Numerology: ಯಾವುದೇ ತಿಂಗಳಿನ 5, 14, 23ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?

| Updated By: Skanda

Updated on: Jul 02, 2021 | 6:50 AM

ಯಾವುದೇ ತಿಂಗಳಿನ 5, 14 ಅಥವಾ 23ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಎಂಬ ಬಗ್ಗೆ ನ್ಯೂಮರಾಲಜಿ ಪ್ರಕಾರವಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ.

Numerology: ಯಾವುದೇ ತಿಂಗಳಿನ 5, 14, 23ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?
ಪ್ರಾತಿನಿಧಿಕ ಚಿತ್ರ
Follow us on

ಯಾವುದೇ ತಿಂಗಳಿನ 5, 14, 23ನೇ ತಾರೀಕಿನಂದು ಹುಟ್ಟಿದವರ ಜನ್ಮಸಂಖ್ಯೆ 5 ಆಗುತ್ತದೆ. ಈ ದಿನಗಳಂದು ಹುಟ್ಟಿದವರ ಅಧಿಪತಿ ಬುಧ ಗ್ರಹ ಆಗುತ್ತದೆ. ಇವರಿಗೆ ಎರಡು ಬಗೆ ಸ್ವಭಾವ ಇರುತ್ತದೆ. ವ್ಯಕ್ತಿತ್ವದಲ್ಲಿ ಅದು ತುಂಬ ಸ್ಪಷ್ಟವಾಗಿ ಗೋಚರಿಸುತ್ತದೆ. ಈಗ ಒಂದು ರೀತಿ ಇದ್ದವರು ಮತ್ತೊಂದು ಕ್ಷಣದಲ್ಲಿ ಬೇರೊಂದು ರೀತಿ ಆಗಿಬಿಡುತ್ತಾರೆ. ಮುಂದೆ ಹೀಗಾಗಬಹುದು ಎಂಬ ಬಗ್ಗೆ ಸುಪ್ತ ಮನಸ್ಸು ಇವರಿಗೆ ಸದಾ ಸಂದೇಶಗಳನ್ನು ಕಳುಹಿಸುತ್ತದೆ. ನಗುನಗುತ್ತಾ ಕಾಣಿಸಿಕೊಳ್ಳುವ ಇವರ ಮನಸ್ಸಿನಲ್ಲಿ ಸದಾ ಒಂದಿಲ್ಲೊಂದು ಲೆಕ್ಕಾಚಾರ ಓಡುತ್ತಲೇ ಇರುತ್ತದೆ. ಸಂಖ್ಯೆ 5ರ ಜನರಿಗೆ ಮಾಡುವ ಕೆಲಸದಲ್ಲಿ ಥ್ರಿಲ್ ಇರಬೇಕು. ಬದಲಾವಣೆಗಳನ್ನು ಬಯಸುತ್ತಾರೆ. ಪ್ರಯಾಣ ಮಾಡುವುದೆಂದರೆ ಅಚ್ಚುಮೆಚ್ಚಾಗಿರುತ್ತದೆ. ಆದರೆ ವಿಪರೀತ ಚಂಚಲಚಿತ್ತ ಇರುತ್ತದೆ. ಭಾವನಾತ್ಮಕವಾಗಿ ಯೋಚಿಸಿ, ನಿರ್ಧಾರ ತೆಗೆದುಕೊಳ್ಳುತ್ತಾರೆ. ನಂತರ ಪಶ್ಚಾತಾಪ ಪಡುತ್ತಾರೆ. ಸಿಟ್ಟು, ಸೆಡವು ಹೊರಹಾಕುತ್ತಾರೆ. ಆದರೆ ಒಂದಾದ ಮೇಲೆ ಒಂದರಂತೆ ಹಲವು ವಿಷಯಗಳ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ.

ಇದರರ್ಥ ಏನೆಂದರೆ, ಒಂದು ಪ್ರಾಜೆಕ್ಟ್ ಅಥವಾ ಒಂದು ವಿಷಯದಲ್ಲಿ ಬಹಳ ಸಮಯ ಇವರು ಉಳಿಯುವುದು ಕಷ್ಟ. ಇವರು ಧಾರ್ಮಿಕ ವ್ಯಕ್ತಿಗಳು. ಎಲ್ಲ ಬಗೆಯ ಜನರನ್ನೂ ಗೌರವದಿಂದ ಕಾಣುತ್ತಾರೆ. ನೈತಿಕತೆ ವಿಚಾರಕ್ಕೆ ಬಂದಾಗ ಕಠಿಣವಾಗಿರುತ್ತಾರೆ.ತುಂಬ ಕ್ರಿಯೇಟಿವ್ ಆಲೋಚನೆಯುಳ್ಳ ಸಂಖ್ಯೆ 5ರ ಜನರು ಹತ್ತರಲ್ಲಿ ಹನ್ನೊಂದು ಅನ್ನಿಸಿಕೊಳ್ಳುವಂಥವರಲ್ಲ. ಈ ಕಾರಣದಿಂದ ತಮ್ಮ ವೃತ್ತಿಯಲ್ಲಿ ಬಹಳ ಎತ್ತರಕ್ಕೆ ತಲುಪಿಕೊಳ್ಳುತ್ತಾರೆ. ಶಿಕ್ಷಕರು, ಪ್ರವಾಸೋದ್ಯಮ ಕ್ಷೇತ್ರ, ಮಾಧ್ಯಮ, ವ್ಯಾಪಾರ- ಉದ್ಯಮ, ಸ್ವ ಉದ್ಯೋಗ ಇವರಿಗೆ ಸೂಕ್ತ ಆಗುವಂಥದ್ದು.

ನಗರಕ್ಕಿಂತ ಹೆಚ್ಚಾಗಿ ಪಟ್ಟಣಗಳು, ಹಳ್ಳಿಗಳಲ್ಲಿ ಇರುವುದಕ್ಕೆ ಇವರು ಹೆಚ್ಚು ಇಷ್ಟಪಡುತ್ತಾರೆ. ಆದರೆ ಇವರಿಗೆ ಬದುಕು ರೋಚಕತೆಯಿಂದ ಕೂಡಿರಬೇಕು. ಆ ಕಾರಣಕ್ಕಾಗಿ ತಪ್ಪಾದ ವ್ಯಕ್ತಿಗಳ ಕಡೆಗೆ ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಮತ್ತು ಬರುವಂಥ ಪದಾರ್ಥಗಳನ್ನು ಒಮ್ಮೆ ಪ್ರಯತ್ನ ಮಾಡೋಣ ಅಂತ ಕೂಡ ಆಲೋಚಿಸಬಾರದು. ಸಂಖ್ಯೆ 5ರ ಜನರು ಸಹಜವಾಗಿಯೇ ಜನಪ್ರಿಯ ವ್ಯಕ್ತಿಗಳಾಗಿ ಬಿಡುತ್ತಾರೆ. ಆ ಕಾರಣಕ್ಕೆ ಇವರಿಗೆ ಸಂಗಾತಿಗಳು ಹೆಚ್ಚು. ಜತೆಗೆ ಎಲ್ಲರ ಜತೆಗೂ ಸಲೀಸಾಗಿ ನಡೆದುಕೊಂಡು ಹೋಗುವ ಸ್ವಭಾವ ಇರುತ್ತದೆ. ಬದುಕಿನಲ್ಲಿ ಏರಿಳಿತಗಳನ್ನು ಕಾಣುವ ಇವರು, ಎಂದಿಗೂ ಆಶಾವಾದವನ್ನು ಕಳೆದುಕೊಳ್ಳುವುದಿಲ್ಲ.

ಗಣಿತ, ಕಲೆಗೆ ಸಂಬಂಧಿಸಿದ ವಿಷಯಗಳಲ್ಲಿ ಆಸಕ್ತಿ ಹೆಚ್ಚಿರುತ್ತದೆ. ಪ್ರತಿಭಾವಂತರು ಹಾಗೂ ಸುಂದರವಾಗಿರುತ್ತಾರೆ. ಇವರು ಮಾತಿನ ವಿಷಯದಲ್ಲಿ ನಿಗಾ ಇರಿಸಿಕೊಳ್ಳಬೇಕು. ಕೆಲವು ಬಾರಿ ಅತಿ ಅನಿಸುವ ಹಾಗೆ ನಡೆದುಕೊಳ್ಳುತ್ತಾರೆ. ಇನ್ನು ಸಂಬಂಧಗಳನ್ನು ನಿರ್ವಹಿಸುವುದು ಇವರಿಗೆ ಕಷ್ಟ. ಏಕೆಂದರೆ, ಇವರೇ ಗ್ಯಾನ ಬಂದ ಗಿರಾಕಿಗಳಂತೆ ಇರುತ್ತಾರೆ. ಇವರ ಮೂಗಿನ ನೇರಕ್ಕೆ ಇರುವುದು ಬಹಳ ಕಷ್ಟದ ಕೆಲಸ ಆಗುತ್ತದೆ. ತಮ್ಮ ಕೆಲಸವನ್ನು ಸಹ ತಮ್ಮ ಮೂಡ್​ ರೀತಿಯಲ್ಲೇ ಬದಲಾಯಿಸುತ್ತಾರೆ. ಅದಕ್ಕೆ ಕಾರಣ ಏನೆಂದರೆ, ಇವರು ಒಂದೇ ಕೆಲಸವನ್ನು ಬಹಳ ಕಾಲ ಮಾಡಲಾರರು. ಆದರೆ ಯಾವ ಕೆಲಸವನ್ನು ಮಾಡುತ್ತಿರುತ್ತಾರೋ ಅದನ್ನು ಶ್ರದ್ಧೆಯಿಟ್ಟು ಮಾಡುತ್ತಾರೆ.

ಇದನ್ನೂ ಓದಿ: Lucky colour: ಜನ್ಮರಾಶಿಗೆ ಅನುಗುಣವಾಗಿ ಯಾರಿಗೆ ಯಾವುದು ಅದೃಷ್ಟದ ಬಣ್ಣ?

ಇದನ್ನೂ ಓದಿ: Numerology: ಯಾವುದೇ ತಿಂಗಳಿನ 2, 20, 29ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೀಗಿರುತ್ತದೆ

(Birth number 5 people nature, characteristics on the basis of numerology)