Monthly Horoscope For August 2024: ವೃಷಭ ರಾಶಿಯವರಿಗೆ ಅಧಿಕ ಕೋಪ; ಕಟಕದವರಿಗೆ ಶುಭ ಸುದ್ದಿ; ದ್ವಾದಶ ರಾಶಿಗಳ ಮಾಸ ಭವಿಷ್ಯ ಇಲ್ಲಿದೆ

| Updated By: Digi Tech Desk

Updated on: Jul 25, 2024 | 5:11 PM

ಆಗಷ್ಟ್ ಮಾಸ ಭವಿಷ್ಯ: ಮೇಷರಾಶಿಯವರು ನಿರುತ್ಸಾಹ ಬಾರದಂತೆ ರೂಪಿಸಿಕೊಳ್ಳುವುದು ಅಗತ್ಯ. ನಿಮ್ಮ ಮಾತು ನಡೆಯುತ್ತದೆ ಎಂದು ಏನನ್ನಾದರೂ ಹೇಳಬಿಡಬೇಡಿ. ರಾಶಿಯವರಿಗೆ ಮಿಶ್ರಫಲ. ಕನ್ಯಾರಾಶಿಯವರಿಗೆ ಕೇತು ಹಾಗೂ ಶುಕ್ರರು ನಿಮ್ಮನ್ನು ಅಸ್ಥಿರಗೊಳಿಸಬಹುದು. ಮೀನ ರಾಶಿಯವರಿಗೆ ಕುಜನು ಚತುರ್ಥದಲ್ಲಿ ಇರುವುದು ಕೌಟುಂಬಿಕ ಕಲಹಕ್ಕೆ ಕಾರಣ. ಆಗಸ್ಟ್ ತಿಂಗಳ ಶ್ರಾವಣ ಮಾಸದ ದ್ವಾದಶ ರಾಶಿಗಳ ಜ್ಯೋತಿಷ್ಯ್ಶಾಸ್ತ್ರ ಗಣಿತ ವಿವರ ಭವಿಷ್ಯ ಇಲ್ಲಿದೆ

Monthly Horoscope For August 2024: ವೃಷಭ ರಾಶಿಯವರಿಗೆ ಅಧಿಕ ಕೋಪ; ಕಟಕದವರಿಗೆ ಶುಭ ಸುದ್ದಿ; ದ್ವಾದಶ ರಾಶಿಗಳ ಮಾಸ ಭವಿಷ್ಯ ಇಲ್ಲಿದೆ
ಆಗಸ್ಟ್ ತಿಂಗಳ ರಾಶಿ ಭವಿಷ್ಯ
Follow us on

2024 ರ ಎಂಟನೇ ತಿಂಗಳಾದ ಆಗಷ್ಟ್ ನಲ್ಲಿ ಗ್ರಹಗತಿಗಳ ಬದಲಾವಣೆ ಶುಭಾಶುಭವನ್ನು ನೀಡಲಿವೆ. ಸೂರ್ಯ ತನ್ನ ಉಚ್ಚ ಸ್ಥಾನಕ್ಕೆ ಹೋದರೆ, ಶುಕ್ರನು ತನ್ನ ನೀಚ ಸ್ಥಾನಕ್ಕೆ ಹೋಗಿದ್ದಾನೆ. ಬುಧನೂ ಕರ್ಕಾಟಕ ರಾಶಿ ಎಂದರೆ ತನ್ನ ಶತ್ರುವಿನ ಮನೆಯನ್ನು ಪ್ರವೇಶಿಸಿದ್ದಾ‌ನೆ. ಕುಜನೂ ಕೂಡ ಪರಸ್ಪರ ಶತ್ರುಗಳಿರವ ಬುಧನ‌ ರಾಶಿಗೆ ಅಂದರೆ ಮಿಥನವನ್ನು ಪ್ರವೇಶಿಸಿದ್ದಾನೆ. ಇವರೆಲ್ಲರ ಪರಿಣಾಮ ಜನಿಸಿದವರ ಮೇಲೆ ಬೀರಲಿದೆ. ದೋಷ ಪರಿಹಾರವನ್ನು ಮಾಡುಕೊಂಡು ಮುಂದುವರಿದರೆ ಎಲ್ಲರಿಗೂ ಶುಭವೇ.

ಮೇಷ ರಾಶಿ :ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಆಗಷ್ಟ್ ತಿಂಗಳು ಶುಭ. ವಾಹನ ಸೌಕರ್ಯಕ್ಕೆ ಪ್ರಯತ್ನಿಸಿದರೆ ಲಭಿಸಲಿದೆ. ಸಂಗಾತಿಯ ಆರೋಗ್ಯಕ್ಕೆ ಹಣವನ್ನು ಖರ್ಚು ಮಾಡಬೇಕಾಗುವುದು. ಸಂತಾನ ಪ್ರಾಪ್ತಿಯ ವಾರ್ತೆಯು ಸಂತೋಷ ಕೊಡುವುದು. ಬಂಧುಗಳ ಆಗಮನವು ಅಧಿಕವಾಗಲಿದೆ. ನಿಮ್ಮ ಆರೋಗ್ಯವೂ ಆಗಾಗ ಹದತಪ್ಪುವುದು. ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಕೊಟ್ಟ ಕಾರ್ಯವನ್ನು ಕೌಶಲದಿಂದ ಮಾಡುವಿರಿ. ನಿರುತ್ಸಾಹ ಬಾರದಂತೆ ನಿಮ್ಮನ್ನು ರೂಪಿಸಿಕೊಳ್ಳುವುದು ಅಗತ್ಯ. ನಿಮ್ಮ ಮಾತು ನಡೆಯುತ್ತದೆ ಎಂದು ಏನನ್ನಾದರೂ ಹೇಳಬಿಡಬೇಡಿ. ಒಳ್ಳೆಯ ಕೆಲಸದಿಂದ ನೆಮ್ಮದಿ ಕಾಣುವಿರಿ.

ವೃಷಭ ರಾಶಿ :ಈ ತಿಂಗಳು ರಾಶಿ ಚಕ್ರದ ಎರಡನೇ ರಾಶಿಯವರಿಗೆ ಮಿಶ್ರಫಲ. ರಾಶಿ ಅಧಿಪತಿಯಾದ ಶುಕ್ರನು ಈ ತಿಂಗಳಲ್ಲಿ ನೀಚ ಸ್ಥಾನಕ್ಕೆ ಹೋಗುವನು. ಅದರಲ್ಲಿಯೂ ಕೇತುವಿನ ಜೊತೆ ಸಮಾಗಮವಾಗಲಿದೆ. ಒತ್ತಡದಿಂದ ನಿಮಗೆ ಕೋಪವು ಅಧಿಕವಾಗುವುದು. ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬ ಗೊಂದಲ ಸನ್ನಿವೇಶ ಎದುರಾಗುವುದು. ಯಾರಿಂದಲಾದರೂ ಇದಕ್ಕೆ ಸರಿಯಾದ ಸಲಹೆಯನ್ನು ಪಡೆಯಿರಿ. ನಿಮ್ಮಲ್ಲಿ ಅಧಿಕ ಉತ್ಸಾಹ ಕಾಣಿಸುವುದು. ಯಾವುದನ್ನೇ ಆದರೂ ನಿರ್ಬಿಡೆಯಿಂದ ಮಾಡುವಿರಿ. ವೃತ್ತಿಯಲ್ಲಿ ಆಲಸ್ಯವು ಅಧಿಕವಾಗಿ ಕಾಣಿಸುವುದು. ಕೌಟುಂಬಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಅಧಿಕಾರದ ಆಸೆ ಬರುವುದು. ದುರ್ಗಾಪರಮೇಶ್ವರಿಯನ್ನು ಆರಾಧಿಸಿ.

ಮಿಥುನ ರಾಶಿ :ಆಗಷ್ಟ್ ತಿಂಗಳಲ್ಲಿ ಈ ರಾಶಿ ಚಕ್ರದವರಿಗೆ ಅಶುಭ. ರಾಶಿಯ ಅಧಿಪತಿಯು ದ್ವಿತೀಯದಲ್ಲಿ ಇರುವನು. ಬಂಧುಗಳಿಂದ ಸಹಕಾರ ಸಿಕ್ಕರೂ ಮಾತಿಗೆ ಅಗೌರವ ತೋರುವರು. ಕುಟುಂಬದ ಪ್ರೀತಿಯಲ್ಲಿ ಕೊರತೆ ಕಾಣಿಸುವುದು. ಉದ್ಯೋಗವನ್ನು ಒಲ್ಲದ ಮನಸ್ಸಿನಿಂದ ಮಾಡುವಿರಿ. ಪೂರ್ಣ ಮನಸ್ಸಿನಿಂದ ಈ ತಿಂಗಳಲ್ಲಿ ಯಾವುದನ್ನೂ ಒಪ್ಪಿಕೊಳ್ಳಲಾರಿರಿ. ಆಯುಧಾದಿಗಳಿಂದ ಗಾಯವಾಗುವ ಸಾಧ್ಯತೆ ಹೆಚ್ಚು ಇರುವುದು. ತೃತೀಯದಲ್ಲಿ ಸೂರ್ಯನು ನಿಮ್ಮ ಸಾಮರ್ಥ್ಯವನ್ನು ಲೋಕಕ್ಕೆ ತೋರಿಸುವನು. ಅಪಮಾನವನ್ನು ನುಂಗಿ ಜೀವನ ಸಾಗಿಸಬೇಕಾಗುವುದು. ಮಹಾವಿಷ್ಣುವಿನ ಉಪಾಸನೆಯು ಹೆಚ್ಚು ಮಾಡಿ ನೆಮ್ಮದಿಯನ್ನು ಕಾಣಬೇಕು.

ಕರ್ಕಾಟಕ ರಾಶಿ :ರಾಶಿ ಚಕ್ರದ ಚತುರ್ಥ ರಾಶಿಯವರಿಗೆ ಈ ತಿಂಗಳು ಶುಭ. ರಾಶಿಯಲ್ಲಿ ಬುಧನ ಪ್ರವೇಶವಾಗಲಿದೆ. ಶತ್ರುವಿನ ಮನೆಯಲ್ಲಿ ಬುಧನ ಉಪಸ್ಥಿತಿ ದೈಹಿಕ ಮಾನಸಿಕವಾಗಿ ಕಷ್ಟವಾದರೂ ಅದನ್ನು ಸಹಿಸುವ ಸಾಮರ್ಥ್ಯವನ್ನು ಗುರುವು ಕೊಡುವನು. ಭೂಮಿಯ ವಿವಾದವು ತಾರಕಕ್ಕೆ ಏರುವುದು. ಭೂಮಿಯ ಉತ್ಪನ್ನದಿಂದ ಆರ್ಥಿಕತೆಗೆ ಹಿನ್ನಡೆಯಾಗಲಿದೆ. ನಿಮ್ಮ ಮಾತುಗಳು ಸಿಟ್ಟಿನಿಂದ ಇರುವುದು. ಎಲ್ಲದಕ್ಕೂ ಸಿಟ್ಟು ಮಾಡಿಕೊಳ್ಳುವಿರಿ. ನಿಮ್ಮ ಶಕ್ತಿಯು ನಷ್ಟವಾಗಲಿದೆ. ಯಾವ ಕಾರ್ಯವೂ ಊಹಿಸಿದಷ್ಟು ವೇಗವಾಗಿ ಇರದು. ನಿಮ್ಮ ಕೌಶಲವು ಪೂರ್ಣಪ್ರಮಾಣದಲ್ಲಿ ಪ್ರಯೋಜನಕಾರಿಯಾಗದು. ಕಷ್ಟದ ಸನ್ನಿವೇಶದಲ್ಲಿಯೂ ಹಾಗೆಯೇ ನಡಯಲು ಗುರುಬಲ‌ವು ಕಾರಣವಾಗಿದೆ. ಶ್ರೀಗೌರಿಯನ್ನು ಆರಾಧನೆ ಮಾಡಿ.

ಸಿಂಹ ರಾಶಿ :ಆಗಷ್ಟ್ ತಿಂಗಳಲ್ಲಿ ಈ ರಾಶಿಯವರಿಗೆ ಮಿಶ್ರಫಲ. ರಾಶಿ ಅಧಿಪತಿ ರಾಶಿಯನ್ನು ಪ್ರವೇಶಿಸುವನು‌. ಜ್ವರಾದಿ ರೋಗಿಗಳು ಕಾಣಿಸಿಕೊಳ್ಳುವುದು. ಚಿಂತೆಯೂ ಹೆಚ್ಚಾಗುವುದು. ಸಂಗಾತಿಯಿಂದ ಬೇಸರವಾಗುವ ಸಂಗತಿಗಳು ನಡೆಯುವುದು. ವೃತ್ತಿಯಲ್ಲಿ ನಿಮಗೆ ಹೆಚ್ಚಿನ ಸ್ಥಾನ ಸಿಗುವುದು‌‌. ಅಪೇಕ್ಷಿತ ಭಡ್ತಿಯನ್ನೂ ಪಡೆಯಲು ಸಾಧ್ಯ. ಯಂತ್ರಜ್ಞರಿಗೆ, ಮಾರಾಟಗಾರರಿಗೆ ಈ ತಿಂಗಳು ಅಧಿಕ ಲಾಭವಾಗುವುದು. ನಿಮ್ಮ ಮಾತಿಗೆ ಯಾರೂ ಬೆಲೆಕೊಡದೇ ಹೋಗಬಹುದು. ತಾಳ್ಮೆಯಿಂದ ಅದನ್ನು ಹೇಳಲು ಪ್ರಯತ್ನಿಸಿ. ಗೊಂದಲಗಳನ್ನು ಮಾಡಿಕೊಳ್ಳುವುದು ಬೇಡ. ಬಂಧುಗಳ ಮೇಲೆ‌ ಅಕಾರಣ ದ್ವೇಷಭಾವ ಬರುವುದು. ನಿಮ್ಮನ್ನೇ ನೀವು ಪ್ರಶಂಸಿಸುವುದು ನಿಮ್ಮವರಿಗೆ ಕೇಳಲು ಕಷ್ಟವಾಗಲಿದೆ. ಶಿವನಿಗೆ ರುದ್ರಾಭಿಷೇಕವನ್ನು ಮಾಡಿ.

ಕನ್ಯಾ ರಾಶಿ :ಈ ರಾಶಿಯು ಆರನೇ ರಾಶಿಯಾಗಿದ್ದು ಈ ತಿಂಗಳಲ್ಲಿ ಉತ್ತಮ ಫಲವನ್ನು ನಿರೀಕ್ಷಿಸಬಹುದು. ರಾಶಿಯ ಅಧಿಪತಿಯಾದ ಬುಧನು ಏಕಾದಶದಲ್ಲಿ ಇರುವುದು ಬೋಧನ ವೃತ್ತಿಯಿಂದ ಆರ್ಥಿಕತೆಯ ದೃಢವಾಗಲಿದೆ. ರಾಶಿಯಲ್ಲಿ ಕೇತು ಹಾಗೂ ಶುಕ್ರರು ನಿಮ್ಮನ್ನು ಅಸ್ಥಿರಗೊಳಿಸಬಹುದು. ಏನನ್ನು ಮಾಡಲೂ ಹಿಂದೇಟು ಹಾಕುವಿರಿ. ಆಪ್ತರ ಹಿರಿಯ ಸಹಕಾರವು ನಿಮ್ಮನ್ನು ಗಟ್ಟಿ ಮಾಡಲಿದೆ. ತಂದೆಯ ಆರೋಗ್ಯದ ಬಗ್ಗೆ ಕಳವಳ ಕಾಣಿಸುವುದು. ತಂತ್ರಜ್ಞರು ವೃತ್ತಿಯಲ್ಲಿ ಸಮಸ್ಯೆಯನ್ನು ತಂದುಕೊಳ್ಳುವರು. ಬಾಂಧವ್ಯವು ಎಂದಿಗಿಂತ ಉತ್ತಮವಾಗಲಿದೆ‌. ವೈವಾಹಿಕ ಜೀವನದಲ್ಲಿ ಸಂಗಾತಿಯು ನಿಮ್ಮನ್ನು ಅಪಮಾನಿಸಬಹುದು. ಯಾವುದನ್ನೂ ದೀರ್ಘಕಾಲದ ವರೆಗೆ ನೆನಪಿಟ್ಟುಕೊಳ್ಳದೇ ಅಲ್ಲಿಗೇ ನಿಲ್ಲಿಸುವುದು ಉತ್ತಮ.

ತುಲಾ ರಾಶಿ :ಆಗಷ್ಟ್ ತಿಂಗಳಲ್ಲಿ ರಾಶಿ ಚಕ್ರದ ಏಳನೇ ರಾಶಿಯವರಿಗೆ ಅಶುಭ. ರಾಶಿ ಅಧಿಪತಿಯೇ ದ್ವಾದಶ ಸ್ಥಾನಕ್ಕೆ ಬಂದು ಅದರಲ್ಲಿರುವ ನೀಚ ಭಾವದಲ್ಲಿ‌ ಇದ್ದಾನೆ. ಹೂಡಿಕೆಯಲ್ಲಿ ಬಹಳ ಹಿನ್ನಡೆಯಾಗಲಿದೆ. ಬೇಡದ ಕಾರ್ಯಗಳಿಗೆ ಸಂಪತ್ತು ಹೋಗುವುದು.‌ ಸಾಲವನ್ನೂ ಮಾಡಬೇಕಾದೀತು. ಕೊಟ್ಟ ಹಣವೂ ಕೈಗೆ ಬಾರದು. ಆರ್ಥಿಕವಾಗಿ ನೀವು ದುರ್ಬಲರಾಗುವಿರಿ. ಗುರುವೂ ಅಷ್ಟಮದಲ್ಲಿ ಇದ್ದು ದುರ್ಬಲನಾಗಿರುವನು. ಸದ್ಯಕ್ಕೆ ಕುಟುಂಬದ ಕಡೆಯಿಂದ ಬರುವ ಬೆಂಬಲವೇ ನಿಮ್ಮನ್ನು ಕಾಪಾಡುವುದು. ಸಾಹಸದಿಂದ ನಿಮಗೆ ಯಶಸ್ಸು ಸಿಗಲಿದೆ. ಯಾರಿಂದಲೂ ತೊಂದರೆಗಳು ಬಾರದು. ಮಕ್ಕಳನ್ನು ದೂರದಲ್ಲಿ ಇರಿಸಿ ಸಂಕಟಪಡುವಿರಿ. ಅನನ್ಯ ಭಕ್ತಿಯಿಂದ ಲಕ್ಷ್ಮೀನಾರಾಯಣರನ್ನು ಆರಾಧಿಸಿ ಆರ್ಥಿಕ ವೃದ್ಧಿಯಾಗುವುದು‌.

ವೃಶ್ಚಿಕ ರಾಶಿ :ಈ ತಿಂಗಳು ನಿಮಗೆ ಶುಭಪ್ರದವಾದುದು. ರಾಶಿಯ ಅಧಿಪತಿ ಸಪ್ತಮದಿಂದ ಅಷ್ಟಮಕ್ಕೆ ಸಂಚಾರ ಮಾಡುವನು. ದೊಡ್ಡ ಮಟ್ಟದ ಚಿಕಿತ್ಸೆಗಳು ನಡೆಯುವುದು. ಗುರುವು ಸಪ್ತಮದಲ್ಲಿ ನಿಮ್ಮ ಮಾನಸಿಕ ಸ್ಥೈರ್ಯವನ್ನು ಹೆಚ್ಚು ಮಾಡುವನು. ಮಕ್ಕಳಿಂದ ನಿಮಗೆ ಯಾವುದು ಅನುಕೂಲತೆಗಳು ಸಿಗುವುದು ಕಷ್ಟವಾಗತ್ತದೆ. ನಿಮ್ಮ ಮೇಲೆ ಸದ್ಭಾವ ಬಾರದು. ವಿದೇಶದ ಪ್ರವಾಸ ನಿಮಗೆ ಅನುಕೂಲಕರವಾಗಲಿದೆ. ಶುಕ್ರನು ನೀಚನಾಗಿ ಏಕಾದಶದಲ್ಲಿ ಇರುವನು. ಸಂಪತ್ತನ್ನು ಪಡೆಯುವುದು ಕಷ್ಟವಾಗುವುದು. ಪರಿಶ್ರಮದಿಂದ ನಿಮ್ಮ ಹಣವನ್ನು ಪಡೆಯಬೇಕಾಗುವುದು. ಸರ್ಕಾರಿ ಉದ್ಯಮದವರಿಗೆ ಸ್ಥಾನ‌ಮಾನ ಭಡ್ತಿಯು ಸಿಗುವುದು. ಸಜ್ಜನರ ಸಹವಾಸ ಸಿಗಲಿದೆ. ಕಾರ್ತಿಕೇಯನ ಉಪಾಸನೆ ಮಾಡಿ.

ಧನು ರಾಶಿ :ಆಗಷ್ಟ್ ತಿಂಗಳಲ್ಲಿ ನಿಮಗೆ ಅಶುಭವು ಅಧಿಕವಾಗಿರುವುದು. ರಾಶಿಯ ಅಧಿಪತಿಯು ಷಷ್ಠದಲ್ಲಿ ಇದ್ದಾನೆ. ಆರೋಗ್ಯವನ್ನು ಸುಧಾರಿಸಿಕೊಳ್ಳಲು ಅಶಕ್ತರಾಗಬಹುದು. ಸಂಗತಿಯ ಜೊತೆ ಭಿನ್ನಾಭಿಪ್ರಾಯ ಬರುವುದು. ವಿದೇಶಕ್ಕೆ ಪ್ರಯಾಣ ಮಾಡುವ ಸಂದರ್ಭ ಬರಲಿದೆ. ಕಫಕ್ಕೆ ಸಂಬಂಧಿಸಿದ ರೋಗವು ಕಾಣಿಸುವುದು.‌ ತಂದೆಯಿಂದ ನಿಮಗೆ ಸಂಪತ್ತು ಸಿಗುವುದು ಅಥವಾ ಸಹಕಾರವು ಸಿಗಲಿದೆ. ಇಷ್ಟವಿಲ್ಲದ ವೃತ್ತಿಯನ್ನು ಮಾಡಬೇಕಾಗುವುದು. ಉದ್ಯೋಗದ ಕಾರಣದಿಂದ ಹಣವನ್ನು ಕಳೆದುಕೊಳ್ಳುವ ಸ್ಥಿತಿ ಬರಲಿದೆ. ಮಾನಸಿಕವಾಗಿ ಕೊರಗುವುದು ಅನಿವಾರ್ಯವಾಗಬಹುದು. ಬೇರೆ ಆಲೋಚನೆಗಳಿಂದ ಅದನ್ನು ಸರಿ ಮಾಡಿಕೊಳ್ಳಿ. ದತ್ತಾತ್ರೇಯರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ.

ಮಕರ ರಾಶಿ :ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಆಗಷ್ಟ್ ತಿಂಗಳಲ್ಲಿ ಶುಭ ಫಲ. ರಾಶಿಯ ಅಧಿಪತಿಯು ದ್ವಿತೀಯದಲ್ಲಿ ಇರುವುದು ಒತ್ತಡವನ್ನು ತಂದುಕೊಳ್ಳುವಂತೆ ಮಾಡುತ್ತದೆ. ನಿಮ್ಮ ಸಾಮಾರ್ಥ್ಯವು ದುರುಪಯೋಗವಾಗುವುದು ಅಥವಾ ವ್ಯರ್ಥವಾಗಿ ಹೋಗಬಹುದು. ಸಿಟ್ಟಿನ ಸ್ವಭಾವ ಹೆಚ್ಚಾಗುವುದು. ಒತ್ತಡವೂ ನಿಮ್ಮನ್ನು ಸಿಟ್ಟಿಗೆ ಒಳಗಾಗಿಸುವುದು. ವಿದೇಶದಲ್ಲಿ ಇರುವವರಿಗೆ ಉದ್ಯೋಗ ಮಾಡುವವರಿಗೆ ವಾಪಾಸಾಗುವ ಸನ್ನಿವೇಶವು ಬರುವುದು. ತಂದೆಯ ಆರೋಗ್ಯದ ಬಗ್ಗೆ ಎಚ್ಚರಿಗೆ ಅಗತ್ಯ. ವಿವಾಹವನ್ನು ಮಾಡಿಕೊಳ್ಳುವವರಿಗೆ ಉತ್ತಮ ಸಂಗಾತಿಯು ಪ್ರಾಪ್ತವಾಗುವುದು. ಎಂತಹ ಒತ್ತಡವನ್ನು ನೀವು ನಿಭಾಯಿಸಲು ಸಾಧ್ಯವಾಗುವುದು. ಅದೃಷ್ಟವು ಪೂರ್ಣ ಪ್ರಮಾಣದಲ್ಲಿ ಫಲಿಸದು. ಒಳ್ಳೆಯವರ ಸಹವಾಸವು ಸಿಗದೇಹೋಗುವುದು. ಆಂಜನೇಯನ‌ ಕಥೆಯನ್ನು ಶ್ರವಣ ಮಾಡಿ, ಪ್ರಿಯವಾದ ವಸ್ತುವನ್ನು ಸಮರ್ಪಿಸಿ.

ಕುಂಭ ರಾಶಿ :ಅಗಷ್ಟ್ ತಿಂಗಳಲ್ಲಿ ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಮಿಶ್ರ ಫಲ. ರಾಶಿಯ ಅಧಿಪತಿ ಶನಿಯು ನಿಮ್ಮ ರಾಶಿಯಲ್ಲಿಯೇ ಇದ್ದಾನೆ. ಆಲಸ್ಯದ‌ ಸ್ವಭಾವವು ಹೆಚ್ಚಾಗುವುದು. ಏನೇ ತೀರ್ಮಾನ ಮಾಡಿದರೂ ಈಗ ಬೇಡ ಎಂಬ ಭಾವ ಬರುವುದು. ಚತುರ್ಥದಲ್ಲಿ ಗುರುವು ಸ್ವಲ್ಪಮಟ್ಟಿಗೆ ನೆಮ್ಮದಿ ಕೊಡುವನು. ವಿದೇಶದಲ್ಲಿ ವಾಸಿಸುವವರಿಗೆ ಅನುಕೂಲಗಳು ವಿಳಂಬವಾದರೂ ಒದಗಿಬರುವುದು. ಇನ್ನು ಪಂಚಮದಲ್ಲಿ ಕುಜನು ಶತ್ರುವಿನ ಮನೆಯಲ್ಲಿ ಇರುವ ಕಾರಣ ಮಕ್ಕಳ ಬಗ್ಗೆ ಒಳ್ಳೆಯ ಅಭಿಪ್ರಾಯ ಇರದು. ದುರಭ್ಯಾಸವನ್ನು ರೂಢಿಸಿಕೊಳ್ಳುವ ಸಹವಾಸವು ಬರುವುದು. ಮಕ್ಕಳ‌ ಮೇಲೆ ಅಗತ್ಯ. ಶುಕ್ರನು ನೀಚ ಸ್ಥಾನಕ್ಕೆ ಹೋಗಿದ್ದು ಸಂಪತ್ತಿನ ಹಿನ್ನಡೆಯಾಗಲಿದೆ‌. ಸೂರ್ಯನು ಸಪ್ತಮದಲ್ಲಿ ಇದ್ದು ಆರೋಗ್ಯವನ್ನು ಕೊಟ್ಟರೂ ತಂದೆಯ ಜೊತೆಗಿನ ಸುಪ್ತವಾಗಿ ಇರುವುದು. ಬರುವ ಸಂಪತ್ತಿಗೆ ಹೆಚ್ಚು ಓಡಾಟ ಮಾಡಬೇಕಾಗುವುದು. ಶಿವಕವಚವನ್ನು ಪಠಿಸಿ.

ಮೀನ ರಾಶಿ :ಆಗಷ್ಟ್ ತಿಂಗಳಲ್ಲಿ ಈ ರಾಶಿಯವರಿಗೆ ಹೆಚ್ಚು ಅಶುಭ ಫಲ. ರಾಶಿಯ ಅಧಿಪತಿಯು ತೃತೀಯದಲ್ಲಿ ಇದ್ದು ಅಲ್ಪ ಬಲಶಾಲಿಯಾಗಿದ್ದಾನೆ. ನಿಮ್ಮ ಬಲ ಹೆಚ್ಚು ಫಲ ಕಡಿಮೆ ಆಗುವುದು. ಕುಜನು ಚತುರ್ಥದಲ್ಲಿ ಇರುವುದು ಕೌಟುಂಬಿಕ ಕಲಹಕ್ಕೆ ಕಾರಣ. ಮಕ್ಕಳ ಜೊತೆ ವೈಮನಸ್ಯ ಕಾಣಿಸುವುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುವುದು. ಸೂರ್ಯನು ಸ್ವಕ್ಷೇತ್ರದಲ್ಲಿ ಇದ್ದರೂ ಆಗಬೇಕಾದ ಕೆಲಸ, ಸರ್ಕಾರಿ ಕಾರ್ಯದಲ್ಲಿ ಹಿನ್ನಡೆ, ಅಧಿಕಾರಿಗಳಿಂದ ಕಿರಿಕಿರಿ, ಸರ್ಕಾರಿ ಉದ್ಯೋಗಿಗಳಿಗೆ ಅಪವಾದ ಬರುವುದು. ವೈವಾಹಿಕ ಜೀವನವೂ ದುಸ್ತರ ಎನಿಸಬಹುದು. ಒಟ್ಟಿನಲ್ಲಿ ಅಶುಭವೇ ಅಧಿಕವಿದೆ. ಧೃತಿಗೆಡದೇ ಮುನ್ನಡೆಯಬೇಕಿದೆ. ಶುಭಕಾಲವನ್ನು ನಿರೀಕ್ಷಿಸಿರಿ. ದುರ್ಗಾರ್ತಿನಾಶಿನಿಯಾದ ದೇವಿಯನ್ನು ಅನನ್ಯ ಭಾವದಿಂದ ಧ್ಯಾನಿಸಿ.

-ಲೋಹಿತ ಹೆಬ್ಬಾರ್, ಇಡುವಾಣಿ – 8762924271 (what’s app only)

Published On - 4:47 pm, Thu, 25 July 24