Horoscope: ರಾಶಿಭವಿಷ್ಯ; ಈ ರಾಶಿಯ ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು

| Updated By: ಆಯೇಷಾ ಬಾನು

Updated on: Jan 16, 2024 | 6:53 AM

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 16) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.

Horoscope: ರಾಶಿಭವಿಷ್ಯ; ಈ ರಾಶಿಯ ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು
ಇಂದಿನ ರಾಶಿಭವಿಷ್ಯ
Image Credit source: iStock Photo
Follow us on

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 16) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು,
ಮಕರ ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪಂಚಮೀ,
ನಿತ್ಯನಕ್ಷತ್ರ: ಉತ್ತರಾಭಾದ್ರಾ, ಯೋಗ: ಪರಿಘ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 22 ನಿಮಿಷಕ್ಕೆ, ರಾಹು ಕಾಲ 03:32 ರಿಂದ 04:57ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:52 ರಿಂದ 11:17ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:42 ರಿಂದ 02:07ರ ವರೆಗೆ.

ಸಿಂಹ ರಾಶಿ: ಇಂದು ಯಾರನ್ನೂ ದೂಷಿಸುವುದು ನಿಮಗೆ ಹೇಳಿಸಿದ್ದಲ್ಲ. ಕೃಷಿಗೆ ಸಂಬಂಧಿಸಿದ ಕಾರ್ಯವನ್ನು ವೇಗವಾಗಿ ಮಾಡಿಕೊಳ್ಳಿ. ಮಕ್ಕಳ ವಿವಾಹದ ಚಿಂತೆಯು ಕಾಡಬಹುದು. ಅಧಿಕಾರ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಅವಕಾಶ ಬರುವುದು. ಸಕಾರಾತ್ಮಕ ಯೋಚನೆಯಿಂದ ಮುಂದಡಿ ಇಡಬೇಕಾದೀತು. ನಿಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ಔಷಧದ ವ್ಯಾಪಾರದಿಂದ ನಿಮಗೆ ಅಧಿಕ ಲಾಭವಾಗಬಹುದು. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಿ. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಮುಕ್ತ ಮನಸ್ಸನ್ನು ಬೆಳೆಸಿಕೊಳ್ಳುವಿರಿ.

ಕನ್ಯಾ ರಾಶಿ: ಸಹವಾಸವನ್ನು ಕಡಿಮೆ ಮಾಡಿ, ಒಳ್ಳೆಯ ವಿಚಾರಗಳ‌ ಕಡೆ ಗಮನ ಅತ್ಯವಶ್ಯಕ. ಅನೇಕ ವಿಚಾರಗಳು ನಿಮ್ಮನ್ನು ಸೆಳೆಯಬಹುದು.‌ ನಿಮ್ಮ ಯಶಸ್ಸಿಗೆ ವಿರೋಧಿಗಳು ಅಡ್ಡಗಾಲು ಹಾಕಬಹುದು. ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ. ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವವಿರಲಿದೆ. ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ವೈದ್ಯಕೀಯ ಕ್ಷೇತ್ರದ ಕಲಿಕೆ ಬಹಳ ಕಷ್ಟವೆನಿಸಬಹುದು. ಮರೆವು ನಿಮಗೆ ವರವಾದಂತೆ ಅನ್ನಿಸುವುದು. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿರ್ಧಾರ ಮಾಡುವಿರಿ. ನಿಮ್ಮ ಇಂದಿನ ಆರ್ಥಿಕ ಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂತಾನವು ನಿಮ್ಮ ಖುಷಿಯನ್ನು ಹೆಚ್ಚಿಸುವುದು. ಮಕ್ಕಳಿಂದ ಅನಿರೀಕ್ಷಿತ ಉಡುಗೊರೆ ಸಿಗಬಹುದು.

ತುಲಾ ರಾಶಿ: ಇಂದು ನಿಮ್ಮ ಕಾರ್ಯದ ಹೊರೆ ಅಧಿಕಾವಾಗಿದ್ದರೂ ಅದನ್ನು ಮುಂದೂಡುವ ಪ್ರಯತ್ನ ಬೇಡ. ಅದು ಶೇಷವಾಗಿಯೇ ಉಳಿಯುತ್ತ ಹೋಗಬಹುದು.‌ ಅಧಿಕ ಆದಾಯದಿಂದ ನಿಮ್ಮ ನೆಮ್ಮದಿಯ ಹರಣವಾಗಿದೆ ಎಂದು ಅನ್ನಿಸಲೂಬಹುದು. ಹಣಕ್ಕಾಗಿ ಕಿರಿಕಿರಿಗಳು ಅಧಿಕವಾದಂತೆ ತೋರುವುದು. ವಿದ್ಯಾರ್ಥಿಗಳು ಮನೋಭಾವವನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ವರ್ತನೆಯು ಹಾದಿ ತಪ್ಪಿದಂತೆ ಹೆಚ್ಚಿನವರಿಗೆ ತೋರುವುದು. ನಿಮ್ಮ ತಾಳ್ಮೆಯೇ ಗುರಿಯನ್ನು ತಲುಪಲು ಸಹಕಾರಿಯಾಗಿರುವುದು. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಿ. ಸ್ಥಿರಾಸ್ತಿಯಲ್ಲಿ ಲಾಭವನ್ನು ಪಡೆಯಲು ತಂತ್ರವನ್ನು ಬಳಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು.

ವೃಶ್ಚಿಕ ರಾಶಿ: ಇಂದ ನಿಮ್ಮ ಕ್ರಿಯಾಶೀಲತೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವಿರಿ. ನಿಮ್ಮ ಮೇಲಿನ‌ ಗೌರವು ಈ ಕಾರಣಕ್ಕೆ ಕಡಿಮೆ‌ ಆಗಬಹುದು. ಇಂದು ಮಡದಿ, ಮಕ್ಕಳಿಂದಲೇ ಟೀಕೆಯನ್ನು ಕೇಳಬೇಕಾದೀತು. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಸಹೋದ್ಯೋಗಿಗಳು ಉದ್ಯೋಗಕ್ಕೆ ಸಂಬಂಧಿಸಿದ ಗೊಂದಲವನ್ನು ಪಹಿಹರಿಸಲು ಸಹಕಾರ ನೀಡಬಹುದು. ಕುಟುಂಬಕ್ಕಾಗಿ ಮಾಡಿದ ಸಾಲವನ್ನು ನೆನೆಸಿಕೊಂಡು ಸಂಕಟಪಡುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗಿ ಸ್ಪಂದಿಸುವ್ವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಅಗತ್ಯವು ಬಹಳ ಇರಲಿದೆ. ಕೃತಕತೆಯಿಂದ ಲಾಭವಾಗದು.

-ಲೋಹಿತ ಹೆಬ್ಬಾರ್ – 8762924271 (what’s app only)