Bharani Nakshatra: ಭರಣಿಯಲ್ಲಿ ನೀವು ಜನಿಸಿದ್ದರೆ ನೀವು ಹೀಗಿರುವಿರಿ..
ಈ ನಕ್ಷತ್ರದ ದೇವತೆ ಯಮ. ಹಾಗಾಗಿ ಶುಭಕಾರ್ಯಗಳಿಗೆ ಈ ನಕ್ಷತ್ರದ ದಿನ ಶುಭವಲ್ಲ ಎನ್ನುತ್ತಾರೆ. ಈ ನಕ್ಷತ್ರಕ್ಕೆ ಅಪಭರಣೀ ಎನ್ನುವುದು ಪ್ರಾಚೀನ ಹೆಸರು. ನೆಲ್ಲಿ ಮರ ಭರಣೀ ನಕ್ಷತ್ರದ ವೃಕ್ಷವಾಗಿದೆ. ಈ ರಾಶಿಯಲ್ಲಿ ಜನಿಸಿದವರು ಈ ಕೆಳಗಿನ ಗುಣಗಳಿಂದ ಇರುವರು.
ಇಪ್ಪತ್ತೇಳು ನಕ್ಷತ್ರಗಳಲ್ಲಿ ಭರಣೀ ಎರಡನೇ ನಕ್ಷತ್ರ. ಇದು ಮೇಷ ರಾಶಿಯಾಗಿಯೇ ಪೂರ್ಣವಾಗಿ ಬರುತ್ತದೆ. ಇದು ಮೂರ ನಕ್ಷತ್ರಗಳ ಗುಚ್ಛವೆಂದು ತಾರಾವಿದರು ಹೇಳುತ್ತಾರೆ. ಈ ನಕ್ಷತ್ರದ ದೇವತೆ ಯಮ. ಹಾಗಾಗಿ ಶುಭಕಾರ್ಯಗಳಿಗೆ ಈ ನಕ್ಷತ್ರದ ದಿನ ಶುಭವಲ್ಲ ಎನ್ನುತ್ತಾರೆ. ಈ ನಕ್ಷತ್ರಕ್ಕೆ ಅಪಭರಣೀ ಎನ್ನುವುದು ಪ್ರಾಚೀನ ಹೆಸರು. ನೆಲ್ಲಿ ಮರ ಭರಣೀ ನಕ್ಷತ್ರದ ವೃಕ್ಷವಾಗಿದೆ. ಈ ರಾಶಿಯಲ್ಲಿ ಜನಿಸಿದವರು ಈ ಕೆಳಗಿನ ಗುಣಗಳಿಂದ ಇರುವರು.
ಅಪಕೀರ್ತಿ :
ಈ ನಕ್ಷತ್ರದಲ್ಲಿ ಜನಿಸಿದವರಿಗೆ ಯಾವಾಗಲೂ ಅಪಕೀರ್ತಿಗಳು ಬರುತ್ತಲೇ ಇರುತ್ತವೆ. ಎಂತಹ ಒಳ್ಳೆಯ ಕೆಲಸವನ್ನೇ ಮಾಡಿದರೂ ಅಲ್ಲಿ ಒಂದು ಅಪಕೀರ್ತಿ ಯಾರಿಂದಲಾದರೂ ಬರುವುದು.
ಸಂತೋಷದಿಂದ ಕಾಲಹರಣ :
ಯಾವಾಗಲೂ ಸಂತೋಷದಿಂದ ಇರಬೇಕು ಎನ್ನುವುದು ಇವರ ತತ್ತ್ವ. ಹಾಗಾಗಿ ಏನಾದರೂ ವಿನೋದದ ಕಾರ್ಯ ಅಥವಾ ವಿನೋದದ ಮಾತನ್ನು ಆಡುತ್ತಾರೆ.
ನೀರಿನಿಂದ ಭಯ :
ಇವರು ನೀರಿನಿಂದ ಭಯಪಡುತ್ತಾರೆ. ಅಂದರೆ ನದಿ, ಸರೋವರ, ಕೆರೆ ಮುಂತಾದ ಕಡೆಗಳಲ್ಲಿ ಭಯವಿರುವುದು. ನೀರಿನಲ್ಲಿ ಇಳಿಯಲಾರರು. ಅಲ್ಲಿಂದ ದೂರವಿರುತ್ತಾರೆ.
ಚಪಲತೆ :
ಇವರಲ್ಲಿ ಕ್ಷಣಕ್ಕೊಂದು ಆಸೆಗಳು ಹುಟ್ಟಿಕೊಳ್ಳುತ್ತದೆ. ಒಂದು ಕಾರ್ಯವನ್ನು ಹೇಗೆಲ್ಲ ಮಾಡಬಹುದು ಎನ್ನುವುದನ್ನು ನೋಡುತ್ತಲೇ ಇರುತ್ತಾರೆ. ಎಲ್ಲವುದನ್ನು ಪಡೆಯುವ ಆಸೆ ಇರುವುದು.
ಪ್ರಾಣಿಪ್ರಿಯ :
ಪ್ರಾಣಿಗಳನ್ನು ಕಂಡರೆ ಪ್ರೀತಿ ಜಾಸ್ತಿ. ಪ್ರಾಣಿಗಳನ್ನು ಸಾಕುತ್ತಾರೆ ಮತ್ತು ಯಾವುದೇ ಪ್ರಾಣಿಗಾದರೂ ತನ್ನ ಆಹಾರವನ್ನು ಕೊಡುತ್ತಾರೆ. ಪ್ರಾಣಿಗಳು ಸಂತೋಷವಾಗಿ ಇರುವಂತೆ ನೋಡಿಕೊಳ್ಳುತ್ತಾರೆ.
ಇದನ್ನೂ ಓದಿ: ಭಾದ್ರಪದ ಪಕ್ಷ ಮಾಸದಲ್ಲಿ ಇಂದಿರಾ ಏಕಾದಶಿ ಯಾವಾಗ? ಇಂದಿರಾ ಏಕಾದಶಿ ವ್ರತದ ಕರುಣಾಜನಕ ಕಥೆ ತಿಳಿಯಿರಿ
ದೃಢ ನಿಶ್ಚಯ :
ಒಂದು ಕಾರ್ಯವನ್ನು ಮಾಡಬೇಕು ಎಂದುಕೊಂಡರೆ ಅದನ್ನು ಮತ್ತೆ ಮತ್ತೆ ಬದಲಾವಣೆ ಮಾಡಲಾರರು. ಮನಸ್ಸಿಗೆ ಬರುವುದು ನಿಧಾನವಾದರೂ ಬಂದ ಅನಂತರ ಅದು ದೃಢವೇ ಆಗುವುದು.
ಸತ್ಯವಾದ ಮಾತು :
ಸತ್ಯವನ್ನೇ ಹೇಳುವುದು ಇವರ ಸ್ವಭಾವವಾದರೂ ಕೆಲವೊಮ್ಮೆ ಮುಚ್ಚಿಟ್ಟ ಸತ್ಯವೂ ಗೊತ್ತಾಗುವುದು. ಅಪ್ರಿಯವಾದ ಸತ್ಯವನ್ನು ಹೇಳಲು ಇಷ್ಟವಾಗದು.
ದಕ್ಷ :
ಯಾವ ಕೆಲಸವನ್ನು ಕೊಟ್ಟರೂ ಅದನ್ನು ಸರಿಯಾಗಿ ನಿರ್ವಹಿಸುವ ಕೌಶಲ, ಬುದ್ಧಿಶಕ್ತಿ ಇರುವುದು. ಎಲ್ಲವನ್ನೂ ಎಲ್ಲರನ್ನೂ ನಿಭಾಯಿಸಿಕೊಂಡು ಹೋಗುವರು.
ಇವು ಭರಣೀ ನಕ್ಷತ್ರದಲ್ಲಿ ಜನಿಸಿದವರ ಗುಣಗಳು. ಎಲ್ಲವೂ ಎಲ್ಲರಲ್ಲಿಯೂ ಸಂಪೂರ್ಣವಾಗಿ ಇರದೇ ಇದ್ದರೂ ಕೆಲವು ಅಂಶಗಳನ್ನು ಕಾಣಬಹುದು.
-ಲೋಹಿತ ಹೆಬ್ಬಾರ್ – 8762924271