Nitya Bhavishya: ಈ ರಾಶಿಯವರಿಗೆ ಮಾಡದ ಕಾರ್ಯಕ್ಕೆ ಅಪವಾದ ಬರುವುದು-ಎಚ್ಚರ

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಫೆಬ್ರವರಿ​​​​ 11) ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ.

Nitya Bhavishya: ಈ ರಾಶಿಯವರಿಗೆ ಮಾಡದ ಕಾರ್ಯಕ್ಕೆ ಅಪವಾದ ಬರುವುದು-ಎಚ್ಚರ
ರಾಶಿ ಭವಿಷ್ಯ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 11, 2024 | 12:29 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ಪರಿಘ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 34 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 05:08 ರಿಂದ 06:34ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:47 ರಿಂದ 02:14 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ 05:08ರ ವರೆಗೆ.

ಸಿಂಹ ರಾಶಿ : ಇಂದು ಮನೋರಂಜನೆಗಾಗಿಯೇ ಸಮಯವನ್ನು ಮೀಸಲಿಟ್ಟರೂ ಅದನ್ನು ಯಾರಾದರೂ ಹಾಳುಮಾಡಿಯಾರು. ಆರೋಗ್ಯದ ವ್ಯತ್ಯಾಸವನ್ನು ನೀವು ನಿರ್ಲಕ್ಷಿಸಿ ಬೇರೆ ಏನನ್ನಾದರೂ ತಂದುಕೊಳ್ಳುವಿರಿ. ಇಂದು ಅತಿಯಾದ ಜಾಡ್ಯವು ಬರಲಿದ್ದು, ಯಾರ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ನಿಮ್ಮಷ್ಟಕ್ಕೆ ಇರುವಿರಿ. ದೈಹಿಕ ಶ್ರಮವು ಇಂದು ಹೆಚ್ಚಿರುವುದು. ನಿಮ್ಮ ಶಿಷ್ಯರಿಂದ ನಿಮಗೆ ಉಡುಗೊರೆ ಸಿಗುವ ಸಾಧ್ಯತೆ ಇದೆ. ಭೂಮಿಯನ್ನು ಮಾರಾಟಮಾಡುವ ಸ್ಥಿತಿಯು ಬರಬಹುದು. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತುಗಳನ್ನು ನೀವು ಕೇಳಬೇಕಾದೀತು. ಎಂದಿನಂತೆ ಇರುವ ಹಠದ ಸ್ವಭಾವಕ್ಕೆ ನಿಮ್ಮನ್ನು ನಿರ್ಲಕ್ಷಿಸಬಹುದು.‌ ಭವಿಷ್ಯದ ಬಗ್ಗೆ ಅತಿಯಾದ ಕಲ್ಪನೆ ಬೇಡ.

ಕನ್ಯಾ ರಾಶಿ : ಇಂದು ಬಿಟ್ಟು ಹೋದ ಆಪ್ತರ ಬಗ್ಗೆ ಹೆಚ್ಚು ಆಲೋಚಿಸುವಿರಿ. ಸಣ್ಣ ವ್ಯವಹಾರ ಮತ್ತು ಕೆಲಸವನ್ನು ಮಾಡುವವರಿಗೆ ಶ್ರಮವು ಅಧಿಕವಿರುವುದು. ಬರುವ ಒತ್ತಡವನ್ನು ನೀವು ಯಾವುದಾದರೂ ವಿಧಾನದ ಮೂಲಕ ಸರಿ ಮಾಡಿಕೊಳ್ಳುವಿರಿ. ಧ್ಯಾನ ಮತ್ತು ಯೋಗವು ನಿಮ್ಮ ಹಲವು ಮಾನಸಿಕ ಸಮಸ್ಯೆಗಳಿಗೆ ಉತ್ತರವಾಗುವುದು. ಇಂದಿನ ಕಾರ್ಯವು ನಿಮಗೆ ಸಮಾಧಾನ ಕೊಡದೇ ಇರಬಹುದು. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು. ಜೀವನದ ಲಕ್ಷ್ಯವು ಬೇರೆ ಕಡೆಗೆ ಯಾರಾದರೂ ಬದಲಿಸಬಹುದು. ಏನಾದರೂ ಮಾಡುತ್ತ ನಿಮ್ಮ ಮನಸ್ಸಿಗೆ ಕೆಲಸವನ್ನು ಕೊಡುವಿರಿ. ಜಾಣ್ಮೆಯಿಂದ ಇಂದು ನೀವು ಪ್ರಶಂಸೆಯನ್ನು ಪಡೆಯುವಿರಿ. ನಿಮಗೆ ಕೊಟ್ಟಿದ್ದನ್ನು ಮರಳಿಕೊಡುವ ಸ್ವಭಾವವು ಇರಲಿ.

ತುಲಾ ರಾಶಿ : ಇಂದು ನಿಮ್ಮ ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳದೇ ಅವರೊಡನೆ ಜಗಳವಾಡುವಿರಿ. ಆದಾಯದ ಗುಟ್ಟನ್ನು ಎಷ್ಟೇ ಒತ್ತಾಯ ಮಾಡಿದರೂ ಹೇಳಲಾರಿರಿ. ಇಂದಿನ ಎಲ್ಲ ಕಾರ್ಯದಲ್ಲಿಯೂ ಜಯವನ್ನು ಪಡೆದ ಸಂತೋಷವಿದ್ದರೂ ಅದನ್ನು ಅನುಭವಿಸುವ ಸಾಮರ್ಥ್ಯವು ಕಡಿಮೆ ಇರುವುದು. ಆರ್ಥಿಕಸ್ಥಿತಿಯು ಸುಧಾರಿಸಿದ್ದು ನಿಮಗೆ ಸ್ವಲ್ಪ ನೆಮ್ಮದಿ ಇರುವುದು. ಹಿರಿಯರಲ್ಲಿ ಭಕ್ತಿಯನ್ನು ತೋರಿಸುವಿರಿ. ಸಮಸ್ಯೆಯನ್ನು ಬರುವ ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಇರಿ. ನಿರೋದ್ಯೋಗ ಸಮಸ್ಯೆಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಸಹೋದರರ ಸಂಪತ್ತನ್ನು ಕಂಡು ನೀವು ಹೊಟ್ಟೆಕಿಚ್ಚು ಪಡುವಿರಿ. ನೆಚ್ಚಿನ ತಾಣವು ನಿಮಗೆ ಹೊಸ ಉತ್ಸಾಹವನ್ನು ನೀಡುವುದು. ಸಿಕ್ಕ ಸಣ್ಣ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ.

ವೃಶ್ಚಿಕ ರಾಶಿ : ಇಂದು ನಿಮಗೆ ಸಹಾಯ ಮಾಡುವ ಸ್ವಭಾವವು ಇರುವುದು. ಉದ್ಯಮದ ಕಾರ್ಯಕ್ಕೆ ನೀವು ಪ್ರಯಾಣ‌ ಮಾಡುವ ಸಾಧ್ಯತೆ ಇದೆ.‌ ಮಕ್ಕಳಿಂದ ನಿಮಗೆ ಸಂತೋಷವು ಸಿಗಲಿದೆ. ಕುಟುಂಬದ ಹಿರಿಯರ ಬಗ್ಗೆ ಇರುವ ನಿಮ್ಮ ಕಲ್ಪನೆಯು ಬದಲಾಗುವುದು. ಇಂದು ಕಛೇರಿಯನ್ನು ಮಹಿಳೆಯರು ನಿರ್ವಹಿಸಬೇಕಾಗುವುದು. ನೂತನ ವಸ್ತುಗಳನ್ನು ಖರೀದಿಸಲಿದ್ಸೀರಿ. ಮಾಡದ ಕಾರ್ಯಕ್ಕೆ ಅಪವಾದ ಬರುವುದು. ನಿರಂತರ ಕೆಲಸವು ನಿಮಗೆ ಬೇಸರ ತಂದೀತು. ಯಾರಿಗಾದರೂ ಧನಸಹಾಯವನ್ನು ಮಾಡಬೇಕು ಎಂದು ಅನ್ನಿಸಬಹುದು. ಇಂದು ವೃತ್ತಿಯಲ್ಲಿ ಆತಂಕವು ಬರಬಹುದು. ಪ್ರಾಣಿಗಳಿಂದ ಭೀತರಾಗುವ ಸಾಧ್ಯತೆ ಇದೆ. ನಿಮ್ಮ ಇಷ್ಟದವರ ಭೇಟಿಯಾಗುವಿರಿ. ಎದುರಿನವರ ಇಂಗಿತವನ್ನು ತಿಳಿದುಕೊಳ್ಳಲು ಕಷ್ಟವಾದೀತು. ನಿಮ್ಮ ಅನಾರೋಗ್ಯವನ್ನು ಯಾರ ಬಳಿಯೂ ಹೇಳಿಕೊಳ್ಳಲಾರಿರಿ. ನಿಮ್ಮ ಸಾಮರ್ಥ್ಯಕ್ಕೆ ಯೋಗ್ಯವಾದ ಕೆಲಸವನ್ನು ಮಾಡಿ.

ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು