ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಡಿಸೆಂಬರ್ 02 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಬ್ರಹ್ಮ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:33 ರಿಂದ 10:57 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:47 ಗಂಟೆ 03:11 ನಿಮಿಷಕ್ಕೆ, ಗುಳಿಕ ಕಾಲ ಬೆಳಗ್ಗೆ 06:43 ರಿಂದ 08:08ರ ವರೆಗೆ.
ಮೇಷ ರಾಶಿ: ನಿಮ್ಮದಲ್ಲದ ಕೆಲಸವನ್ನು ನೀವು ಮಾಡಬೇಕಾಗುವುದು. ಕೆಲವರಿಂದ ನಕಾರಾತ್ಮಕ ಮಾತುಗಳನ್ನು ಕೇಳಬೇಕಾಗುವುದು. ನಿಮ್ಮ ನೆಚ್ಚಿನ ಜನರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸ್ತ್ರೀಯರು ನಿಮ್ಮ ಮೇಲೆ ಏನಾದರೂ ಆರೋಪ ಮಾಡಿಯಾರು. ಪಕ್ಷಪಾತ ಮಾಡುವುದು ಬೇಡ. ಸಂಬಂಧಿಸಿದ ವಿಚಾರಕ್ಕೆ ನಿಮ್ಮ ಸಮರ್ಥನೆ ಇರಲಿ. ಯಾರ ಮೇಲೂ ನಿಮ್ಮದೇ ಆದ ನಿಲವು ಬೇಡ. ನೋವಿನಿಂದ ಹೊರಬರಲು ನಿಮಗೆ ಕಷ್ಟವಾದೀತು. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ. ನಿಮ್ಮ ಮನಸ್ಸು ಬಹಳ ದುರ್ಬಲವಾಗಿದ್ದು ಬಲಮಾಡಿಕೊಳ್ಳು ಮಾರ್ಗವನ್ನು ಕಂಡುಕೊಳ್ಳಿ. ಮಾತಿನಲ್ಲಿ ಕುಚೋದ್ಯ ಮಾಡುವುದನ್ನು ಕಡಿಮೆ ಮಾಡಿ. ವ್ಯಾಪಾರದಲ್ಲಿ ಲಾಭವನ್ನೇ ಗಮನದಲ್ಲಿಟ್ಟು ಉಳಿದುದನ್ನು ಮರೆಯುವಿರಿ. ನಿಮ್ಮ ಬಗ್ಗೆ ಅನುಕಂಪ ಬರುವುದು. ಪ್ರೀತಿಸಿದವರು ನಿಮಗೆ ಸಮಯ ಕೊಡದೇ ಬೇಸರಿಸಿಕೊಳ್ಳುವಿರಿ.
ವೃಷಭ ರಾಶಿ: ಯಾರ ಮಾತನ್ನೂ ಕೇಳದೇ ಸ್ವತಂತ್ರವಾಗಿ ನೀವು ಆಲೋಚಿಸುವಿರಿ. ಯಾವುದಾದರೂ ಸಂಘವನ್ನು ಕಟ್ಟಿಕೊಳ್ಳುವ ನಿರ್ಧಾರವನ್ನು ಮಾಡುವಿರಿ. ಸ್ತ್ರೀಯರಿಂದ ಲಾಭವನ್ನು ಪಡೆಯುವಿರಿ. ಇಂದಿನ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ ಉತ್ಸಾಹವನ್ನು ಜಾಗರೂಕಗೊಳಿಸುವುದು. ಕಛೇರಿಯಲ್ಲಿ ನಿಮ್ಮ ಶ್ರಮವು ಲೆಕ್ಕಕ್ಕೆ ಬಾರದೇ ಹೋದೀತು. ಶ್ರಮಕ್ಕೆ ಫಲವನ್ನು ನಿರೀಕ್ಷಿಸುತ್ತ ಸಮಯವನ್ನು ವ್ಯರ್ಥ ಮಾಡುವಿರಿ. ಮಾತಿನಲ್ಲಿ ಮಾರ್ದವವು ಇಲ್ಲವಾಗುವುದು. ಅತಿಯಾದ ಭಾರದ ವಸ್ತುಗಳನ್ನು ಒಯ್ಯುವಿರಿ. ನಿಮ್ಮ ಚೌಕಟ್ಟನ್ನು ಮೀರಿ ವರ್ತಿಸುವುದು ಬೇಡ. ಅಸಾಮಾನ್ಯ ವಿಚಾರವನ್ನು ಸರಳೀಕರಿಸುವಿರಿ. ಕಠಿಣ ನಿರ್ಧಾರಗಳು ನಿಮ್ಮ ಮಾನಸಿಕತೆಯನ್ನು ಹೇಳುತ್ತದೆ. ಇಂದು ಕೆಲವು ವಿಚಾರಕ್ಕೆ ನಿಮ್ಮ ಜಾಡ್ಯವು ವರವಾಗಬಹುದು.
ಮಿಥುನ ರಾಶಿ: ಅಶುಭ ಸಮಾಚಾರವನ್ನು ಕೇಳಬೇಕಾಗುವುದು. ಬಹಳ ದಿನಗಳ ಅನಂತರ ಶೋಕದಲ್ಲಿ ಇರುವಿರಿ. ನೂತನ ವಸ್ತುಗಳನ್ನು ಖರೀದಿಸುವ ಬಗ್ಗೆ ವಿಚಾರ ಮಾಡುವುದು ಉತ್ತಮ. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೋಪವು ಹೆಚ್ಚಾಗಿರುವುದು. ದೇಹಾರೋಗ್ಯವು ಸರಿಯಾಗಿ ಇಲ್ಲದ ಕಾರಣ ಮನಸ್ಸು ಸರಿಯಾಗಿ ಕೆಲಸ ಮಾಡದು. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಕಾಡುವುದು. ಉದ್ಯೋಗವು ಸಾಕು ಎನಿಸಬಹುದು. ನಿಮ್ಮ ಆಚರಣೆಯು ಇತರರಿಗೆ ಇಷ್ಟವಾಗುವುದು. ಅತಿಯಾದ ಒತ್ತಡದಿಂದ ಹೊರಬರಲು ಸಹೋದ್ಯೋಗಿಗಳ ಸಹಾಯವನ್ನು ಪಡೆಯುವಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಓದು ಹೆಚ್ಚು ಫಲಿಸುವುದು. ಅನಗತ್ಯ ಓಡಾಟದಿಂದ ನಿಮಗೆ ಬೇಸರವಾಗಲಿದೆ. ಸಲುಗೆಯು ಅತಿಯಾಗುವುದು ಬೇಡ. ಸಂಗಾತಿಯನ್ನು ನೀವು ಇಂದು ದೂರ ಮಾಡಿಕೊಳ್ಳುವಿರಿ.
ಕಟಕ ರಾಶಿ: ಉದ್ಯೋಗದ ವಿಚಾರದಲ್ಲಿ ಸರಿಯಾದ ನಿರ್ಧಾರವೇ ಇರದು. ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಉತ್ತಮ. ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸ ಸಿಗುವ ಸಾಧ್ಯತೆ ಇದೆ. ಬೇಡವೆಂದರೂ ಕೆಟ್ಟವರ ಸಹವಾಸವೇ ಸಿಗುವುದು. ನಂಬಿಕೆಯನ್ನು ಕಳೆದುಕೊಳ್ಳಬಹುದು. ನಿಮಗೆ ಸಂಬಂಧಿಸದ ವಿಚಾರದಲದಲಿ ಹೆಚ್ಚು ಮಾತನಾಡುವಿರಿ. ಹೂಡಿಕೆಯ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. ಸಿಕ್ಕಿದ್ದನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಚಿಂತಿಸುವುದು ಉತ್ತಮ. ನಿಮಗೆ ಅನೇಕ ವಿಚಾರಗಳಿಗೆ ಸಾಂತ್ವನ ಸಿಗಬಹುದು. ಇರುವುದರಲ್ಲಿ ತೃಪ್ತಿಯು ಕಾಣದೇ ಇನ್ನೊಂದಕ್ಕೆ ಆಸೆಪಡುವಿರಿ. ಸ್ತ್ರೀಯರು ಹೆಚ್ಚಿನ ಸಮಯವನ್ನು ಸೌಂದರ್ಯಕ್ಕೆ ಮೀಸಲಿಡುವರು. ಇಂದು ಹೆಚ್ಚು ಆಡಂಬರವನ್ನು ನೀವು ಇಷ್ಟಪಡುವಿರಿ.
ಸಿಂಹ ರಾಶಿ: ನೂತನ ಮಿತ್ರರ ಆಗಮನವಾಗಲಿದೆ. ಮನೋರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ನಿಮ್ಮನ್ನು ನಿಂದಿಸುವವರಿಗೆ ಉತ್ತರವನ್ನು ಕೆಲಸದ ಮೂಲಕ ತಿಳಿಸುವಿರಿ. ಮನೆಯಲ್ಲಿ ಬಂಧುಗಳ ಸಮಾಗಮದಿಂದ ಸಂತೋಷವಾಗುವುದು. ದಿನ ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ. ಖರ್ಚಿನ ಮೇಲೆ ನಿಯಂತ್ರಣ ಸಾಧಿಸಬೇಕೆಂದಿದ್ದರೂ ಮತ್ತೆಲ್ಲೋ ಹರಿದು ಹೋಗುವುದು. ಅನವಶ್ಯಕ ಮಾತುಗಳನ್ನು ನಿಲ್ಲಿಸಿ. ವೈವಾಹಿಕ ಜೀವನದ ಸುಖವು ಸಪ್ಪೆ ಎನಿಸಬಹುದು. ಭೂಮಿಯ ವ್ಯವಹಾರಕ್ಕೆ ಯಾರ ಜೊತೆಗಾದರೂ ಸೇರಿಕೊಳ್ಳುವಿರಿ. ನಿಮ್ಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುವಿರಿ. ಮಕ್ಕಳನ್ನು ಪಡೆಯುವ ಬಯಕೆ ಇರುವುದು. ಆರೋಗ್ಯದಲ್ಲಿ ವ್ಯತ್ಯಾಸವಾಗಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವಿರಿ. ನೂತನ ವಸ್ತುಗಳ ಖರೀದಿಯನ್ನು ನೀವು ಮಾಡುವಿರಿ.
ಕನ್ಯಾ ರಾಶಿ: ಇಂದು ಎಲ್ಲರ ಮೇಲೂ ಅನುಮಾನದಿಂದಲೇ ಇರುವಿರಿ. ನೀವು ಕೊಟ್ಟ ಭರವಸೆಯನ್ನು ಪೂರ್ಣ ಮಾಡಲಾಗದು. ಇಷ್ಟದ ವಸ್ತುವನ್ನು ಖರೀದಿಸಿ ಅದನ್ನು ಸರಿಯಾಗಿ ಉಳಿಸಿಕೊಳ್ಳುವಿರಿ. ಜಾಣ್ಮೆಯು ಇಂದು ನಿಮ್ಮ ಉಪಯೋಗಕ್ಕೆ ಬರುವುದು. ಸ್ತ್ರೀಯರು ಅವರಿಗೆ ಬೇಕಾದ ಕಾರ್ಯವನ್ನು ಬಹಳ ನಾಜೂಕಿನಿಂದ ಮಾಡಿಸಿಕೊಳ್ಳುವರು. ಸಾರ್ವಜನಿಕ ಕ್ಷೇತ್ರದಲ್ಲಿ ಇಂದು ಹೆಚ್ಚು ಕಾಣಿಸಿಕೊಳ್ಳುವಿರಿ. ವ್ಯಾಪರದಲ್ಲಿ ಗ್ರಾಹಕರ ಜೊತೆ ಕಲಹವಾಗುವ ಸಾಧ್ಯತೆ ಇದೆ. ಅತಿಯಾದ ಪ್ರೀತಿಯಿಂದ ನಿಮಗೇ ತೊಂದರೆಯಾಗುವುದು. ಹಣದ ಸಂಪಾದನೆಗೆ ವಿವಿಧ ಮಾರ್ಗಗಳು ಇದ್ದರೂ ಅದಾವುದೂ ನಿಮಗೆ ಸರಿ ಕಾಣಿಸದು. ಇಡೀ ದಿನದ ನಿಮ್ಮ ಶ್ರಮವು ವ್ಯರ್ಥವಾಗಬಹುದು. ಸ್ನೇಹ ಬಳಗವನ್ನು ದೊಡ್ಡದಾಗಿಸಿಕೊಳ್ಳುವಿರಿ. ನಿರ್ಮಾಣದ ಕಾರ್ಯವು ಬಹಳ ನಿಧಾನವಾಗುವುದು. ನಿಮಗಾಗದ ಕೆಲಸವನ್ನು ಬೇರೆಯವರು ಮಾಡುವರು.
ತುಲಾ ರಾಶಿ: ಆರೋಗ್ಯವನ್ನು ನೀವು ಅತಿಯಾಗಿ ನಿರ್ಲಕ್ಷಿಸುವಿರಿ. ಶ್ರದ್ಧೆಯಿಲ್ಲದ ಕೆಲಸವನ್ನು ನೀವು ಮಾಡಬೇಕಾಗುವುದು. ನಿಮ್ಮ ಸುಳ್ಳು ವದಂತಿಗಳು ಹರಡುವುದು. ನಿರ್ಮಾಣ ವ್ಯವಸ್ಥೆಯಲ್ಲಿ ಇರುವವರಿಗೆ ಸ್ವಲ್ಪ ಹಿನ್ನಡೆಯಾಗಲಿದೆ. ಹಳೆಯ ವಸ್ತುಗಳ ಮೇಲೆ ನಿರ್ಮೋಹವುಂಟಾಗುವುದು. ಸಂಬಂಧವಿಲ್ಲದ ವಿಚಾರದಲ್ಲಿ ನೀವು ಹಣವನ್ನು ಕಳೆದುಕೊಳ್ಳುವಿರಿ. ದುರಭ್ಯಾಸವು ಅತಿಯಾಗಿ ಮನೆಯಲ್ಲಿ, ಬಂಧುಗಳಿಂದ ನಿಮಗೆ ನಿಂದನೆಯಾಗಲಿದೆ. ಯಾರದೋ ಮಾತನ್ನು ಕೇಳಿ ಇಂದು ಕುಟುಂಬದವರ ಜೊತೆ ಕಲಹವಾಡುವಿರಿ. ಮನೆಯ ಆಡಳಿತವನ್ನು ನೋಡಿಕೊಳ್ಳುವ ಸಂದರ್ಭವು ಬರಬಹುದು. ನಿಮ್ಮ ತಿಳಿವಳಿಕೆಯನ್ನೇ ಪೂರ್ಣ ಸತ್ಯ ಎಂದು ತಿಳಿಯುವುದು ಬೇಡ. ಸಂಗಾತಿಗೆ ನಿಮ್ಮ ನಡವಳಿಕೆಯಲ್ಲಿ ವ್ಯತ್ಯಾಸವು ಕಾಣಿಸುವುದು. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ದಾರಿ ಹುಡುಕಿ.
ವೃಶ್ಚಿಕ ರಾಶಿ: ಆಪ್ತರಿಂದಲೇ ವಂಚನೆಯಾಗಬಹುದು. ಇದನ್ನು ತಿಳಿದು ಬೇಸರಗೊಳ್ಳುವಿರಿ. ಪ್ರಯಾಣದಿಂದ ಹಿಂದಿರುಗುವ ಸಂದರ್ಭವು ಬರಬಹುದು. ಪ್ರಾಣಿಗಳಿಂದ ನಿಮಗೆ ಇಂದು ಭೀತಿ ಎದುರಾಗಬಹುದು. ವಾಹನದ ಕಾರಣಕ್ಕೆ ಮನೆಯಲ್ಲಿ ಕಲಹವಾಗಬಹುದು. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು. ಲೆಕ್ಕಪತ್ರದ ವಿಚಾರದಲ್ಲಿ ಪಾರದರ್ಶಕತೆ ಇರಲಿ. ಯಾರನ್ನೋ ಸಂಶಯಿಸುತ್ತ ಕುಳಿತುಕೊಳ್ಳುವಿರಿ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಬೇಕಾದಲ್ಲಿ ಮಾತ್ರ ಹೇಳಿ. ಇಂದಿನ ನಿಮ್ಮ ವ್ಯವಹಾರವು ಅಧಿಕವಾದ ಯಾವ ಲಾಭವನ್ನೂ ತಂದುಕೊಡದು. ಶಿಸ್ತನ್ನು ರೂಢಿಸಿಕೊಳ್ಳುವ ಅನಿವಾರ್ಯತೆ ಎದುರಾದೀತು. ಯಾವುದನ್ನೂ ಕುರುಡಾಗಿ ನಂಬುವುದು ಬೇಡ. ಧಾರ್ಮಿಕ ವಿಚಾರದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವಿರಿ.
ಧನು ರಾಶಿ: ವೈದ್ಯವೃತ್ತಿಯು ಹೊಸ ತಿರುವನ್ನು ಪಡೆದುಕೊಳ್ಳಬಹುದು. ನಿಮ್ಮಿಂದಾಗದ ಕಾರ್ಯದಲ್ಲಿ ಶ್ರದ್ಧೆಯು ಆಧಿಕವಾಗಿರುವುದು. ತಮಾಷೆಗೆ ಆಡಿದ ಮಾತು ಕಲಹವಾಗಿ ಪರಿವರ್ತಿತವಾದೀತು. ಸರ್ಕಾರದ ಅಧಿಕಾರಗಳ ಭಯವು ಇರಲಿದೆ. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ. ಆಹಾರ ವ್ಯತ್ಯಾಸದಿಂದ ಹೊಟ್ಟೆಯಲ್ಲಿ ಶೂಲೆ ಕಾಣಿಸಿಕೊಳ್ಳಬಹುದು. ದೇಹದಂಡನೆಯು ಹೊಸ ಖಯಿಲೆಯನ್ನು ತರಿಸಬಹುದು. ಮನೆಯ ಔಷಧಿಯಿಂದ ಅದನ್ನು ಸರಿ ಮಾಡಿಕೊಳ್ಳಿ. ನಿಮಗೆ ಸಂಸ್ಥೆಯಲ್ಲಿ ಕಾರ್ಯವನ್ನು ನಿರ್ವಹಿಸಲು ಕರೆ ಬರಬಹುದು. ನಿಮ್ಮ ಕಳೆದ ಜೀವನವನ್ನು ಮೆಲುಕುಹಾಕುವಿರಿ. ಇಂದು ಸಾಲದಿಂದ ನೀವು ಮುಕ್ತರಾಗಿ ಸ್ವಲ್ಪ ನೆಮ್ಮದಿ ಪಡುವಿರಿ. ಕೃಷಿಕರು ತಮ್ಮ ಉತ್ಪನ್ನದಿಂದ ಅಲ್ಪ ಲಾಭ ಪಡೆವರು. ವಿನಾಕಾರಣ ಇನ್ನೊಬ್ಬರ ಮೇಲೆ ಸಿಟ್ಟಾಗುವುದು ಬೇಡ. ಇನ್ನೊಬ್ಬರ ಮಾತನ್ನು ಕೇಳುವ ಸಹನೆ ಇರಲಿ. ಮರೆವು ಹೆಚ್ಚಾದಂತೆ ಅನ್ನಿಸೀತು.
ಮಕರ ರಾಶಿ: ನಿಮ್ಮವರು ಎಂಬ ಮನೋಭಾವ ಅಧಿಕವಾಗಿ ಕಾಡುವುದು. ಅಪರಿಚಿತ ಪ್ರದೇಶವು ನಿಮಗೆ ಆತಂಕವನ್ನು ಹೆಚ್ಚಿಸಬಹುದು. ಸಂಗಾತಿಯ ಬಳಿ ವಾಹನ ಖರೀದಿಗಾಗಿ ಒತ್ತಾಯಿಸುವಿರಿ. ಆಪ್ತರಿಂದ ನಿಮಗೆ ಇಷ್ಟವಾದ ವಸ್ತುವು ಪ್ರಾಪ್ತವಾಗುವುದು. ಆಕಸ್ಮಿಕವಾಗಿ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಸಾಲಪಡೆದವರು ನಿಮ್ಮನ್ನು ಪೀಡಿಸಬಹುದು. ಸಂಗಾತಿಯನ್ನು ಕಳೆದುಕೊಳ್ಳುವ ಭೀತಿ ಇರಲಿದೆ. ಪಾಲುದಾರಿಕೆಯಲ್ಲಿ ಇಂದು ಸಣ್ಣ ವಿಚಾರಕಗಕೇ ಕಲಹವಾಗುವುದು. ಇಂದು ಅಗತ್ಯವಿರುವಷ್ಟು ಮಾತ್ರವೇ ಮಾತನಾಡಿ. ನಿಮ್ಮದಲ್ಲದ ವಸ್ತುಗಳನ್ನು ಯಾರಿಗಾದರೂ ಕೊಡುವ ಮೊದಲು ಯೋಚಿಸಿ. ಗೊತ್ತಿಲ್ಲ ಕೆಲಸಕ್ಕೆ ಹುಂಬುತನ ಬೇಡ. ನಿಮ್ಮ ಮಾತುಗಳು ಹಾಸ್ಯಾಸ್ಪದವಾಗುವುದು. ಹಿರಿಯರ ಜೊತೆ ಅನುಭವವನ್ನು ಹಂಚಿಕೊಳ್ಳುವಿರಿ.
ಕುಂಭ ರಾಶಿ: ನಿಮಗೆ ಆತ್ಮಸಂತೋಷವೇ ಮುಖ್ಯವಾಗಿದ್ದು, ಅದನ್ನು ಪಡೆಯುವಿರಿ. ಮಕ್ಕಳ ಕಾರಣದಿಂದ ನೀವು ತಲೆ ತಗ್ಗಿಸಬೇಕಾಗಬಹುದು. ಆಕಸ್ಮಿಕ ಧನಲಾಭದಿಂದ ಸಂತಸವು ಇರಲಿದೆ. ರಪ್ತು ಉದ್ಯಮದಲ್ಲಿ ನಿಮಗೆ ಲಾಭ ಸಿಗಲಿದೆ. ಮನಸ್ಸು ಬಹಳ ಉತ್ಸಾಹದಿಂದ ಇರಲಿದೆ. ಮನೆಯ ಹಿರಿಯರ ಸೇವೆಯನ್ನು ಮಾಡುವಿರಿ. ಪರೀಕ್ಷೆಯಲ್ಲಿ ನೀವು ಅಂದುಕೊಂಡಷ್ಟು ಫಲಿತಾಂಶ ಸಿಗದು. ನಿಮ್ಮ ಪ್ರೀತಿಗೆ ಬೆಲೆ ಸಿಗದೇಹೋದೀತು. ಸಂಗಾತಿಯು ನಿಮಗೆ ಒಂದೇ ವಿಚಾರಗಳನ್ನು ಮತ್ತೆ ಮತ್ತೆ ಹೇಳಿ ಬೇಸರ ತರಿಸುವರು. ಮೈ ಚಳಿಯನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ. ನಿಮಗಾದ ಸಹಾಯವನ್ನು ನೀವು ಸ್ಮರಿಸಿಕೊಳ್ಳುವಿರಿ. ಅಧಿಕಾರಿಗಳ ಪ್ರಶ್ನೆಗೆ ನಿಮ್ಮ ಉತ್ತರವು ಸರಿಯಾಗಿ ಇರಲಿ. ನಿಮ್ಮನ್ನು ನೋಡುವ ದೃಷ್ಟಿಯು ಬದಲಾದೀತು. ಸಿಟ್ಟನ್ನು ಬಿಟ್ಟು ಶಾಂತವಾಗಿ ಸಮಾಧಾನ ಚಿತ್ತದಿಂದ ಮಾತನಾಡಿ.
ಮೀನ ರಾಶಿ: ಉದ್ಯೋಗದಲ್ಲಿ ಬಡ್ತಿ ಸಿಗಬಹುದು. ಸ್ಥಿರಾಸ್ತಿ ಅಲ್ಪ ಭಾಗವನ್ನು ಮಾರಾಟ ಮಾಡುವ ಚಿಂತನೆ ನಡೆಸುವಿರಿ. ಜೀವನ ಸಂಗಾತಿಯನ್ನು ಅಚ್ಚರಿಗೊಳಿಸುವಿರಿ. ನಿಮ್ಮ ಎಲ್ಲ ಕಾರ್ಯವನ್ನು ಬಿಟ್ಟು ಇಂದು ನೀವು ಅವರ ಜೊತೆ ಸಮಯವನ್ನು ಕಳೆಯುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಸಹೋದರನಿಂದ ಆರ್ಥಿಕ ಸಹಕಾರವನ್ನು ನಿರೀಕ್ಷಿಸುವಿರಿ. ಆರೋಗ್ಯವು ನಿನ್ನೆಗಿಂತ ಉತ್ತಮವಾಗಿದ್ದು, ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸಿ. ಆಸ್ತಿಯನ್ನು ಮಾರಾಟಮಾಡುವ ಆಲೋಚನೆ ಇರಲಿದೆ. ನಿಮ್ಮ ಸ್ನೇಹಿತರಲ್ಲಿ ಇಂದು ದೊಡ್ಡ ಸಾಲವನ್ನು ಕೇಳುವಿರಿ. ಸ್ವೋದ್ಯೋಗವನ್ನು ಮಾಡುತ್ತಿದ್ದರೆ ಸ್ವಲ್ಪ ನಷ್ಟವಾಗಬಹುದು. ಕುಟುಂಬವು ನಿಮ್ಮ ಜೊತೆಗೆ ನಿಲ್ಲುವುದು. ಹಳೆಯ ವಿಚಾರಗಳನ್ನು ನೀವು ಮತ್ತೆ ಕೆದಕುವಿರಿ. ನಿಮ್ಮ ಮಾತಿನಿಂದ ಯಾವ ಕೆಲಸವು ಆಗದು.
ಲೋಹಿತಶರ್ಮಾ – 8762924271 (what’s app only)