Horoscope: ಈ ರಾಶಿಯವರು ಶ್ರಮಕ್ಕೆ ಹಿಂದೆ, ಲಾಭಕ್ಕೆ ಮುಂದೆ ಬರುವರು

|

Updated on: Dec 19, 2023 | 12:10 AM

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಡಿಸೆಂಬರ್ 19, 2023ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Horoscope: ಈ ರಾಶಿಯವರು ಶ್ರಮಕ್ಕೆ ಹಿಂದೆ, ಲಾಭಕ್ಕೆ ಮುಂದೆ ಬರುವರು
ಪ್ರಾತಿನಿಧಿಕ ಚಿತ್ರ
Image Credit source: iStock Photo
Follow us on

ನಿತ್ಯ ಎದ್ದ ಕೂಡಲೇ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ? ಇದೆಯಾ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಇಂದಿನ (ಡಿಸೆಂಬರ್ 19) ನಿಮ್ಮ ರಾಶಿಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ವಜ್ರ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 52 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 06 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:18 ರಿಂದ 04:42ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:41 ರಿಂದ 11:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:30 ರಿಂದ 01:54ರ ವರೆಗೆ.

ಮೇಷ ರಾಶಿ: ಅವಕಾಶದ ನಿರೀಕ್ಷೆಯಲ್ಲಿ ನೀವು ಇರುವಿರಿ. ಒಮ್ಮೆಲೇ ಹಲವು ಕಾರ್ಯಗಳನ್ನು ನಿರ್ವಹಿಸುವುದು ಕಷ್ಟ. ಕೆಲವನ್ನು ನೀವು ಅನಿವಾರ್ಯವಾಗಿ ಬಿಡಬೇಕಾಗುವುದು. ಮಕ್ಕಳ ಸಹವಾಸವನ್ನು ಗಮನಿಸಿ. ನಿಮಗೆ ಅವರು ಬದಲಾದಂತೆ ಕಾಣಿಸಬಹುದು. ನಿಮ್ಮ ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಬಹುದು. ಅತಿಯಾದ ನಿದ್ರೆಯಿಂದ ಮನಸ್ಸು ಕುಗ್ಗುವುದು. ಮನೆಯ ವಿಷಮ ಸ್ಥಿತಿಯನ್ನು ನಿಭಾಯಿಸುವಿರಿ. ಸಂಗಾತಿಗೆ ನಿಮ್ಮ ವಾಸ್ತವದ ಉದ್ಯೋಗದ ವಾಸ್ತವ ಚಿತ್ರಣವನ್ನು ಕೊಡುವಿರಿ. ಆಕಸ್ಮಿಕವಾಗಿ ಸ್ನೇಹಿತರಿಂದ ಉಡುಗೊರೆ ಸಿಗಲಿದೆ. ಆಪ್ತರ ಸೋಗಿನಿಂದ ಯಾರಾದರೂ ನಿಮ್ಮ ಬಳಿ ಬಂದು ಗೌಪ್ಯ ಸಂಗತಿಗಳನ್ನು ತಿಳಿದುಕೊಳ್ಳಬಹುದು. ಧಾರ್ಮಿಕ ಶ್ರದ್ಧೆಯಿಂದ ಅನುಕೂಲತೆ ಇರಲಿದೆ. ಮಿತ್ರರ ಧನಸಹಾಯದಿಂದ ವಾಹನವನ್ನು ಖರೀದಿಸುವಿರಿ. ವಿದೇಶದ ಜೊತೆ ವ್ಯಾಪಾರದ ಸಂಪರ್ಕವನ್ನು ಬೆಳೆಸಿಕೊಳ್ಳುವಿರಿ.

ವೃಷಭ ರಾಶಿ: ಕಛೇರಿಯ ನಿಯಮವನ್ನು ಉಲ್ಲಂಘಿಸಿ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಆಸ್ತಿಯ ವಿಚಾರದಲ್ಲಿ ನೀವು ಆಸಕ್ತಿಯನ್ನು ಕಳೆದುಕೊಂಡಿರುವಿರಿ. ಯಾರ ಕಣ್ತಪ್ಪಿಸಿಯೂ ನೀವು ವ್ಯವಹಾರವನ್ನು ಮಾಡಲಾಗದು. ಮಾತಿನಲ್ಲಿ ಮೃದುತ್ವವನ್ನು ಇತರರಿಗೂ ಇಷ್ತವಾದೀತು. ಯಾರಾದರೂ ನಿಮ್ಮ ಕಿವಿಕಚ್ಚಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು. ನಿಮ್ಮ ನೈಜ ಸ್ವಭಾವವು ಕಾರಣಾಂತರಗಳಿಂದ ಬದಲಾಗಲಿದೆ. ಸುಲಭವಾಗಿ ದೊರೆಯುವುದನ್ನು ಇಷ್ಟಪಡುವುದಿಲ್ಲ. ಒಂಟಿತನವು ನಿಮಗೆ ಅಭ್ಯಾಸವಾಗಲಿದ್ದು ನಿಶ್ಚಿಂತೆಯಿಂದ ಇರುವಿರಿ. ಲೆಕ್ಕ ಶೋಧಕರು ಹೆಚ್ಚಿನ ಒತ್ತಡದಲ್ಲಿ ಇರುವರು. ಅಪರಿಚಿತರ ಜೊತೆ ಸಲುಗೆಯ ವ್ಯವಹಾರವು ಬೇಡ. ಸಂಗಾತಿಯ ಮಾತು ನಿಮಗೆ ಇಷ್ಟವಾಗದು. ನೇರವಾಗಿ ಹೇಳಲು ಹಿಂಜರಿಯುವಿರಿ.

ಮಿಥುನ ರಾಶಿ: ಶ್ರಮಕ್ಕೆ ಹಿಂದೆ, ಲಾಭಕ್ಕೆ ಮುಂದೆ ಬರುವಿರಿ. ಬಂಧುಗಳಿಗೆ ಸಹಕಾರ ಮಾಡಲು ಹೋಗಿ ನಿಮಗೆ ಕಷ್ಟವಾದೀತು. ಗೃಹನಿರ್ಮಾಣದ ವಸ್ತುಗಳನ್ನು ಮಾರಾಟ ಮಾಡುವವರು ಅಧಿಕ ಲಾಭವನ್ನು ಪಡೆಯುವರು. ಮಕ್ಕಳ ದುರ್ಬಲ ಮನಸ್ಸಿಗೆ ಸರಿಯಾದ ಮಾರ್ಗದರ್ಶನ ಬೆಂಬಲದ ಅಗತ್ಯವಿದೆ. ಹೊಸ ಉದ್ಯಮದ ಸಲುವಾಗಿ ಉದ್ಯಮಿಗಳನ್ನು ಭೇಟಿ ಮಾಡುವಿರಿ. ಸಾಲವನ್ನು ಮಾಡಬೇಕಾಗಿಬರಬಹುದು. ಸಹೋದರನಿಂದ ಯಾವ ಸಹಕಾರವನ್ನು ನಿರೀಕ್ಷಿಸದೇ ಕಾರ್ಯಪ್ರವೃತ್ತರಾಗುವಿರಿ. ಇರುವುದನ್ನು ಇದ್ದಂತೆ ಹೇಳುವುದು ಇನ್ನೊಬರಿಗೆ ಆಗಿಬಾರದು. ನಿಮ್ಮ ಸ್ವಭಾವವನ್ನು ಮರೆಮಾಚುವುದು ಕಷ್ಟಸಾಧ್ಯ. ಅಚಾತುರ್ಯದಿಂದ ತಪ್ಪು ನಡೆಯಬಹುದು. ಹಳೆಯ ಹೂಡಿಕೆಯು ಪ್ರಯೋಜನಕ್ಕೆ ಬರಲಿದೆ. ಕಛೇರಿಯ ಒತ್ತಡದಿಂದ ವಿರಾಮವನ್ನು ಪಡೆದು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ಉದ್ಯೋಗದ ನಿಮಿತ್ತ ಅನಿವಾರ್ಯವಾಗಿ ಓಡಾಟ ಮಾಡುವ ಸಂದರ್ಭವು ಬರಬಹುದು.

ಕರ್ಕ ರಾಶಿ: ಇಂದು ಸಹೋದ್ಯೋಗಿಗಳ ಜೊತೆ ವಿಶ್ವಾಸದಿಂದ ವರ್ತಿಸುವಿರಿ. ನೀವು ಎಲ್ಲವನ್ನು ತಿಳಿದವರಂತೆ ನಿಮ್ಮ ನಡವಳಿಕೆ ಇರುವುದು. ಯಾರದೋ ತಪ್ಪಿನಿಂದ ಅಕಸ್ಮಾತ್ ಆಗಿ ವಾಹನದಿಂದ ಬೀಳುವ ಸಾಧ್ಯತೆ. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಗೊಂದಲ ಬರಬಹುದು. ಕಾರ್ಯಕ್ಷೇತ್ರದಲ್ಲಿ ಹೆಚ್ಚು ಸಮಯ ಕೆಲಸವನ್ನು ಮಾಡಬೇಕಾಗುವುದು. ನೂತನ ವಸ್ತ್ರಗಳನ್ನು ಖರೀದಿಸುವಿರಿ. ಭೂಮಿಯ ವ್ಯವಹಾರದಲ್ಲಿ ಪೂರ್ಣವಾಗಿ ಇಂದು ತೊಡಗಿಕೊಳ್ಳುವಿರಿ. ಪಾಲುದಾರಿಕೆಯಿಂದ ನಿಮಗೆ ಉಪಯೋಗವಾಗಲಿದೆ. ಆರ್ಥಿಕತೆಯ ತೊಂದರೆಯಿಂದ ನಿಮ್ಮ ಕೆಲವು ವಸ್ತುಗಳನ್ನು ಮಾರಾಟ ಮಾಡುವಿರಿ. ನಿಮ್ಮ ಅಪ್ರಾಮಣಿಕತೆಯು ಕೆಲವರಿಗೆ ಗೊತ್ತಾಗಬಹುದು. ಪ್ರಯಾಣ ಮಾಡವ ಮನಸ್ಸಿದ್ದರೂ ಶರೀರಕ್ಕೆ ಅಸಾಧ್ಯ ಎನಿಸಬಹುದು.