AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿ ಭವಿಷ್ಯ; ಅನೇಕ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಜೂ. 24 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿ ಭವಿಷ್ಯ; ಅನೇಕ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ
ದಿನಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jun 24, 2024 | 12:45 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸೋಮವಾರ(ಜೂನ್. 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಐಂದ್ರ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:44 ರಿಂದ 09:21ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:58 ರಿಂದ 12:35ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:12 ರಿಂದ 03:49ರ ವರೆಗೆ.

ಧನು ರಾಶಿ: ಇಂದು ನಿಮ್ಮ ದಾಂಪತ್ಯದ ಬಿರುಕು ನ್ಯಾಯಾಲಯದ ಮೆಟ್ಟಿಲೇರಿಸಲೂಬಹುದು. ಆಸ್ತಿಯ ವಿಚಾರದಲ್ಲಿ ಕಲಹಗಳು ಉಂಟಾಗಬಹುದು. ನಿಮ್ಮ ಬಗ್ಗೆ ಅಪಪ್ರಚಾರಗಳು ಕೇಳಿ ಬರಬಹುದು. ಹಣಕಾಸಿನ ಅಧಿಕಾರಿಗಳು ನಿಮ್ಮ ಆದಾಯದ ಮೂವನ್ನು ವಿಚಾರಿಸಿಯಾರು. ಆಕರ್ಷಣೆಗೆ ಮನಸೋತು ದಾರಿ ಮೋಸ ಹೋಗಬಹುದು. ಆಸ್ತಿಯ ದಾಖಲೆಗಳನ್ನು ನೀವು ನೀಡಬೇಕಾದೀತು. ನಿಮ್ಮ ಗುರಿಯ ಕಡೆಗೆ ಹೆಚ್ಚಿನ ದೃಷ್ಟಿ ಇರಲಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ದೂರದ ಊರಿನಲ್ಲಿ ಅವಕಾಶ ಸಿಕ್ಕರೂ ಹೋಗಲು ಆಗದ ಸ್ಥಿತಿ ಇರುವುದು. ಕೆಲಸದ ಸ್ಥಳದಲ್ಲಿ ನಿಮ್ಮ ವ್ಯವಸ್ಥಾಪಕರ ಜೊತೆ ಉತ್ತಮ ಹೊಂದಾಣಿಕೆಯನ್ನು ಇಟ್ಟುಕೊಂಡಿರುವಿರಿ. ವಂಚಿಸುವ ಯೋಚನೆ ಮಾಡಿದ್ದರೆ ಅದನ್ನು ಮರೆತುಬಿಡಿ. ಎಲ್ಲದಕ್ಕೂ ಯಾರನ್ನಾದರೂ ಕಾರಣವಾಗಿಸುವಿರಿ. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ವಿದ್ಯಾರ್ಥಿಗಳು ಯಾರ ಬೆಂಬಲಕ್ಕೂ ಕಾಯದೇ ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಮುನ್ನುಗ್ಗುವುದು ಸೂಕ್ತ.

ಮಕರ ರಾಶಿ: ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳುವುದು ಔಚಿತ್ಯವಿಲ್ಲ. ಹಣದ ಪ್ರಾಮುಖ್ಯವನ್ನು ತಿಳಿದುಕೊಳ್ಳುವ ಸಮಯವಿಂದು. ನಿಮ್ಮ ವಿದ್ಯುದುಪಕರಣದಿಂದ ನಿಮಗೆ ನಷ್ಟವಾಗಲಿದೆ. ನಿಮ್ಮ ಶತ್ರುಗಳನ್ನು ನೀವು ಸಂಪೂರ್ಣವಾಗಿ ಸೋಲಿಸಿದ್ದೇನೆ ಎಂಬ ಭಾವನೆ ಇರಬಹುದು. ಆದರೆ ನಿಮ್ಮ ಉನ್ನತಿಯನ್ನು ಸಹಿಸದೇ ಮತ್ಯಾರೋ ಶತ್ರುಗಳಾಗುವರು. ಕೃಷಿ ಚಟುವಟಿಕೆಯಲ್ಲಿ ಹೆಚ್ಚು ಪಾಲ್ಗೊಳ್ಳುವಿರಿ. ನಿಮ್ಮ ತೀರ್ಮಾನಕ್ಕೆ ಇತರರ ಬೆಂಬಲವೂ ಸಿಕ್ಕಿ ನಿಮಗೆ ಬಲಬಂದಂತಾಗುವುದು. ಮಕ್ಕಳ ಕಾರಣದಿಂದ ನಿಮಗೆ ನೀವು ತಲೆ ತಗ್ಗಿಸುವಿರಿ. ಬುದ್ಧಿವಾದವನ್ನು ಮಕ್ಕಳಿಗೆ ಹೇಳುವಿರಿ. ಸಾಲಕೊಡುವಾಗ ವಿವೇಚನೆ ಇರಲಿ. ಅತಿಯಾದ ವಿನಯವು ನಿಮ್ಮ ಮೇಲೆ ಅನುಮಾನ‌ವು ಬರುವಂತೆ ಮಾಡುವುದು. ನಿಮ್ಮ ಇಂದಿನ ಸಮಯವನ್ನು ನೀವು ಸದುಪಯೋಗ ಮಾಡಿಕೊಳ್ಳಿ. ನಿಮ್ಮ ಖಾಸಗಿ ತನಕ್ಕೆ ತೊಂದರೆಯಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಪಡೆಯುವಿರಿ. ನಿಮ್ಮ‌ ವಸ್ತುಗಳ ಮೇಲೆ ಅತಿಯಾದ ಮೋಹವು ಇರುವುದು.

ಕುಂಭ ರಾಶಿ: ಸಜ್ಜನರ ಭೇಟಿಯಾಗುವ ಸಾಧ್ಯತೆ ಇದೆ. ಆಪ್ತರ ಜೊತೆ ಉದ್ಯೋಗಕ್ಕೆ ಸಂಬಂಧಿಸಿದ ಸಮಾಲೋಚನೆಯನ್ನು ನಡೆಸುವಿರಿ. ನಿಮ್ಮ ಶತ್ರುಗಳು ನಿಮ್ಮನ್ನು ಸೋಲಿಸಲು ತಯಾರಾಗಿರುವರು. ನಿಮ್ಮ ಬಳಿ ಇರುವ ಕೆಲವು ವಸ್ತುಗಳನ್ನು ಇನ್ನೊಬ್ಬರಿಗೆ ನೀಡುವಿರಿ. ನೀವು ಮಕ್ಕಳ ವೃತ್ತಿಜೀವನದ ಬಗ್ಗೆ ಹೆಚ್ಚು ಆತಂಕಪಡಬೇಕಾದ ಅವಶ್ಯಕತೆ ಇರುವುದಿಲ್ಲ‌. ಮುಳುಗುತ್ತಿರುವವನಿಗೆ ಸಣ್ಣ ಹುಲ್ಲು ಕಡ್ಡಿಯೂ ಆಸರೆಯೇ. ಆತ್ಮವಿಶ್ವಾಸದಿಂದ ನಿಮಗೆ ಇನ್ನಷ್ಟು ಬಲ ಬರಲಿದೆ. ಪ್ರವಾಸದಿಂದ ನಿಮಗೆ ಆಯಾಸವಾಗಲಿದೆ. ಜೋಪಾನಮಾಡಿ ಇಟ್ಟುಕೊಳ್ಳಿ. ಸಾಧಿಸುವ ಛಲವಿದ್ದರೂ ಪರಿಸ್ಥಿತಿ ಅನುಕೂಲವಾಗಿ ಇರದು. ಸದಾ ನಿದ್ರೆ ಮಾಡುವ ಯೋಚನೆ ಇರಲಿದೆ. ನಿಮ್ಮ ಅಂದಾಜು ಮೀರಬಹುದು. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಮಾರಾಟದ ವಿಷಯದಲ್ಲಿ ಹಿನ್ನಡೆಯಾಗಲಿದೆ. ಆಕಸ್ಮಿಕವಾಗಿ ಆರೋಗ್ಯವು ಹದ ತಪ್ಪಬಹುದು. ನಿಮ್ಮನ್ನು ನೀವು ಬದಲಿಸಿಕೊಳ್ಳಬೇಕಾಗುವುದು.

ಮೀನ ರಾಶಿ: ಒತ್ತಡದ ನಡುವೆಯೂ ಕಾರ್ಯನಿರ್ವಹಣೆ ಮಾಡಿದ ಕೌಶಲಕ್ಕೆ ಪ್ರಂಶಸೆಗಳು ಸಿಗಲಿವೆ. ಹಣದ ಸಮಸ್ಯೆಗಳಿಂದ ಮುಕ್ತರಾಗುವಿರಿಸಿ. ಅನೇಕ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ಇಂದು ವಿದ್ಯಾರ್ಥಿಗಳು ದೂರದ ಊರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಲು ಚಿಂತಿಸುವರು. ಕಛೇರಿಯಲ್ಲಿ ಅತಿಯಾದ ಕಾರ್ಯನಿಮಿತ್ತ ನಿಮ್ಮ ಮುಖ್ಯ ಕೆಲಸವನ್ನೇ ಮರಡಯುವಿರಿ. ವ್ಯಾಪಾರಸ್ಥರಿಗೆ ಖ್ಯಾತಿಯೂ ಹಣವೂ ಸಿಗಲಿದೆ. ನಿಮ್ಮ ಧಾರ್ಮಿಕ ಭಾವನೆಗಳಿಗೆ ತೊಂದರೆ ಕೊಡಬಹುದು. ಯಾರಾದರೂ ತೊಂದ ಹೊಸ ಯೋಜನೆಯ ಕೆಲಸವನ್ನು ನೀವು ಪ್ರಾರಂಭಿಸುವಿರಿ. ವೃತ್ತಿಜೀವನದಲ್ಲಿ ಮುಂದುವರಿಯಲು ನೂತನ ಅವಕಾಶಗಳು ನಿಮಗೆ ಸಿಗಲಿವೆ. ಜೀವನದ ಹಾದಿಯಲ್ಲಿ ಹೆಚ್ಚು ಏರಿಳಿತಗಳು ಇರದೇ ಆರಾಮಾಗಿ ಹೋಗುವಿರಿ. ಕೆಲಸವು ಶೀಘ್ರವಾಗಿ ಪೂರ್ಣಗೊಳಿಸಿಕೊಂಡು ನೀವು ಖುಷಿಪಡುವಿರಿ. ಉನ್ನತ ವಿದ್ಯಾಭ್ಯಾಸದ ಪ್ರಯುಕ್ತ ಹೊರಗಡೆ ಇರಲಿರುವಿರಿ. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ.

ಲೋಹಿತ ಹೆಬ್ಬಾರ್ – 8762924271 (what’s app only)

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ