Astrology: ರಾಶಿ ಭವಿಷ್ಯ: ನಿಮ್ಮ ಪ್ರೀತಿಪಾತ್ರರು ನಿಮ್ಮಿಂದ ದೂರವಾಗುವರು
ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.24 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸೋಮವಾರ(ಜೂನ್. 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಐಂದ್ರ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:44 ರಿಂದ 09:21ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:58 ರಿಂದ 12:35ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:12 ರಿಂದ 03:49ರ ವರೆಗೆ.
ಸಿಂಹ ರಾಶಿ: ಇಂದು ಮನೆಯನ್ನು ನೋಡಿಕೊಳ್ಳುವ ಹೊಣೆ ನಿಮಗೆ ಸಿಗಲಿದೆ. ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ. ಅಪವಾದಗಳು ಬರಬಹುದು. ನೀವು ದೊಡ್ಡ ವ್ಯಕ್ತಿಗಳ ಸಹವಾಸವನ್ನು ಮಾಡಿ ಬ್ಯುಸಿನೆಸ್ ಮಾಡಲು ಅವರ ಜೊತೆ ಚರ್ಚಿಸುವಿರಿ. ನಿಮ್ಮ ನಡೆ ಅನುಮಾನವನ್ನು ತರಿಸಬಹುದು. ಕಛೇರಿಯ ವ್ಯವಹಾರವು ಸಾಕೆನಿಸುವಷ್ಟು ಒತ್ತಡ ಬರಬಹುದು. ಭಾವೋದ್ವೇಗದಲ್ಲಿ ಏನನ್ನಾದರೂ ಹೇಳುವಿರಿ. ಸಾಲ ಮಾಡುವ ಸಂದರ್ಭವು ಬಂದರೆ ನಿಮಗೆ ಬೇಕಾದಷ್ಟು ಮಾತ್ರ ಪಡೆಸುಕೊಂಡು ತೀರಿಸಲು ಯತ್ನಿಸಿ. ಸಿಗುವಷ್ಟನ್ನೂ ಆಸೆಯಿಂದ ತೆಗೆದುಕೊಳ್ಳಬೇಡಿ. ಭವಿಷ್ಯತ್ತಿನಲ್ಲಿ ತೊಂದರೆಯಾದೀತು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ನಿಮ್ಮವರೆಂದುಕೊಂಡವರು ನಿಮ್ಮವರಾಗದೇ ಇರಬಹುದು. ಅಪರಿಚಿತರ ನಡೆಯಿಂದ ಸಂದೇಹವು ಬರಲಿದೆ.
ಕನ್ಯಾ ರಾಶಿ: ಇಂದು ನಿಮ್ಮ ಉದ್ಯಮದಲ್ಲಿ ಆದ ನಷ್ಟದಿಂದ ಮನಸಿನೊಳಗೆ ಸಂಕಟಪಡುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಇಂದು ಹೆಚ್ಚಿನ ಲಾಭವನ್ನು ನಿರೀಕ್ಷಿತ ಲಾಭವನ್ನು ಕಾಣಬಹುದಾಗಿದೆ. ಕಾರಣಾಂತರಗಳಿಂದ ಧನವ್ಯಯವಾದೀತು. ವಿದೇಶದಿಂದ ಹಣದ ವ್ಯವಹಾರವನ್ನು ಇಟ್ಟುಕೊಂಡರೆ ಕಷ್ಟವಾದೀತು. ನಿಮ್ಮ ಸ್ನೇಹಿತರ ನಡುವೆ ಬಾಂಧವದಲ್ಯವು ಬಲವಾಗಲಿದೆ. ಪರೀಕ್ಷೆಯನ್ನು ಎದುರಿಸಲು ಸಕಲರೀತಿಯಲ್ಲಿಯೂ ಸಜ್ಜಾಗಲಿದ್ದೀರಿ. ನೀವು ಮಾಡುವ ಕಾರ್ಯದಲ್ಲಿ ಪ್ರಯತ್ನವು ಪೂರ್ಣವಿರಲಿ. ಫಲದ ಅಪೇಕ್ಷೆಯನ್ನು ಬಿಡುವುದು ಉತ್ತಮ. ಇನ್ನೊಬ್ಬರ ವಿಶ್ವಾಸ ಗಳಿಸಿ, ಅವರಿಂದ ಕೆಲಸವನ್ನು ಪಡೆಯುವಿರಿ. ಕುಟುಂಬದಿಂದ ನಿಮಗೆ ಬೇಕಾದ ಸಹಕಾರ ಸಿಗಲಿದೆ. ಮಕ್ಕಳು ನಿಮ್ಮನ್ನು ಪ್ರೀತಿಸುವರು. ಅನಾರೋಗ್ಯದ ಕಾರಣ ಉತ್ಸಾಹದ ಯಾವ ಕಾರ್ಯವನ್ನೂ ಮಾಡಲಾಗದು. ಮಾಡುವ ಕಾರ್ಯದಲ್ಲಿ ನಂಬಿಕೆ ಇರಲಿ.
ತುಲಾ ರಾಶಿ: ನಿಮ್ಮ ಕಾರ್ಯದಕ್ಷತೆಗೆ ಜವಾಬ್ದಾರಿಗಳು ಬದಲಾಗಲಿವೆ. ಮಾನಸಿಕ ತೊಂದರೆಯನ್ನು ಅನುಭವಿಸುವಿರಿ. ಅವಕಾಶಗಳು ನಿಮ್ಮ ಕೈತಪ್ಪುವ ಸಾಧ್ಯತೆ ಇದೆ. ಇಷ್ಟು ದಿನ ಹಿಡಿದಿಟ್ಟುಕೊಂಡ ಕೋಪವು ಸ್ಫೋಟವಾಗಿ ಮನೆಯು ರಣಾಂಗಣದಂತೆ ಕಾಣಬಹುದು. ನೀವು ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಚಿಂತಿಸಿ. ಎಲ್ಲದಕ್ಕೂ ಕಾರಣ ಬೇಕೆಂದಿಲ್ಲ. ಖುಷಿ ಪಡಿ ಸಾಕು. ನಿಮ್ಮ ಪ್ರೀತಿಪಾತ್ರರು ನಿಮ್ಮಿಂದ ದೂರವಾಗುವರು. ನಿಮ್ಮ ಖ್ಯಾತಿ ಮತ್ತು ಸ್ಥಾನಮಾನಗಳು ಹೆಚ್ಚಾಗಬಹುದು. ನೀವು ಬದಲಾಗಬೇಕು ಎಂದುಕೊಂಡರೂ ಸ್ನೇಹಿತರ ಬಳಗ ನಿಮ್ಮನ್ನು ಸುಮ್ಮನೆ ಬಿಡದು. ತಂದೆ-ತಾಯಿಗಳು ಮಕ್ಕಳ ಮೇಲೆ ಕಣ್ಣಿಡುವುದು ಒಳ್ಳೆಯದು. ಮಕ್ಕಳ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ಪೂರ್ವಾಗ್ರಹದಿಂದ ನಿಮ್ಮ ಸತ್ಯವಾದ ಮಾತನ್ನು ನಂಬಲಾರರು.
ವೃಶ್ಚಿಕ ರಾಶಿ: ನಿಮಗೆ ಸಿಗುವ ಸಾಮಾಜಿಕವಾಗಿ ಮನ್ನಣೆಯು ಅಧಿಕ ಕಾರ್ಯವನ್ನು ಮಾಡುವಂತೆ ಮಾಡೀತು. ಬಂಗಾರದ ವ್ಯಾಪರಿಗಳಿಗೆ ಲಾಭವಾಗಲಿದೆ. ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಲಿದ್ದೀರಿ. ಕುಟುಂಬದಿಂದ ಅಶುಭವಾದ ಸುದ್ದಿಯು ನಿಮಗೆ ತಿಳಿಯಲಿದೆ. ಇಂದು ರಾಜಕೀಯ ವ್ಯಕ್ತಿಗಳು ಹೆಚ್ಚು ಉತ್ಸಾಹದಿಂದ ತಮ್ಮ ಕಾರ್ಯದಲ್ಲಿ ತೊಡಗಿರುವರು. ವಿದೇಶದಲ್ಲಿರುವ ಮಕ್ಕಳಿಂದ ಬೇಸರದ ಸಂಗತಿಯನ್ನು ಕೇಳುವಿರಿ. ಕೆಲವನ್ನು ಕಳೆದುಕೊಂಡು ಸುಖಪಡುವುದೇ ಉತ್ತಮ. ಕುಟುಂಬದಲ್ಲಿ ಸಮೃದ್ಧಿ ಬೇಕಾದರೆ ಒಬ್ಬರೇ ತೀರ್ಮಾನಕ್ಕೆ ಬರಬೇಕು. ಎಲ್ಲರನ್ನೂ ಅನುಸರಿಸಿದರೆ ಕೆಲಸ ಕೆಡುವುದು. ಆಸ್ತಿಯ ಖರೀದಿಯ ವಿಚಾರಗಳನ್ನು ಆದಷ್ಟು ವೇಗವಾಗಿ ತೀರ್ಮಾನ ಮಾಡಿ ಮುಗಿಸಿಕೊಳ್ಳಿ. ದೇಹದಂಡನೆಗೆ ಸರಿಯಾದ ಮಾರ್ಗವನ್ನು ಅನುಸರಿಸಿ. ನಿಮ್ಮ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ.