Daily Horoscope 23 October 2024:ಇಂದಿನ ನಿತ್ಯ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

Daily Horoscope 23 October 2024: ಅಕ್ಟೋಬರ್ 23,​ 2024ರ​​ ನಿಮ್ಮ ಭವಿಷ್ಯ ಹೇಗಿದೆ? ಬುಧವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಸೇರಿದಂತೆ ರಾಹು ಕಾಲ ,ಯಮಘಂಡ, ಗುಳಿಕ ಕಾಲ ಸಮಯವನ್ನೂ ಸಹ ತಿಳಿದುಕೊಳ್ಳಿ

Daily Horoscope 23 October 2024:ಇಂದಿನ ನಿತ್ಯ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ

Updated on: Oct 23, 2024 | 1:01 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪುನರ್ವಸು, ಯೋಗ:ಶಿವ​​, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 06 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:17 ರಿಂದ 13:44 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:22ರವರೆಗೆ, ಗುಳಿಕ ಕಾಲ ಬೆಳಿಗ್ಗೆ 10:49 ರಿಂದ ಮಧ್ಯಾಹ್ನ 12:17 ರವರೆಗೆ.

ಮೇಷ ರಾಶಿ : ಪ್ರಭಾವೀ ವ್ಯಕ್ತಿಗಳ ಪರಿಣಾಮವು ನಿಮ್ಮ ಮೇಲೆ ಗಾಢವಾಗಿರುವುದು. ಬರಬೇಕಾದ ಹಣವನ್ನು ನೀವು ಪಡೆದುಕೊಳ್ಳುವಿರಿ. ನಿಮ್ಮ ಇಂದಿನ ಕೆಲಸಗಳು ಅಡೆತಡೆ ಇಲ್ಲದೇ ಸಾಗುವುದು. ವಾಹನ ಖರೀದಿಗೆ ಹಣವನ್ನು ಹೊಂದಿಸುವಿರಿ. ಅಪಘಾತ ಭೀತಿಯು ನಿಮ್ಮನ್ನು ಹೆಚ್ಚು ಕಾಡುವುದು. ಎಂತಹ ನಷ್ಟವನ್ನೂ ನೀವು ಆತ್ಮಸ್ಥೈರ್ಯದಿಂದ ಎದುರಿಸಬಲ್ಲಿರಿ. ನಿಮಗೆ ಸಂಬಂಧವಿಲ್ಲದೇ ಇರುವ ವಿಚಾರಕ್ಕೆ ಯೋಚಿಸುವಿರಿ. ನಿಮ್ಮ ಬುದ್ಧಿಯು ನಕಾರಾತ್ಮಕ ವಿಚಾರಗಳಿಗೆ ಹೆಚ್ಚು ಸ್ಪಂದಿಸುವುದು. ಸ್ನೇಹಕ್ಕೆ ನೀವು ಬೆಲೆಯನ್ನು ಕೊಡುವಿರಿ. ಬಂಧುಗಳ ಭೇಟಿಗೆ ದೂರಪ್ರಯಾಣವನ್ನು ಮಾಡಲಿದ್ದೀರಿ. ರಾಜಕೀಯ ವಿಚಾರಗಳಿಗೆ ಹೆಚ್ಚು ಸಮಯವನ್ನು ಕೊಡುವಿರಿ. ಮೇಲಧಿಕಾರಿಗಳ ಭೇಟಿಯಾಗವ ಸಾಧ್ಯತೆ ಇದೆ. ನೀವು ಕೆಲವು ಮುಖ್ಯವಾಹಿನಿಯಿಂದ ಹಿಂದೆ ಸರಿಯುವುದು ಉತ್ತಮ. ತಂತ್ರಜ್ಞಾನವನ್ನು ನೀವು ಅತಿಯಾಗಿ ಬಳಸುವಿರಿ.

ವೃಷಭ ರಾಶಿ :ಸತ್ಯದ ನಡುವೆ ಇರುವ ಸುಳ್ಳಿಗೆ ಸತ್ಯದಷ್ಟೇ ಬೆಲೆ. ಅದನ್ನೇ ಮುಂದುವರಿಸಿದರೆ ನಿಮಗೂ ಬೆಲೆ ಇರದು. ಇಂದು ನೀವು ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ನಿಮ್ಮವರು ನಿಮ್ಮ ಕೆಲಸವನ್ನು ಸರಿಯಾಗಿ ಮಾಡಲು ಬಿಡರು. ನಿಮ್ಮ ಮಾತು ಇನ್ನೊಬ್ಬರಿಗೆ ಬೇಸರವನ್ನು ತರಿಸೀತು. ಮಕ್ಕಳ ವಿಚಾರದಲ್ಲಿ ನೀವು ಸಹಕಾರ ಕೊಡುವಿರಿ. ನಿಮ್ಮನ್ನು ನಿಮಗಿಂತ‌ ಮೇಲಿನವರು ಪರೀಕ್ಷಿಸಬಹುದು. ಏಕಾಂತಕ್ಕೆ ನೀವು ಹೆಚ್ಚಿನ ಒತ್ತನ್ನು ಕೊಡುವಿರಿ. ಸಹೋದರರ ನಡುಯವೆ ವಾಗ್ವಾದವು ಆಗಬಹುದು. ವಿದ್ಯಾಭ್ಯಾಸವು ನಿಮಗೆ ಸಾಕು ಎನಿಸಬಹುದು. ಯಾರದೋ ಒತ್ತಾಯಕ್ಕೆ ನೀವು ಇಷ್ಟವಿಲ್ಲದ ಕೆಲಸಕ್ಕೆ ಸೇರಿಕೊಳ್ಳುವಿರಿ. ಏನೇ ಹೇಳಿದರೂ ಕೇಳಿಸಿಕೊಂಡು ಬನ್ನಿ. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಸಂಗಾತಿಯ ನೋವಿಗೆ ಸ್ಪಂದಿಸುವುದು ಕಷ್ಟವಾದೀತು. ಕೆಲವು ತಿರುವಿನಲ್ಲಿ ನೇರವಾಗಿ ಹೋಗಲಾಗದು.

ಮಿಥುನ ರಾಶಿ :ನಿಮ್ಮ ಬಲವನ್ನು ಯಾರದೋ ಮೂಲಕ ಕಂಡುಕೊಳ್ಳುವ ಬದಲು, ನೀವೇ ಅರಿತುಕೊಂಡರೆ ಸುಖ. ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಸರಿಮಾಡಿಕೊಳ್ಳುವಿರಿ. ಮಾನಸಿಕ ಕಿರಿಕಿರಿಯನ್ನು ನೀವು ದೂರ ಮಾಡಿಕೊಳ್ಳಿ. ಬಹಳ ಜಾಣ್ಮೆಯಿಂದ ಕಾರ್ಯವನ್ನು ಸಾಧಿಸುವಿರಿ. ನಿರೀಕ್ಷಿತ ಸ್ಥಾನವನ್ನು ನೀವು ಪಡೆದುಕೊಳ್ಳುವಿರಿ. ನಿಮಗೆ ಇಷ್ಟವಾದ ಸ್ಥಳಗಳಿಗೆ ಹೋಗುವಿರಿ. ಸಹೋದ್ಯೋಗಿಗಳ ಸಹಕಾರವು ನಿಮಗೆ ಸಿಗುವುದು. ನಿಮ್ಮ ಸಾಮರ್ಥ್ಯವು ಇತರರಿಗೂ ತಿಳಿಯವಹದು. ದೇವತಾರಾಧನೆಗೆ ತಿಳಿದವರ ಜೊತೆ ಚರ್ಚಿಸಿ. ವೈವಾಹಿಕ ಜೀವನವನ್ನು ಒತ್ತಡದಿಂದ ನಿರ್ವಹಿಸಬೇಕಾಗುವುದು. ಹಣವನ್ನು ಕಳೆದುಕೊಳ್ಳುವ ಸನ್ನಿವೇಶವು ಬರಬಹುದು. ಬೇಡದ ಮಾತುಕತೆಯಲ್ಲಿ ಇಂದಿನ‌ ದಿನ‌ವು ಕಳೆಯುವುದು.‌ ನಿಮ್ಮದೇ ವಸ್ತುವಾದರೂ ನಿಮಗೆ ಬೇಕಾದ ಸಮಯಕ್ಕೆ ಲಭ್ಯವಾಗದು ಕಛೇರಿಯಲ್ಲಿ ಒತ್ತಡವಿರಲಿದ್ದು ಎಲ್ಲರನ್ನೂ ನೀವು ದೂರುವಿರಿ. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕತೆ ಬಹಳ ಕೆಳಮಟ್ಟಕ್ಕೆ ಹೋಗಬಹುದು.

ಕರ್ಕಾಟಕ ರಾಶಿ :ಸಂದೇಹದಿಂದ ಮನಸ್ಸು ಹಾಳಾಗುತ್ತದೆ. ಹಾಳಾದ ಮನಸ್ಸಿನಿಂದ ಕೆಲಸವೂ ಹಾಳು. ಇಂದು ಹೆಚ್ವಿನ ಸಮಯವನ್ನು ಆಟ, ಓಟಗಳಲ್ಲಿ ಕಳೆಯುವಿರಿ. ಸಹೋದರಿಯ ಸಹಾಯವು ನಿಮಗೆ ಸಿಗಲಿದ್ದು ನಿಮ್ಮ‌ ಜವಾಬ್ದಾರಿಯೂ ಹೆಚ್ಚಾಗಲಿದೆ. ಭೂಮಿಯ ವ್ಯವಹಾರವು ಸುಗಮವಾಗಿ ಸಾಗುವುದು. ಆರ್ಥಿಕ ಸಮಸ್ಯೆಯನ್ನು ನೀವು ದೂರ ಮಾಡಿಕೊಳ್ಳುವಿರಿ. ಬೆಚ್ಚಗಿನ ವಾತಾವರಣದಿಂದ ಹೊರಬಂದಾಗಲೇ ಗೊತ್ತಾಗುವುದು. ಬಂಧುಗಳು ನಿಮ್ಮಿಂದ ಅರ್ಥಿಕ ಸಹಾಯವನ್ನು ಬಯಸಿದ್ದರೂ ಕೇಳಲು ಹಿಂದೇಟು ಹಾಕುವರು. ಕೃಷಿಯಲ್ಲಿ ನಿಮಗೆ ಆಸಕ್ತಿಯು ಹೋಗಬಹುದು. ಮಕ್ಕಳ ಜೊತೆಗೆ ಕಳೆಯುವ ನಿಮ್ಮ ಸಮಯವು ಬಹಳ ಆಪ್ತವಾಗಿರುವುದು. ಶುಭವಾರ್ತೆಯ ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ನಿಮ್ಮವರ ಕಷ್ಟಗಳ ಮುಂದೆ ನಿಮ್ಮ ಕಷ್ಟ ಅಲದಪವೆನಿಸಬಹುದು. ರೋಗಗಳು ಹೋದಂತೆ ಅನಿಸಬಹುದು, ಮತ್ತಾವುದೋ ದಾರಿಯಿಂದ ನುಸುಳುತ್ತವೆ. ಹಳೆಯ ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಬಂಧುಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು.

ಸಿಂಹ ರಾಶಿ :ಸಿಟ್ಟನ್ನು ಮಾಡಿಕೊಳ್ಳುವುದು ಸರಿ ಎನಿಸಿದರೂ ಇದರಿಂದ ಆಗುವ ತೊಂದರೆಯಿಂದ ಸುಮ್ಮನಿರುವುದೇ ಒಳ್ಳೆಯದು. ನೀವು ಅಪವಾದಗಳನ್ನು ಕೇಳುವ ಸ್ಥಿತಿ ಬರಬಹುದು. ವಾಸಸ್ಥಳದ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಎಲ್ಲ ಸಂದರ್ಭದಲ್ಲಿಯೂ ನಿಮ್ಮ ಮಾತೇ ನಡೆಯುತ್ತದೆ ಎಂದು ಇಟ್ಟುಕೊಳ್ಳಬಾರದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಮಾಡಿಕೊಳ್ಳಿ. ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುವುದು ಜಾಣತನ. ಸ್ತ್ರೀಯರ ಒಡನಾಟ ಅತಿಯಾಗಿ ಬೇಡ. ನೇರ ನುಡಿಗಳನ್ನು ನೀವು ಸಹಿಸುವುದು ಕಷ್ಟವಾದೀತು. ಸ್ವಚ್ಛಂದವಾಗಿ ವಿಹರಿಸುವ ಮನಸ್ಸು ಇರಲಿದೆ. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು. ಮುಖಂಡರು ಬಹಳ ಜಾಣ್ಮೆಯಿಂದ ಮುಂದುವರಿಯಬೇಕಾಗುವುದು. ಪರರ ನೋವನ್ನು ಮರೆತು ಮುನ್ನಡೆಯಿರಿ. ಅಗಬೇಕಾದುದು ಆಗಿಯೇ ಆಗುತ್ತದೆ.

ಕನ್ಯಾ ರಾಶಿ :ನಿಮ್ಮವರೇ ನಿಮಗೆ ಶತ್ರುಗಳಂತೆ ಕಾಣಬಹುದು. ಇಂದು ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಸಂಗಾತಿಗೆ ನಿಮ್ಮ ಕಾರಣದಿಂದ ಉತ್ತಮ ಕೆಲಸವು ಸಿಗಲಿದೆ. ಕಛೇರಿಯಲ್ಲಿ ನೀವು ಪ್ರಶಂಸೆಗೆ ಪಾತ್ರರಾಗುವಿರಿ. ಕೆಟ್ಟ ಆಲೋಚನೆಗಳು ಬಂದರೂ ಅದನ್ನು ದೂರ ಮಾಡಿಕೊಳ್ಳುವ ತಂತ್ರವನ್ನು ನೀವು ತಿಲಕಿದಿರುವಿರಿ. ಹೂಡಿಕೆಯ ವಿಚಾರದಲ್ಲಿ ನೀವು ಹಿಂದುಳಿಯಬೇಕಾಗಬಹುದು. ಆಲಂಕಾರಿಕ ಉದ್ಯಮವನ್ನು ಮಾಡಿದರೆ ನಿಮಗೆ ಶ್ರೇಯಸ್ಸು ಆದಾಯ ಎಲ್ಲವೂ ಸಿಗಲಿದೆ. ವ್ಯಾಪಾರವನ್ನು ಬಹಳ ಮುತುವರ್ಜಿಯಿಂದ ಮಾಡಬೇಕಾಗುವುದು. ಮನೆಯ ಕೆಲಸವು ಮುಗಿಯದಷ್ಟು ಇರಲಿದೆ‌. ನಿಮ್ಮನ್ನು ಯಶಸ್ಸನ್ನು ಕಂಡು ಅದನ್ನು ನಿಯಂತ್ರಿಸಲು ಸಹೋದ್ಯೋಗಿಗಳು ಮೇಲಧಿಕಾರಿಗೆ ದೂರನ್ನು ಕೊಡಬಹುದು. ಸ್ನೇಹಿತರ ಜೊತೆ ಹರಟೆಯಲ್ಲಿ ಕಾಲಕಳೆಯುವಿರಿ. ಆರ್ಥಿಕ ವ್ಯಥೆಯನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ. ವಕೀಲ ವೃತ್ತಿಯವರಿಗೆ ಹೆಚ್ಚಿನ ಕಾರ್ಯವು ಬರಲಿದ್ದು ನಿಭಾಯಿಸುವ ಕಲೆಯನ್ನು ಕಲಿಯಬೇಕಾದೀತು.

ತುಲಾ ರಾಶಿ :ನ್ಯಾಯಾಲಯದ ಹೋರಾಟಕ್ಕೆ ಸ್ನೇಹಿತರ ಬೆಂಬಲ ಸಿಗುವುದು. ಇಂದು ನಿಮಗೆ ನಿಮ್ಮವರುಲೇ ಬಯಸದೇ ಇದ್ದರೂ ಸಹಾಯ ಮಾಡುವವರಿದ್ದಾರೆ. ಮನಸ್ಸಿನಲ್ಲಿ ಹತಾಶೆ, ಗೊಂದಲ, ಸಿಟ್ಟು ಎಲ್ಲವೂ ಕೂಡಿಕೊಂಡು ಯಾವುದನ್ನೂ ಮಾಡಲಾಗದ ಸ್ಥಿತಿಯು ನಿಮ್ಮದಾಗಲಿದೆ. ಅನ್ಯಾಯಕ್ಕೆ ಬಲಿಯಾಗುವ ಸಾಧ್ಯತೆ ಇದೆ. ನಿಮ್ಮದಲ್ಲದ ಕೆಲಸಕ್ಕೂ ನೀವೇ ಜವಾಬ್ದಾರರಾಗಬೇಕಾಗಬಹುದು. ವೈವಾಹಿಕ ವಿಚಾರದ ಅಂತಿಮ ತೀರ್ಮಾನಕ್ಕೆ ಬರುವುದು ಕಷ್ಟವಾದೀತು. ದೈವದ ಮೊರೆ ಬಿಟ್ಟರೆ ಮತ್ತಾವುದೂ ಕಾಣಸಿಗದು. ಸುಮ್ಮನೇ ಕುಳಿತರೇ ಹತ್ತಾರು ಆಲೋಚನೆಗಳು ಇನ್ನಷ್ಟು ನಿಮ್ಮ ಮನಸ್ಸನ್ನು ದುರ್ಬಲಗೊಳಿಸುವುದು. ಆಪ್ತರಾದ ಮಾತ್ರಕ್ಕೆ ಎಲ್ಲವನ್ನೂ ಸರಿಯಾಗಿ ಹೇಳುತ್ತಾರೆ ಎಂದಿಲ್ಲ. ತಂದೆಯ ಆಸೆಯನ್ನು ಪೂರ್ಣ ಮಾಡಿ, ಅವರಿಗೆ ಖುಷಿಯನ್ನು ಕೊಡುವಿರಿ. ಸುಲಭವಾಗಿ ಇಂದು ಯಾವುದನ್ನೂ ಪಡೆಯುವುದು ಆಗದು.

ವೃಶ್ಚಿಕ ರಾಶಿ :ಎಲ್ಲವನ್ನೂ ಬಿಟ್ಟು ಸುಮ್ಮನಿದ್ದರೂ ಜೊತೆಗಾರರು ಸುಮ್ಮನಿರಲಾರರು. ಇಂದು ನಿಮ್ಮ ಜೊತೆಗಾರರ ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದದಿರಬಹುದು. ಸಾಲದಿಂದ ನೀವು ತಲೆ ಮರೆಸಿಕೊಳ್ಳುವ ಸ್ಥಿತಿಯೂ ಬರಬಹುದು.‌ ಅದಕ್ಕೆ ಬೇಕಾದ ಸಿದ್ಧತೆಯನ್ನು ಇಂದೇ ಮಾಡಿಕೊಳ್ಳುವುದು ಉತ್ತಮ. ಸ್ಥಿರಾಸ್ತಿಯನ್ನು ನಿಮ್ಮದಾಗಿಸಿಕೊಳ್ಳಲು ಸಾಹಸಮಾಡಬೇಕಾದೀತು. ದಾಂಪತ್ಯ ಜೀವನವು ಅನೇಕ‌ ತಿರುವಗಳನ್ನು ಪಡೆದುಕೊಂಡು ಮುಂದೆ ಸಾಗುವುದು. ಹಿರಿಯರನ್ನು ಗೌರವಿಸಿ ಆಶೀರ್ವಾದವನ್ನು ಪಡೆದುಕೊಳ್ಳಿ. ಪ್ರೀತಿಯಿಂದ ಮಾತನಾಡಿಸಿದರೆ ಎಲ್ಲವೂ ನಿಮ್ಮದಾಗುವುದು. ಅದನ್ನು ನೀವು ಜಾಣ್ಮೆಯಿಂದ ಸರಿ ಮಾಡಿಕೊಳ್ಳಿ. ಅನಾರೋಗ್ಯದಿಂದ ನಿಮಗೆ ಉತ್ಸಾಹ ಕಡಿಮೆಯಾಗುವುದು. ಎಲ್ಲವೂ ತಾನಾಗಿಯೇ ತಿಳಿದು ಬರುತ್ತದೆ. ದೂರದ ಬಂಧುಗಳ ಭೇಟಿಯ ನಿರೀಕ್ಷೆಯಲ್ಲಿ ಇರುವಿರಿ. ಪೂರ್ವಾಪರ ಯೋಚನೆ ಇಲ್ಲದೇ ಮಾತನಾಡಿ ಸಂಬಂಧವನ್ನು ಹಾಳುಮಾಡಿಕೊಳ್ಳಬೇಡಿ.

ಧನು ರಾಶಿ :ಹಿತಶತ್ರುಗಳಿಂದ ನಿಮಗೆ ನೆಮ್ಮದಿ ಕಡಿಮೆಯಾಗಬಹುದು. ಇಂದು ನೀವು ಹಾಕಿಕೊಂಡ ಯೋಜನೆಗೆ ಕುಟುಂಬದ ಸಹಾಯವು ಲಭ್ಯವಾಗಲಿದೆ. ವಿದ್ಯಾರ್ಥಿಗಳ ಪ್ರಗತಿಯ ವಿಷಯವು ಮಂದಗತಿಯಲ್ಲಿಯೇ ಇರುವುದು. ಸಕಾರಾತ್ಮಕ ಚಿಂತನೆಯನ್ನೇ ಮಾಡಿಕೊಳ್ಳಿ. ನಂಬಿಕೆಯನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಕಷ್ಟವಾದೀತು. ಕಾರ್ಯದ ಸ್ಥಳದಲ್ಲಿ ಅಪವಾದ ಬರಬಹುದು. ಕಛೇರಿಯಲ್ಲಿ ನಿಮಗೆ ಆಗದವರ ಸಂಗವು ನಿರ್ಮಾಣವಾಗಲಿದೆ. ಶುಭ ಸಮಾರಂಭಗಳಿಗೆ ಭೇಟಿ ಕೊಡುವಿರಿ. ಮನೆಯ ಕೆಲಸವು ಸರಿಯಾಗಿ ಆಗದೇಹೋಗಬಹುದು. ಭೂವ್ಯವಹಾರಕ್ಕೆ ಸರ್ಕಾರದ ಕೆಲಸವು ಸ್ವಲ್ಪ ವೇಗವನ್ನು ಪಡೆದುಕೊಳ್ಳುವುದು. ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ನೀವು ಮಾಡಿಕೊಳ್ಳಬೇಕಾದೀತು. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ಇಂದು ನೀವು ಯಾವುದೋ ಚಿಂತೆಯಲ್ಲಿ ಇರುವಿರಿ.

ಮಕರ ರಾಶಿ :ನಿಮ್ಮ ಹಳೆಯ ನೌಕರರನ್ನು ಕೈಬಿಡುವ ಯೋಚನೆ ಮಾಡುವಿರಿ. ಇಂದು ನಿಮ್ಮ ಆಲೋಚನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ನಿಮ್ಮ ಕುಶಲ ಕಾರ್ಯಗಳು ಇತರರಿಗೂ ಗೊತ್ತಾದೀತು. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ತಾಯಿಗೆ ನಿಮ್ಮ ಕಡೆಯಿಂದ ಅಮೂಲ್ಯವಾದ ಉಡುಗೊರೆಯನ್ನು ಕೊಡುವಿರಿ. ನಿಮ್ಮ ಸಭ್ಯತೆಯನ್ನು ಇತರರು ಬಳಸಿಕೊಳ್ಳುವರು. ಸಂಗಾತಿಯ ಜೊತೆ ಸಂತೋಷದಿಂದ ಇರುವಿರಿ. ಸಂಪತ್ತಿನ ಉಳಿತಾಯದ ಮಾರ್ಗವನ್ನು ನೀವು ಕಂಡುಕೊಳ್ಳುವಿರಿ. ನಿಮಗೆ ಸಿಗದೇ ಇರುವ ಜವಾಬ್ದಾರಿಯ ಬಗ್ಗೆ ಸಿಮಗೆ ಸ್ವಲ್ಪ ಅಸಮಾಧನ ಇರಬಹುದು. ರಾಜಕೀಯದಲ್ಲಿ ಮರ್ಯಾದೆಯನ್ನು ಬಿಡಬೇಕಾಗುವುದು. ಮುಚ್ಚು ಮರೆ ಇಲ್ಲದೇ ಎಲ್ಲವನ್ನೂ ಆಪ್ತರ ಜೊತೆ ಹಂಚಿಕೊಳ್ಳುವ ಸಂಭವವಿದೆ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಅಪರಿಚಿತರು ನಿಮ್ಮನ್ನು ಅಳೆಯಬಹುದು. ಶಿಸ್ತುಬದ್ಧವಾದ ವ್ಯವಹಾರದಿಂದ ನಿಮಗೆ ಹೊಗಳಿಕೆ ಸಿಗುವುದು. ದೈಹಿಕ ಬಾಧೆಗೆ ಯೋಗ್ಯವಾದ ಮದ್ದನ್ನು ಮಾಡಿ.

ಕುಂಭ ರಾಶಿ :ಒತ್ತಡದ ಕಾರಣ ಕೆಲವನ್ನು ನೀವು ಬಿಡಬೇಕಾಗುವುದು. ಇಂದು ನಿಮ್ಮ ಕಾರ್ಯಗಳು ನಿಧಾನಗತಿಯಲ್ಲಿ ಇರಲಿದೆ. ಬರುವ ಅಲ್ಪ ಆದಾಯವನ್ನು ನೀವು ರಕ್ಷಿಸಿಕೊಳ್ಳಲು ಪ್ರಯತ್ನಿಸುವಿರಿ. ಕುಟುಂಬಕ್ಕೆ ನಿಮ್ಮ ಮೇಲೆ ಪ್ರೀತಿಯು ಅಧಿಕವಾಗಲಿದೆ. ಓಡಾಟದಿಂದ ಆಯಾಸಗೊಳ್ಳುವಿರಿ. ಬಂಧುಗಳಿಂದ ಸಲ್ಲದ ಮಾತುಗಳು ಕೇಳಿಬರಬಹುದು. ಆಸ್ತಿಯ ವಿಚಾರದಲ್ಲಿ ವಾದಗಳು ಆಗಬಹುದು. ಆಲಸ್ಯದಿಂದ ನಿಮ್ಮ ಎಲ್ಲ ಕೆಲಸಗಳೂ ಹಾಗೆಯೇ ಉಳಿಯಬಹುದು. ಯಾವುದನ್ನೂ ನೀವು ಅತಿಯಾಗಿ ಇಷ್ಟಪಡದೇ ಇರುವುದು ಉತ್ತಮ. ಕೆಲವರು ನಿಮ್ಮ ಮುಖಸ್ತುತಿಯನ್ನು ಮಾಡಬಹುದು. ಯಾರನ್ನಾದರೂ ನಂಬಲು ನಿಮ್ಮ‌ ಮನಸ್ಸು ಸಿದ್ಧವಿರದು. ಸಜ್ಜನರಿಗೆ ಭೋಜನವನ್ನು ಹಾಕಿಸಿ. ದೂರದ ಊರಿಗೆ ಹೋದಾಗ ಉತ್ತಮ ವ್ಯವಸ್ಥೆ ಆಗಲಿದೆ. ಅಗ್ನಿ ಅಥವಾ ಅಗ್ನಿಗೆ ಸಂಬಂಧಿಸಿದ ವಸ್ತುವಿನಿಂದ ನಿಮಗೆ ಭಯವು ಕಾಡುವುದು.

ಮೀನ ರಾಶಿ :ನಿಮ್ಮ ಜೀವನಕ್ಕೆ ಕಾರಣರಾದವರನ್ನು ಕೃತಜ್ಞತೆಯಿಂದ ಸ್ಮರಿಸುವಿರಿ. ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ. ಸಾಮಾಜಿಕ ಕಾರ್ಯಗಳು ನಿಮಗೆ ಪ್ರಶಂಸೆಯನ್ನು ತಂದುಕೊಡುವುದು. ಅಂದುಕೊಂಡ ಕಾರ್ಯವು ಪೂರ್ಣವಾಗಿ ಆಗುವುದಿಲ್ಲ. ಮಾತುಗಳನ್ನು ಇಂದು ಕಡಿಮೆ ಮಾಡಿಕೊಳ್ಳುವಿರಿ. ಎಂದೋ ಆಗುವ ತೊಂದರೆಯನ್ನು ಇಂದು ನೆನೆಯುವುದು ಬೇಡ. ಸಂಪತ್ತಿನ‌ ನಿರ್ವಹಣೆಯನ್ನು ಮಾಡಲು ನೀವು ಸಮರ್ಥರಾಗುವಿರಿ. ಅಪರಿಚಿತರು ನಿಮ್ಮನ್ನು ಭೇಟಿಯಾಗಲಿದ್ದಾರೆ. ಸಂಗಾತಿಯಿಂದ ಉಡುಗೊರೆ ಸಿಗಲಿದೆ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ. ಕೃಷಿಯಲ್ಲಿ ನಿಮಗೆ ಸ್ವಲ್ಪ ಆಸಕ್ತಿಯು ಬರುವುದು. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ನಿಮ್ಮ ಪಾಲೂ ಇರುವುದು. ನಿಮ್ಮನ್ನು ನೇರವಾಗಿ ಕೇಳಿದ್ದಕ್ಕೆ ಮಾತ್ರ ಉತ್ತರಿಸುವುದು ಒಳ್ಳೆಯದು. ತಂತ್ರಜ್ಞಾನದಲ್ಲಿ ನಿಮಗೆ ಒಳ್ಳೆಯ ಹಿಡಿತಕ್ಕೆ ಗೊತ್ತಾಗುವುದು.

ಲೋಹಿತ ಹೆಬ್ಬಾರ್ – 8762924271 (what’s app only)

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ