Horoscope: ಆರ್ಥಿಕತೆಗೆ ಸಂಬಂಧಿಸಿದಂತೆ ಮೈಯೆಲ್ಲ ಕಣ್ಣಾಗಬೇಕಾಗುವುದು

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಡಿಸೆಂಬರ್ 19 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ಆರ್ಥಿಕತೆಗೆ ಸಂಬಂಧಿಸಿದಂತೆ ಮೈಯೆಲ್ಲ ಕಣ್ಣಾಗಬೇಕಾಗುವುದು
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Dec 19, 2023 | 12:20 AM

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಡಿಸೆಂಬರ್ 19) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ವಜ್ರ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 52 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 06 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:18 ರಿಂದ 04:42ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:41 ರಿಂದ 11:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:30 ರಿಂದ 01:54ರ ವರೆಗೆ.

ಧನು ರಾಶಿ: ಕೆಲಸದ ಬಗ್ಗೆ ಉತ್ಸಾಹದಿಂದ ಇರಬೇಕು. ಆತ್ಮವಿಶ್ವಾಸದ ಕೊರತೆಯಿಂದ ನಿಮ್ಮ ಕಾರ್ಯವು ವಿಳಂಬವಾಗಬಹುದು. ನಿಮ್ಮ ಉತ್ಸಾಹವೇ ಪ್ರಬಲವಾಗಿ ಇರಲಿ. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ ತಂದೀತು. ದಾಂಪತ್ಯದಲ್ಲಿ ಪರಸ್ಪರ ವಿರೋಧವು ಬರುವಹಾಗಿದ್ದರೂ ಸದ್ಭಾವವನ್ನು ಇಟ್ಟುಕೊಳ್ಳುವುದು ಮುಖ್ಯವಾಗುದು. ನಿಮ್ಮ ಶ್ರಮವು ದುರುಪಯೋಗವಾಗುವುದು. ದೂರಪ್ರಯಾಣದಿಂದ ನಿಮಗೆ ಖರ್ಚಾಗುವುದು ಗೊತ್ತಾಗದೇ ಹೋಗಬಹುದು. ನ್ಯಾಯಸಮ್ಮತ ಮಾರ್ಗದಲ್ಲಿ ನೀವು ಇರುವುದು ಸೂಕ್ತ. ಕಲಾವಿದರು ಹೆಚ್ಚಿನ ಅವಕಾಶವವನ್ನು ಬಳಸಿಕೊಳ್ಳುವರು. ಹಿರಿಯರ ಜೊತೆ ಔಚಿತ್ಯ ರೀತಿಯಿಂದ ವ್ಯವಸ್ಥೆ ವ್ಯವಹರಿಸಿ. ಸ್ತ್ರೀಯರಿಂದ ಅಪಮಾನವಾಗುವ ಸಾಧ್ಯತೆ ಇದೆ. ಕುಟುಂಬದಿಂದ ಅನಾದರಕ್ಕೆ ಒಳಗಾಗುವಿರಿ. ಆಕಸ್ಮಿಕ ಧನಲಾಭವು ನಿಮಗೆ ಆಶ್ಚರ್ಯ ಉಂಟಾಗಬಹುದು. ಸಂಗಾತಿಯ ಜೊತೆ ಆರಾಮಾಗಿ ಮಾತನಾಡುವಿರಿ.

ಮಕರ ರಾಶಿ: ಇಂದಿನ ಕೆಲವು ಸಂದರ್ಭದಲ್ಲಿ ಮನಸ್ಸು ವಿಚಲಿತವಾಗಬಹುದು. ಆರ್ಥಿಕತೆಗೆ ಸಂಬಂಧಿಸಿದಂತೆ ಮೈಯೆಲ್ಲ ಕಣ್ಣಾಗಬೇಕಾಗುವುದು. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವಿರಿ. ಸಹೋದ್ಯೋಗಿಗಳ ಜೊತೆ ವಿವಾದವಾಗಬಹುದು. ಮಕ್ಕಳು ಉತ್ಸಾಹದಿಂದ ದಿನವನ್ನು ಪ್ರಾರಂಭಿಸಲಿದ್ದು ಅವರಿಗೆ ಕೊಡಬೇಕಾದ ತಿಳಿವಳಿಕೆಯನ್ನು ಆಗಲೇ ಕೊಡುವುದು ಉತ್ತಮ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಪ್ರಯಾಣದಲ್ಲಿ ತೊಂದರೆ ಬರಬಹುದು. ಯಾರದೋ ಪ್ರಭಾವವನ್ನು ಬಳಸಿ ನೀವು ಕೆಲಸವನ್ನು ಮಾಡಿಸಿಕೊಳ್ಳುವಿರಿ. ವ್ಯವಹಾರದಲ್ಲಿ ಮುಗ್ಗರಿಸುವ ಸಂದರ್ಭವು ಬರಬಹುದು. ಸಾಲವನ್ನು ಕೊಡುವ ಸಂದರ್ಭವು ಬರಬಹುದು. ಏನಾದರೂ ಹೇಳಿ ತಪ್ಪಿಸಿಕೊಳ್ಳುವುದು ಸೂಕ್ತ. ನಿಮ್ಮ ನೌಕರರ ತಪ್ಪಿಗೆ ನೀವು ಉತ್ತರಿಸಬೇಕಾದೀತು.

ಕುಂಭ ರಾಶಿ: ಇಂದು ಹಣಕಾಸಿಗೆ ಸಂಬಂಧಿತ ಉದ್ಯೋಗದಲ್ಲಿದ್ದವರಿಗೆ ಸಮಸ್ಯೆಗಳು ಎದುರಾಗಬಹುದು. ಉದ್ಯಮಿಗಳು ಹೂಡಿಕೆಯ ಬಗ್ಗೆ ಚಿಂತಾಮಗ್ನರಾಗುವರು. ಹುಮ್ಮನಸ್ಸಿನಿಂದ ಕೆಲವು ಕೆಲಸಗಳನ್ನು ಪೂರ್ಣಗೊಳಿಸಲು ಬಯಸಿ, ಅನಂತರ ಕೆಲವು ಸವಾಲುಗಳನ್ನು ಅನುಭವಿಸುತ್ತಾರೆ. ಅಂದುಕೊಂಡಿದ್ದಕ್ಕಿಂತ ಖರ್ಚು ಅಧಿಕವಾಗಿದ್ದು ಗಳಿಕೆಯ ಬಗ್ಗೆ ಆಲೋಚಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ. ಕುಟುಂಬದ ಪೋಷಣೆಯಲ್ಲಿ ಇಂದು ಸಹಭಾಗಿತ್ವ ಇರುವುದು. ವೃತ್ತಿಯ ಸ್ಥಳದಲ್ಲಿ ತೇಜೋವಧೆಯಾಗುವ ಸಂದರ್ಭವು ಬರಬಹುದು. ಸ್ನೇಹಿತರು ನಿಮ್ಮನ್ನು ದೂರವಿಟ್ಟಾರು. ಸಂಗಾತಿಯ ಅನಾದರವು ನಿಮ್ಮನ್ನು ಬಹಳ ಕಾಡಬಹುದು. ವೈಫಲ್ಯವನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಿ. ಮಕ್ಕಳಿಗೆ ಕಡಿವಾಣ ಹಾಕಲು ಹೋಗುವುದು ಬೇಡ. ಅವರ ಮೇಲೆ ನಿಮ್ಮ ನಿಗಾ ಇರಲಿ.

ಮೀನ ರಾಶಿ: ಇಂದು ಕಛೇರಿಯಲ್ಲಿ ಸಣ್ಣ ವಿಷಯಗಳಿಗೆ ವಿವಾದ ಮಾಡಬಾರದ. ಅಹಂಕಾರದ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬೇಡಿ. ಮಕ್ಕಳಿಂದ ಹಣವು ವ್ಯರ್ಥವಾಗಬಹುದು. ನೌಕರರು ಇಂದು ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳುವರು. ಸಮಾನ ಚಿಂತನಶೀಲರ ನಡುವೆ ಸಖ್ಯವಾಗುವುದು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ. ಮನಸ್ಸಿನ ಸೋಮಾರಿತನವು ನಿಮ್ಮ ಕಾರ್ಯವನ್ನು ಹಿಂದಿಕ್ಕುವುದು. ವ್ಯಾಪಾರಸ್ಥರ ಗೌರವ ಹೆಚ್ಚುವುದು. ಇಂದು ವ್ಯವಹಾರಕ್ಕೆ ಉತ್ತಮ ದಿನ. ಗ್ರಾಹಕರಿಗೆ ನಿಮ್ಮ ಅಸಮಾಧಾನವೂ ಆಗುವುದು. ಇಂದು ಜ್ಞಾನವೃದ್ಧರ ಸೇವೆಗೆ ಅವಕಾಶ ಸಿಗಲಿದೆ. ಅಪಘಾತದಿಂದ ಉಂಟಾದ ನೋವಿನಿಂದ ನಿಧಾನವಾಗಿ ಆಚೆ ಬರಬಹುದು. ಅರ್ಥಿಕವಾಗಿ ಕಷ್ಟವಿದ್ದರೂ ವಿದ್ಯಾಭ್ಯಾಸದ ಛಲವಿರಲಿದೆ.

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ