AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ನಿಮ್ಮ ಜಾತಕದಲ್ಲಿ ಚಂದ್ರನು ಎಲ್ಲಿದ್ದಾನೆ ಪರಿಶೀಲಿಸಿ

ಚಂದ್ರನಿಂದಲೇ ಮನುಷ್ಯನ ವ್ಯಕ್ತಿತ್ವ ನಿರ್ಮಾಣವಾಗುವುದು. ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ ಎನ್ನುವುದು ಹಿರಿಯರ ಮಾತು. ಬಂಧನಕ್ಕೂ ಬಿಡುಗಡೆಗೂ ಮನಸ್ಸೇ ಮೂಲಕಾರಣ. ಇತರಿಂದಲೇ ಜಾತಕರ ರಾಶಿ ಹಾಗೂ ನಕ್ಷತ್ರವನ್ನು ಕಂಡುಕೊಳ್ಳುವುದು.

ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ನಿಮ್ಮ ಜಾತಕದಲ್ಲಿ ಚಂದ್ರನು ಎಲ್ಲಿದ್ದಾನೆ ಪರಿಶೀಲಿಸಿ
ಚಂದ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Jul 10, 2024 | 6:38 AM

Share

ಚಂದ್ರ ನವಗ್ರಹಗಳಲ್ಲಿ ಪ್ರಮುಖ ಸ್ಥಾನದಲ್ಲಿ ಇರುವವ. ಈತನನ್ನು ಮನಃಕಾರಕ ಗ್ರಹ ಎಂಬುದಾಗಿ ತಿಳಿದಿದ್ದಾರೆ. ಚಂದ್ರಮಾ ಮನಸೋ ಜಾತಃ ಎಂದೂ ಹೇಳುತ್ತವೆ. ಬ್ರಹ್ಮನ ಮನಸ್ಸಿನಿಂದ ಜನಿಸಿದವ ಚಂದ್ರ. ಹಾಗಾಗಿ ಆತ ಮನಸ್ಸನ್ನು ಉಂಟುಮಾಡುವವನು. ಈ ಚಂದ್ರನಿಂದಲೇ ಮನುಷ್ಯನ ವ್ಯಕ್ತಿತ್ವ ನಿರ್ಮಾಣವಾಗುವುದು. ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ ಎನ್ನುವುದು ಹಿರಿಯರ ಮಾತು. ಬಂಧನಕ್ಕೂ ಬಿಡುಗಡೆಗೂ ಮನಸ್ಸೇ ಮೂಲಕಾರಣ. ಇತರಿಂದಲೇ ಜಾತಕರ ರಾಶಿ ಹಾಗೂ ನಕ್ಷತ್ರವನ್ನು ಕಂಡುಕೊಳ್ಳುವುದು.

ಚಂದ್ರನು ಎರಡುವರೆ ದಿನಗಳಷ್ಟು ಕಾಲ ಒಂದು ರಾಶಿಯಲ್ಲಿ ಇದ್ದು ಆನಂತರ ಬದಲಾಗುತ್ತಾನೆ. ಅಂದರೆ, ಮೂವತ್ತು ದಿನಗಳನ್ನು ಸೂರ್ಯ ಸುತ್ತ ಸುತ್ತಲು ತೆಗೆದುಕೊಳ್ಳುವನು. ನವಗ್ರಹರಲ್ಲಿ ಅತ್ಯಂತ ವೇಗವಾಗಿ ಚಲಿಸುವ ಗ್ರಹವಿದು. ಅದ್ದರಿಂದ ತಿಂಗಳಲ್ಲಿ ಎಲ್ಲ ರಾಶಿಯವರಿಗೂ ಮಾನಸಿಕ ವ್ಯತ್ಯಾಸಗಳು ಆಗಲು ಕಾರಣ.

ಚಂದ್ರನು ಮೇಷದಲ್ಲಿ ಇದ್ದರೆ ಏನು ಮಾಡುತ್ತಾನೆ. ಅಲ್ಲಿಯೂ ಶತ್ರುಗಳು ಮಿತ್ರರು ಇದ್ದಾರೆ. ಅಷ್ಟುಮಾತ್ರವಲ್ಲ, ಅಂಶಗಳ ಆಧಾರದ ಮೇಲೆ ಚಂದ್ರನ ಫಲವೂ ನಿರ್ಧಾರವಾಗಲಿದೆ. ಕಣ್ಣಿನ ಸುತ್ತ ಕೆಂಬಣ್ಣದ ವರ್ತುಲ, ಬಿಸಿಯಾದ ಆಹಾರವನ್ನು ಸೇವಿಸುವವ. ತರಕಾರಿಗಳನ್ನು ಹೆಚ್ಚು ಸೇವಿಸುವವನಾಗುತ್ತಾನೆ. ಆಹಾರ ಸೇವನೆಯಲ್ಲಿ ಮಿತಿ ಇರಲಿದೆ. ಇವರನ್ನು ಸಂತೋಷ ಪಡಿಸುವುದು ಸುಲಭ. ಯಾವ ಮನಸ್ತಾಪವನ್ನೂ ದೀರ್ಘಾಕಾಲದವರೆಗೆ ಇಟ್ಟುಕೊಳ್ಳುವ ಮನಃಸ್ಥಿತಿ ಇರದು. ಹಾಗಾಗಿ ಬೇಗನೆ ಸಂತೋಷಗೊಳ್ಳುವರು. ಸದಾ ಸಂಚಾರದಲ್ಲಿ ಇರುವವ. ಹೆಚ್ಚು ಆಸೆಯುಳ್ಳವನಾಗುವನು. ತೊಡೆಯ ಭಾಗವು ದುರ್ಬಲವಾಗಿರಲಿದೆ. ಸ್ಥಿರವಾದ ಸಂಪತ್ತು ಉಳ್ಳವನು. ಸಾಹಸ, ಧೈರ್ಯದಿಂದ ಕಾರ್ಯಗಳಿಗೆ ಮುನ್ನುಗ್ಗುವವನು. ಸ್ತ್ರೀಯರಿಗೆ ಪ್ರಿಯನು ಈತ. ಸೇವಾ ಕ್ಷೇತ್ರದಲ್ಲಿ ಮಾಡಲು ಆಸಕ್ತಿ ಉಳ್ಳವನು. ಹಾಳಾದ ಉಗುರುಗಳುಳ್ಳವನು. ತಲೆಯಲ್ಲಿ ಗಾಯದ ಗುರುತು, ಮಾನವನ್ನು ಉಳಿಸಿಕೊಳ್ಳುವರು. ಸಹೋದರರಲ್ಲಿ ಅಣ್ಣನಾಗಿರುವನು. ನೀರು ಕಂಡರೆ ಭಯ. ಎಲ್ಲವನ್ನೂ ಪಡೆಯುವ ಹಂಬಲ. ಕೈಯಲ್ಲಿ ಗುರುತು.

ಇವಿಷ್ಟು ಮೇಷ ರಾಶಿಯಲ್ಲಿ ಚಂದ್ರನಿದ್ದರೆ ಇರುವ ಲಕ್ಷಣ. ಇವುಗಳಲ್ಲಿ ಕೆಲವು ಜನ್ಮದಿಂದಲೇ ಇದ್ದರೂ ಕೆಲವು ಚಂದ್ರನು ಮೇಷದಲ್ಲಿ ಸಂಚರಿಸುವ ಕಾಲದಲ್ಲಿಯೂ ಇರಲಿದೆ. ಅಶ್ವಿನೀ ಮತ್ತು ಭರಣೀ ನಕ್ಷತ್ರಗಳಿಗೆ ಇದರಲ್ಲಿನ ಹೆಚ್ಚಿನ ಅಂಶಗಳು ಅನ್ವಯವಾಗುತ್ತವೆ.

ಪಾಕಿಸ್ತಾನದಲ್ಲಿ ಭಾರೀ ಪ್ರವಾಹ; 116 ಸಾವು, 253 ಜನರಿಗೆ ಗಾಯ
ಪಾಕಿಸ್ತಾನದಲ್ಲಿ ಭಾರೀ ಪ್ರವಾಹ; 116 ಸಾವು, 253 ಜನರಿಗೆ ಗಾಯ
ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್