AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು

ಈ ನಕ್ಷತ್ರವು ಐದನೇಯದು. ಆಕಾಶದಲ್ಲಿ ಪೂರ್ವದಿಂದ ಪಶ್ಚಿಮದಿಕ್ಕಿಗೆ ನೋಡಿದಾಗ ಬೆಕ್ಕಿನ ಪಾದದಂತೆ ಮೂರು ನಕ್ಷತ್ರಗಳು ಹೊಳೆಯುತ್ತದೆ. ಇದರ ದೇವತೆ ಚಂದ್ರ. ಅನೇಕ ಶುಭಕರ್ಮಗಳಿಗೆ ಹೇಳುವ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ.

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು
ಈ ನಕ್ಷತ್ರದಲ್ಲಿ ಜನಿಸಿದವರಿಗೆ ಆರ್ಚರಿಯಲ್ಲಿ ಆಸಕ್ತಿ ಹೆಚ್ಚು
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 10, 2024 | 1:02 AM

Share

ಈ ನಕ್ಷತ್ರವು ಐದನೇಯದು. ಆಕಾಶದಲ್ಲಿ ಪೂರ್ವದಿಂದ ಪಶ್ಚಿಮದಿಕ್ಕಿಗೆ ನೋಡಿದಾಗ ಬೆಕ್ಕಿನ ಪಾದದಂತೆ ಮೂರು ನಕ್ಷತ್ರಗಳು ಹೊಳೆಯುತ್ತದೆ. ಇದರ ದೇವತೆ ಚಂದ್ರ. ಅನೇಕ ಶುಭಕರ್ಮಗಳಿಗೆ ಹೇಳುವ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ.

ಚಪಲ: ಇವರ ಮನಸ್ಸು ಬಹಳ ಚಂಚಲ. ‌ಒಂದನ್ನೇ ಆಲೋಚಿಸುವ, ನಿರ್ಧಾರಕ್ಕೆ ಬರುವ ವಿಷಯದಲ್ಲಿ ದ್ವಂದ್ವಗಳು ಹೆಚ್ಚು ಕಾಣಿಸುವುದು.

ಚತುರ: ಯಾವ ಕಾರ್ಯವನ್ನೂ ಬಹಳ ಚಾತುರ್ಯದಿಂದ ಮಾಡಲು ಸಾಧ್ಯ. ಕ್ಲಿಷ್ಟವಾದುದನ್ನು ಇಷ್ಟವಾಗುವಂತೆ ಮಾಡಿಕೊಳ್ಳಬಲ್ಲರು.

ಅಧಿಕ ಭಯ: ಯಾವುದನ್ನೂ ತಾವೇ ಸ್ವತಃ ಮುನ್ನುಗ್ಗಿ ಮಾಡುವವರಲ್ಲ. ಏನಾದರೂ ಆದರೆ ಎಂಬ ಭಯವು ಅವರನ್ನು ಹಿಂದೆ ಕಳುಹಿಸುತ್ತದೆ.

ಉತ್ಸಾಹ: ಆಲಸ್ಯದಿಂದ ಇರುವ ಸ್ವಭಾವವನ್ನು ಇವರು ಹೊಂದಿರಲಾರರು. ಏನಾದರೂ ಮಾಡುತ್ತಲೇ ಇರುತ್ತಾರೆ. ಇವರಲ್ಲಿ ಉತ್ಸಾಹವು ಹೆಚ್ಚು ಕಾಣಿಸುವುದು.

ಭೋಗದಲ್ಲಿ ಆಸಕ್ತಿ: ಹೊಸ ವಿಷಯಗಳನ್ನು ತಿಳಿಯುವುದು, ವಸ್ತುಗಳನ್ನು ಖರೀದಿಸುವುದರಲ್ಲಿ ಆಸಕ್ತಿ ಇರುತ್ತದೆ. ಅಂತಹ ಭೋಗ ವಸ್ತುಗಳನ್ನು ಖರೀದಿಮಾಡುತ್ತಾರೆ.

ಆರ್ಚರಿಯಲ್ಲಿ ಆಸಕ್ತಿ: ಇವರಿಗೆ ವಿಶೇಷ ಆಸಕ್ತಿಯ ವಿಚಾರವೆಂದರೆ ಧನುರ್ವಿದ್ಯೆ ಅಥವಾ ಗುರಿಯಿಟ್ಟು ಹೊಡೆಯುವಂತಹ ವಿದ್ಯೆಗಳನ್ನು ಇಷ್ಟಪಡುತ್ತಾರೆ. ಶೂಟಿಂಗ್ ಮೊದಲಾದ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಮತ್ತು ಪರಿಣತಿಯನ್ನು ಪಡೆಯುತ್ತಾರೆ.

ಬಾಗುವುದು: ಯಾರನ್ನು ಗೌರವಿಸಬೇಕು ಎನ್ನುವ ಬಗ್ಗೆ ಸ್ಪಷ್ಟತೆವಿರುವುದು. ವರ್ತನೆಗೆ ಇವರು ಹೆಚ್ಚು ಪ್ರಾಮುಖ್ಯ ಕೊಡುವರು. ಇದರಿಂದ ವಿಶೇಷ ಮನ್ನಣೆಯನ್ನು ಪಡೆಯುವರು.

ಒಳ್ಳೆಯವರ ಸಹವಾಸ: ಇವರು ಒಳ್ಳೆಯವರ ಸಹವಾಸವನ್ನೇ ಹೆಚ್ಚು ಮಾಡುತ್ತಾರೆ. ಗುಣಗಳ ವಿಚಾರದಲ್ಲಿ ಅತಿಯಾದ ಆಸಕ್ತಿ, ನಂಟು ಇರಲಿದೆ.

ನಂಬಿದವರಿಗೆ ಮೋಸವಿಲ್ಲ: ಇವರನ್ನು ನಂಬಿ ಬಂದರೆ ಅರ್ಧಕ್ಕೆ ಕೈಬಿಡುವ ಪ್ರಮೇಯವು ಇರದು. ಅವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿ, ಸಂತೋಷಪಡಿಸುತ್ತಾರೆ.

ಒಳ್ಳೆಯ ಮಾರ್ಗ: ಇವರಲ್ಲಿ ಒಳ್ಳೆ ಹಾಗು ಕೆಟ್ಟ ಮಾರ್ಗದ ವಿವೇಚನೆ ಇರಲಿದೆ. ಹಾಗಾಗಿ ಸದಾ ಒಳ್ಳೆಯ ಮಾರ್ಗದಲ್ಲಿ, ಎಲ್ಲರೂ ಇಷ್ಟಪಡುವಂತೆ ಇರುತ್ತಾರೆ.

ಈ ನಕ್ಷತ್ರದಿಂದ‌ ಮಳೆಗಾಲ ಪ್ರಾರಂಭವಾಗುತ್ತದೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಸಸ್ಯಾರೋಪಣವನ್ನು ಮಾಡುತ್ತಾರೆ. ಇದಕ್ಕೆ ಕಾರಣ ಚಂದ್ರನು ಓಷಧಿ ಮತ್ತು ಸಸ್ಯಗಳಿಗೆ ಅಧಿಪತಿಯಾದ ಕಾರಣ ಸಮೃದ್ಧವಾಗಿ ಬೇಳೆಯುತ್ತದೆ ಎಂಬ ಅಚಲವಾದ ನಂಬಿಕೆ, ವಿಜ್ಞಾನವೂ ಇದೆ.

ಲೋಹಿತ ಹೆಬ್ಬಾರ್ – 8762924271

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More