Daily Numerology 25 July 2024: 1, 10, 19, 28ನೇ ತಾರೀಕು ಹುಟ್ಟಿದವರಿಗೆ ಅವಮಾನವಾಗುವ ಸಾಧ್ಯತೆ; ಸಂಖ್ಯಾಶಾಸ್ತ್ರ ಭವಿಷ್ಯ ಇಲ್ಲಿದೆ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 25ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Daily Numerology 25 July 2024: 1, 10, 19, 28ನೇ ತಾರೀಕು ಹುಟ್ಟಿದವರಿಗೆ ಅವಮಾನವಾಗುವ ಸಾಧ್ಯತೆ; ಸಂಖ್ಯಾಶಾಸ್ತ್ರ ಭವಿಷ್ಯ ಇಲ್ಲಿದೆ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 25, 2024 | 12:20 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 25ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ವಿರುದ್ಧ ಕೆಲವರು ದ್ವೇಷ ಸಾಧನೆ ಮಾಡುತ್ತಿದ್ದಾರೆ ಎಂದೆನಿಸುವುದಕ್ಕೆ ಶುರು ಆಗುತ್ತದೆ. ನಿಮ್ಮ ವಿರುದ್ಧ ದೂರು ನೀಡಬಹುದು ಅಥವಾ ಬೇಕೆಂತಲೆ ನೀವು ಮಾಡಿದ ಕೆಲಸ- ಕಾರ್ಯಗಳಲ್ಲಿ ತಪ್ಪು ಹುಡುಕಬಹುದು. ಎಲ್ಲರೆದುರು ಅವಮಾನ ಆಗುವಂಥ ಮಾತುಗಳನ್ನು ಆಡಬಹುದು. ಒಟ್ಟಿನಲ್ಲಿ ನಿಮ್ಮ ಮಾನಸಿಕ ಸ್ಥೈರ್ಯ ಕುಗ್ಗಿಸುವುದಕ್ಕೆ ಕೆಲವರು ಖಂಡಿತಾ ಪ್ರಯತ್ನವನ್ನು ಮಾಡಲಿದ್ದಾರೆ. ಮಹಿಳೆಯರು ಉದ್ಯೋಗದಲ್ಲಿದ್ದು, ಕಷ್ಟವಾದ ತಂಡವನ್ನು ಮುನ್ನಡೆಸುತ್ತಾ, ಕಷ್ಟವಾದ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದೀರಿ ಅಂತಾದರೆ ಈ ಮೇಲ್ಕಂಡ ಅನುಭವವು ಹೆಚ್ಚಿನ ಮಟ್ಟದಲ್ಲಿ ಆಗಲಿದೆ. ಜ್ವರ, ಮೈಗ್ರೇನ್, ವಿಪರೀತ ಬೆನ್ನು ನೋವಿನಿಂದಾಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯಲೇಬೇಕು ಎಂಬ ಸ್ಥಿತಿ ನಿರ್ಮಾಣ ಆಗಲಿದೆ. ಕ್ರೆಡಿಟ್ ಕಾರ್ಡ್ ಬಳಸುವಂಥವರು ಅದನ್ನು ಜೋಪಾನವಾಗಿ ಬಳಸಿ. ವಂಚಕರಿಂದ ಅದರ ದುರ್ಬಳಕೆ ಆಗಬಹುದು, ಜಾಗ್ರತೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಗುನಗುತ್ತಾ ದಿನ ಕಳೆಯುವುದಕ್ಕೆ ಏನು ಬೇಕು ಅಂಥದ್ದೊಂದು ವಾತಾವರಣ ಸೃಷ್ಟಿಸಿಕೊಳ್ಳುವುದು ಈ ದಿನ ನಿಮ್ಮ ಕೈಲೇ ಇದೆ. ಪ್ರೀತಿ- ಪ್ರೇಮದಲ್ಲಿ ಇರುವಂಥವರು ಕಿರು ಪ್ರವಾಸಕ್ಕಾದರೂ ತೆರಳುವಂಥ ಯೋಗ ಇದೆ. ಇಲ್ಲದಿದ್ದಲ್ಲಿ ಬಹಳ ಇಷ್ಟವಾದ ರೆಸ್ಟೋರೆಂಟ್, ಹೋಟೆಲ್ ಗಳಿಗೆ ತೆರಳಬಹುದು. ಯೂಟ್ಯೂಬರ್ ಗಳು, ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳಿಗೆ ಆದಾಯ ಹೆಚ್ಚು ಮಾಡಿಕೊಳ್ಳುವಂಥ ಅವಕಾಶಗಳಿವೆ. ಕೆಲವು ಪ್ರತಿಷ್ಠಿತ ಕಂಪನಿಗಳವರು ನಿಮಗೆ ಹೊಸದಾಗಿ ಆಫರ್ ಗಳನ್ನು ನೀಡಬಹುದು. ಇನ್ನು ಬಾರದು ಅಂದುಕೊಂಡಿದ್ದ ಹಣದ ಮೊತ್ತ ನಿಮಗೆ ಪಡೆದುಕೊಳ್ಳುವುದಕ್ಕೆ ದಾರಿ ಸಿಗುತ್ತದೆ. ವಿವಾಹ ವಯಸ್ಕ ಯುವತಿಯರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧಗಳು ಹುಡುಕಿಕೊಂಡು ಬರಲಿವೆ. ಇದು ಬಹಳ ವೇಗವಾಗಿ ವಿವಾಹದ ಹಂತದ ತನಕ ಸಾಗುವ ಯೋಗವಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮದಲ್ಲದ ಜವಾಬ್ದಾರಿ, ಕೆಲಸಕ್ಕೆ ಮುನ್ನುಗುವುದಕ್ಕೆ ಹೋಗಬೇಡಿ. ಆಯಾ ವ್ಯಕ್ತಿಗಳ ಸಮರ್ಥನೆಯನ್ನು ಅವರೇ ಮಾಡಿಕೊಳ್ಳುವುದು ಸರಿ. ದುರ್ಬಲರು ಅಂತಲೋ ಅಥವಾ ನಿಮಗೆ ಆಪ್ತರು, ಬಹಳ ಸನಿಹದಲ್ಲಿ ಇರುವಂಥವರು ಅಂತೇನಾದರೂ ರಕ್ಷಣೆಗೆ ನಿಲ್ಲುವುದಕ್ಕೆ ಪ್ರಯತ್ನಿಸಿದರೆ ನಿಮ್ಮ ವರ್ಚಸ್ಸಿಗೆ ಹಾನಿ ಆಗಲಿದೆ. ಮೊದಮೊದಲು ಎಂಬಂತೆ ಏನಾದರೂ ಸಂಬಂಧಿಕರ ಮನೆಗೆ ಹೋಗುತ್ತಿದ್ದೀರಿ ಅಂತಾದಲ್ಲಿ ಅಂಥವರ ಮನೆಯಲ್ಲಿ ನಿಮ್ಮ ಬಾಡಿ ಲಾಂಗ್ವೇಜ್, ಬಳಸುವ ಬಾಷೆಯಲ್ಲಿ ಎಚ್ಚರಿಕೆಯನ್ನು ವಹಿಸಿ. ಏಕೆಂದರೆ ಇದರಿಂದ ಈ ದಿನ ನಿಮಗೆ ಹೆಸರು ಕೆಡುವಂಥ ಯೋಗ ಇದೆ. ನಿಮ್ಮ ಉದ್ದೇಶ ಏನಾದರೂ ಇರಲಿ, ನಿಮ್ಮ ನಡವಳಿಕೆ ಹಾಗೂ ಇತರ ವರ್ತನೆಗಳು ಬೇರೆ ಸಂದೇಶವನ್ನು ಕೊಡದಂತೆ ನೋಡಿಕೊಳ್ಳಿ. ನಿಮ್ಮಲ್ಲಿ ಕೆಲವರಿಗೆ ಈ ದಿನ ಕೈಗೆ ಸಣ್ಣ- ಪುಟ್ಟದ್ದಾದರೂ ಪೆಟ್ಟಾಗುವ ಸಾಧ್ಯತೆ ಇದೆ, ಜಾಗ್ರತೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸ್ನೇಹಿತರ ಬಲವಂತಕ್ಕಾಗಿಯೇ ಈ ದಿನ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಆದರೂ ಇದು ಒಂದು ಬಗೆಯಲ್ಲಿ ನಿಮಗೆ ಖುಷಿ ಕೊಡುತ್ತದೆ. ನಿಮ್ಮಲ್ಲಿ ಕೆಲವರು ದಿಢೀರನೆ ಪ್ರಯಾಣ ಮಾಡಬೇಕಾಗಬಹುದು. ಯಾವುದೇ ಪೂರ್ವ ಸಿದ್ಧತೆಗೆ ಕೂಡ ಅವಕಾಶ ಸಿಗುವುದಿಲ್ಲ. ಮನೆಯಲ್ಲಿ ಅಥವಾ ಸ್ವಂತ ಕಚೇರಿಯಲ್ಲಿ ಇರುವಂಥ ಹಳೇ ಪೀಠೋಪಕರಣಗಳು ಅಥವಾ ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಈಗಿರುವ ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಗಳನ್ನು ವಿಸ್ತರಿಸಿಕೊಳ್ಳುವುದಕ್ಕೆ ಉತ್ತಮ ವೇದಿಕೆ ದೊರೆಯಲಿದೆ. ಪಾರ್ಟಿಗಳು- ಗೆಟ್ ಟು ಗೆದರ್ ಗಳಿಗೆ ಆಹ್ವಾನ ಬರಲಿದೆ. ವಿದೇಶಗಳಿಗೆ ಕಾರ್ಯ ನಿರ್ವಹಿಸುವವರಿಗೆ ಉದ್ಯೋಗ ಸ್ಥಳದಲ್ಲಿ ಬಡ್ತಿ ದೊರೆಯಬಹುದು. ಹೊಸ ಮನೆ ಖರೀದಿಸುವ ಯೋಗ ಸಹ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಸ್ನೇಹಿತರ ಜತೆಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ನಿಮಗೆ ಇದೆ. ನಿಮಗೆ ಗೊತ್ತಿರುವ ವಿದ್ಯೆ ಅಥವಾ ನಿಮ್ಮ ಬಳಿ ಇರುವಂಥ ಪ್ರತಿಭೆಗೆ ಇತರರು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಕೆಲವು ದುಬಾರಿ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ಯಾವುದಕ್ಕೂ ಇರಲಿ ಎಂದುಕೊಂಡು ನೀವು ತೆಗೆದುಕೊಂಡಿದ್ದ ಮುಂಜಾಗ್ರತೆ ಕ್ರಮದಿಂದಾಗಿ ದೊಡ್ಡ ನಷ್ಟದಿಂದ ಪಾರಾಗಲಿದ್ದೀರಿ. ಚಿನ್ನ- ಬೆಳ್ಳಿ ಒಡವೆಗಳನ್ನು ನಿಮ್ಮ ಪ್ರೀತಿಪಾತ್ರರಿಗೆ ಕೊಡಿಸುವಂಥ ಯೋಗ ಇದೆ. ಈ ಹಿಂದೆ ಕೈ ಬಿಟ್ಟು ಹೋಗಿದ್ದ ಅವಕಾಶವೊಂದು ಮತ್ತೆ ಹುಡುಕಿಕೊಂಡು ಬರಲಿವೆ. ಹಣಕಾಸಿನ ವಿಚಾರಕ್ಕಾಗಿಯೇ ನಿಂತು ಹೋಗಿದ್ದ ಕೆಲವ ಪ್ರಾಜೆಕ್ಟ್ ಗಳು ಮತ್ತೆ ಟೇಕ್ ಆಫ್ ಆಗುವ ಸೂಚನೆಗಳು ದೊರೆಯಲಿವೆ. ನೀವು ಮುಂದುವರಿಯಿರಿ, ನಿಮಗೆ ಬೇಕಾದ ಸಂಪನ್ಮೂಲದ ವ್ಯವಸ್ಥೆಯನ್ನು ನಾವು ಮಾಡಿಕೊಡುತ್ತೇವೆ ಎಂದು ಕೆಲವರು ಹೇಳಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿರ್ಭಯವಾಗಿ ನಿಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳುವುದಕ್ಕೆ ಸಾಧ್ಯವಾಗದೆ ಪೇಚಾಡಿಕೊಳ್ಳುವಂತಾಗುತ್ತದೆ. ಆದಾಯವನ್ನು ಜಾಸ್ತಿ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಉದ್ಯೋದ ಜತೆಗೆ ಕೆಲವು ವ್ಯವಹಾರಗಳನ್ನು ಆರಂಭಿಸುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ನಿಮ್ಮ ಮನಸ್ಸಿಗೆ ಒಪ್ಪುವಂತೆ ಕೆಲವು ವಸ್ತುಗಳನ್ನು ಖರೀದಿಸುವುದಕ್ಕೆ ಸಾಲವಾದರೂ ಪರವಾಗಿಲ್ಲ ಎಂದುಕೊಳ್ಳಲಿದ್ದೀರಿ. ಭಾವನಾತ್ಮಕವಾಗಿ ಬಹಳ ಹತ್ತಿರ ಆಗುವಂಥ ವ್ಯಕ್ತಿಯೊಬ್ಬರನ್ನು ಈ ದಿನ ಭೇಟಿ ಆಗಲಿದ್ದೀರಿ. ಈ ಸ್ನೇಹವು ಬಹಳ ಸುಧೀರ್ಘ ಅವಧಿಗೆ ಮುಂದುವರಿಯಲಿದೆ. ಕಷ್ಟಪಟ್ಟು ನೀವು ಗಳಿಸಿಕೊಂಡ ನೆಟ್ ವರ್ಕ್, ಕಾಂಟ್ಯಾಕ್ಟ್ ಗಳ ಪ್ರಯೋಜನ ದೊರೆಯಲಿದ್ದು, ಉದ್ಯೋಗ ಬದಲಾವಣೆಗಾಗಿ ಪ್ರಯತ್ನವನ್ನು ಮಾಡುತ್ತಿರುವವರಿಗೆ ದೊಡ್ಡ ಮಟ್ಟದಲ್ಲಿ ಇದು ಸಹಾಯಕ್ಕೆ ಬರಲಿದೆ. ನಿಮ್ಮ ಬಳಿಗೆ ತರುವಂಥ ಪ್ರಸ್ತಾವಗಳನ್ನು ತುಂಬ ಎಚ್ಚರಿಕೆಯಿಂದ ಅಳೆದು- ತೂಗಿ ನೋಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮಗೆ ಈ ತನಕ ಗಮನಕ್ಕೆ ಬಾರದೆ ಉಳಿದಿದ್ದ ಹಲವು ವಿಷಯಗಳು ತಿಳಿದುಬರಲಿದೆ. ಕೌಟುಂಬಿಕವಾಗಿ ತುಂಬ ಮುಖ್ಯವಾದ ಜವಾಬ್ದಾರಿಯನ್ನು ನೀವಾಗಿಯೇ ವಹಿಸಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಈಗಾಗಲೇ ಸೈಟು ಅಥವಾ ಮನೆ ಇರುವಂಥವರು ಬಾಡಿಗೆ ಆದಾಯ ಬರುವ ನಿಟ್ಟಿನಲ್ಲಿ ಬೇಕಾದಂಥ ಪ್ರಯತ್ನ ಶುರು ಮಾಡಲಿದ್ದೀರಿ. ಇನ್ನು ನಿಮ್ಮ ಆರೋಗ್ಯ ವಿಚಾರಕ್ಕೆ ಕೆಲವು ಖರ್ಚುಗಳನ್ನು ಮಾಡಲಿದ್ದೀರಿ. ಜಿಮ್ ಗೆ ಬೇಕಾದಂಥ ಸಲಕರಣೆಗಳನ್ನು ಖರೀದಿ ಮಾಡಬೇಕು ಎಂದುಕೊಳ್ಳಬಹುದು. ಅಥವಾ ಯೋಗ, ಧ್ಯಾನ ಅಥವಾ ಪ್ರಾಣಾಯಾಮ ಇಂಥವುಗಳಿಗೆ ಸೇರಿಕೊಳ್ಳುವುದಕ್ಕೆ ಮನಸ್ಸು ಮಾಡಲಿದ್ದೀರಿ. ಇನ್ನು ನಿಮ್ಮಲ್ಲಿ ವೃತ್ತಿಪರವಾದ ಲೇಖಕರು ಇದ್ದಲ್ಲಿ ನಿಮಗೆ ಹೆಮ್ಮೆ ಎನಿಸುವಷ್ಟು ಸಂಖ್ಯೆಯಲ್ಲಿ ನೀವು ಬರೆದಂಥ ಪುಸ್ತಕಗಳ ಮಾರಾಟ ಆಗುತ್ತಿದೆ ಎಂಬ ಸುದ್ದಿ ಕಿವಿಗೆ ಬೀಳಲಿದ್ದು, ಇದರಿಂದ ಹೆಮ್ಮೆ ಹಾಗೂ ಆದಾಯ ಹೆಚ್ಚಳ ಎರಡೂ ಆಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಅನಿರೀಕ್ಷಿತವಾಗಿ ಸಂತಸದ ಕ್ಷಣಗಳನ್ನು ಕಳೆಯಲಿದ್ದೀರಿ. ಪುಷ್ಕಳವಾದ ಭೋಜನ, ಸಿಹಿ ತಿನಿಸುಗಳು, ನಿಮಗೇ ಇದು ಸಾರ್ಥಕವಾದ ಕ್ಷಣಗಳು ಎಂದೆನಿಸುವಂಥ ಬೆಳವಣಿಗೆಗಳು ಆಗಲಿವೆ. ನಿಮ್ಮಲ್ಲಿ ಕೆಲವರಿಗೆ ಕೈ ಕೆಳಗೆ ಕೆಲಸ ಮಾಡುವ ಸಹೋದ್ಯೋಗಿಗಳು ಉಡುಗೊರೆಗಳನ್ನು ನೀಡಬಹುದು. ಈ ಹಿಂದೆ ನೀವು ತೆಗೆದುಕೊಂಡ ತೀರ್ಮಾನಗಳು, ಇತರರಿಗೆ ತಲೆ ಮೇಲೆ ಹಾಕಿಕೊಂಡ ರಿಸ್ಕ್ ಇವೆಲ್ಲಕ್ಕೂ ನಿಮಗೆ ರಿಟರ್ನ್ಸ್ ದೊರೆಯುವ ದಿನ ಇದಾಗಿರುತ್ತದೆ. ನಿಮ್ಮ ಆದ್ಯತೆಗಳು ಸಹ ಬದಲಾಗಲಿದೆ. ಮನೆಗೆ ಕೆಲವು ವಸ್ತುಗಳನ್ನು ಖರೀದಿ ಮಾಡಬೇಕು ಎಂದು ಆಲೋಚನೆ ಮಾಡಲಿದ್ದೀರಿ. ಮುಖ್ಯವಾಗಿ ನಿಮ್ಮ ಸೋಷಿಯಲ್ ಸ್ಟೇಟಸ್ ಹೆಚ್ಚಾಗುವಂಥ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಮಕ್ಕಳ ಸಲುವಾಗಿ ಹೊಸ ಬಟ್ಟೆಗಳನ್ನು ಖರೀದಿಸಲಿದ್ದೀರಿ. ದೇವರ ಪೂಜಾ ಸಾಮಗ್ರಿಗಳನ್ನು ಸಹ ಕೊಳ್ಳುವಂಥ ಯೋಗ ಕಂಡು ಬರುತ್ತಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿರ್ವಂಚನೆಯಿಂದ ನಡೆದುಕೊಳ್ಳುತ್ತಾರೆ ಎಂದು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ವ್ಯಕ್ತಿಗಳಲ್ಲಿನ ವರ್ತನೆಯಲ್ಲಿ ಆಗುವ ಬದಲಾವಣೆ ಬಹಳ ಬೇಸರ ಉಂಟು ಮಾಡಲಿದೆ. ಮೊದಮೊದಲಿಗೆ ನೀವು ಹೇಳಿದಂತೆಯೇ ಆಗಲಿ, ಅಂದುಕೊಂಡ ಬೆಲೆಗೆ ಮಾಡಿಕೊಡ್ತೀವಿ, ಹೇಳಿದ ಸಮಯದೊಳಗೆ ಎಲ್ಲವೂ ಮುಗಿಯುತ್ತದೆ ಎಂದೆಲ್ಲ ಮಾತನಾಡುತ್ತಾ ಬಂದವರು ಏಕಾಏಕಿ ತಮ್ಮ ವರಸೆಯನ್ನೇ ಬದಲಾಯಿಸಿ ಬಿಡುತ್ತಾರೆ. ಅವತ್ತಿಗೇನೋ ಹೇಳಿದೆ, ಆದರೆ ಈಗೆಲ್ಲವೂ ಬದಲಾಗಿದೆ. ಆದ್ದರಿಂದ ಆ ಮೊತ್ತದಲ್ಲಿ ಸಾಧ್ಯವಿಲ್ಲ, ಆ ಸಮಯದೊಳಗೆ ಆಗುವುದಿಲ್ಲ ಹೀಗೆ ಮಾತನ್ನು ಆರಂಭಿಸುತ್ತಾರೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಕಿರಿಕಿರಿ ಆಗಲಿದೆ. ನಿಮ್ಮಲ್ಲಿ ಕೆಲವರು ಈಗಿರುವ ವಿಭಾಗದಿಂದ ಬೇರೆ ಕಡೆಗೆ ವರ್ಗಾವಣೆಯನ್ನೇ ಮಾಡಿಸಿಕೊಳ್ಳುವುದಕ್ಕೆ ಆಲೋಚಿಸಬಹುದು. ಅಥವಾ ಉದ್ಯೋಗವನ್ನೇ ಬದಲಾಯಿಸೋಣ ಅಂದುಕೊಳ್ಳಬಹುದು.

ಲೇಖನ- ಎನ್‌.ಕೆ.ಸ್ವಾತಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್