Horoscope Today June 22, 2024: ಶನಿವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

2024 ಜೂನ್ 22 ದಿನ ಭವಿಷ್ಯ: ಶನಿವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope Today June 22, 2024: ಶನಿವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ದಿನಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 21, 2024 | 10:20 PM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶನಿವಾರ (ಜೂನ್ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಹುಣ್ಣಿಮೆ, ನಿತ್ಯನಕ್ಷತ್ರ: ಮೂಲಾ, ಯೋಗ: ಶುಕ್ಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:21 ರಿಂದ 10:58ರ ವರೆಗೆ, ಯಮಘಂಡ ಕಾಲ 02:12ರಿಂದ 03:49ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:06ರಿಂದ ಬೆಳಗ್ಗೆ 07:44ರ ವರೆಗೆ.

ಮೇಷ ರಾಶಿ : ನಿಮ್ಮ ನಡವಳಿಕೆಯೇ ಸಮೀಪಕ್ಕೆ ಜನರು ಬರುವಂತೆ ಮಾಡಿದೆ. ಅತಿಯಾದ ಬಳಕೆಯಿಂದ ಸಂಬಂಧಗಳು ಹಳಸಬಹುದು. ನಿಮ್ನ ಸ್ವಂತ ಉದ್ಯೋಗಕ್ಕೆ ವರ್ತಮಾನಕ್ಕೆ ತಕ್ಕಂತೆ ರೂಪವನ್ನು ಬದಲಿಸಿ, ಸತ್ತ್ವನ್ನು ಉಳಿಸಿಕೊಳ್ಳುವುದು ಉತ್ತಮ. ನಿಮಗೆ ಗೊತ್ತಿಲ್ಲದೇ ದೈವವೊಂದು ನಿಮ್ಮನ್ನು ಪ್ರತಿಕೂಲದಿಂದ ಅನುಕೂಲ ವಾತಾವರಣಕ್ಕೆ ಒಯ್ಯಬಹುದು. ಆದರೆ ನಿಮ್ಮ ಪೂರ್ವಾರ್ಜಿತವು ಸರಿಯಾಗಿರಬೇಕು. ಇಂದು ಸ್ವಂತಿಕೆಯಿಂದ ವ್ಯವಹರಿಸುವ ಚಾಣಾಕ್ಷತನ ಅತ್ಯವಶ್ಯಕ. ಕಳೆದುಹೋದುದರ ಬಗ್ಗೆ ನೆನೆಯುವುದು ಬೇಡ. ಪಡೆದುಕೊಳ್ಳುವ ವಿಧಾನದ‌‌ ಕಡೆ ಗಮನಿಸಿ. ಕಛೇರಿಯಲ್ಲಿ ಇಂದು ವಾದಗಳು ನಡೆಯಬಹುದು. ವಿದ್ಯಾರ್ಥಿಗಳಿಗೆ ಸಾಲಬಾಧೆ ತಟ್ಟುವ ಸಾಧ್ಯತೆ ಇದೆ. ಅದನ್ನು ಸರಿ ಮಾಡಿಕೊಳ್ಳುವ ಮಾರ್ಗವೂ ಇದೆ.

ವೃಷಭ ರಾಶಿ : ಇಂದು ನಿಮಗೆ ಕೆಲವು ಕಾರ್ಯಗಳು ವ್ಯರ್ಥವೆನಿಸಬಹುದು. ಒಂದಾದಮೇಲೊಂದರಂತೆ ಬರುವ ಕೆಲಸಗಳು ನಿಮಗೆ ಒತ್ತಡವಾಗಲಿದೆ. ಕ್ಷಣಕಾಲ ಏನನ್ನೂ ಯೋಚಿಸದೇ ಇರಿ.‌ ಸದ್ಯ ಆಲಸ್ಯವೇ ಮೈತುಂಬಿಕೊಂಡಿರುವ ಕಾರಣ ಯಾವ ಅಂಶವೂ ನಿಮ್ಮೊಳಗೆ ಹೋಗದು. ಅತಿಯಾದ ಪ್ರಯಾಣದಿಂದ ಆಯಾಸವಾಗಲಿದೆ. ಅಪರಿಚಿತರ ಜೊತೆ ನಿಮ್ಮ ಮಾತು ಅಲ್ಪವಿರಲಿ. ಯಾರದಾರೂ ಬಂದು ವಿವಾಹವಾಗಲು ಕೇಳಿಕೊಂಡರೆ ಇಲ್ಲವೆನಬೇಡಿ. ಕಾಲವನ್ನು ಹಿಂದಕ್ಕೆ ಕಳುಹಿಸುವ ಪ್ರಯತ್ನ ಬೇಡ. ಯಾರೊಂದಿಗೂ ಮುಕ್ತವಾಗಿ ಮಾತನಾಡಲು ಅವಕಾಶ ಸಿಗದು. ಕೆಲವು ಸನ್ನಿವೇಶವು ನಿಮಗೆ ಇಷ್ಟವಾಗದು. ಕೆಲವು ವಿರೋಧವನ್ನು ನೀವು ಸಹಿಸಿಕೊಳ್ಳಲು ತಯಾರಿರಬೇಕು. ಅದರೂ ಅನಿವಾರ್ಯ ಎನಿಸೀತು. ಸನ್ನಿವೇಶವನ್ನು ಎದುರಿಸುವುದು ಕಷ್ಟವಾಗಲಾರದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ. ಸಮಾಧಾನದ ಚಿತ್ತವು ಅನೇಕ ವಿಚಾರಕ್ಕೆ ಪೂರಕ.

ಮಿಥುನ ರಾಶಿ : ನಿಮ್ಮ ಆಲೋಚನೆಗಳಿಂದ ನಿಮಗೆ ಯೋಗ್ಯ ಸ್ಥಾನವು ಲಭಿಸುವುದು. ನಿರ್ಲಕ್ಷ್ಯವನ್ನು ಮಾಡದೇ ಕೆಲಸಗಳನ್ನು ಮಾಡಿ ಮುಗಿಸಿ. ಹಣವನ್ನು ಹೂಡಿಕೆ ಮಾಡಲು ಮುಂದಾಲೋಚನೆಯನ್ನು ಇಟ್ಟುಕೊಂಡು ಮಾಡಿ. ಮಕ್ಕಳಿಂದ‌ ಸಂತೋಷವನ್ನು ಪಡೆಯುವಿರಿ. ಇಂದು ನೀವು ಯಾರಿಗೋ ಕಾದು ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಭೂಮಿಯ ಖರೀದಿಯ ಬಗ್ಗೆ ಬಂಧುಗಳಿಂದ ಒತ್ತಡ ಬರಬಹುದು. ಕಛೇರಿಯ ಕೆಲಸವೂ ಈ ಕಾರಣದಿಂದ ವಿಳಂಬವಾಗುವುದು. ನಿಮ್ಮ ಸ್ಫೂರ್ತಿಯ ಮಾತುಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾದೀತು. ಶತ್ರುಗಳಿಂದ ತೊಂದರೆ ಇಲ್ಲದಿದ್ದರೂ ನಿಮ್ಮೊಳಗೆ ಇದ್ದಾರೆಂಬ ಭಾವನೆ ಇರಲಿದೆ. ಬೆಳಗಿನ ಜಾವ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ, ನಿಮ್ಮ ಅನೇಕ ಆರೋಗ್ಯದ ಸಮಸ್ಯೆಗಳು ದೂರಾಗಲಿದೆ. ಸೂಕ್ಷ್ಮ ವಿಚಾರಗಳನ್ನು ಪಕ್ಷಪಾತವಿಲ್ಲದೇ ನಿರ್ಣಯಿಸಬೇಕಾಗುವುದು. ಮನೆಯಲ್ಲಿ ಹರ್ಷದ ವಾತಾವರಣ ಇದ್ದು ಬಂಧುಗಳು ನಿಮ್ಮ ಜೊತೆಗಿರುವರು.

ಕರ್ಕ ರಾಶಿ : ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಿಲ್ಲ‌. ಸಂದರ್ಭಕ್ಕೆ ತಕ್ಕಂತೆ ಬದಲಾಗುವುದು. ನಿಮ್ಮ ಅಗತ್ಯದ ಹಣವನ್ನು ಪೂರೈಸಲು ಶ್ರಮಪಡುವಿರಿ. ನಾಳಿನ ಬಗ್ಗೆ ಚಿಂತೆ ನಿಮಗಿರಲಿದೆ. ಪಾಪಪ್ರಜ್ಞೆಯು ನಿಮ್ಮನ್ನು ಕಾಡಿ ಮನಸ್ಸು ದುರ್ಬಲವಾಗಬಹುದು. ಯಾರ ಸ್ಥಾನ, ಬುದ್ಧಿ, ಸ್ಥಳ, ಸಂದರ್ಭ, ವ್ಯಕ್ತಿಗಳನ್ನು ಅಪ್ರಯೋಜಕ ಎಂದು ತಿಳಿಯಬೇಡಿ. ನಿಮಗೆ ಉಪತೋಗವಿಲ್ಲದಿದ್ದರೆ ಮತ್ತಾರಿಗಾದರೂ ಆದಾರು, ಏನನ್ನಾದರೂ ಸಾಧಿಸಿಯಾರು. ಹಣೆಬರಹವನ್ನು ಯಾರೂ ತಿದ್ದಲಾಗದು ಎಂದು ನಂಬಿ ಕುಳಿತಿರಬೇಡಿ. ನಿಮ್ಮ ಪ್ರಯತ್ನವನ್ನು ಮಾಡಿ. ಸಾಲವನ್ನು ತೀರಿಸಲು ತುರ್ತಾಗಿ ಓಡಾಡಬೇಕಾದೀತು. ಅಸ್ಪಷ್ಟವಾದ ವಿಚಾರಕ್ಕೆ ಕೈ ಹಾಕಬೇಡಿ. ಸಂಗಾತಿಯು ನಿಮ್ಮ ಬಗ್ಗೆ ತವರಿನಲ್ಲಿ ದೂರು ನೀಡಬಹುದು. ಉಗುರಿನಲ್ಲಿ ಆಗುವ ಕೆಲಸಕ್ಕೆ‌ ಕೊಡಲಿ ತಂದಂತಾಗುವುದು. ಯಾವುದನ್ನೂ ಅತಿಯಾಗಿಸಿಕೊಳ್ಳುವುದು ಬೇಡ. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವು ಇರುವುದು. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ.

ಸಿಂಹ ರಾಶಿ : ಜಟಿಲ ಸಮಸ್ಯೆಗಳನ್ನು ನಿಮ್ಮ ಬಳಿ ಹೇಳಿಕೊಳ್ಳುವರು. ಯಾರನ್ನೋ ಮೆಚ್ಚಿಸಲು ನಿಮ್ಮ ಸಮಯವನ್ನು ವ್ಯಯಿಸಬೇಕಾಗುವುದು. ಅದರಿಂದ ಯಾವ ಲಾಭವೂ ಆಗದು. ಭೂವ್ಯವಹಾರದಲ್ಲಿ ಅನುಕೂಲಕರವಾದ ಸನ್ನಿವೇಶಗಳನ್ನು ಸೃಷ್ಟಿ ಮಾಡಿಕೊಳ್ಳುವಿರಿ. ನಿಮ್ಮಲ್ಲಿ ವಿದ್ಯೆ, ಸಂಪತ್ತು ಎಲ್ಲವೂ ಇದ್ದರೂ ಪ್ರಯೋಜನಕ್ಕೆ ಬಾರದಾಗಿದೆ. ನಿಮ್ಮಿಂದ ಮನೆಯು ಕೆಲವನ್ನು ನಿರೀಕ್ಷಿಸುತ್ತದೆ. ಕೇಳಿಕೊಂಡು ಮಾಡಿ ನೀವೂ ಹೇಳಬೇಕಾದುದನ್ನು ಹೇಳುವಲ್ಲಿ ಹೇಳಿ. ಸುಮ್ಮನೇ ಹರಟೆ ಹೊಡೆದು ಪ್ರಯೋಜನವಗಾದು. ಅಧಿಕಾರದ ನೀವೂ ದುರುಪಯೋಗ ಮಾಡಿಕೊಳ್ಳಬೇಡಿ, ಬೇರೆಯವರು ಮಾಡದಂತೆ ಎಚ್ಚರವಹಿಸಿ. ನೂತನ ವಸ್ತುಗಳ ಖರೀದಿಯಲ್ಲಿ ಮೋಸ ಹೋಗುವಿರಿ. ಕುಟುಂಬದ ಚಿಂತೆಯಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಜೀವನಕ್ಕೆ ಕೆಲವು ಮಾರ್ಪಾಡುಗಳು ಅನಿವಾರ್ಯವಾದೀತು.

ಕನ್ಯಾ ರಾಶಿ : ಇಂದು ಬಿಡಲಾಗದ ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಘಾಸಿಗೊಳಿಸಬಹುದು. ಹಣದ ಆಮಿಷವನ್ನು ತೋರಿಸಿ ನಿಮ್ಮನ್ನು ವಂಚಿಸುವ ಸರಳ ಉಪಾಯವಾಗಿದೆ. ನಿಮ್ಮ ಮಾತುಗಳು ದುರುದ್ದೇಶದಿಂದ ಕೂಡಿದೆ ಎಂದು ನಿಮಗಾಗದವರು ಗುಲ್ಲೆಬ್ಬಿಸಬಹುದು. ಇಂದು ಮನೆಯಲ್ಲಿ ಸಣ್ಣ ಸಣ್ಣ ಖರ್ಚುಗಳಿಗೆ ಧನವನ್ನು ಖರ್ಚು ಮಾಡಬೇಕಾಗಬಹುದು. ಅದೇ ಒಂದು ದೊಡ್ಡ ಮೊತ್ತವಾಗಲಿದೆ. ನಿಮ್ಮ ಜೀವನವನ್ನು ಲಘುವಾಗಿ ಕಾಣುವುದು ಬೇಡ. ಸಮಯ ಬಂದಾಗ ಅದು ತೆರೆದುಕೊಳ್ಳುವ ಸ್ಥಳದಲ್ಲಿ ತೆರೆಯುತ್ತದೆ. ನಿಮಗೇ ಹಾಗಿನ್ನಿಸಿದರೆ ಮುಂದಿನದು ಕಷ್ಟವಾದೀತು. ಪ್ರಕೃತಿಗೆ ವಿರುದ್ಧವಾಗಿರುವ ನಿಮ್ಮ ಯೋಜನೆಯನ್ನು ಬಿಟ್ಟುಬಿಡಿ. ಅಧಿಕಾರಿಗಳನ್ನು ದೂರಿ ಪ್ರಯೋಜನವಿಲ್ಲ. ವ್ಯವಸ್ಥೆ ಇರುವುದೇ ಹೀಗೆ ಎಂಬ ನಿರ್ಧಾರದಿಂದ ಸಮಾಧಾನ ಸಿಗಲಿದೆ. ಸುಮ್ಮನೇ ಖರ್ಚಿಗೊಂದು ದಾರಿಯಾಗುದು. ಸಾಮರ್ಥ್ಯವನ್ನು ಬಳಕೆಯಾಗುವಲ್ಲಿ ಉಪಯೋಗಿಸಿ. ಮಕ್ಕಳನ್ನು ದೂರ ಮಾಡಿಕೊಂಡು ಬೇಸರಗೊಳ್ಳುವಿರಿ.

ತುಲಾ ರಾಶಿ : ದಾನವನ್ನು ಪಡೆಯಲಿಕ್ಕಾಗಿ ಇಂದು ನಿಮ್ಮ ಬಳಿ ಯಾರಾದರೂ ಬರಬಹುದು. ಕೆಲಸದಲ್ಲಿ ಉತ್ಸಾಹ ಕಡಿಮೆ ಎನಿಸಿದಾಗ ಸ್ವಲ್ಪ ಸಮಯ ಬೇರೆ ಕಾರ್ಯದಲ್ಲಿ ಮಗ್ನರಾಗಿ. ನಿಮ್ಮ ಸಾಮಾಜಿಕ ಸೇವೆಗೆ ಗೌರವವು ಸಿಗಲಿದೆ. ರಾಜಕೀಯ ವ್ಯಕ್ತಿಗಳ ಬಲದ ಪ್ರದರ್ಶನವು ಇಂದಾಗಲಿದೆ. ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಮೌಲವಾಗಿರುವುದನ್ನು ಅಭ್ಯಾಸ ಮಾಡಿ. ಅದೇ ನಿಮಗೆ ಶಕ್ತಿಯನ್ನು ತಂದುಕೊಡುವುದು. ಇಂದು ನೀವು ನಕಾರಾತ್ಮಕ ಚಿಂತನೆಯನ್ನು ಬಿಟ್ಟ ಕಾರ್ಯದಲ್ಲಿ ತೊಡಗಿ. ಆರ್ಥಿಕ ಸಮಸ್ಯೆಯನ್ನು ಎದುರಿಸಲು ದೇವರ ಅನುಗ್ರಹದ ಅವಶ್ಯಕತೆ ಇದೆ. ಶ್ರಮವನ್ನು ವ್ಯರ್ಥಮಾಡಬೇಡಿ. ವ್ಯಾಪರಸ್ಥರಿಗೆ ಉತ್ತಮಲಾಭದ ದಿನವಾಗಲಿದೆ. ನಂಬಿಕೆಯನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸಿ‌ ಮಾರುಕಟ್ಟೆಯಿಂದ ಹೆಚ್ಚಿನ ಲಾಭವನ್ನು ಪಡೆಯಲು ಆಗುವುದು. ನಿಮ್ಮ ವ್ಯಾಪಾರ ವಿಸ್ತರಣೆಯನ್ನು ಮಾಡಲು ನಿರ್ಧಾರ ಮಾಡುವಿರಿ. ನಿಮ್ಮ ಅಹಂಕಾರದಿಂದ ನೀವೇ ಕಷ್ಟಪಡಬೇಕಾದೀತು. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ. ಕಳ್ಳರ ಭೀತಿಯು ಕಾಡಬಹುದು.

ವೃಶ್ಚಿಕ ರಾಶಿ : ನೋಡಲಷ್ಟೇ ಸುಂದರವಗಿದ್ದರೆ ಸಾಲದು. ಮನಸ್ಸೂ ಸುಂದರವಾಗಿರಬೇಕು ಕೊಳಕುಗಳು ಇಲ್ಲದಂತೆ. ನಿಮ್ಮ ಇಂದಿನ ಕಾರ್ಯದ ಒತ್ತಡ ನಿಮ್ಮನ್ನು ಒತ್ತಡಕ್ಕೆ, ಉದ್ವೇಗಕ್ಕೆ ಒಯ್ಯಬಹುದು. ಇಂತಹ ಸಂದರ್ಭಗಳಲ್ಲಿ ಸುಮ್ಮನೆ ಸ್ವಲ್ಪ ಹೊತ್ತು ಮಾಡುವ ಕೆಲಸಗಳತ್ತ ಗಮನಹರಿಸಿ. ನೀವು ಮಾಡಲಿರುವ ಕೆಲಸಗಳು ಪರ್ವತದಷ್ಟು ಇರಲಿದೆ. ದಾಂಪತ್ಯದಲ್ಲಿ ಕಲಹವಾಗಿ ಸಂಧಿಯಲ್ಲಿ ಮುಕ್ತಾಯವಾಗುವುದು. ಇಬ್ಬರ ನಡುವೆ ಪ್ರರಿಷ್ಠೆಯು ಬಂದು ಕಲಹಕ್ಕೆ ಕಾರಣವಾಗಲಿದೆ. ಚಂಚಲವಾದ ಮನಸ್ಸಿನಿಂದ ನಿಶ್ಚಿತವಾದ ಗುರಿ ಸಾಧ್ಯವಾಗದು. ನಿರೀಕ್ಷಿತ ಲಾಭದಿಂದ ನಿಮಗೆ ಸಂತೋಷವಾಗುವುದು. ದೂರಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಸರ್ಕಾರಿ ಕೆಲಸಗಳು ಕುಂಟುತ್ತ ಸಾಗುವುದು. ನಿಮ್ಮ ಹಾದಿಯನ್ನು ನೋಡಿಕೊಳ್ಳುವ ಸಮಯವಿದಾಗಿರುತ್ತದೆ. ಯಾರನ್ನೋ ದೂಷಿಸುವುದರಿಂದ ಯಾವ ಲಾಭವೂ ಆಗದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು, ಪ್ರೀತಿ ಪಾತ್ರರನ್ನು ನೀವು ಚೆನ್ನಾಗಿ ನೋಡಿಕೊಳ್ಳುವಿರಿ. ನೆರ ಮನೆಯವರ ವರ್ತನೆಯಿಂದ ನೀವು ಸಿಟ್ಟಾಗುವಿರಿ.

ಧನು ರಾಶಿ : ಹತ್ತರ ಜೊತೆ ಹನ್ನೊಂದು ಎನ್ನುವ ಭಾವ ಬೇಡ. ಉತ್ತಮ ಯೋಜನೆ ನಿಮ್ಮ ಉನ್ನತಾಧಿಕಾರಕ್ಕೆ ಪೂರಕವಾಗಬಹುದು. ಇಂದು ನೀವು ಹೊಸ‌ ಕೆಲಸವನ್ನು ಆರಂಭಿಸಿದರೆ ಕಾರಣಾಂತರಗಳಿಂದ ಸ್ಥಗಿತಗೊಳ್ಳುವುದು ಅಥವಾ ನಿಧಾನವಾಗಿ ಅಭಿವೃದ್ಧಿಯನ್ನು ಹೊಂದುವುದು. ಎಲ್ಲರ ಸಹಬಾಳ್ವೆಯಿಂದ ಇರುವುದು ಸಾಧ್ಯವಾಗದು. ಯಾವುದೇ ವಿಚಾರಚವನ್ನು ತಲೆಗೆ ಏರಿಸಿದಷ್ಟೂ ತೊಂದರೆಯೇ. ಇಂದು ಮನೆಯಲ್ಲಿ ಮತ್ತು ಕಛೇರಿಯಲ್ಲಿ ನಿಮ್ಮ ಮಾತಿಗೆ ಸಹಮತವಿರಲಿದೆ. ನಿರೀಕ್ಷಿತ ಸಂಪತ್ತು ಕೈ ಸೇರಬಹುದು. ಅಪರೂಪಕ್ಕೆ ಅತಿಥಿಗಳು ಬಂದಕಾರಣ ಮನೆಯಲ್ಲಿ ಸ್ವಲ್ಪ ಒತ್ತಡದ ಸನ್ನಿವೇಶವು ಇರಲಿದೆ. ಸುಲಭವೆಂದು ಕೆಲಸವು ಕಷ್ಟವೆನಿಸಬಹುದು. ಕಾಮಗಾರಿಯ ಬಗ್ಗೆ ಸದ್ಭಾವವಿರದು. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು.

ಮಕರ ರಾಶಿ : ಇಂದು ನಿಮ್ಮ ವ್ಯಾಪಾರದಲ್ಲಿ ಚೇತರಿಕೆ ಕಾಣಿಕೊಂಡರೂ ನೀವು ಯಾವುದೋ ಗಹನವಾದ ಆಲೋಚನೆಯಲ್ಲಿಯೇ ಇರುವಿರಿ.. ಜನರೊಡನೆ ಬಾಂಧವ್ಯವನ್ನು ಚೆನ್ನಾಗಿಸಿಕೊಳ್ಳಿ. ಆತುರಪಟ್ಟು ಅವಗಢಕ್ಕೆ ಸಿಲುಕಬೇಡಿ. ಮಕ್ಕಳಿಂದ ಸಂತೋಷವು ಸಿಗಲಿದೆ. ನಿಮಗೆ ಎಲ್ಲವೂ ತಿಳಿದಿದ್ದರೂ ಬೇಕಾದ ಸಂದರ್ಭದಲ್ಲಿ ಅದು ನೆನಪಾಗದು. ಸ್ವಾಭಿಮಾನದಿಂದ ಬದುಕಲು ಪ್ರಯತ್ನಿಸಿದರೂ ಅದನ್ನು ತಪ್ಪಿಸುವರು. ನೀವು ನಂಬಿದ ವ್ಯಕ್ತಿಗಳಿಂದ ವಿಶ್ವಾಸಘಕ್ಕೆ ಘಾಸಿಯಾಗಬಹುದು. ಉದ್ಯೋಗವು ಸಿಗದೇ ಮಾನಸಿಕವೇದನೆಯನ್ನು ಅನುಭವಿಸುತ್ತಿದ್ದರೆ ಇಂದು ಕೆಲಸ ಸಿಗುವ ಸೂಚನೆ ಬರಲಿದೆ. ವಿವಾದವಾಗುವ ಮಾತುಗಳನ್ನು ಆಡಬೇಡಿ. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು. ದೂರಪ್ರಯಾಣವು ಆಯಾಸವನ್ನು ಕೊಡಬಹುದು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು.

ಕುಂಭ ರಾಶಿ : ಒಂದೇ ಉದ್ದೇಶ ಹೊಂದಿದ ಹಲವರನ್ನು ಭೇಟಿ ಮಾಡುವಿರಿ. ಭರವಸೆಯೇ ನಿಮಗೆ ಭವಿಷ್ಯದ ಬೆಳಕಾಗಲಿದೆ. ಉತ್ತಮರ ಸಹವಾಸ ನಿಮಗೆ ಹೊಸದಾದ ದಿಕ್ಕನ್ನು ತೋರಿಸಬಹುದು. ನಂಬಿಕೆಯನ್ನು ಇಡುವಾಗ ಮುನ್ನೆಚ್ಚರವಿರಲಿ. ಪ್ರಣಯಪ್ರಸಂಗದಲ್ಲಿ ಆಕಸ್ಮಿಕ ತಿರುವುಗಳು ಇರಬಹುದು. ಅಪರಿಚಿತರು ನಿಮ್ಮನ್ನು ವಶಪಡಿಸಿಕೊಳ್ಳಲು ಅನೇಕ ವಿಧವಾದ ಪ್ರಯತ್ನವನ್ನು ಮಾಡುವರು. ಕುಟುಂಬದವರೇ ಆದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವಿರಿ. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುದು. ಯಾವುದನ್ನಾದರೂ ತಪ್ಪಿಸಬೇಕು ಎಂದು ಹೊರಟರೆ ಅದು ಆಗದು. ನಿಷ್ಠೆಯಿಂದ ಇದ್ದರೂ ನಿಮಗೆ ಅಪವಾದಬರಬಹುದು. ಇಂದು ನೀವು ಸಿಡಿದೇಳುವ ಸಂದರ್ಭವು ಬರಬಹುದು. ವೃತ್ತಿಶೀಲರು ತಮ್ಮನ್ನು ಅತಿಮಾನುಷರಂತೆ ತೋರ್ಪಡಿಸುವರು. ನೀವು ಉದ್ಯೋಗವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

ಮೀನ ರಾಶಿ : ನೀವು ಇಂದು ಅಕಾರಣವಾಗಿ ಚಿಂತೆ ಮಾಡುವಿರಿ. ಪೂರ್ಣ ವಿವರಗಳನ್ನು ಪಡೆದು ಕಾರ್ಯಪ್ರವೃತ್ತರಾಗಿ. ಆತುರದಲ್ಲಿ ಮಾಡಿದ ಕಾರ್ಯವನ್ನೇ ಮತ್ತೆ ಮಾಡಬೇಕಾದೀತು. ಉದ್ವೇಗಕ್ಕೆ ಒಳಗಾಗಬಹುದು‌. ಎಲ್ಲವೂ ಖಾಲಿ ಖಾಲಿ ಅನ್ನಿಸಬಹುದು. ಹಣಕಾಸಿನ ಸಮಸ್ಯೆಗಳು ಹೆಚ್ಚಾಗಬಹುದು. ಪ್ರೇಮಾಂಕುರವು ಆಗಬಹುದು. ಇಂದು ಹಿರಿಯ ಹಾಗೂ ಭವಿಷ್ಯಕ್ಕೆ ಬೇಕಾದ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿ ಮಾಡುವಿರಿ. ಸ್ವಂತ ಉದ್ಯೋಗವಾಗಿದ್ದರೆ ಹೆಚ್ಚಿನ ಲಾಭವು ಸಿಗುವುದು ಕೈತಪ್ಪಬಹುದು. ಧಾರ್ಮಿಕ ನಂಬಿಕೆಗಳು ನಿಮ್ಮನ್ನು ದಾರಿ ತಪ್ಪದಂತೆ ನೋಡಿಕೊಳ್ಳುವುದು. ನಿಮ್ಮ ಕೆಲಸದ ಮೇಲೆ ಸ್ವಲ್ಪ ಗಮನವಿರಲಿ‌. ಮನೆಯಲ್ಲಿ ನಡೆಯುವ ಘಟನೆಗಳು ಕುತೂಹಲ ತರಿಸಬಹುದು. ವ್ಯವಹಾರದಲ್ಲಿ ಇಂದು ನಿಮಗೆ ತುಂಬಾ ಒತ್ತಡದ ದಿನವಾಗಿರುತ್ತದೆ. ನಿಮ್ಮ ಹಣವನ್ನು ಬಲಾತ್ಕಾರದಿಂದ ಪಡೆಯಬೇಕಾಗಬಹುದು. ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

Published On - 10:20 pm, Fri, 21 June 24

ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ