Horoscope: ದಿನಭವಿಷ್ಯ: ಸಾಲಬಾಧೆಯಿಂದ ಮುಕ್ತರಾಗಲಿದ್ದೀರಿ, ಕಾನೂನಾತ್ಮಕ ಜಯ ಸಿಗಲಿದೆ
ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 23 ಮೇ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಮೇ 23ರ ರಾಶಿ ಭವಿಷ್ಯದಲ್ಲಿ ಮೇಷ ರಾಶಿಯಿಂದ ಕಟಕ ರಾಶಿಯವರೆಗೆ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಪರಿಘ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ 14:06ರಿಂದ 15:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:05ರಿಂದ ಬೆಳಗ್ಗೆ 07:41ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:17 ರಿಂದ 10:53ರ ವರೆಗೆ.
ಮೇಷ ರಾಶಿ: ಇಂದು ದಿನದ ಆರಂಭದಲ್ಲಿ ಕೆಲವು ಅನಿರೀಕ್ಷಿತ ಒತ್ತಡ ಬರುವುದು. ಅದನ್ನು ದಾಟಿ ನೆಮ್ಮದಿಯನ್ನು ಕಾಣುವಿರಿ. ಬಂಧುಗಳು ನಿಮ್ಮ ಆಗಬೇಕಾದ ಕೆಲಸವನ್ನು ನಿಲ್ಲಿಸುವರು. ವಾಹನ ಖರೀದಿಯನ್ನು ಮಾಡಲಿದ್ದೀರಿ. ನೀರಿನ ಉತ್ಪನ್ನದ ವ್ಯಾಪರಿಗಳಿಗೆ ಲಾಭವು ಸಿಗಲಿದೆ. ಸಹೋದರರ ಜೊತೆ ಆತ್ಮೀಯವಾದ ಒಡನಾಟವನ್ನು ಹೊಂದುವಿರಿ. ಯಾರ ಮನಸ್ಸನ್ನೂ ಕೊಲ್ಲದೇ ಗೆಲ್ಲುವ ಬಗ್ಗೆ ಆಲೋಚನೆ ಇರಲಿ. ಆಗದ ಕಾರ್ಯವನ್ನು ಮಾಡಿಕೊಡುವ ಆಶ್ವಾಸನೆ ಬೇಡ. ಯಶಸ್ಸನ್ನು ಹಂಬಲವು ಅತಿಯಾಗಿ ಕಾಣಿಸುವುದು. ಮರೆಯಲ್ಲಿ ಇದ್ದು ನಿಮ್ಮಷ್ಟಕ್ಕೇ ಕೆಲಸ ಮಾಡಿಕೊಳ್ಳುವುದು ಇಷ್ಟವಾಗುವುದು. ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ನಿಮ್ಮ ನೀವು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ಇಂದಿನ ಕಾರ್ಯಕ್ಕೆ ಸಮಯ ಸಾಲದೇ ಅರ್ಧಕ್ಕೇ ನಿಲ್ಲಿಸುವಿರಿ.
ವೃಷಭ ರಾಶಿ: ಇಂದಿನ ನಿಮ್ಮ ಮಾತುಗಳು ಆಪ್ತರ ಹೃದಯಕ್ಕೆ ನಾಟಿ ದೂರಾಗುವರು. ಅಪಮಾನವಾಗುವ ಸಂಗತಿಯನ್ನು ನೀವೇ ತಂದುಕೊಳ್ಳುವಿರಿ. ಬೇಸರವನ್ನು ಹೆಚ್ಚು ಮಾಡಿಕೊಳ್ಳುವ ಸನ್ನಿವೇಶವನ್ನು ಎದುರು ಹಾಕಿಕೊಳ್ಳಬೇಡಿ. ನಿಮ್ಮ ಒಳ್ಳೆಯ ಕೆಲಸವೇ ನಿಮ್ಮನ್ನು ಕೈ ಹಿಡಿಯುವುದು. ನಿಮಗೆ ಗೊಂದಲುಗಳು ಇಂದು ಬರಬಹುದು. ಅನುಭವಿಗಳ ಅಥವಾ ಹಿರಿಯರ ಮಾತುಗಳು ಉಪಯೋಗಕ್ಕೆ ಬರಬಹುದು. ಒಳ್ಳೆಯವರ ಸಹವಾಸವನ್ನು ಮಾಡಿದ್ದಕ್ಕೆ ಒಳ್ಳೆಯ ಸ್ಥಿತಿಯು ಬರಲಿದೆ. ನಿರೀಕ್ಷಿತ ಪ್ರತಿಸ್ಪಂದವು ನಿಮ್ಮ ಮಾತಿಗೆ ಸಿಗದೇ ಇರುವುದು. ವಿದ್ಯಾರ್ಥಿಗಳ ಬಗ್ಗೆ ಅಸಮಾಧನವು ಇರುವುದು. ಹೊಸ ವಸ್ತುಗಳ ಬಳಕೆಯನ್ನು ತಿಳಿಯದೇ ಅದನ್ನು ಹಾಳು ಮಾಡಿಕೊಳ್ಳುವಿರಿ. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ಬರಬಹುದು. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವುದಿಲ್ಲ. ಅತ್ಯುತ್ಸಾಹವು ನಿಮಗೆ ಹಾನಿಯನ್ನು ಉಂಟುಮಾಡೀತು.
ಮಿಥುನ ರಾಶಿ: ನಿಮ್ಮವರೇ ನಿಮಗೆ ಯಾವುದಾದ ರೀತಿಯಲ್ಲಿ ವಂಚನೆ ಮಾಡಬಹುದು. ನೀವೇ ಮಾಡಿಕೊಂಡ ತಪ್ಪಿನಿಂದ ನಿಮಗೆ ಬೀಳುವ ಸಾಧ್ಯತೆ ಇದೆ. ನಿಮ್ಮ ಮಾತುಗಳು ಅನರ್ಥವನ್ನು ಉಂಟುಮಾಡಿ ಕಲಹಕ್ಕೂ ಕಾರಣವಾಗಲಿದೆ. ಸ್ತ್ರೀಯರಿಂದ ಅಪವಾದ ಬರುವ ಸಾಧ್ಯತೆ ಇದೆ. ಉದ್ಯೋಗದ ನಿಮಿತ್ತ ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಅನವಶ್ಯಕ ಕಾರ್ಯಗಳನ್ನು ನೀವು ಮೈಮೆಲೆ ಹಾಕಿಕೊಳ್ಳುವಿರಿ. ನೂತನ ಗೃಹನಿರ್ಮಾಣದ ಕನಸನ್ನು ಕಾಣಲಿದ್ದೀರಿ. ಇಂದು ದೂರ ಹೋಗಬೇಕಾದ ಅನಿವಾರ್ಯತೆ ಬರಲಿದ್ದು, ವಾಹನಚಾಲನೆಯಿಂದ ಅಪಘಾತವಾಗುವ ಸಾಧ್ಯತೆ ಇದೆ. ಹತ್ತಾರು ವಿಚಾರಗಳನ್ನು ನೀವು ಒಂದೇ ಬಾರಿ ಅಲೋಚಿಸುವಿರಿ. ಅಧಿಕಪ್ರಸಂಗಿತನ ಬೇಡ. ಇನ್ನೊಬ್ಬರಿಂದ ಕೊಂಬೆ ನೋವಾಗುವುದು. ನಿಮ್ಮ ಪ್ರೀತಿಯು ಕೆಲವು ಗೊಂದಲವನ್ನು ಸೃಷ್ಟಿಸೀತು. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ.
ಕಟಕ ರಾಶಿ: ಇಂದಿನ ನಿಮ್ಮ ಮಾತುಕತೆಗಳಿಂದ ನೀವಿನ್ನೂ ತಿಳಿದುಕೊಳ್ಳಬೇಕು ಎಂದು ಕಾಣುವುದು. ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಆಸಕ್ತಿ ಇರುವುದು. ಪ್ರಕ್ಷುಬ್ದವಾಗಿದ್ದ ಮನಸ್ಸು ಸಮಾಧಾನಕ್ಕೆ ಬರಲಿದೆ. ಸಾಲಬಾಧೆಯಿಂದ ಮುಕ್ತರಾಗಲಿದ್ದೀರಿ. ಎಲ್ಲರೂ ವಿದ್ಯಾವಂತೆ ತೋರಿ ನಿಮಗೇ ನಿಮ್ಮ ಮೇಲೆ ಅಶಿಕ್ಷಿತ ಭಾವನೆ ಬರಲಿದೆ. ಶತ್ರುಗಳೆದುರು ತಲೆ ಎತ್ತಿ ನಿಲ್ಲುವ ಮನಸ್ಸು ಮಾಡುವಿರಿ. ಯಾರದೋ ಸಿಟ್ಟನ್ನು ಮಕ್ಕಳ ಮೇಲೆ ತೀರುಗಿಸಿವಿರಿ. ಮನೆಯಿಂದ ಹೊರಗೆ ಇರಬೇಕಾದ ಸ್ಥಿತಿ ಬರಲಿದೆ. ಯಾರಾದರೂ ಕೆಲಸಕ್ಕೋಸ್ಕರ ನಿಮ್ಮನ್ನು ಹೊಗಳಬಹುದು. ಅದಕ್ಕೆ ಹಿಗ್ಗುವಿರಿ. ಕಾನೂನಾತ್ಮಕ ಜಯವು ನಿಮಗೆ ಸಂತೋಷವನ್ನು ಕೊಡುವುದು. ಹಿರಿಯರಿಗೆ ಕೊಡುವ ಅಗೌರವವು ನಿಮಗೂ ಮುಳುವಾಗಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಇರಬೇಕಾದೀತು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿಯು ಇರುವುದು.




