
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶನಿವಾರ (ಜೂನ್. 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:19 ರಿಂದ 10:56ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:10 ರಿಂದ 03:47ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:05 ರಿಂದ 07:42ರ ವರೆಗೆ.
ಸಿಂಹ ರಾಶಿ: ಇಂದು ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯಲು ಕಷ್ಟವಾಗುವುದು. ನೀವು ಆತ್ಮವಿಶ್ವಾಸವು ಶಕ್ತಿಯಿಂದ ತುಂಬಿರುವಿರಿ. ಬಹಳ ದಿನಗಳ ಅನಂತರ ಹೊರಗಿನ ಸುತ್ತಾಟವು ಹಿತವೆನಿಸುವುದು. ಸಮಯವನ್ನು ಮಾಡಿಕೊಂಡು ತಂದೆ ಹಾಗೂ ತಾಯಿಯರನ್ನು ಭೇಟಿಯಾಗಿ ನೆಮ್ಮದಿ ಕಾಣುವಿರಿ. ಅವರ ಮಾತುಗಳು ನಿಮಗೆ ಸಂಕಟವನ್ನು ತಂದರೂ ಅವರ ಮನಸ್ಸು ಹಗುರಾಗುವುದು. ನಿಯಮಿತ ಕಾರ್ಯಗಳನ್ನು ಮಾಡುತ್ತ ಸಂತೋಷವಾಗಿ ಇರುವಿರಿ. ನಿಮ್ಮ ಮೇಲಿನ ಆರೋಪಕ್ಕೆ ಹುರುಳಿಲ್ಲದೇ ಸ್ತಬ್ಧವಾಗಲಿದೆ. ಅವಕಾಶಗಳನ್ನು ಬಿಟ್ಟುಕೊಡುವುದು ಔದಾರ್ಯವಲ್ಲ, ಆಲಸ್ಯವಾಗುವುದು. ಕೆಲ ದಿನಗಳಿಂದ ನಿಮ್ಮ ಆರೋಗ್ಯ ಹದಗೆಟ್ಟಿದ್ದು, ಮನಸ್ಸೂ ಸರಿಯಾಗಿರದು. ಎಲ್ಲರ ಜೊತೆ ವಾದಕ್ಕಿಳಿಯುವ ಮನಸ್ಸಿನಲ್ಲಿ ಇರುವಿರಿ. ಶಿಸ್ತಿನಿಂದ ಇಂದಿನ ಕಾರ್ಯವನ್ನು ಮಾಡುವಿರಿ. ಮಕ್ಕಳಿಂದ ಅನಾದರವಾಗಬಹುದು. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುವರು. ಬಹಳ ಕೆಲಸವಿದ್ದರೂ ಒತ್ತಡದಲ್ಲಿ ಇರುವಂತೆ ತೋರಸಲಾರಿರಿ.
ಕನ್ಯಾ ರಾಶಿ: ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಸಂತೋಷಿಸುವಿರಿ. ಅವಶ್ಯಕ ವಸ್ತುವನ್ನು ಕಣ್ಮರೆ ಮಾಡಿಕೊಳ್ಳುವಿರಿ. ಇಂದು ಅನುಕೂಲಕರ ಸಮಯ. ಅನಗತ್ಯ ಮೋಜಿನಲ್ಲಿ ಸಮಯ ವ್ಯರ್ಥ ಮಾಡಬಾರದು. ಇಂದಿನ ನಿಮ್ಮ ನಡೆ ಬಹಳ ಗೌಪ್ಯವಾಗಿದ್ದು ನಿಮ್ಮ ಹೆಜ್ಜೆಯನ್ನು ಯಾರೂ ಗುರುತಿಸಲಾರರು. ಕೃಷಿಯು ನಿಮಗೆ ಹಿಡಿಸದ ಕೆಲಸವಾದರೂ ಅದನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾದೀತು. ಸಂಗಾತಿಯ ಮಾನಸಿಕತೆಯನ್ನು ಅರ್ಥಮಾಡಿಕೊಳ್ಳಲಾಗದು. ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ. ಇನ್ನೊಬ್ಬರ ಮಾತಿಗೆ ಕಿವಿಗೊಟ್ಟು ನಿಮ್ಮದನ್ನು ಕಳೆದುಕೊಳ್ಳುವ ಕೆಲಸಕ್ಕೆ ಕೈ ಹಾಕಬೇಡಿ. ಯಾರನ್ನೋ ಮೆಚ್ಚಿಸಲು ಕೆಲಸಮಾಡಬೇಕಾಗುವುದು. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಯಾವುದೇ ಊಹೆಗಳಿಗೆ ಬೆಲೆ ಕೊಡದೇ ಸ್ಪಷ್ಟವಾದುದನ್ನು ನಂಬಿ. ಹಣಕಾಸಿನಲ್ಲಿ ವ್ಯವಹಾರದಲ್ಲಿ ಪಾರದರ್ಶಕತೆ ಇದ್ದಷ್ಟು ಉತ್ತಮ.
ತುಲಾ ರಾಶಿ: ನಿಮ್ಮ ಇಂದಿನ ಕೆಲವು ನಡೆಗಳು ವ್ಯವಹಾರದ ಪ್ರಗತಿಗೆ ಮಾರಕವಾಗುವುದು. ಹೊಸ ಕೆಲಸವನ್ನು ಪ್ರಾರಂಭಿಸುವುದು ನಿಮಗೆ ಸಂತೋಷವನ್ನು ನೀಡುತ್ತದೆಯಾದರೂ ಕ್ರಮಬದ್ಧ ಮಾಡಿಕೊಳ್ಳದಿದ್ದರೆ ಅದೂ ಗೊಂದಲವಾದೀತು. ಇಬ್ಬರ ನಡುವಿನ ಕಲಹದಲ್ಲಿ ತುಪ್ಪವನ್ನು ಸುರಿಯುವ ಕೆಲಸಕ್ಕೆ ಹೋಗಬೇಡಿ. ಕಾಲವು ಕೂಡಿಬಂದಾಗ ಎಲ್ಲವೂ ತನ್ನಿಂದ ತಾನೇ ಆಗುತ್ತದೆ. ನಿಮ್ಮ ಪ್ರಯತ್ನದಿಂದಲೇ ಎಲ್ಲವೂ ಸಿದ್ಧಿಸಬೇಕು ಎನ್ನುವುದು ಮೂರ್ಖತನ. ಜನರೊಡನೆ ಬಾಂಧವ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಅವರ ಸಹಾಯ ಮುಂದೊಂದುದಿನ ಬೇಕಾದೀತು. ನಿಮ್ಮ ಗುರಿಯ ಬಗ್ಗೆ ಅಸ್ಪಷ್ಟತೆ ಇರಲಿ. ದೀರ್ಘಕಾಲದ ವೈರವು ಮುಕ್ತಾಯವಾಗುವುದು. ಮಾತನ್ನು ಚೆನ್ನಾಗಿ ಬಲ್ಲವರಾಗಿದ್ದರು ಕಟುವಾದ ಮಾತುಗಳನ್ನು ಆಡಬೇಡಿ. ಹೊಸ ಉದ್ಯೋಗಿಗಳನ್ನು ನಿಯೋಜಿಸಿಕೊಂಡು ಕಾರ್ಯವನ್ನು ವಿಸ್ತರಿಸಿ ಲಾಭವನ್ನು ಪಡೆಯುವ ದೀರ್ಘಕಾಲದ ಯೋಜನೆಯ ಕನಸನ್ನು ಕಾಣುವಿರಿ. ನೇರವಾಗಿ ಯಾರನ್ನೂ ದೂರುವುದಿಲ್ಲ. ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ: ಇಂದು ಅನವಶ್ಯಕ ಸಮಸ್ಯೆಗಳನ್ನು ಬೇಕೆಂದೇ ಎಳೆದುಕೊಳ್ಳುವಿರಿ. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಆತ್ಮಸ್ಥೈರ್ಯವು ಕುಸಿಯದಂತೆ ಇರಬೇಕಾಗುವುದು. ನಿಮ್ಮನ್ನು ಸಕಾರಾತ್ಮಕವಾಗಿ ಇಟ್ಟುಕೊಂಡು ಮುಂದಾಗಿ. ವೈವಾಹಿಕ ಜೀವನ ಸುಖಮಯವಾಗಿರಲು ನಿಮ್ಮ ಮಾತುಗಳೂ ಮುಖ್ಯ. ಕಳ್ಳರ ಭೀತಿಯು ಕಾಡಬಹುದು. ನಿಮ್ಮನ್ನು ಯಾರಾದರೂ ಮೋಸಗೊಳಿಸಲೂಬಹುದು. ಅನಾರೋಗ್ಯಕ್ಕೆ ಕಾರಣವು ಸಿಗದೇ ವಿವಿಧ ಔಷಧಗಳನ್ನು ಮಾಡುವಿರಿ. ಪ್ರಣಯ ಪ್ರಸಂಗದಲ್ಲಿ ಆಕಸ್ಮಿಕ ತಿರುವು ನಿಮಗೆ ಸಂತೋಷವನ್ನು ತರಬಹುದು. ಬಹಳ ಚಂಚಲವಾದ ಮನಸ್ಸನ್ನು ಶುಭವಾದ ಕಾರ್ಯದಲ್ಲಿ ಜೋಡಿಸಿ. ತಾಳ್ಮೆಯಿಂದ ಇದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ನಿಮ್ಮ ಸಂಕಟವನ್ನು ಹೇಳಿಕೊಂಡರೂ ತೊಂದರೆ, ಸುಮ್ಮನೆ ಇದ್ದರೂ ತೊಂದರೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. ನಿಮ್ಮನ್ನು ನೀವು ಕೆಲಸದ ಮೂಲಕ ಪರಿಚಯಿಸಿಕೊಳ್ಳುವಿರಿ.