Horoscope: ರಾಶಿಭವಿಷ್ಯ; ಉದ್ಯೋಗದಲ್ಲಿ ನಿಮ್ಮ ಮೇಲೆ ಅಪವಾದಗಳು ಬರಬಹುದು, ತಾಳ್ಮೆ ಇರಲಿ

ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 28 ಫೆಬ್ರವರಿ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ; ಉದ್ಯೋಗದಲ್ಲಿ ನಿಮ್ಮ ಮೇಲೆ ಅಪವಾದಗಳು ಬರಬಹುದು, ತಾಳ್ಮೆ ಇರಲಿ
ನಿತ್ಯಭವಿಷ್ಯImage Credit source: Getty Images
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಆಯೇಷಾ ಬಾನು

Updated on: Feb 28, 2024 | 6:45 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಚತುರ್ಥಿ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಗಂಡ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 51 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 39 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:45 ರಿಂದ 02:14ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:20 ರಿಂದ 09:48ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:17 ರಿಂದ 12:45ರ ವರೆಗೆ.

ಮೇಷ ರಾಶಿ: ಇಂದು ಕಾರ್ಯಕ್ಷೇತ್ರದಲ್ಲಿ ನೀವು ಮೇಲುಗೈ ಸಾಧಿಸುವಿರಿ. ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಡಲಾರಿರಿ. ಯೋಜನೆಗೆ ತಕ್ಕ ಆದಾಯವನ್ನು ನಿರೀಕ್ಷಿಸುವಿರಿ. ಮಹಿಳೆಯರಿಗೆ ಶುಭ ಸುದ್ದಿ ಇರಲಿದ್ದು ಬಹಳ ದಿನಗಳ ಅನಂತರ ನಿಮಗೆ ನಿರಾಳ ಸಿಕ್ಕಂತೆ ಆಗುವುದು. ವಸ್ತುಗಳ ಉತ್ಪನ್ನ ಮಾಡುವವರಿಗೆ ನೌಕರರ ಕೊರತೆ ಕಾಣಿಸಬಹುದು. ಹಠಾತ್ ಬದಲಾವಣೆಯನ್ನು ಕುಟುಂಬ ನಿಮ್ಮಿಂದ ನಿರೀಕ್ಷಿಸದು. ಗುರು ಹಿರಿಯರಿಂದ ಸಿಕ್ಕ ಉಪದೇಶವು ಪ್ರಯೋಜನಕಾರಿಯಾಗುವುದು.‌ ಎಲ್ಲ ಬೇಸರಕ್ಕೂ ಅನ್ಯರೇ ಕಾರಣವಾಗಿರಲು ಸಾಧ್ಯವಿಲ್ಲ. ನಿಮ್ಮನ್ನು ಅಳೆಯುವ ಜನರ ಸಂಖ್ಯೆ ಅಧಿಕವಾದೀತು. ಎಲ್ಲರೂ ನಾನಾ ಪ್ರಶ್ನೆಗಳನ್ನು ಕೇಳುವರು. ಸ್ನೇಹಿತರಿಂದ ಅಸಹಕಾರದಿಂದ ಅವರ ಮೇಲೆ ಪ್ರೀತಿ ಕಡಿಮೆ ಆಗಬಹುದು. ಆರ್ಥಿಕತೆಯ ದೃಷ್ಟಿಯಿಂದ ಕಳೆದ ಕೆಲವು ದಿನಗಳಿಗಿಂತ ಇಂದು ಉತ್ತಮವಾಗಿದೆ.‌ ಭೋಜನದಿಂದ ಸುಖವು ಸಿಗುವುದು.

ವೃಷಭ ರಾಶಿ: ನಿಮ್ಮ‌ ಸ್ಥಾನವನ್ನು ಬಿಟ್ಟುಕೊಡಲು ನೀವು ಸಮರ್ಥರಾಗಿಲ್ಲ. ಮೋಹವು ನಿಮ್ಮನ್ನು ಕಟ್ಟಿಡುವುದು. ಸಂಪಾದನೆಯ ಕಡೆ ಮುಖಮಾಡಲು ಆಗದು. ಉದ್ಯೋಗದಲ್ಲಿ ಗೊತ್ತಾಗದೇ ನಿಮ್ಮ ಮೇಲೆ ಅಪವಾದಗಳು ಬರಬಹುದು. ಅದನ್ನು ತಾಳ್ಮೆ ತಿಳಿಸಿ, ಸರಿ ಮಾಡಿಕೊಳ್ಳುವಿರಿ. ಆರೋಗ್ಯದ ವ್ಯತ್ಯಾಸದಿಂದ ನಿಮ್ಮ ಮುಖ್ಯ ಕಾರ್ಯಗಳನ್ನು ಮಾಡಲು ಆಗದು. ವ್ಯಥೆಗಳನ್ನು ಕಳೆಯಲು ಹೊಸ ಮಾರ್ಗವನ್ನು ಅನ್ವೇಷಿಸುವಿರಿ. ಉದ್ಯೋಗದಲ್ಲಿನ ಒತ್ತಡಗಳು ಮನೆಯವರ ಮೇಲೆ ಸಿಟ್ಟಗುವಂತೆ ಮಾಡಬಹುದು. ಸಂಗಾತಿಯಿಂದ ನಿಮ್ಮ ಅಭಿಮಾನಕ್ಕೆ ತೊಂದರೆ ಆಗಬಹುದು. ಆರೋಗ್ಯವು ಸಾಮಾನ್ಯವಾಗಿ ಇರಲಿದೆ. ವ್ಯವಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಿದ ಅನಂತರವೂ ಕೆಲಸ ತಡವಾಗಿ ಪೂರ್ಣಗೊಳ್ಳುತ್ತದೆ. ನಿಮಗೆ ನಿಮ್ಮ ಸ್ವಭಾವವು ಬದಲಾದಂತೆ ಅನ್ನಿಸೀತು. ಅನೇಕ ಲಾಭದ ಅವಕಾಶಗಳು ಸಿಗುತ್ತವೆ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು.

ಮಿಥುನ ರಾಶಿ: ಇಂದು ಅಪರಿಚಿತರ ಜೊತೆ ಪುಣ್ಯ ಸ್ಥಳಗಳ ದರ್ಶನವನ್ನು ಮಾಡುವಿರಿ. ಅತಿಯಾದ ನಿದ್ರೆಯಿಂದ ನಿಮ್ಮ ಮನಸ್ಸಿಗೆ ಜಡತ್ವ ಬದಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ಹಿರಿಯರಿಂದ ಆಶೀರ್ವಾದವನ್ನು ಪಡೆದುಕೊಳ್ಳುವಿರಿ. ಇನ್ನೊಬ್ಬರಲ್ಲಿ ಪ್ರೀತಿ ಮೂಡುವ ಸಾಧ್ಯತೆ ಇದೆ. ಹಳೆಯ ಗೆಳೆಯರು ನಿಮಗೆ ಆಕಸ್ಮಿಕವಾಗಿ ಸಿಕ್ಕಾರು. ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯವರಾಗುವಿರಿ. ಇನ್ನೊಬ್ಬರ ಭಾವಕ್ಕೆ ಸ್ಪಂದಿಸುವ ಗುಣವಿರುವುದು. ಮನಸ್ತಾಪದ ಕಾರಣ ದೂರ ಉಳಿಯಲು ಇಷ್ಟಪಡುವಿರಿ.‌ ನಾನಾ ಪ್ರಕಾರದ ಖರ್ಚುಗಳಿಂದ ಇಂದಿನ ದಿನದ ಸಮಯವು ದುಬಾರಿ ಎನಿಸಬಹುದು. ನಿಮ್ಮ ಲಾಭಕ್ಕೆ ಪೂರಕವಾದ ಅವಕಾಶಗಳು ಸಿಗುತ್ತವೆ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಮಕ್ಕಳನ್ನು ಹಿಡೆತಕ್ಕೆ ತರಲು ಪ್ರಯತ್ನಿಸುವಿರಿ. ಪ್ರಮುಖ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳುವುದು ಬೇಡ. ನಿಮ್ಮನ್ನು ಯಾರಾದರೂ ಬಂಧುಗಳು ಕೇಳಿಕೊಂಡುಬರಬಹುದು.

ಕಟಕ ರಾಶಿ: ಇಂದು ನೀವು ಯಾರನ್ನಾದರೂ ಮೆಚ್ಚಿಸಿ ಕಾರ್ಯವನ್ನು ಮಾಡಬೇಕಾದೀತು. ನಿಮ್ಮ ಊಹೆಗಳು ಪೂರ್ಣಪ್ರಮಾಣದಲ್ಲಿ ಸರಿಯಾಗದು. ನಿಮ್ಮ ಕಾರ್ಯಗಳಲ್ಲಿ ಉತ್ಸಾಹವಿದ್ದರೂ ಹಿತಶತ್ರುಗಳು ನಿಮ್ಮ ಕಾರ್ಯವನ್ನು ಕಾಳು ಮಾಡಿಯಾರು. ಅಧಿಕಾರಿ ವರ್ಗದಿಂದ ನಿಮ್ಮ ಮೇಲೆ ಒತ್ತಡವು ಬರಬಹುದು. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಆರ್ಥಿಕ ಚಿಂತೆಗಳು ಸಕಾರಾತ್ಮಕ ಮಾರ್ಗದಲ್ಲಿ ಇರಲಿ. ನಿಮ್ಮನ್ನು ಅರ್ಥಮಾಡಿಕೊಳ್ಳಲು ಸ್ನೇಹಿತರಿಗೆ ಕಷ್ಟವಾದೀತು. ನಷ್ಟದ ಪ್ರಮಾಣಗಳು ಅಧಿಕವಾಗಬಹುದು. ಮರೆವಿನಿಂದ ನಿಮ್ಮ ವಸ್ತುಗಳು ಕಷ್ಟವಾಗಬಹುದು. ಅಪರಿಚಿತರ ವ್ಯವಹಾರವನ್ನು ಕಡಿಮೆ ಮಾಡಿ. ನಿಮ್ಮನ್ನು ನೀವೇ ಬೈದುಕೊಳ್ಳುವ ಸ್ಥಿತಿ ಬರಬಹುದು. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ಏಕಾಂತದಲ್ಲಿ ಇರಲು ಇಷ್ಟವಾಗುವುದು.

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು