಲಿ 1, 3, 5, 7, 9, 11 ಹೀಗೆ ತಿಂಗಳಾನುಗಟ್ಟಲೆ ಗಣೇಶನನ್ನು ಕೂಡಿಸುತ್ತಾರೆ. ಈ ವೇಳೆ ಶಾಸ್ತ್ರೋಕ್ತವಾಗಿ ಪೂಜಾ ವಿಧಿ ವಿಧಾನಗಳನ್ನು ಮಾಡಿ, ವಿಘ್ನನಿವಾರಕನನ್ನು ಆಹ್ವಾನ ಮಾಡಿಕೊಂಡು, ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾರೆ. ಬಳಿಕ ತಾವು ಕೂಡಿಸುವ ದಿನಗಳ ಪರ್ಯಂತವೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಕೊನೆಗೆ ಇಷ್ಟಾರ್ಥಗಳನ್ನು ಸಿದ್ದಿಸು ಎಂದು ಬೇಡಿಕೊಂಡು ಏಕದಂತನನ್ನು ವಿಸರ್ಜಿಸುತ್ತಾರೆ.
ಈ ಭಾರಿ ಗಣೇಶ ಚತುರ್ಥಿಗೆ ನಿಮ್ಮ ರಾಶಿಚಕ್ರದ ಪ್ರಕಾರ ಯಾವ ಕಾರ್ಯಗಳನ್ನು ಮಾಡಬೇಕು, ಯಾವ ಬಣ್ಣದ ಗಣೇಶನನ್ನು ಕೂಡಿಸಬೇಕು ಎಂಬುವುದರ ಕುರಿತು ಇಲ್ಲಿದೆ ಮಾಹಿತಿ.
- ಮೇಷ ರಾಶಿ – ಈ ರಾಶಿಯವರು ಗುಲಾಬಿ ಅಥವಾ ಕೆಂಪು ಬಣ್ಣದ ಗಣಪತಿಯ ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ಅದೇ ಸಮಯದಲ್ಲಿ ಲಡ್ಡೂ ಸೇವಿಸಬೇಕು.
- ವೃಶ್ಚಿಕ ರಾಶಿ – ಈ ರಾಶಿಯವರು ಕಡು ಕೆಂಪು ಬಣ್ಣದ ಗಣಪತಿಯ ವಿಗ್ರಹವನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ಲಡ್ಡು ಮತ್ತು ಮೋತಿಚೂರನ್ನು ಸವಿಯಬೇಕು.
- ಮಿಥುನ ರಾಶಿ – ಈ ರಾಶಿಯವರು ತಮ್ಮ ಮನೆಗೆ ತಿಳಿ ಹಸಿರು ಬಣ್ಣದ ಗಣಪತಿಯ ವಿಗ್ರಹವನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ಪ್ರಸಾದದ ಜೊತೆ ಮೋದಕವನ್ನು ಸೇವಿಸಬೇಕು .
- ಕನ್ಯಾ ರಾಶಿ – ಈ ರಾಶಿಯವರು ಕಡು ಹಸಿರು ಬಣ್ಣದ ಗಣಪತಿಯ ವಿಗ್ರಹವನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ಕಿತ್ತಳೆ ಬಣ್ಣದ ಲಡ್ಡೂವನ್ನು ಪ್ರಸಾದವಾಗಿ ಅರ್ಪಿಸಬೇಕು.
- ವೃಷಭ ರಾಶಿ – ಈ ರಾಶಿಯವರು ತಿಳಿ ಹಳದಿ ಬಣ್ಣದ ಗಣಪತಿಯ ವಿಗ್ರಹವನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಬೇಕು.
- ತುಲಾ ರಾಶಿ – ಈ ರಾಶಿಯವರು ಬಿಳಿ ಬಣ್ಣದ ಗಣಪತಿಯ ವಿಗ್ರಹವನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಬೇಕು.
- ಮೀನ ರಾಶಿ – ಈ ರಾಶಿಯವರು ತಮ್ಮ ಮನೆಗೆ ಹಳದಿ ಬಣ್ಣ ಗಣಪತಿಯ ಪ್ರತಿಮೆಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ, ಕೆಂಪು ಹೂವುಗಳಿಂದ ಅಲಂಕರಿಸಬೇಕು ಮತ್ತು ಮೋದಕವನ್ನು ಕೂಡ ಮಾಡಬೇಕು.‘
- ಮಕರ ರಾಶಿ – ಈ ರಾಶಿಯವರು ತಿಳಿ ನೀಲಿ ಬಣ್ಣದ ಗಣಪತಿಯ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ಗಣಪತಿ ಬಪ್ಪನಿಗೆ ಮೋದಕವನ್ನು ಸಮರ್ಪಿಸಬೇಕು.
- ಕರ್ಕಾಟಕ ರಾಶಿ – ಈ ರಾಶಿಯವರು ತಮ್ಮ ಮನೆಗೆ ಬಿಳಿ ಬಣ್ಣದ ಗಣಪತಿಯ ವಿಗ್ರಹವನ್ನು ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ಗಣಪತಿಯ ಸ್ವಾಗತಕ್ಕಾಗಿ ಮೋತಿಚೂರು ಲಡ್ಡೂವನ್ನು ಮಾಡಬೇಕು.
- ಧನು ರಾಶಿ – ಈ ರಾಶಿಯವರು ಹಳದಿ ಗಣಪತಿಯ ವಿಗ್ರಹವನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ಹಳದಿ ಹೂಗಳಿಂದ ಅಲಂಕರಿಸಬೇಕು.
- ಕುಂಭ ರಾಶಿ – ಈ ರಾಶಿಯವರು ಕಡು ನೀಲಿ ಗಣಪತಿಯ ವಿಗ್ರಹವನ್ನು ಮನೆಯಲ್ಲಿ ಪ್ರತಿಷ್ಠಾಪಿಸಬೇಕು.