Capricorn Yearly Horoscope 2024: ಮಕರ ರಾಶಿ ವರ್ಷ ಭವಿಷ್ಯ: ಸಾಡೆ ಸಾಥ್ ನಡೆಯುತ್ತಿದ್ದರೂ ಈ ವರ್ಷ ಸನ್ಮಾನ, ಗೌರವ ನಿರೀಕ್ಷಿಸಬಹುದು

| Updated By: Digi Tech Desk

Updated on: Dec 18, 2023 | 2:11 PM

ಮಕರ ರಾಶಿ ವರ್ಷ ಭವಿಷ್ಯ 2024: ಕಳೆದ 2023ರ ವರ್ಷಕ್ಕಿಂತ 2024ರ ವರ್ಷವು ಭಿನ್ನವಾಗಿದ್ದು, ನಿಮಗೆ ವರ್ಷದ ಮಧ್ಯಾವಧಿಯಿಂದ ಸತ್ಪರಿಣಾಮದ ಫಲವು ಗೊತ್ತಾಗಲಿದೆ.‌ ಗುರುವು ಚತುರ್ಥದಿಂದ ಪಂಚಮಕ್ಕೆ ಬರಲಿದ್ದು ನಿಮ್ಮ ಅಭೀಷ್ಟಗಳು ಸಿದ್ಧಿಯಾಗಲಿದೆ. ವಿದ್ಯಾಭ್ಯಾಸ, ಮಕ್ಕಳ ವಿಚಾರದಲ್ಲಿ ನಿಮಗೆ ಅಭಿವೃದ್ಧಿಯಾಗಲಿದೆ.

Capricorn Yearly Horoscope 2024: ಮಕರ ರಾಶಿ ವರ್ಷ ಭವಿಷ್ಯ: ಸಾಡೆ ಸಾಥ್ ನಡೆಯುತ್ತಿದ್ದರೂ ಈ ವರ್ಷ ಸನ್ಮಾನ, ಗೌರವ ನಿರೀಕ್ಷಿಸಬಹುದು
Capricorn Yearly Horoscope 2024
Follow us on

ಮಕರ ರಾಶಿ 2024ರ ವರ್ಷ ಭವಿಷ್ಯ: 2024ರಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಸನ್ಮಾನ, ಗೌರವವನ್ನು ನೀವು ಪಡೆಯಬಹುದಾಗಿದೆ. ಉನ್ನತ ಸ್ಥಾನವನ್ನು ಪಡೆದುಕೊಳ್ಳಲು ಅವಕಾಶಗಳೂ ಈ ವರ್ಷ ಅಧಿಕವಾಗಿ ಇರಲಿದೆ.

ಮಕರ ರಾಶಿಯವರ ಧನಾಗಮನ:

ಧನಾಧಿಪತಿಯೂ ರಾಶ್ಯಧಿಪತಿಯೂ ಆದ ಶನಿಯು ದ್ವಿತೀಯದಲ್ಲಿ ಇರುವ ಕಾರಣ ಇರುವ ಧನವು ಸ್ಥಿರವಾಗಿರುವುದು. ಹೊಸ ಆದಾಯದ ಕಡೆ ನಿಮ್ಮ ಗಮನ ಕಡಿಮೆ ಇದ್ದೀತು. ಜೊತೆಗೆ ಸಾಡೆ ಸಾಥ್ ನಡೆಯುತ್ತಿರುವ ಕಾರಣ ಎಂತಹ ಬಲವೂ ದುರ್ಬಲವಾಗುವ ಸಾಧ್ಯತೆ ಇದೆ.

ಮಕರ ರಾಶಿಯವರ ಪ್ರೀತಿ ಮತ್ತು ವಿವಾಹ:

ವಿವಾಹಕ್ಕೆ ಈ ವರ್ಷ ಗುರುಬಲವು ಇರಲಿದ್ದು ಅವಕಾಶವನ್ನು ನೋಡಿಕೊಂಡು ವಿವಾಹವನ್ನು ಮಾಡಬಹುದು. ಪ್ರೀತಿಯು ಕಾರಣಾಂತರಗಳಿಂದ ಮುರಿದುಹೋಗುವುದು ಅಥವಾ ಯಾರನ್ನೂ ಪ್ರೀತಿಸುವ ಮನಸ್ಸಾಗದು.

ಮಕರ ರಾಶಿಯವರ ವೃತ್ತಿ:

ಶುಕ್ರನು ವರ್ಷಾರಂಭದಲ್ಲಿ ನಿಮ್ಮ ವೃತ್ತಿಯಲ್ಲಿ ಸ್ಥಿರತೆಯನ್ನು ಕೊಡುವನು. ಮಾರ್ಚ್ ನ ಅಂತ್ಯದಲ್ಲಿ ಉನ್ಮತ ಸ್ಥಾನಮಾನಗಳು ಸಿಗುವುದು.‌ ಅಲ್ಲಿಯವರೆಗೆ ಉಂಟಾದ ತೊಂದರೆಯನ್ನು ನೀವು ನುಂಗಿಕೊಳ್ಳುವ ಸಹನಾಶಕ್ತಿಯನ್ನು ಬೆಳೆಸಿಕೊಳ್ಳುವ ಅಗತ್ಯವಿರುವುದು.

ಮಕರ ರಾಶಿಯವರ ಆರೋಗ್ಯ ಸ್ಥಿತಿ:

ಒಂದಿಲ್ಲೊಂದು ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಜುಲೈ ಹಾಗೂ ಸಪ್ಟೆಂಬರ್ ತಿಂಗಳಲ್ಲಿ ಆರೋಗ್ಯವು ಹದಗೆಟ್ಟೀತು. ವರ್ಷಾರಂಭದಲ್ಲಿಯೂ ಜ್ವರ, ಕಾಲು, ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು.

ಸಾಡೇ ಸಾಥ್ ಶನಿಯ ಅವಧಿಯು ಇದಾದ ಕಾರಣ ಶನಿಸ್ತೋತ್ರವನ್ನು ಹಾಗೂ ಪ್ರತಿ ಶನಿವಾರ ಎಳ್ಳಿನ ದೀಪವನ್ನೂ ದೇವರಿಗೆ ಬೆಳಗಿ.‌ ಹನುಮಾನ್ ಚಾಲೀಸಾ ಪಠಣವನ್ನು ಪ್ರತಿನಿತ್ಯ ತಪ್ಪದೇ ಮಾಡಿ.

ಲೋಹಿತ ಹೆಬ್ಬಾರ್, ಇಡುವಾಣಿ