Aquarius Yearly Horoscope 2024: ಕುಂಭ ರಾಶಿ ವರ್ಷ ಭವಿಷ್ಯ: ಜಗ್ಗದೇ, ಬಗ್ಗದೇ, ಕುಗ್ಗದೇ ಹಿಗ್ಗಿ ಮುನ್ನಡೆದರೆ ಯಶಸ್ಸಿನ ಶಿಖರವನ್ನು ಏರುವಿರಿ
ಕುಂಭ ವರ್ಷ ಭವಿಷ್ಯ 2024: ಕುಂಭವು ರಾಶಿ ಚಕ್ರದ ಹನ್ನೊಂದನೇ ರಾಶಿಯಾಗಿದೆ. ರಾಶಿಯ ಅಧಿಪತಿಯಾದ ಶನಿಯು ಇದೇ ರಾಶಿಯಲ್ಲಿಯೇ ಪ್ರತಿಷ್ಠಾಪನೆಗೊಂಡಿದ್ದಾನೆ. ಇನ್ನೂ ಸುಮಾರು ಒಂದು ವರೆ ವರ್ಷಗಳ ಕಾಲ ಇದೇ ರಾಶಿಯಲ್ಲಿ ಇರುವನು. ಹಾಗಾಗಿ ಬಹಳ ಜಾಗರೂಕತೆಯಿಂದ ಇರಬೇಕು. ನಿಮ್ಮ ರಾಶಿಗೆ ಗುರುಬಲವೂ ಇಲ್ಲದ ಕಾರಣ ಒಂದು ರೀತಿಯಲ್ಲಿ ದುರ್ಬಲವೆಂದೇ ಹೇಳಬೇಕಾಗುವುದು.
ಈ ರಾಶಿಯವರು ಸಾಡೇ ಸಾಥ್ ಮಧ್ಯದಲ್ಲಿ ಇರುವ ಕಾರಣ ನಿಮ್ಮ ಐಚ್ಛಿಕ ಕಾರ್ಯಗಳು ಪೂರ್ಣವಾಗಲಿ ಸಮಯವೂ ಬೇಕಾಗುವುದು. ಮಾನಸಿಕವಾಗಿ ನೀವು ಕುಗ್ಗಲಿದ್ದೀರಿ. ನಿಮ್ಮ ಪ್ರಯತ್ನವು ನೂರಕ್ಕೆ ನೂರಿದ್ದರೂ ಫಲವು ಅರ್ಧಕ್ಕಿಂತಲೂ ಕಡಿಮೆ ಇದ್ದು ನಿಮ್ಮ ಮನೋಬಲವನ್ನು ಕುಗ್ಗಿಸುವುದು. ಇದಾವುದಕ್ಕೂ ಜಗ್ಗದೇ, ಬಗ್ಗದೇ, ಕುಗ್ಗದೇ ಹಿಗ್ಗಿ ಮುನ್ನಡೆದರೆ ಯಶಸ್ಸಿನ ಶಿಖರವನ್ನು ಏರುವಿರಿ. ಯಾವ ಕಾರಣಕ್ಕೂ ಗುರಿಯನ್ನು ಬದಲಿಸಿ ಅನ್ಯ ಮಾರ್ಗವನ್ನು ಆಶ್ರಯಿಸಬೇಡಿ.
2024ರ ಕುಂಭ ರಾಶಿ ಭವಿಷ್ಯ
ಕುಂಭವು ರಾಶಿ ಚಕ್ರದ ಹನ್ನೊಂದನೇ ರಾಶಿಯಾಗಿದೆ. ರಾಶಿಯ ಅಧಿಪತಿಯಾದ ಶನಿಯು ಇದೇ ರಾಶಿಯಲ್ಲಿಯೇ ಪ್ರತಿಷ್ಠಾಪನೆಗೊಂಡಿದ್ದಾನೆ. ಇನ್ನೂ ಸುಮಾರು ಒಂದು ವರೆ ವರ್ಷಗಳ ಕಾಲ ಇದೇ ರಾಶಿಯಲ್ಲಿ ಇರುವನು. ಹಾಗಾಗಿ ಬಹಳ ಜಾಗರೂಕತೆಯಿಂದ ಇರಬೇಕು. ನಿಮ್ಮ ರಾಶಿಗೆ ಗುರುಬಲವೂ ಇಲ್ಲದ ಕಾರಣ ಒಂದು ರೀತಿಯಲ್ಲಿ ದುರ್ಬಲವೆಂದೇ ಹೇಳಬೇಕಾಗುವುದು. ಆದರೆ ಮುಂದೆ ಸಿಗುವ ಯಶಸ್ಸಿಗೆ ಇದು ತಾಲೀಮು ಎಂದು ಭಾವಿಸಿಕೊಂಡು ನಿಮ್ಮ ಕೆಲಸದಲ್ಲಿ, ಉದ್ಯೋಗದಲ್ಲಿ, ಉದ್ಯಮದಲ್ಲಿ ಮುಂದುವರಿಯಬೇಕಿದೆ.
ಧನಾಗಮನ :
ಪೂರ್ವಾರ್ಜಿತವಾದ ಧನಸ್ಥಾನದಲ್ಲಿ ರಾಹುವಿದ್ದು, ನಿಮಗೆ ಸಂಪತ್ತು ವರ್ಷಾರಂಭದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಯೋಗ್ಯವಾಗಿ ಹರಿದುಬರುವುದು. ಲ ಅಷ್ಟೇ ಅಲ್ಲದೇ ಸ್ವಯಾರ್ಜಿತ ಧನಸ್ಥಾನವಾದ ಏಕಾದಶವು ಗುರುವಿನ ಸ್ಥಾನವಾದ ಕಾರಣ ವರ್ಷದ ಮಧ್ಯಾವಧಿಯ ಅನಂತರ ಕುಟುಂಬದ ಕುಟುಂಬದಿಂದ ಕಾಲಕ್ಕೆ ಸರಿಯಾಗಿ ಸಂಪತ್ತಿನ ಸಹಾಯವು ಸಿಗಲಿದೆ.
ಪ್ರೀತಿ ಮತ್ತು ವಿವಾಹ :
ಗುರುಬಲವು ಇಲ್ಲದ ಕಾರಣ ನೀವು ವಿವಾಹದ ಬಗ್ಗೆ ಅತಿಯಾದ ಕನಸನ್ನು ಇಟ್ಟುಕೊಳ್ಳುವುದು ಬೇಡ. ಪ್ರೀತಿಯಲ್ಲಿ ನಿಮಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಆಗದು. ಗೊಂದಲದಲ್ಲಿ ನೀವು ಇರುವಿರಿ. ಯಾರ ಮೇಲಾದರೂ ಪ್ರೀತಿ ಉಂಟಾದರೂ ಅದು ಕೆಲವು ದಿನಗಳವರೆಗೆ ಮಾತ್ರ ಇರುವುದು.
ವೃತ್ತಿ :
ವೃತ್ತಿಯ ಸ್ಥಾನದಲ್ಲಿ ಕುಜನಿರುವ ಕಾರಣ, ಅದು ಅವನ ಸ್ವಕ್ಷೇತ್ರ. ಭೂಮಿಯ ವ್ಯವಹಾರಗಳನ್ನು ಮಾಡುತ್ತಿದ್ದರೆ ಅದರಲ್ಲಿಯೇ ಮುಂದುವರಿದು ಉತ್ತಮಲಾಭವನ್ನು ಪಡೆಯುವಿರಿ. ಇಂಜಿನಿಯರಿಂಗ್ ಮುಂತಾದ ಕಾರ್ಯದಲ್ಲಿ ಇರುವವರಿಗೂ ವರ್ಷದ ಮಧ್ಯಾವಧಿಯ ತನಕ ಯಾವುದೇ ಬದಲಾವಣೆ ಅವಶ್ಯಕತೆ ಇಲ್ಲ. ಅನಂತರ ನಿಮ್ಮ ಆಯ್ಕೆ.
ಆರೋಗ್ಯ ಸ್ಥಿತಿ :
ಈ ವರ್ಷ ಆರೋಗ್ಯವು ಹದ ತಪ್ಪಬಹುದು. ಅಷ್ಟಮದಲ್ಲಿ ಕೇತುವಿರುವ ಕಾರಣ ಏನಾದರೂ ದೇಹಕ್ಕೆ ತೊಂದರೆಯಿಂದ ಮನಸ್ಸೂ ಆಗಾಗ ಸಂಕುಚಿತವಾಗಿ ಏನೂ ಬೇಡ ಎನ್ನುವಂತೆ ಆಗುವುದು. ನಿಮ್ಮ ಮನೋಬಲವನ್ನು ನಕಾರತ್ಮಕ ಯೋಚನೆಗಳಿಂದ ದೂರವಿರಿಸಿ.
ವಿದೇಶ ಪ್ರಯಾಣ :
ವರ್ಷಾರಂಭದಲ್ಲಿ ವಿದೇಶಕ್ಕೆ ಹೋಗುವ ಸಂದರ್ಭವು ಬರಬಹುದು. ಸಂಶೋಧನಾ ಕ್ಷೇತ್ರದಲ್ಲಿ ಇರುವವರಿಗೆ ಈ ಅವಕಾಶವು ಹೆಚ್ಚು ಲಭ್ಯ. ವೈದ್ಯರೂ ಕೂಡ ವಿಶೇಷ ತಜ್ಞತೆಯಿಂದ ವಿದೇಶ ಪ್ರಯಾಣವನ್ನು ಮಾಡುವ ಸಾಧ್ಯತೆ ಇದೆ.
ಏಳು ಬೀಳುಗಳ ಜೊತೆಗೇ ನಿಮ್ಮ ಜೀವನ ಬಂಡಿ ಸಾಗಬೇಕಾದ ಕಾರಣ ಅದನ್ನು ತಪ್ಪಿಸಲು ಸಾಧ್ಯವಾಗದು. ಆದರೆ ದೈವಕೃಪೆಯಿಂದ ಅದು ಬಲವನ್ನು ಕುಗ್ಗಿಸಿಕೊಳ್ಳಲು ಸಾಧ್ಯವಿದೆ. ಹನುಮಾನ್ ಚಾಲೀಸಾ, ಹಾಗೂ ಶಿವಕವಚವನ್ನು ನಿತ್ಯವೂ ಪಠಿಸಿ.
– ಲೋಹಿತ ಹೆಬ್ಬಾರ್, ಇಡುವಾಣಿ
Published On - 7:00 pm, Mon, 18 December 23