Horoscope: ಈ ರಾಶಿಯವರಿಗೆ ಉತ್ತಮ ಮಾರ್ಗಗಳು ತೆರೆದುಕೊಳ್ಳಲಿವೆ, ಎಚ್ಚರವಿರಲಿ

25 ಅಕ್ಟೋಬರ್​ 2024: ಶುಕ್ರವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನಿಮ್ಮ ಪ್ರಾಮಾಣಿಕತೆಯನ್ನು ಬಿಡುವುದು ಬೇಡ. ಸಂಗಾತಿಯ ಆರೋಗ್ಯದ ಹದವು ತಪ್ಪುವುದು. ನಿಮ್ಮ ಕೊಟ್ಟ ಜವಾಬ್ದಾರಿಯನ್ನು ಸಕಾಲಕ್ಕೆ ಪೂರ್ಣಗೊಳಿಸುವಿರಿ. ಹಾಗಾದರೆ ಅಕ್ಟೋಬರ್ 25ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಈ ರಾಶಿಯವರಿಗೆ ಉತ್ತಮ ಮಾರ್ಗಗಳು ತೆರೆದುಕೊಳ್ಳಲಿವೆ, ಎಚ್ಚರವಿರಲಿ
Horoscope: ಈ ರಾಶಿಯವರಿಗೆ ಉತ್ತಮ ಮಾರ್ಗಗಳು ತೆರೆದುಕೊಳ್ಳಲಿವೆ, ಎಚ್ಚರವಿರಲಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 25, 2024 | 12:05 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ನವಮೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಶುಭ​​, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 06 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:49 ರಿಂದ ಮಧ್ಯಾಹ್ನ 12:17 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:11 ರಿಂದ ಸಂಜೆ 04:39ರವರೆಗೆ, ಗುಳಿಕ ಕಾಲ ಬೆಳಿಗ್ಗೆ 07:55 ರಿಂದ 09:22 ರವರೆಗೆ.

ಮೇಷ ರಾಶಿ: ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಸೋಲಾಗಬಹುದು. ಇಂದು ನಿಮಗೆ ಗೊತ್ತಿಲ್ಲದೇ ಪುಣ್ಯವು ನಿಮ್ಮನ್ನು ಸೇರಿಸುವ ಸ್ಥಳಕ್ಕೆ ತಂದುಬಿಡುವುದು. ಶತ್ರುಗಳ ಬಗ್ಗೆ ನೀವು ಸರಿಯಾದ ಮಾಹಿತಿಯನ್ನು ಪಡೆಯುವಿರಿ. ಅನಿರೀಕ್ಷಿತ ವಾರ್ತೆಗಳು ನಿಮ್ಮ ಮನಸ್ಸನ್ನು ಖಿನ್ನಗೊಳಿಸುವುದು. ಬಂಧುಗಳ ಪ್ರೀತಿಯು ನಿಮಗೆ ಸಿಗಲಿದೆ. ನಿಮ್ಮ ಪ್ರಾಮಾಣಿಕತೆಯನ್ನು ಬಿಡುವುದು ಬೇಡ. ಸಂಗಾತಿಯ ಆರೋಗ್ಯದ ಹದವು ತಪ್ಪುವುದು. ನಿಮ್ಮ ಕೊಟ್ಟ ಜವಾಬ್ದಾರಿಯನ್ನು ಸಕಾಲಕ್ಕೆ ಪೂರ್ಣಗೊಳಿಸುವಿರಿ. ತಾಯಿಯ ಕಡೆಯ ಬಂಧುಗಳಿಂದ ನಿಮಗೆ ಸಹಾಯವು ಸಿಗಲಿದೆ. ಸುಳ್ಳು ಹೇಳವ ಸಂದರ್ಭವೂ ಬರಬಹುದು. ಉದ್ವೇಗಕ್ಕೆ ಸಿಲುಕಿ ಏನನ್ನಾದರೂ ಮಾಡಲು ಹೋಗುವಿರಿ. ಸಮೂಹದ ಜೊತೆ ನಿಮ್ಮ ಕೆಲಸವು ಆಗುವುದು. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ. ಒತ್ತಡದಿಂದ ಒಳ್ಳೆಯ ಕಾರ್ಯವೂ ಹಾಳಾಗುವುದು.

ವೃಷಭ ರಾಶಿ: ಇಂದು ಬರುವ ಅಪರೂಪದ ಸಂದರ್ಭವನ್ನು ಬಳಿಸಿದರೆ ಉತ್ತಮ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ. ಬಂಧುಗಳ ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ಯಾರ ಮೇಲಾದರೂ ನಿಮ್ಮ ತಪ್ಪನ್ನು ಹಾಕುವಿರಿ. ಬರುವ ಆದಾಯಕ್ಕೆ ಅಡೆತಡೆಗಳು ಬರಬಹುದು. ಸ್ನೇಹವು ಶಿಥಿಲವಾಗುವುದು. ನಿಮಗೆ ಬೇಕಾದುದನ್ನು ಮಾತ್ರ ಇಟ್ಟುಕೊಂಡು ಬೇಡದ್ದನ್ನು ಕೊಡಿ. ಬಹಳ ದಿನಗಳಿಂದ ನಿಮ್ಮ ಕೆಲಸವು ವೇಗವಾಗಿ ಸಾಗುತ್ತಿದ್ದು ಅನಿರೀಕ್ಷತವಾಗಿ ಮಂದಗತಿಯಲ್ಲಿ ಸಾಗುವುದು. ಸಿಟ್ಟಾಗುವ ಸಂದರ್ಭವು ಬರಬಹುದು. ಎಲ್ಲರ ಜೊತೆ ತಾಳ್ಮೆಯಿಂದ ಮಾತನ್ನಾಡಿ. ಆರಂಭಿಸುವ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಇರಲಿ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಅಧಿಕ ಓಡಾಟದಿಂದ ದಣಿವಾಗಲಿದೆ. ಸಾಹಸ ಮಾಡಲು ಹೋಗಿ‌ ಮುಗ್ಗರಿಸುವಿರಿ.

ಮಿಥುನ ರಾಶಿ: ಭರವಸೆಯ ಮಾತುಗಳೇ ನಿಮಗೆ ಧೈರ್ಯವನ್ನು ಕೊಡಬಹುದು. ಉದ್ಯೋಗದಲ್ಲಿ ಆಗದ ಸಣ್ಣ ತಪ್ಪಿನಿಂದ ನಷ್ಟವಾಗಲಿದ್ದು ಅದು ನಿಮ್ಮ ಮೇಲೆ ಬರಬಹುದು.‌ ಭೂಮಿಯ ವ್ಯವಹಾರದಲ್ಲಿ ಲಾಭವಾಗದೇ ಕೇವಲ ಓಡಾಟವನ್ನು ಮಾಡಬೇಕಾಗಬಹುದು. ತುರ್ತು ಹಣವು ಬೇಕಾಗಿದ್ದು ಸಾಲವನ್ನು ಮಾಡಲು ನಿಮಗೆ ಹೆದರಿಕೆ ಆಗಬಹುದು. ನಿಮ್ಮ ಸ್ವಂತ ಕೆಲಸಕ್ಕಾಗಿ ವಿರಾಮವನ್ನು ತೆಗೆದುಕೊಳ್ಳುವಿರಿ. ಪ್ರಸಿದ್ಧ ವ್ಯಕ್ತಿಗಳ ಭೇಟಿಯಾಗುವುದು. ಸರಿಯಾದ ಕಡೆ ಹೂಡಿಕೆ ಮಾಡದೇ ಹಣವನ್ನು ಕಳೆದುಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬುವುದು ಕಷ್ಟವಾದೀತು. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನಿಮ್ಮ ಕೌಶಲವನ್ನು ಪ್ರದರ್ಶಿಸಲು ಅವಕಾಶವಿದೆ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ.

ಕರ್ಕಾಟಕ ರಾಶಿ: ದುರಸ್ತಿ ಕಾರ್ಯಗಳಿಗೆ ಸಂಪತ್ತನ್ನು ಖಾಲಿಮಾಡಬೇಕಾಗಬಹುದು. ಇಂದು ನೀವು ಬಹಳ ದಿನಗಳ ಅನಂತರ ಸಂಗಾತಿಯ ಜೊತೆ ದೂರದ ಊರಿಗೆ‌ ಪ್ರಯಾಣ ಮಾಡುವಿರಿ. ಹಠದ ಸ್ವಭಾವದಿಂದ ಪ್ರೀತಿಯನ್ನು ಕಳೆದುಕೊಳ್ಳುವಿರಿ. ಇಂದು ವ್ಯವಹಾರವನ್ನು ಮಾಡಲು ನಿಮಗೆ ಧೈರ್ಯವು ಸಾಕಾಗದು. ವಾಹನದಿಂದ ಇಂದು ಆದಾಯವು ಬರಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿ.‌ ನಿಮ್ಮ ಇಷ್ಟವಾದ ವಸ್ತುವನ್ನು ಕಳೆದುಕೊಳ್ಳುವಿರಿ. ಬಂಧುಗಳು ನಿಮ್ಮನ್ನು ಅಳೆಯುವರು. ಉನ್ನತ ಅಭ್ಯಾಸವನ್ನು ಮಾಡುವ ಅಪೇಕ್ಷೆ ಇರಲಿದೆ. ಇದಕ್ಕಾಗಿ ಆರ್ಥಿಕ ಸಹಾಯವನ್ನು ಇನ್ನೊಬ್ಬರಿಂದ ಕೇಳುವಿರಿ. ಹೂಡಿಕೆಯಿಂದ ಹಿಂಜರಿಯುವ ಸಾಧ್ಯತೆ ಇದೆ. ಆಪ್ತರ ಮಾತಿನಿಂದ ನಿಮಗೆ ಬೇಸರವಾಗಲಿದೆ. ಕುಟುಂಬ ಮೇಲೆ ಬೇಸರ ಬರಬಹುದು. ನಿಮ್ಮ ಭಾವವನ್ನು ಬಂಧಿಸಿಟ್ಟರೂ ಅದು ಗೊತ್ತಾಗುವುದು. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ.

ಸಿಂಹ ರಾಶಿ: ಅಧಿಕಾರಿಗಳಿಗೆ ಸಮಸ್ಯೆ ಎದುರಾಗುವುದು. ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವುದು ಅವಶ್ಯಕ. ಗೃಹ ಬಳಕೆಗೆ ಬೇಕಾದ ಸಾಮಾನುಗಳನ್ನು ನೀವು ಖರೀದಿಸುವ ಭರದಲ್ಲಿ ಖರ್ಚಿನ ಬಗ್ಗೆಯೂ ಸೂಕ್ತ ಆಲೋಚನೆಯನ್ನು ಮಾಡಿ. ಶತ್ರುಗಳ ವಿರುದ್ಧ ಸಮರಸಾರದೇ ತಾಳ್ಮೆಯಿಂದ ನಿರ್ವಹಿಸುವಿರಿ. ಮೇಲಧಿಕಾರಿಗಳ ಜೊತೆ ನಿಮ್ಮ ಒಡನಾಟವು ಚೆನ್ನಾಗಿರುವುದು. ನಿಮ್ಮ ಗುರಿಯ ಬಗ್ಗೆ ಕೆಲವರು ಆಡಿಕೊಂಡಾರು. ಅದನ್ನು ಕೇಳಿಸಿಕೊಳ್ಳದೇ ಮುಂದಡಿ ಇಡಿ. ಕೆಲವು ರಾಜಕೀಯ ವ್ಯಕ್ತಿಗಳ ಪ್ರೇರಣೆಯಿಂದ ನೀವೂ ರಾಜಕೀಯಕ್ಕೆ ಬರುವ ಸಾಧ್ಯತೆ ಇದೆ. ನಿಮ್ಮದೇ ಕೆಲಸವಾದರೂ ಸಂಪೂರ್ಣ ಯಶಸ್ಸನ್ನು ನೀವು ಪಡೆಯಲಾರಿರಿ. ಬೇಡವೆನಿಸಿದ್ದನ್ನು ಒತ್ತಾಯಪೂರ್ವಕ ಪಡೆಯುವುದು ಬೇಡ. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ. ಕೆಲವು ತೊಂದರೆಗಳನ್ನು ನೀವು ತೆಗೆದುಕೊಳ್ಳುವುದು ಅನಿವಾರ್ಯ.

ಕನ್ಯಾ ರಾಶಿ: ಕಾರ್ಯದಲ್ಲಿ ಇಂದು ನಿಮ್ಮಿಂದಲೇ ತಪ್ಪಾಗುವುದು. ಇದರಿಂದ ಉತ್ತಮ ಕಲಿಕೆಯೂ ನಿಮಗೇ ಆಗುವುದು. ಇಂದು ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳು ಬೇಕು ಎಂದು ಅನ್ನಿಸಬಹುದು. ಉದ್ಯಮದಲ್ಲಿ ಆಗುವ ಒತ್ತಡವನ್ನು ನಿವಾರಿಸಿಕೊಳ್ಳಲು ಅನ್ಯ ಮಾರ್ಗವನ್ನು ಕಂಡುಕೊಳ್ಳಿ.‌ ಮರೆವು ನಿಮಗೆ ಉತ್ತಮ ಎನಿಸಬಹುದು. ನಿಮ್ಮ ವಿರುದ್ಧ ನಡೆಸುವ ತಂತ್ರಗಾರಿಕೆಯು ನಿಲ್ಲದು. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉತ್ಸಾಹವನ್ನು ಕೊಡುವುದು. ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಸರಿ‌ಮಾಡಿಕೊಳ್ಳಿ. ಲೆಕ್ಕಪತ್ರದ ವಿಷಯದಲ್ಲಿ ನಿಮಗೆ ಯಾವುದೇ ಅಡ್ಡ ದಾರಿಯನ್ನು ಹಿಡಿಯುವುದು ಬೇಡ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯಾಗಬಹುದು. ಸಂಬಂಧಗಳನ್ನು ಬೆಳೆಸಿಕೊಂಡಾಗಲಷ್ಟೇ ಬಾಂಧವ್ಯ ಬೆಳೆಡಯುವುದು. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು. ಪ್ರೀತಿಯಿಂದ ಆಡಿದ ಮಾತು ಇಂದು ಉಪಯೋಗಕ್ಕೆ ಬರುವುದು.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್