Horoscope: ರಾಶಿಭವಿಷ್ಯ; ನಿಮ್ಮ ಕೌಶಲಕ್ಕೆ ಪ್ರಶಂಸೆ ಲಭ್ಯವಾಗುವುದು, ಅಧಿಕ ಧನ ಪ್ರಾಪ್ತಿ
ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 27 ಫೆಬ್ರವರಿ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಮಂಗಳ , ತಿಥಿ: ತೃತೀಯಾ, ನಿತ್ಯನಕ್ಷತ್ರ: ಹಸ್ತಾ, ಯೋಗ: ಶೂಲಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 52 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 39 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:42 ರಿಂದ 05:11ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:49 ರಿಂದ 11:17ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:46 ರಿಂದ 03:14ರ ವರೆಗೆ.
ಮೇಷ ರಾಶಿ: ಇಂದು ಬೋಧಕರಿಗೆ ಅಸಮಾಧಾನವಾಗಬಹುದು. ಕೋಪವನ್ನು ನೀವು ನಿಯಂತ್ರಿಸುವುದು ಕಷ್ಟವಾಗಬಹುದು. ಹೂಡಿಕೆಯಲ್ಲಿ ಆಸಕ್ತಿಯು ಹೆಚ್ಚು ಇರುವುದು. ನಿಮ್ಮ ಆರ್ಥಿಕ ಸಮಸ್ಯೆಯು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಹೊಸ ಉದ್ಯಮಕ್ಕೆ ಸೇರಿಕೊಳ್ಳುವ ಆಸೆಯು ಬರಬಹುದು. ತಿಳಿದವರ ಜೊತೆ ವಾದ ಮಾಡಲು ಮುಂದಾಗುವುದು ಬೇಡ. ದೂರದಿಂದ ನೋಡಲು ಎಲ್ಲವೂ ಸುಂದರವೇ. ಹತ್ತಿರವಿದ್ದಾಗ ಮಾತ್ರ ಗೊತ್ತಾಗುತ್ತದೆ. ನಿಮ್ಮ ಯೋಗ್ಯತೆ ತಕ್ಕ ಕೆಲಸವು ಸಿಗಲಿದ್ದು ಇನ್ನೊಬ್ಬರನ್ನು ಹೋಲಿಕೆ ಮಾಡುತ್ತ ನಿಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಕೆಲಸಕ್ಕಾಗಿ ನೀವು ಹಾಕಿಕೊಂಡ ಸಮಯವು ವ್ಯತ್ಯಸವಾಗುವುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು. ಆಚಾತುರ್ಯದಿಂದ ಹಣವನ್ನು ಕಳೆದುಕೊಳ್ಳಬೇಕಾಗಬಹುದು.
ವೃಷಭ ರಾಶಿ: ಇಂದು ನಿಮಗೆ ಪ್ರಯಾಣದ ಸುಖವು ಹೆಚ್ಚಿರುವುದು. ನಿಮ್ಮ ವೃತ್ತಿಯ ಬಗ್ಗೆ ಕೀಳರಿಮೆ ಅಧಿಕವಾಗಬಹುದು. ದೈನಂದಿನ ಕಾರ್ಯಗಳನ್ನು ಮಾಡಲು ನಿರಾಸಕ್ತಿ ತೋರುವಿರಿ. ಇಂದಿನ ನಿಮ್ಮ ವ್ಯವಹಾರವು ಗೌಪ್ಯತೆಯಿಂದ ಇರುವುದು. ಆರ್ಥಿಕ ಸಂಕಷ್ಟವನ್ನು ಯಾರ ಸಮೀಪವೂ ಹೇಳಿಕೊಳ್ಳುವುದು ಬೇಡ. ಮನಸೋ ಇಚ್ಛೆ ವ್ಯವಹಾರಕ್ಕೆ ಕಡಿವಾಣ ಹಾಕುವುದು ಸೂಕ್ತ. ಸಿಟ್ಟನ್ನು ಅಲ್ಪ ಸಮಯದಲ್ಲಿ ಶಮನ ಮಾಡಿಕೊಂಡು ಯಥಾಸ್ಥಿತಿಗೆ ಬರುವಿರಿ. ಹಳೆಯದನ್ನು ಹೊಸತನ್ನಾಗಿ ಮಾಡವ ಬಗ್ಗೆ ಯೋಚಿಸುವಿರಿ. ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನ ಬರಬಹುದು. ವಿದ್ಯಾರ್ಥಿಗಳು ಕೌಶಲಕ್ಕೆ ಪ್ರಶಂಸೆ ಲಭ್ಯವಾಗುವುದು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು. ಹೊಸತನ್ನೇನಾದರೂ ಹುಟ್ಟಿಸುವ ತವಕದಲ್ಲಿ ಇರುವಿರಿ.
ಮಿಥುನ ರಾಶಿ: ಇಂದು ನಿಮಗೆ ಸಂಸಾರದ ಬವಣೆಯಲ್ಲಿ ಸೋತ ಅನುಭವವಾಗಬಹುದು. ಯಾರದ್ದಾದರೂ ಪಾಲುದಾರಿಕೆಯಲ್ಲಿ ನೀವು ಇರಬೇಕಾದೀತು. ಇಂದು ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ಆತ್ಮವಿಶ್ವಾಸದಿಂದ ಇರಬೇಕಾಗುವುದು. ಸಹೋದರರು ನಿಮ್ಮಿಂದ ಹಣವನ್ನು ಸಾಲವಾಗಿ ಪಡೆಯಬಹುದು. ನಿಮ್ಮ ನಡೆವಳಿಕೆಯಲ್ಲಿ ಆದ ವ್ಯತ್ಯಾಸವನ್ನು ಗಮನಿಸಿಯಾರು. ಧಾರ್ಮಿಕ ಕಾರ್ಯವನ್ನು ನಿರ್ಮಲ ಮನಸ್ಸಿನಿಂದ ಮಾಡುವಿರಿ. ಯಾರ ಜೊತೆಯೂ ಮಿತಿಮೀರಿದ ಸಲುಗೆ ಬೇಡ. ಆಪ್ತರು ನಿಮ್ಮನ್ನು ಬಿಡಬಹುದು. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ. ನಿಮ್ಮ ನೋವಿಗೆ ಸ್ಪಂದನೆ ಸಿಗುವುದು. ಸಂಗಾತಿಯ ಖರ್ಚನ್ನು ನಿಭಾಯಿಸುವ ಜವಾಬ್ದಾರಿಯನ್ನು ನೀವೇ ಹೊರಬೇಕಾದೀತು.
ಕಟಕ ರಾಶಿ: ಇಂದು ನಿಮಗೆ ಶ್ರಮವು ಹೆಚ್ಚಾಯಿತು ಎಂದೆನಿಸಿದರೂ ಆದಾಯವು ಚೆನ್ನಾಗಿರುವುದರಿಂದ ಅದು ಮರೆತುಹೋಗಬಹುದು. ಸಮಾಜದಲ್ಲಿ ಸ್ಥಾನಮಾನವನ್ನು ಪಡೆಯಬೇಕು ಎಂಬ ಹಂಬಲ ಇರುವುದು. ತಂದೆಯ ಕಡೆಯಿಂದ ಸಂಪತ್ತು ಬರಬಹುದು ಎಂಬ ನಿರೀಕ್ಷೆಯಲ್ಲಿ ಇರುವಿರಿ ಮಕ್ಕಳ ಆಸೆಗಳನ್ನು ಪೂರೈಸುವತ್ತ ನಿಮ್ಮ ಗಮನ ಇರಲಿದೆ. ವ್ಯಾವಹಾರಿಕ ಜಂಜಾಟವು ನಿಮ್ಮ ಉದ್ವೇಗಕ್ಕೆ ಕಾರಣವಾಗುವುದು. ಸ್ಥಿರಾಸ್ತಿಯ ಭಾಗವನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ರಾಜಕೀಯ ವ್ಯಕ್ತಿಗಳು ಜನಮನ್ನಣೆಯನ್ನು ಅಧಿಕ ಗಳಿಸುವರು. ಅಲ್ಪ ಪ್ರಯಾಣದಿಂದಲೂ ನಿಮಗೆ ಆಯಾಸವಾಗಬಹುದು. ಕೆಲವು ವಿಚಾರಗಳಲ್ಲಿ ಕುತೂಹಲವು ಇರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ತಲೆದೋರಬಹುದು. ನಂಬಿಕೆಯನ್ನು ಕಳೆದುಕೊಂಡು ದುಃಖಿಸುವಿರಿ.
Published On - 6:45 am, Tue, 27 February 24