ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಅತಿಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:48 ರಿಂದ 03:17, ಯಮಘಂಡ ಕಾಲ ಬೆಳಗ್ಗೆ 06:24ರಿಂದ 07:53ರವರೆಗೆ, ಗುಳಿಕ ಕಾಲ ಬೆಳಗ್ಗೆ 09:22 ರಿಂದ 10:51 ರವರೆಗೆ.
ಮೇಷ ರಾಶಿ: ಸ್ಥಾನದ ಮಹತ್ತ್ವವನ್ನು ಅರಿತು ಮಾತನಾಡಬೇಕು. ಅವಸರವಸರದಿಂದ ಇಂದಿನ ಕಾರ್ಯಗಳನ್ನು ಮಾಡಬೇಕಾಗಬಹುದು. ವಿರೋಧಿಗಳು ನಿಮ್ಮ ಬೆನ್ನುಬಿಡದೇ ಪೀಡಿಸಬಹುದು. ಇಂದು ಯಾವುದಕ್ಕೂ ಉಪಯೋಗವಾಗದೇ ಹಣವು ವ್ಯರ್ಥವಾಗಬಹುದು. ಸಾಲದ ಹೊರೆಯು ನಿಮಗೆ ದುಃಸ್ವಪ್ನದಂತೆ ಕಾಡುವುದು. ವಿದೇಶದಲ್ಲಿ ಕೆಲಸ ಮಾಡುವ ಬಗ್ಗೆ ಮೋಹ ಉಂಟಾಗುವುದು. ಸಾಮಾಜಿಕ ನ್ಯಾಯವನ್ನು ಕೊಡಲು ನೀವು ಪ್ರಯತ್ನಶೀಲರಾಗುವಿರಿ. ನಿಮ್ಮ ಬಗ್ಗೆ ಬಂದ ಕಾನೂನಿನ ತೀರ್ಪು ನಿಮಗೆ ಪೂರ್ಣ ಸಮಾಧಾನವನ್ನು ನೀಡದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಗೊಂದಲವಿರಬಹುದು. ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸುವಿರಿ. ಜೀವನ ಸಂಗಾತಿಯ ಅನ್ವೇಷಣೆಯಲ್ಲಿ ನೀವು ಸೋಲಬಹುದು. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ಸ್ಪರ್ಧೆಗೆ ಇಳಿದಮೇಲೆ ಗುರಿಯ ಬಗ್ಗೆ ಮಾತ್ರ ಗಮನವಿರಲಿ. ಉತ್ಸಾಹದಿಂದ ಎಲ್ಲರನ್ನೂ ಜೋಡಿಸಿಕೊಂಡು ಕೆಲಸವನ್ನು ಮುಗಿಸುವಿರಿ. ಇಂದೇ ಒಂದಕ್ಕಿಂತ ಹೆಚ್ಚು ಕಾರ್ಯಗಳನ್ನು ಒಟ್ಟಿಗೆ ಮಾಡಲು ಕಷ್ಟವಾಗುವುದು.
ವೃಷಭ ರಾಶಿ: ಒಂದರ ಮುಕ್ತಾಯವು ಇನ್ನೊಂದರ ಆರಂಭ ಎಂಬ ಸತ್ಯವನ್ನು ಸ್ಮರಿಸಿಕೊಂಡು ಮುನ್ನಡೆಯಿರಿ. ಅಪರಿಚಿತರಿಂದ ಹಣಕ್ಕಾಗಿ ಒತ್ತಡ ಬರಬಹುದು. ಸಮಾರಂಭಗಳಿಗೆ ಆಹ್ವಾನವು ಬರಬಹುದು. ಸಮಯ ಪಾಲನೆಯಲ್ಲಿ ನೀವು ಬಹಳ ನಿಷ್ಠುರರಾಗುವಿರಿ. ಕೆಲಸದಲ್ಲಿ ನಿಮಗೆ ತೊಡಕುಗಳು ಬಂದರೆ ಸಹೋದ್ಯೋಗಿಗಳ ಸಹಾಯವನ್ನು ಪಡೆಯಿರಿ. ಮನಸ್ಸು ಒತ್ತಡದಿಂದ ಆಚೆ ಬಂದಿದ್ದು ನಿಮಗೆ ನಿರಾಳ ಎನಿಸುವುದು. ಆತ್ಮೀಯರನ್ನು ದ್ವೇಷಿಸಿ ಸಾಧಿಸುವುದು ಏನೂ ಇರದು. ಕುಟುಂಬದಲ್ಲಿ ಸಂತೋಷದ ವಾತಾವರಣವು ಇರಲಿದೆ. ನಿಮಗೆ ಸಮ್ಮಾನಗಳನ್ನು ಪಡೆದುಕೊಳ್ಳಲು ಆಸೆಯಾಗುವುದು. ಸಂಗಾತಿಯ ಇಂಗಿತವನ್ನು ಇಡೇರಿಸಲಾರಿರಿ. ವೃತ್ತಿಯ ಸ್ಥಳದಲ್ಲಿ ನೀವು ಉತ್ತಮ ಪ್ರದರ್ಶನ ನೀಡುವಿರಿ. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ತೊಡಗಿಸಲು ಪ್ರಯತ್ನಶೀಲರಾಗುವಿರಿ. ಯಾರನ್ನಾದರೂ ಮಾದರಿ ವ್ಯಕ್ತಿಯನ್ನಾಗಿ ಮಾಡಿಕೊಳ್ಳುವಿರಿ. ನಿಮಗೆ ಯಾರಾದರೂ ಸುಳ್ಳುಹೇಳಬಹುದು.
ಮಿಥುನ ರಾಶಿ: ಮೈಗೆಡ ಅಂಟಿದ ಕೊಳೆಯನ್ನು ನೀವು ನಿಧಾನವಾಗಿ ತೆಗೆಯಬೇಕು. ನಿಮ್ಮ ಒರಟು ಸ್ವಭಾವದಿಂದ ಎಲ್ಲರಿಂದ ದೂರಾಗುವಿರಿ. ಸ್ತ್ರೀಯರು ಖರೀದಿಯಲ್ಲಿ ಸಮಯವನ್ನು ಕಳೆಯುವರು. ಭೋಗವಸ್ತುಗಳಿಂದ ಧನನಷ್ಟವು ಆಗುವುದು. ಪ್ರಯಾಣದಿಂದ ನಿಮಗೆ ಆಯಾಸವಾಗಬಹುದು. ಏನನ್ನೇ ಹೇಳಿದರೂ ನೀವು ನಕಾರಾತ್ಮಕವಾಗಿ ಅದನ್ನು ತೆಗೆದುಕೊಳ್ಳುವಿರಿ. ಸಹಾಯವನ್ನು ಕೇಳಿ ಬಂದರೆ ಇಲ್ಲ ಎನದೇ ಇರುವುದನ್ನು ಕೊಡಿ. ಸಾಮಾಜಿಕ ಕೆಲಸವು ನಿಮಗೆ ಸಾಕೆನಿಸಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ತಾಯಿಯ ಜೊತೆ ಕಲಹವಾಗುವುದು. ಆರಂಭಶೂರತ್ವವು ಅಪಾಯಕಾರಿಯಾಗುವುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಸಂಗಾತಿಯ ಸಹಕಾರ ನಿಮಗೆ ಸಿಗದೇ ಕಷ್ಟವಾಗುವುದು. ಇಂದು ನಿಮಗೆ ಆಹಾರದಿಂದ ತೊಂದರೆಯಾದೀತು. ನಿಮ್ಮ ಮಾತು ನಿಮ್ಮದಾಗಿ ಮಾತ್ರ ಇರಲಿ.
ಕರ್ಕಾಟಕ ರಾಶಿ : ವ್ಯಾವಹಾರಿಕ ನಿರ್ಬಂಧಗಳನ್ನು ಮೀರಿ ವ್ಯವಹರಿಸುವ ಅವಶ್ಯಕತೆ ಇರದು. ಉದ್ಯೋಗಿಗಳಿಗೆ ಬೇಡಿಕೆಗ ತಕ್ಕ ಪೂರೈಕೆ ಕಷ್ಟವಾದೀತು. ನೀರಿನಿಂದ ನಿಮಗೆ ಆಪತ್ತು ಬರಬಹುದು. ಆಧಿಕ ತಿರುಗಾಟವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಉದ್ಯೋಗದ ಸ್ಥಳದಲ್ಲಿ ಇಂದು ನಿಮ್ಮನ್ನೇ ಹೆಚ್ಚು ಗಮನಿಸಬಹುದು. ಸ್ಥಿರಾಸ್ತಿಯ ಬಗ್ಗೆ ಯಾರಾದರೂ ಮಧ್ಯಪ್ರವೇಶವನ್ನು ಪಡೆಯಬಹುದು. ಉದ್ಯಮವು ಸ್ವಲ್ಪ ಹಿನ್ನಡೆಯನ್ನು ಪಡೆಯಬಹುದು. ಪುಣ್ಯಕ್ಷೇತ್ರಗಳಿಗೆ ನೀವು ಕುಟುಂಬ ಸಹಿತವಾಗಿ ಹೋಗುವಿರಿ. ಯಂತ್ರೋಪಕರಣಕ್ಕೆ ನೀವು ಬೆಲೆ ತೆರಬೇಕಾದೀತು. ನಿಮ್ಮ ದುಃಖವನ್ನು ಇತರರ ಜೊತೆ ಹಂಚಿಕೊಳ್ಳಿ. ದೂರ ಬಂಧುಗಳ ಭೇಟಿಯಾಗುವುದು. ಕಲಹವಾಗುವ ಸಂದರ್ಭದಲ್ಲಿ ನೀವು ಜಾಣ್ಮೆಯನ್ನು ವಹಿಸಿ ಸುಮ್ಮನಿರುವಿರಿ. ಹಣದ ಹರಿವು ಇದ್ದರೂ ಖರ್ಚಿನ ದಾರಿಯೂ ತೆರೆದಿರುತ್ತದೆ. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು. ಕೃಷಿಯ ಬಗ್ಗೆ ಆಸಕ್ತಿ ಇದ್ದರೂ ಅದನ್ನು ಮಾಡುವ ಸ್ಥಿತಿ ಇರದು.
ಸಿಂಹ ರಾಶಿ: ಇಂದು ನಿಮಗೆ ಉಳಿಸಿಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದಕ್ಕೆ ಆಸಕ್ತಿ ಹೆಚ್ಚು. ಮನೆಯ ಬೇಡದ ವಸ್ತುಗಳನ್ನು ಎಲ್ಲವನ್ನೂ ಖಾಲಿ ಮಾಡುವಿರಿ. ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಆಲೋಚಿಸಿ. ಪ್ರಾಣಿಗಳಿಂದ ನಿಮಗೆ ಭಯವಾಗಲಿದೆ. ನಿಮ್ಮ ಮೇಲಿನ ನಂಬಿಕೆಯು ನಷ್ಟವಾಗಬಹುದು. ಕೆಲವು ಸಮಯ ಅಥವಾ ವಸ್ತುಗಳನ್ನು ತ್ಯಾಗ ಮಾಡಿ ಸಂತೋಷಪಡುವಿರಿ. ಆಕಸ್ಮಿಕ ಸುದ್ದಿಯು ನಿಮ್ಮನ್ನು ವಿಚಲಿತ ಗೊಳಿಸಬಹುದು. ನಿಮ್ಮ ಪೂರ್ವನಿರ್ಧಾರನ್ನು ಬದಲಿಸಿಕೊಳ್ಳಲು ನೀವು ಒಪ್ಪುವುದಿಲ್ಲ. ವಿವಾಹವನ್ನು ಆಗದೇ ಇರಲು ನಿಮಗೆ ಹತ್ತಾರು ಕಾರಣಗಳು ಇರಲಿದೆ. ಕೆಲಸಗಳನ್ನು ಮುಂದೂಡುವುದು ನಿರಾಸಕ್ತಿಯನ್ನು ತೋರಿಸುವುದು. ಉತ್ತಮವಾದ ಭೂಮಿಯನ್ನು ನೀವು ಖರೀದಿಸಲು ಮುಂದಾಗುವಿರಿ. ಮನೋರಂಜನೆ ಕಡೆ ಹೆಚ್ಚುಗಮನವು ಇರಬಹುದು. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ನೀವು ಒಳ್ಳೆಯದನ್ನು ಮಾಡಲು ಕಾರಣಗಳನ್ನು ಹುಡುಕುವಿರಿ. ನೀವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ಅನಿರೀಕ್ಷಿತ ಜನಪ್ರಿಯತೆ ಉಂಟಾಗಬಹುದು.
ಕನ್ಯಾ ರಾಶಿ: ನೀವು ಭಾವನಾತ್ಮಕ ವಿಚಾರಕ್ಕೆ ಸೋಲುವ ಸಾಧ್ಯತೆ ಇದೆ. ಮಹಿಳಾ ಕಲಾವಿದರಿಗೆ ಪ್ರಶಂಸೆ ಇರಲಿದೆ. ಸಾಲಗಾರ ಬಾಧೆಯು ಕಡಿಮೆ ಇರುವುದರಿಂದ ಕೊಡಬೇಕಾದ ಹಣವನ್ನು ಯಾವುದಾರೂ ಮೂಲದಿಂದ ಸಂಗ್ರಹಿಸಿಕೊಳ್ಳಿ. ಮನೆಯಿಂದ ಇಂದಯ ದೂರವಿರಬೇಕಾಗುವುದು. ಮರೆವಿನ ಕಾರಣಕ್ಕೆ ಉದ್ಯೋಗದಲ್ಲಿ ಹಿನ್ನಡೆಯೆನಿಸುವುದು. ಮನೋರಂಜನೆಗೆ ಅವಕಾಶಗಳಿದ್ದರೂ ಯಾವದೋ ಆಲೋಚನೆಯನ್ನು ಮಾಡುತ್ತ ಇರುವಿರಿ. ನಿಮ್ಮ ಸಾಮರ್ಥ್ಯವನ್ನು ಪ್ರಕಟಿಸಲು ಸೂಕ್ತ ವೇದಿಕೆಯು ನಿಮಗೆ ಲಭ್ಯವಾಗಬಹುದು. ವಿವಾಹಯೋಗವು ಬಂದಿರುವುದರಿಂದ ಇನ್ನು ಹಿಂಜರಿಕೆ ಬೇಡ. ಕೃಷಿಯಲ್ಲಿ ಇಂದು ತೊಡಗಿಕೊಳ್ಳುವಿರಿ. ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿಯು ಹೆಚ್ಚು ಇರುವುದು. ಯಾವುದನ್ನಾದರೂ ಆಯ್ಕೆ ಮಾಡುವಾಗ ನಿಮ್ಮನೇ ನೀವು ಕೇಳಿಕೊಳ್ಳುವುದು ಉತ್ತಮ. ಮೂರನೇ ವ್ಯಕ್ತಿಯಿಂದ ಬರುವ ಮಾತನ್ನು ನಂಬಬೇಡಿ.
ತುಲಾ ರಾಶಿ: ನಿಮ್ಮನ್ನು ಯಾವುದಾದರೂ ಕಾರಣಕ್ಕೆ ಹೊಗಳುವವರು ಇರುವರು. ಹಿರಿಯರ ಮಾತನ್ನು ಕೇಳಿ, ತೊಂದರೆಯನ್ನು ತಪ್ಪಿಸಿಕೊಳ್ಳುವಿರಿ. ಇಷ್ಟ ವಸ್ತುಗಳನ್ನು ಖರೀದಿಸುವ ಸುದಿನ ಇಂದು. ಯಾವುದೇ ವ್ಯವಸ್ಥೆಗೆ ವಿರುದ್ಧವಾಗಿ ಹೋಗುವುದು ಬೇಡ. ವಿದ್ಯಾರ್ಥಿಗಳು ಅಭ್ಯಾಸದಿಂದ ವಿಮುಖರಾಗುವಿರಿ. ಸಹನೆಯ ಮಿತಿಯು ಬೀರಬಹುದು. ವಿದೇಶ ಪ್ರಯಾಣವು ಮುಂದೆ ಹೋಗಬಹುದು. ವಿಶೇಷವ್ಯಕ್ತಿಗಳನ್ನು ನೀವು ಮನೆಗೆ ಆಮಂತ್ರಣ ಕೊಡುವಿರಿ. ನಿಮ್ಮ ಅಹಮ್ಮನ್ನು ಕಡಿಮೆ ಮಾಡಿಕೊಳ್ಳದೇ ಯಾವ ಸಹಕಾರವನ್ನೂ ಪಡೆಯುವುದು ಕಷ್ಟವಾದೀತು. ದಾನವನ್ನು ಹೆಚ್ಚು ನಿಮ್ಮ ನಿಯಮಗಳನ್ನು ಬಿಟ್ಟು ನೀವು ಹೋಗಲಾರಿರಿ. ಯಾರಾದರೂ ನಿಮ್ಮನ್ನು ಮೂರ್ಖರನ್ನಾಗಿ ಮಾಡಬಹುದು. ನೀವು ಹಣ ಸಂಪಾದನೆಗೆ ಆರಿಸಿಕೊಂಡ ಮಾರ್ಗವು ಸರಿಯೆನಿಸದೇ ಇರಬಹುದು. ನಿಮ್ಮ ಅಮೂಲ್ಯ ವಸ್ತುಗಳು ನಷ್ಟವಾಗಬಹುದು. ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ: ಇನ್ನೊಬ್ಬರ ತಪ್ಪನ್ನು ಕ್ಷಮಿಸಿ ಮುನ್ನಡೆಯುವುದೂ ನಾಕತ್ವದ ಗುಣವಾಗಲಿದೆ. ಇಂದು ಹಿತಶತ್ರುಗಳಿಂದ ಧನವು ನಷ್ಟವಾಗಲಿದೆ. ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿಯಿಂದ ನೀವು ಕುಟುಂಬಕ್ಕೆ ಸಮಯವನ್ನು ಕೊಡುವುದು ಕಷ್ಟವಾದೀತು. ಕೆಲವು ವಿಚಾರಗಳು ಸಮಯಮಿತಿಯನ್ನು ಹಾಕಿಕೊಳ್ಳದೇ ಇದ್ದರೆ ಕಾರ್ಯದಲ್ಲಿ ಪ್ರಗತಿ ಇರದು. ಅಂದುಕೊಂಡ ಸಮಯಕ್ಕೆ ನಿಮ್ಮ ಕೆಲಸಗಳು ಮುಕ್ತಾಯ ಆಗದೇ ಹೋಗಬಹುದು. ಬಂಧುಗಳಿಗೆ ನಿಮ್ಮ ಕಡೆಯಿಂದ ಸಹಾಯವು ಸಿಗಲಿದೆ. ಅಧಿಕಾರವನ್ನು ನೀವು ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುವಿರಿ. ಹಣ ಸಂಪಾದನೆಯು ನಿಮಗೆ ಕಷ್ಟವೆನಿಸಿದ ಕಾರ್ಯವನ್ನು ಮೊದಲು ಆರಂಭಿಸುವಿರಿ. ರಕ್ಷಣಾ ವ್ಯವಸ್ಥೆಯಲ್ಲಿ ಇರುವವರಿಗೆ ತೊಂದರೆಗಳು ಆಗಬಹುದು. ನಿಯಮವನ್ನು ಮೀರಿ ವರ್ತಿಸುವುದು ಬೇಡ. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು. ನಿಮ್ಮ ಮಾತು ಮಾತಾಗಿಯೇ ಉಳಿಯಬಹುದು. ಸೋದರ ಸಂಬಂಧಗಳು ಹಾಳಾಗಬಹುದು.
ಧನು ರಾಶಿ: ಪರಾವಲಂಬನೆಯಿಂದ ನಿಮಗೆ ಮುಜುಗರದ ಸನ್ನಿವೇಶ ಕಾಣಿಸುವುದು. ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆಯು ಎದ್ದು ತೋರುವುದು. ಸಂಪಾದನೆಗಾಗಿ ಇಬ್ಬರೂ ಪ್ರಯತ್ನಿಸಬೇಕಾಗಬಹುದು. ಯಾರದೋ ಮೇಲಿನ ಬೇಸರವನ್ನು ಮತ್ಯಾರದೋ ಮೇಲೆ ಸಿಟ್ಟಾಗಿ ವ್ಯಕ್ತಪಡಿಸುವಿರಿ. ಕೆಲವನ್ನು ಮರೆತು ಮುನ್ನಡೆಯುವುದೇ ಉತ್ತಮ. ದ್ವೇಷವನ್ನು ನೀವು ಬೆಳೆಸಿಕೊಳ್ಳುವುದು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಬಹುದು. ನಿಮ್ಮ ಲೆಕ್ಕವನ್ನು ನೀವೇ ಮುಕ್ತಾಯ ಮಾಡಬೇಕು. ಧಾರ್ಮಿಕ ಕಾರ್ಯಗಳಲ್ಲಿ ಇಂದು ನೀವು ತೊಡಗಿಕೊಳ್ಳುವಿರಿ. ಮಾನಸಿಕ ಒತ್ತಡದಿಂದ ನೀವು ಬೇಗ ವಿಶ್ರಾಂತಿಗೆ ತೆರಳಬಹುದು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ಅನಿರೀಕ್ಷಿತವಾಗಿ ಅತಿಥಿಗಳ ಭೇಟಿಯಿಂದ ಗಲಿಬಿಲಿಗೊಳ್ಳುವ ಸಂದರ್ಭವು ಬರಲಿದೆ.
ಮಕರ ರಾಶಿ: ಇಂದು ಕಡಿಮೆ ಖರ್ಚಿನಲ್ಲಿ ಉತ್ತಮ ವಸ್ತುವನ್ನು ಪಡೆಯುವಿರಿ. ಇಂದಿನ ವಿಫಲತೆಯು ನಿಮಗೆ ಛಲವನ್ನು ತರಬಹುದು. ಕಛೇರಿಯಲ್ಲಿ ಒತ್ತಡವು ಇದ್ದರೂ ಅದೆನ್ನೆಲ್ಲ ಮರೆತು ಆರಾಮಾಗಿ ಇರುವಿರಿ. ನಿಮ್ಮ ಮಾತು ಎಲ್ಲರಿಗೂ ಇಷ್ಟವಾದೀತು. ಸಮಯವನ್ನು ಕಳೆಯಲು ಸ್ನೇಹಿತರ ಜೊತೆ ವಿಹಾರಕ್ಕೆ ಹೋಗಬಹುದು. ಯಾರದೋ ಮೇಲಿನ ಕೋಪಕ್ಕೆ ಮಕ್ಕಳಮೇಲೆ ಸಿಟ್ಟಾಗುವಿರಿ. ಸಹೋದರರು ನಿಮ್ಮ ಸಹಾಯವನ್ನು ಕೇಳುವರು. ಇನ್ನೊಬ್ಬರನ್ನು ನಿಂದಿಸುವುದು ನಿಮಗೆ ಶೋಭೆ ತರದು. ಮನೆಯ ನಿರ್ಮಾಣಕ್ಕೆ ಕುಟುಂಬದ ಜೊತೆ ಚರ್ಚಿಸುವಿರಿ. ಯಾರ ಮಾತನ್ನೋ ಅನುಸರಿಸಿ ನೀವು ಕಾರ್ಯ ಪ್ರವೃತ್ತರಾಗುವುದು ಬೇಡ. ಇಂದು ನಿಮ್ಮ ಮೇಲೆ ಬರುವ ಯಾವ ಅಪವಾದವನ್ನೂ ಮನಸ್ಸಿಗೆ ತೆಗೆದುಕೊಳ್ಳದೇ ನೆಮ್ಮದಿಯಿಂದ ಇರುವಿರಿ. ನಿಮ್ಮನ್ನು ತೋರಿಸುವ ಸಮಯವು ಇಂದು ಬರಬಹುದು. ವೈವಾಹಿಕ ಸಂಬಂಧಗಳನ್ನು ಬಂಧುಗಳಲ್ಲಿ ಬೆಳೆಸುವಿರಿ. ಉಚಿತವಾಗಿ ಯಾವುದನ್ನೂ ಬಯಸುವುದು ಬೇಡ.
ಕುಂಭ ರಾಶಿ: ಇಂದು ನೀವು ಯಾವುದನ್ನು ಉಳಿಸಿಕೊಳ್ಳಬೇಕು ಮತ್ತು ಬೇಡ ಎನ್ನುವುದನ್ನು ಸ್ಪಷ್ಟವಾಗಿ ನಿರ್ಧರಿಸಿ. ವ್ಯಾಪಾರದಲ್ಲಿ ಲಾಭವು ಕಡಿಮೆ ಕಾಣಿಸುವುದು. ನೀವುಧಾರ್ಮಿಕ ಆಚರಣೆಯಲ್ಲಿ ಆಸಕ್ತಿಯು ಹೆಚ್ಚು ಇರಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಗೊಂದಲವು ಇರಬಹುದು. ಹೆಚ್ಚು ಒತ್ತಡುವು ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ನಿಮ್ಮ ರಹಸ್ಯವನ್ನು ಯಾರಬಳಿಯಾದರೂ ಹೇಳಿಕೊಳ್ಳಬೇಕಾಗಿ ಬರಬಹುದು. ನಿಮ್ಮ ಕಾರ್ಮಿಕರ ಜೊತೆ ವಾಗ್ವಾದವನ್ನು ಮಾಡುವಿರಿ. ನಿಮ್ಮ ಸಂತೋಷವನ್ನು ಕಂಡು ಸಂಕಟಪಡುವವರಿಗೆ ನೀವು ಯಾವ ಪ್ರತಿಕ್ರಿಯೆಯನ್ನು ನೀಡಬೇಕಾಗಿಲ್ಲ. ಅನಗತ್ಯ ವಿಚಾರಗಳ ನಡುವೆ ಪ್ರವೇಶವನ್ನು ಪಡೆಯುವುದು ಬೇಡ. ಹೊಸ ಉದ್ಯಮವನ್ನು ಅರಸುವವರು ಹೆಚ್ಚು ಅನ್ವೇಷಣೆಯನ್ನು ಮಾಡಬೇಕಾದೀತು. ನೇರ ಮಾತಿನಿಂದ ವ್ಯಾಪರಕ್ಕೆ ತೊಂದರೆ ಉಂಟಾಗಬಹುದು.
ಮೀನ ರಾಶಿ: ನಿರ್ದಯಿಯಾಗಿ ವರ್ತಿಸುವುದು ಬೇಡ. ಇಂದು ನಿಮಗೆ ಲಾಭ ನಷ್ಟಗಳ ವಿವೇಚನೆ ಅಧಿಕವಾಗಿರುವುದು. ಸಾಮಾಜಿಕವಾಗಿ ಮನ್ನಣೆ ಸಿಕ್ಕರೂ ಅದನ್ನು ನೀವು ನಿರಾಕರಿಸುವಿರಿ. ವ್ಯಾವಹಾರಿಕವಾಗಿ ನೀವು ಸಡಿಲಾಗುವುದು ಬೇಡ. ಹೆಚ್ಚಿನ ಸಮಯವನ್ನು ಅಧ್ಯಯನದಲ್ಲಿ ಕಳೆಯುವಿರಿ. ನಿಮ್ಮ ಸಂಪತ್ತಿಗೆ ಇತರರ ದೃಷ್ಟಿಯು ಬೀಳಬಹುದು. ಬರಬೇಕಾದ ಹಣವು ವಿಳಂಬವಾಗಬಹುದು. ನೀವು ಇಂದು ಎಲ್ಲ ಜವಾಬ್ದಾರಿಗಳಿಂದ ಹೊರಬರುವಿರಿ. ನಿಮ್ಮ ಅಗತ್ಯತೆಯು ಇಲ್ಲದ ಕಡೆ ಹೋಗಲು ಇಚ್ಛಿಸುವುದಿಲ್ಲ. ಯಾರಿಂದಲೂ ನೀವು ಸಹಾಯವನ್ನು ಪಡೆಯಲು ಇಚ್ಛಿಸುವುದಿಲ್ಲ. ವ್ಯಾಪರವು ನಿಮಗೆ ಲಾಭದಾಯಕವಾದುದು. ಅತಿಯಾದ ನಿರೀಕ್ಷೆಯಲ್ಲಿ ನೀವು ಉಳಿದ ವಿಚಾರಗಳಲ್ಲಿ ಮೈ ಮರೆಯುವಿರಿ. ಹೆಚ್ಚಿದ ಕುಟುಂಬದ ಜವಾಬ್ದಾರಿಗಳಿಂದ ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಗಮನ ಕಡಿಮೆ ಆಗುವುದು. ಅನಗತ್ಯ ಹಸ್ತಕ್ಷೇಪದಿಂದ ನಿಮ್ಮ ಗೌರವ ಕಡಿಮೆ ಆಗಬಹುದು. ದ್ವೇಷವನ್ನು ಮುಂದುವರಿಸುವುದು ನಿಮಗೆ ಇಷ್ಟವಾಗದು.
-ಲೋಹಿತ ಹೆಬ್ಬಾರ್-8762924271 (what’s app only)