Astrology: ಈ ರಾಶಿಯವರ ಕೆಲಸದಲ್ಲಿ ಹಿನ್ನಡೆಯಾಗಬಹುದು
ರಾಶಿ ಭವಿಷ್ಯ, ಭಾನುವಾರ(ಅಕ್ಟೋಬರ್: 07): ಕೋಪವು ಇದ್ದಕ್ಕಿದ್ದಂತೆ ಕಡಿಮೆ ಆಗಿರುವುದು ಆಶ್ಚರ್ಯ ಎನಿಸಬಹುದು. ಕಳೆದ ದಿಮಗಳನ್ನು ಒಂದೊಂದಾಗಿಯೇ ಮೆಲುಕು ಹಾಕಿಕೊಂಡು ಸಂತೋಷಪಡುವಿರಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿಯು ಕಡಿಮೆ ಆಗಿದೆ ಎಂದು ಅನ್ನಿಸಬಹುದು. ಹಾಗಾದರೆ ಅಕ್ಟೋಬರ್: 07ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ಐದನೇ ದಿನದ ನವರಾತ್ರದ ದಿನ ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುವುದು. ಸುಬ್ರಹ್ಮಣ್ಯನ ಜನನಕ್ಕೆ ಕಾರಣವಾದ ದೇವಿಯು ಈಕೆ. ಸಿಂಹಾಸನವನ್ನು ಏರಿ ಶಾಂತಸ್ಥಿತಿಯಲ್ಲಿ ಇದ್ದು, ಕೈಗಳಲ್ಲಿ ಕಮಲವನ್ನು ಧರಿಸಿದ್ದಾಳೆ. ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿದ್ದಾಳೆ. ಹಾಗೆಯೇ ಇಂದು ಕಾತ್ಯಾಯಿನಿಯನ್ನು ಆರಾಧಿಸುವ ದಿನ. ಖಡ್ಗ ಹಾಗೂ ಕಮಲವನ್ನು ಕೈಯಲ್ಲಿ ಧರಿಸಿದ ಮಾತೆ ಇವಳು. ಶತ್ರು ಸಂಹಾರವನ್ನು ಮಾಡಿ ಪ್ರಶಾಂತಚಿತ್ತಳಾಗಿ ಇದ್ದಾಳೆ. ಇವರ ಆರಾಧನೆಯಿಂದ ಸಂಪತ್ತುಗಳು ಸಿಗುತ್ತವೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪಂಚಮೀ / ಷಷ್ಠೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಆಯುಷ್ಮಾನ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 16 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:22, ಯಮಘಂಡ ಕಾಲ ಬೆಳಿಗ್ಗೆ 10:51ರಿಂದ 12:20ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:49 ರಿಂದ 03:18 ರವರೆಗೆ.
ಧನು ರಾಶಿ : ದೊಡ್ಡ ಸಂಭ್ರಮದಲ್ಲಿ ಸಣ್ಣ ತಪ್ಪುಗಳು ಆಗಬಹುದು. ಅದನ್ನು ಸರಿಮಾಡಿಕೊಳ್ಳಬೇಕಾಗುವುದು. ಯಾರ ಮೇಲೋ ಹಠಸಾಧಿಸುವುದು ಬೇಡ. ನಿಮ್ಮಷ್ಟಕ್ಕೆ ನೀವು ಇರಿ. ನಿಮ್ಮ ಮಾತಿಗೆ ಇಂದು ವಿರೋಧವು ಬರಬಹುದು. ಆದಷ್ಟು ಇಂತಹ ಸಂದರ್ಭವು ಬಾರದಂತೆ ನೋಡಿಕೊಳ್ಳುವುದು ಉತ್ತಮ. ನಿಮ್ಮ ಸ್ಪಷ್ಟ ಮಾತಿಗೆ ಒಳ್ಳೆಯ ಉದ್ಯೋಗವು ಸಿಗಬಹುದು. ತಂದೆಯ ಮೇಲೆ ನಿಮಗೆ ಬೇಸರ ಉಂಟಾಗಬಹುದು. ಸಂಗಾತಿಯ ಮಾತುಗಳು ನಿಮಗೆ ನೋವನ್ನು ಕೊಡಬಹುದು. ಆಸ್ತಿಯ ವಿಚಾರದಲ್ಲಿ ನೀವು ನಿಮ್ಮರಿಗೆ ಸುಳ್ಳು ಹೇಳಿದ್ದು ಗೊತ್ತಾಗುವುದು. ಆರ್ಥಿಕ ನಷ್ಟವನ್ನು ತುಂಬಿಕೊಳ್ಳಲು ಅನ್ಯಮಾರ್ಗವನ್ನು ಹುಡುಕುವಿರಿ. ವಿಶೇಷವಾದ ವಸ್ತುವನ್ನು ಕೊಳ್ಳುವ ಆಸಕ್ತಿಯು ಇರಲಿದೆ. ಹಣಕಾಸಿಗೆ ಸಂಬಂಧಿಸಿದ ವೃತ್ತಿಯಲ್ಲಿ ಒತ್ತಡ ಕಾಣಿಸುವುದು. ದೈನಂದಿನ ಕೆಲಸದಲ್ಲಿ ಸಮಸ್ಯೆಗಳು ಉಳಿಯಬಹುದು. ಉದ್ಯೋಗಕ್ಕೆ ಸೇರಲು ಪ್ರಶ್ನೆಗಳ ಸುರಿಮಳೆ ಕಾಣಿಸಿಕೊಳ್ಳುವುದು.
ಮಕರ ರಾಶಿ : ಸ್ವಂತಿಕೆಯನ್ನು ನೀವು ಯಾವ ಸನ್ನಿವೇಶದಲ್ಲಿಯೂ ಬಿಟ್ಟುಕೊಡಲಾರಿರಿ. ಏನೋ ಮಾಡಲು ಹೋಗಿ ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಅಧಿಕ ಆಲೋಚನೆಯನ್ನು ಮಾಡುವುದರಿಂದ ಮನಸ್ಸು ದುರ್ಬಕವಾಗಬಹುದು. ನಿಮಗಮ ಜೀವನ ಕ್ರಮವನ್ನು ಬದಲಿಸಿಕೊಳ್ಳಲು ಇಷ್ಟಪಡುವಿರಿ. ಸ್ವಂತ ಉದ್ಯೋಗದಲ್ಲಿ ನಿಮಗೆ ಕೆಲವು ಕಹಿ ವಿಚಾರವು ಗೊತ್ತಾಗಲಿದೆ. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ನಿಮಗೆ ಆಗದು. ಯಾರಿಂದಲಾದರೂ ಔಚಿತ್ಯಪೂರ್ಣವಾದ ಮಾರ್ಗದರ್ಶನವು ನಿಮಗೆ ಸಿಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಮನೆಯಿಂದ ದೂರ ಹೋಗಬೇಕಾಗುವುದು. ಕಚೇರಿಯಲ್ಲಿ ನಿಮ್ಮ ಸಾಧನೆಗೆ ಮೆಚ್ಚುಗೆ ಸಿಗಲಿದೆ. ನೂತನ ವಸ್ತುಗಳ ಖರೀದಿಗೆ ಹೆಚ್ಚು ಮನಸ್ಸು ಮಾಡುವಿರಿ. ನಿಮ್ಮ ಸಹವಾಸವನ್ನು ಬಿಟ್ಟವರು ಪುನಃ ಬರಬಹುದು. ನೀವು ಇಂದು ಅನಿರೀಕ್ಷಿತವಾಗಿ ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಕೆಲವು ಉತ್ತಮ ಅವಕಾಶಗಳನ್ನು ಪಡೆಯಬಹುದು.
ಕುಂಭ ರಾಶಿ : ನಿಮ್ಮ ಸಂಗವು ಚೆನ್ನಾಗಿದ್ದರೆ ಯಾರೂ ಏನೂ ಮಾಡಲಾರರು. ಇಂದು ನಿಮಗೆ ಆತ್ಮೀಯರ ಒಡನಾಡ ಅಧಿಕವಾಗಲಿದೆ. ಸಹೋದ್ಯೋಗಿಗಳನ್ನು ಕೆಲಸದಲ್ಲಿ ಸಹಾಯಕ್ಕಾಗಿ ಕೇಳುವಿರಿ. ನಿಮ್ಮದಾದ ಚಿಂತನೆಯನ್ನು ಬಿಟ್ಟು ಬೇರೆ ಕಡೆ ಯೋಚನೆಯನ್ನು ಮಾಡಲಾರಿರಿ. ಆನಂದದಿಂದ ಈ ದಿನವನ್ನು ಕಳೆಯಲು ಬಯಸುವಿರಿ. ಅನಿರೀಕ್ಷಿತ ಪ್ರಯಾಣವು ಬರಬಹುದು. ಕೊಡಬೇಕಾದ ಹಣವನ್ನು ಯಾವುದೇ ಕಾರಣಕ್ಕೂ ಮುಂದೂಡಲಾರಿರಿ. ನಿಮ್ಮ ವಿವಾಹದ ಮಾತುಕತೆ ವಿಳಂಬವಾಗಿದೆ ಬೇಸರವು ಆಗಬಹುದು. ದಾಖಲೆಗಳನ್ನು ಸರಿಯಾದ ಕಡೆಗಳಲ್ಲಿ ಇಟ್ಟುಕೊಳ್ಳಿ. ನಿಮಗೆ ಸರಿಯಾದ ಸಮಯದಲ್ಲಿ ಹಣವು ಸಿಕ್ಕಿರುವುದು ಸಂತೋಷದ ವಿಚಾರವಾಗಲಿದೆ. ಮನೆಯವರ ಜೊತೆ ಹೆಚ್ಚು ಆನಂದದಿಂದ ಇರುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ತೊಡಗುವಿರಿ. ಅಪ್ರಮತ್ತರಾಗಿ ನೀವು ವ್ಯವಹಾರವನ್ನು ಮಾಡುವಿರಿ. ನಿಮ್ಮ ಆದಾಯದ ಜೊತೆಗೆ ನಿಮ್ಮ ಖರ್ಚುಗಳೂ ಹೆಚ್ಚಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ವೃದ್ಧಿಸಲು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.
ಮೀನ ರಾಶಿ : ವ್ಯವಹಾರದಲ್ಲಿನ ಸೂಕ್ಷ್ಮ ವಿಚಾರಗಳನ್ನು ವೇಗವಾಗಿ ಅರಿತುಕೊಳ್ಳಬೇಕು. ಇಂದು ಮನೆಯಲ್ಲಿ ನಿಮಗೆ ನಿರಾಸೆಯ ಅನುಭವ ಆಗಬಹುದು. ಆಲಸ್ಯದಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು. ಕೃಷಿಯಲ್ಲಿ ನೀವು ಹೆಚ್ಚಿನ ಪ್ರಗತಿಯನ್ನು ಸಾಧಿಸುವ ಮನಸ್ಸನ್ನು ಇಟ್ಟುಕೊಳ್ಳುವಿರಿ. ನೀವು ಇಂದು ಅತಿಥಿಯಾಗಿ ಕಾರ್ಯದಲ್ಲಿ ಭಾಗವಹಿಸುವಿರಿ. ಮನೆಯವರನ್ನು ನಿಷ್ಠುರ ಮಾಡಿಕೊಳ್ಳುವುದು ಬೇಡ. ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವಿರಿ. ನಿಮ್ಮಿಂದಾಗಿ ಮನೆಯಲ್ಲಿ ಇಂದು ಸಂತೋಷವು ಇರಲಿದೆ. ಕೋಪವು ಇದ್ದಕ್ಕಿದ್ದಂತೆ ಕಡಿಮೆ ಆಗಿರುವುದು ಆಶ್ಚರ್ಯ ಎನಿಸಬಹುದು. ಕಳೆದ ದಿಮಗಳನ್ನು ಒಂದೊಂದಾಗಿಯೇ ಮೆಲುಕು ಹಾಕಿಕೊಂಡು ಸಂತೋಷಪಡುವಿರಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿಯು ಕಡಿಮೆ ಆಗಿದೆ ಎಂದು ಅನ್ನಿಸಬಹುದು. ವಿಶೇಷ ವ್ಯಕ್ತಿಯ ಬಗ್ಗೆ ಒಂಟಿ ಜನರ ಆಸಕ್ತಿ ಹೆಚ್ಚಾಗುತ್ತದೆ. ಇಂದು ನಿಮ್ಮ ಭಾವನೆಗಳನ್ನು ನಿಮ್ಮ ಪ್ರೇಮಿಗೆ ಮುಕ್ತವಾಗಿ ವ್ಯಕ್ತಪಡಿಸಿ. ಮನೆಯ ಸಂಭ್ರಮದಲ್ಲಿ ನೀವೂ ಒಂದಾಗಿ.
-ಲೋಹಿತ ಹೆಬ್ಬಾರ್-8762924271 (what’s app only)