Horoscope: ಈ ರಾಶಿಯವರು ಜೀವನ ಸಂಗಾತಿಯ ಅನ್ವೇಷಣೆಯಲ್ಲಿ ಸೋಲಬಹುದು
ಅಕ್ಟೋಬರ್ 10, 2024: ಈ ರಾಶಿಯವರಿಗೆ ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಸಂಗಾತಿಯ ಸಹಕಾರ ನಿಮಗೆ ಸಿಗದೇ ಕಷ್ಟವಾಗುವುದು. ಇಂದು ನಿಮಗೆ ಆಹಾರದಿಂದ ತೊಂದರೆಯಾದೀತು. ಹಾಗಾದರೆ ಅಕ್ಟೋಬರ್ 10ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಅತಿಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:48 ರಿಂದ 03:17, ಯಮಘಂಡ ಕಾಲ ಬೆಳಗ್ಗೆ 06:24ರಿಂದ 07:53ರವರೆಗೆ, ಗುಳಿಕ ಕಾಲ ಬೆಳಗ್ಗೆ 09:22 ರಿಂದ 10:51 ರವರೆಗೆ.
ಮೇಷ ರಾಶಿ: ಸ್ಥಾನದ ಮಹತ್ತ್ವವನ್ನು ಅರಿತು ಮಾತನಾಡಬೇಕು. ಅವಸರವಸರದಿಂದ ಇಂದಿನ ಕಾರ್ಯಗಳನ್ನು ಮಾಡಬೇಕಾಗಬಹುದು. ವಿರೋಧಿಗಳು ನಿಮ್ಮ ಬೆನ್ನುಬಿಡದೇ ಪೀಡಿಸಬಹುದು. ಇಂದು ಯಾವುದಕ್ಕೂ ಉಪಯೋಗವಾಗದೇ ಹಣವು ವ್ಯರ್ಥವಾಗಬಹುದು. ಸಾಲದ ಹೊರೆಯು ನಿಮಗೆ ದುಃಸ್ವಪ್ನದಂತೆ ಕಾಡುವುದು. ವಿದೇಶದಲ್ಲಿ ಕೆಲಸ ಮಾಡುವ ಬಗ್ಗೆ ಮೋಹ ಉಂಟಾಗುವುದು. ಸಾಮಾಜಿಕ ನ್ಯಾಯವನ್ನು ಕೊಡಲು ನೀವು ಪ್ರಯತ್ನಶೀಲರಾಗುವಿರಿ. ನಿಮ್ಮ ಬಗ್ಗೆ ಬಂದ ಕಾನೂನಿನ ತೀರ್ಪು ನಿಮಗೆ ಪೂರ್ಣ ಸಮಾಧಾನವನ್ನು ನೀಡದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಗೊಂದಲವಿರಬಹುದು. ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸುವಿರಿ. ಜೀವನ ಸಂಗಾತಿಯ ಅನ್ವೇಷಣೆಯಲ್ಲಿ ನೀವು ಸೋಲಬಹುದು. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ಸ್ಪರ್ಧೆಗೆ ಇಳಿದಮೇಲೆ ಗುರಿಯ ಬಗ್ಗೆ ಮಾತ್ರ ಗಮನವಿರಲಿ. ಉತ್ಸಾಹದಿಂದ ಎಲ್ಲರನ್ನೂ ಜೋಡಿಸಿಕೊಂಡು ಕೆಲಸವನ್ನು ಮುಗಿಸುವಿರಿ. ಇಂದೇ ಒಂದಕ್ಕಿಂತ ಹೆಚ್ಚು ಕಾರ್ಯಗಳನ್ನು ಒಟ್ಟಿಗೆ ಮಾಡಲು ಕಷ್ಟವಾಗುವುದು.
ವೃಷಭ ರಾಶಿ: ಒಂದರ ಮುಕ್ತಾಯವು ಇನ್ನೊಂದರ ಆರಂಭ ಎಂಬ ಸತ್ಯವನ್ನು ಸ್ಮರಿಸಿಕೊಂಡು ಮುನ್ನಡೆಯಿರಿ. ಅಪರಿಚಿತರಿಂದ ಹಣಕ್ಕಾಗಿ ಒತ್ತಡ ಬರಬಹುದು. ಸಮಾರಂಭಗಳಿಗೆ ಆಹ್ವಾನವು ಬರಬಹುದು. ಸಮಯ ಪಾಲನೆಯಲ್ಲಿ ನೀವು ಬಹಳ ನಿಷ್ಠುರರಾಗುವಿರಿ. ಕೆಲಸದಲ್ಲಿ ನಿಮಗೆ ತೊಡಕುಗಳು ಬಂದರೆ ಸಹೋದ್ಯೋಗಿಗಳ ಸಹಾಯವನ್ನು ಪಡೆಯಿರಿ. ಮನಸ್ಸು ಒತ್ತಡದಿಂದ ಆಚೆ ಬಂದಿದ್ದು ನಿಮಗೆ ನಿರಾಳ ಎನಿಸುವುದು. ಆತ್ಮೀಯರನ್ನು ದ್ವೇಷಿಸಿ ಸಾಧಿಸುವುದು ಏನೂ ಇರದು. ಕುಟುಂಬದಲ್ಲಿ ಸಂತೋಷದ ವಾತಾವರಣವು ಇರಲಿದೆ. ನಿಮಗೆ ಸಮ್ಮಾನಗಳನ್ನು ಪಡೆದುಕೊಳ್ಳಲು ಆಸೆಯಾಗುವುದು. ಸಂಗಾತಿಯ ಇಂಗಿತವನ್ನು ಇಡೇರಿಸಲಾರಿರಿ. ವೃತ್ತಿಯ ಸ್ಥಳದಲ್ಲಿ ನೀವು ಉತ್ತಮ ಪ್ರದರ್ಶನ ನೀಡುವಿರಿ. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ತೊಡಗಿಸಲು ಪ್ರಯತ್ನಶೀಲರಾಗುವಿರಿ. ಯಾರನ್ನಾದರೂ ಮಾದರಿ ವ್ಯಕ್ತಿಯನ್ನಾಗಿ ಮಾಡಿಕೊಳ್ಳುವಿರಿ. ನಿಮಗೆ ಯಾರಾದರೂ ಸುಳ್ಳುಹೇಳಬಹುದು.
ಮಿಥುನ ರಾಶಿ: ಮೈಗೆಡ ಅಂಟಿದ ಕೊಳೆಯನ್ನು ನೀವು ನಿಧಾನವಾಗಿ ತೆಗೆಯಬೇಕು. ನಿಮ್ಮ ಒರಟು ಸ್ವಭಾವದಿಂದ ಎಲ್ಲರಿಂದ ದೂರಾಗುವಿರಿ. ಸ್ತ್ರೀಯರು ಖರೀದಿಯಲ್ಲಿ ಸಮಯವನ್ನು ಕಳೆಯುವರು. ಭೋಗವಸ್ತುಗಳಿಂದ ಧನನಷ್ಟವು ಆಗುವುದು. ಪ್ರಯಾಣದಿಂದ ನಿಮಗೆ ಆಯಾಸವಾಗಬಹುದು. ಏನನ್ನೇ ಹೇಳಿದರೂ ನೀವು ನಕಾರಾತ್ಮಕವಾಗಿ ಅದನ್ನು ತೆಗೆದುಕೊಳ್ಳುವಿರಿ. ಸಹಾಯವನ್ನು ಕೇಳಿ ಬಂದರೆ ಇಲ್ಲ ಎನದೇ ಇರುವುದನ್ನು ಕೊಡಿ. ಸಾಮಾಜಿಕ ಕೆಲಸವು ನಿಮಗೆ ಸಾಕೆನಿಸಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ತಾಯಿಯ ಜೊತೆ ಕಲಹವಾಗುವುದು. ಆರಂಭಶೂರತ್ವವು ಅಪಾಯಕಾರಿಯಾಗುವುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಸಂಗಾತಿಯ ಸಹಕಾರ ನಿಮಗೆ ಸಿಗದೇ ಕಷ್ಟವಾಗುವುದು. ಇಂದು ನಿಮಗೆ ಆಹಾರದಿಂದ ತೊಂದರೆಯಾದೀತು. ನಿಮ್ಮ ಮಾತು ನಿಮ್ಮದಾಗಿ ಮಾತ್ರ ಇರಲಿ.
ಕರ್ಕಾಟಕ ರಾಶಿ : ವ್ಯಾವಹಾರಿಕ ನಿರ್ಬಂಧಗಳನ್ನು ಮೀರಿ ವ್ಯವಹರಿಸುವ ಅವಶ್ಯಕತೆ ಇರದು. ಉದ್ಯೋಗಿಗಳಿಗೆ ಬೇಡಿಕೆಗ ತಕ್ಕ ಪೂರೈಕೆ ಕಷ್ಟವಾದೀತು. ನೀರಿನಿಂದ ನಿಮಗೆ ಆಪತ್ತು ಬರಬಹುದು. ಆಧಿಕ ತಿರುಗಾಟವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಉದ್ಯೋಗದ ಸ್ಥಳದಲ್ಲಿ ಇಂದು ನಿಮ್ಮನ್ನೇ ಹೆಚ್ಚು ಗಮನಿಸಬಹುದು. ಸ್ಥಿರಾಸ್ತಿಯ ಬಗ್ಗೆ ಯಾರಾದರೂ ಮಧ್ಯಪ್ರವೇಶವನ್ನು ಪಡೆಯಬಹುದು. ಉದ್ಯಮವು ಸ್ವಲ್ಪ ಹಿನ್ನಡೆಯನ್ನು ಪಡೆಯಬಹುದು. ಪುಣ್ಯಕ್ಷೇತ್ರಗಳಿಗೆ ನೀವು ಕುಟುಂಬ ಸಹಿತವಾಗಿ ಹೋಗುವಿರಿ. ಯಂತ್ರೋಪಕರಣಕ್ಕೆ ನೀವು ಬೆಲೆ ತೆರಬೇಕಾದೀತು. ನಿಮ್ಮ ದುಃಖವನ್ನು ಇತರರ ಜೊತೆ ಹಂಚಿಕೊಳ್ಳಿ. ದೂರ ಬಂಧುಗಳ ಭೇಟಿಯಾಗುವುದು. ಕಲಹವಾಗುವ ಸಂದರ್ಭದಲ್ಲಿ ನೀವು ಜಾಣ್ಮೆಯನ್ನು ವಹಿಸಿ ಸುಮ್ಮನಿರುವಿರಿ. ಹಣದ ಹರಿವು ಇದ್ದರೂ ಖರ್ಚಿನ ದಾರಿಯೂ ತೆರೆದಿರುತ್ತದೆ. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು. ಕೃಷಿಯ ಬಗ್ಗೆ ಆಸಕ್ತಿ ಇದ್ದರೂ ಅದನ್ನು ಮಾಡುವ ಸ್ಥಿತಿ ಇರದು.