Astrology: ಈ ರಾಶಿಯವರಿಗೆ ಹೆಚ್ಚು ಒತ್ತಡವು ಆರೋಗ್ಯವನ್ನು ಕೆಡಿಸಬಹುದು

ರಾಶಿ ಭವಿಷ್ಯ, ಗುರುವಾರ(ಅಕ್ಟೋಬರ್: 10): ನೀವು ಇಂದು ಎಲ್ಲ ಜವಾಬ್ದಾರಿಗಳಿಂದ ಹೊರಬರುವಿರಿ. ನಿಮ್ಮ ಅಗತ್ಯತೆಯು ಇಲ್ಲದ ಕಡೆ ಹೋಗಲು ಇಚ್ಛಿಸುವುದಿಲ್ಲ. ಯಾರಿಂದಲೂ ನೀವು ಸಹಾಯವನ್ನು ಪಡೆಯಲು ಇಚ್ಛಿಸುವುದಿಲ್ಲ. ವ್ಯಾಪರವು ನಿಮಗೆ ಲಾಭದಾಯಕವಾದುದು. ಹಾಗಾದರೆ ಅಕ್ಟೋಬರ್: 10ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಈ ರಾಶಿಯವರಿಗೆ ಹೆಚ್ಚು ಒತ್ತಡವು ಆರೋಗ್ಯವನ್ನು ಕೆಡಿಸಬಹುದು
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಆಯೇಷಾ ಬಾನು

Updated on: Oct 10, 2024 | 7:25 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಅತಿಗಂಡ​, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:48 ರಿಂದ 03:17, ಯಮಘಂಡ ಕಾಲ ಬೆಳಗ್ಗೆ 06:24ರಿಂದ 07:53ರವರೆಗೆ, ಗುಳಿಕ ಕಾಲ ಬೆಳಗ್ಗೆ 09:22 ರಿಂದ 10:51 ರವರೆಗೆ.

ಧನು ರಾಶಿ: ಪರಾವಲಂಬನೆಯಿಂದ ನಿಮಗೆ ಮುಜುಗರದ ಸನ್ನಿವೇಶ ಕಾಣಿಸುವುದು. ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆಯು ಎದ್ದು ತೋರುವುದು.‌ ಸಂಪಾದನೆಗಾಗಿ ಇಬ್ಬರೂ ಪ್ರಯತ್ನಿಸಬೇಕಾಗಬಹುದು. ಯಾರದೋ ಮೇಲಿನ ಬೇಸರವನ್ನು ಮತ್ಯಾರದೋ ಮೇಲೆ ಸಿಟ್ಟಾಗಿ ವ್ಯಕ್ತಪಡಿಸುವಿರಿ. ಕೆಲವನ್ನು ಮರೆತು ಮುನ್ನಡೆಯುವುದೇ ಉತ್ತಮ. ದ್ವೇಷವನ್ನು ನೀವು ಬೆಳೆಸಿಕೊಳ್ಳುವುದು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಬಹುದು. ನಿಮ್ಮ ಲೆಕ್ಕವನ್ನು ನೀವೇ ಮುಕ್ತಾಯ ಮಾಡಬೇಕು. ಧಾರ್ಮಿಕ ಕಾರ್ಯಗಳಲ್ಲಿ ಇಂದು ನೀವು ತೊಡಗಿಕೊಳ್ಳುವಿರಿ. ಮಾನಸಿಕ ಒತ್ತಡದಿಂದ ನೀವು ಬೇಗ ವಿಶ್ರಾಂತಿಗೆ ತೆರಳಬಹುದು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ಅನಿರೀಕ್ಷಿತವಾಗಿ ಅತಿಥಿಗಳ ಭೇಟಿಯಿಂದ ಗಲಿಬಿಲಿಗೊಳ್ಳುವ ಸಂದರ್ಭವು ಬರಲಿದೆ.

ಮಕರ ರಾಶಿ: ಇಂದು ಕಡಿಮೆ ಖರ್ಚಿನಲ್ಲಿ ಉತ್ತಮ ವಸ್ತುವನ್ನು ಪಡೆಯುವಿರಿ. ಇಂದಿನ ವಿಫಲತೆಯು ನಿಮಗೆ ಛಲವನ್ನು ತರಬಹುದು. ಕಛೇರಿಯಲ್ಲಿ ಒತ್ತಡವು ಇದ್ದರೂ ಅದೆನ್ನೆಲ್ಲ ಮರೆತು ಆರಾಮಾಗಿ ಇರುವಿರಿ. ನಿಮ್ಮ ಮಾತು ಎಲ್ಲರಿಗೂ ಇಷ್ಟವಾದೀತು. ಸಮಯವನ್ನು ಕಳೆಯಲು ಸ್ನೇಹಿತರ ಜೊತೆ ವಿಹಾರಕ್ಕೆ ಹೋಗಬಹುದು. ಯಾರದೋ ಮೇಲಿನ ಕೋಪಕ್ಕೆ ಮಕ್ಕಳಮೇಲೆ ಸಿಟ್ಟಾಗುವಿರಿ. ಸಹೋದರರು ನಿಮ್ಮ ಸಹಾಯವನ್ನು ಕೇಳುವರು. ಇನ್ನೊಬ್ಬರನ್ನು ನಿಂದಿಸುವುದು ನಿಮಗೆ ಶೋಭೆ ತರದು. ಮನೆಯ ನಿರ್ಮಾಣಕ್ಕೆ ಕುಟುಂಬದ ಜೊತೆ ಚರ್ಚಿಸುವಿರಿ. ಯಾರ ಮಾತನ್ನೋ ಅನುಸರಿಸಿ ನೀವು ಕಾರ್ಯ ಪ್ರವೃತ್ತರಾಗುವುದು ಬೇಡ. ಇಂದು ನಿಮ್ಮ ಮೇಲೆ ಬರುವ ಯಾವ ಅಪವಾದವನ್ನೂ ಮನಸ್ಸಿಗೆ ತೆಗೆದುಕೊಳ್ಳದೇ ನೆಮ್ಮದಿಯಿಂದ ಇರುವಿರಿ. ನಿಮ್ಮನ್ನು ತೋರಿಸುವ ಸಮಯವು ಇಂದು ಬರಬಹುದು. ವೈವಾಹಿಕ ಸಂಬಂಧಗಳನ್ನು ಬಂಧುಗಳಲ್ಲಿ ಬೆಳೆಸುವಿರಿ. ಉಚಿತವಾಗಿ ಯಾವುದನ್ನೂ ಬಯಸುವುದು ಬೇಡ.

ಕುಂಭ ರಾಶಿ: ಇಂದು ನೀವು ಯಾವುದನ್ನು ಉಳಿಸಿಕೊಳ್ಳಬೇಕು ಮತ್ತು ಬೇಡ ಎನ್ನುವುದನ್ನು ಸ್ಪಷ್ಟವಾಗಿ ನಿರ್ಧರಿಸಿ. ವ್ಯಾಪಾರದಲ್ಲಿ ಲಾಭವು ಕಡಿಮೆ ಕಾಣಿಸುವುದು. ನೀವುಧಾರ್ಮಿಕ ಆಚರಣೆಯಲ್ಲಿ ಆಸಕ್ತಿಯು ಹೆಚ್ಚು ಇರಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಗೊಂದಲವು ಇರಬಹುದು. ಹೆಚ್ಚು ಒತ್ತಡವು ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ನಿಮ್ಮ ರಹಸ್ಯವನ್ನು ಯಾರಬಳಿಯಾದರೂ ಹೇಳಿಕೊಳ್ಳಬೇಕಾಗಿ ಬರಬಹುದು. ನಿಮ್ಮ ಕಾರ್ಮಿಕರ ಜೊತೆ ವಾಗ್ವಾದವನ್ನು ಮಾಡುವಿರಿ. ನಿಮ್ಮ ಸಂತೋಷವನ್ನು ಕಂಡು ಸಂಕಟಪಡುವವರಿಗೆ ನೀವು ಯಾವ ಪ್ರತಿಕ್ರಿಯೆಯನ್ನು ನೀಡಬೇಕಾಗಿಲ್ಲ. ಅನಗತ್ಯ ವಿಚಾರಗಳ ನಡುವೆ ಪ್ರವೇಶವನ್ನು ಪಡೆಯುವುದು ಬೇಡ. ಹೊಸ ಉದ್ಯಮವನ್ನು ಅರಸುವವರು ಹೆಚ್ಚು ಅನ್ವೇಷಣೆಯನ್ನು ಮಾಡಬೇಕಾದೀತು. ನೇರ ಮಾತಿನಿಂದ ವ್ಯಾಪರಕ್ಕೆ ತೊಂದರೆ ಉಂಟಾಗಬಹುದು.

ಮೀನ ರಾಶಿ: ನಿರ್ದಯಿಯಾಗಿ ವರ್ತಿಸುವುದು ಬೇಡ. ಇಂದು ನಿಮಗೆ ಲಾಭ ನಷ್ಟಗಳ ವಿವೇಚನೆ ಅಧಿಕವಾಗಿರುವುದು. ಸಾಮಾಜಿಕವಾಗಿ ಮನ್ನಣೆ ಸಿಕ್ಕರೂ ಅದನ್ನು ನೀವು ನಿರಾಕರಿಸುವಿರಿ. ವ್ಯಾವಹಾರಿಕವಾಗಿ ನೀವು ಸಡಿಲಾಗುವುದು ಬೇಡ. ಹೆಚ್ಚಿನ ಸಮಯವನ್ನು ಅಧ್ಯಯನದಲ್ಲಿ ಕಳೆಯುವಿರಿ. ನಿಮ್ಮ ಸಂಪತ್ತಿಗೆ ಇತರರ ದೃಷ್ಟಿಯು ಬೀಳಬಹುದು.‌ ಬರಬೇಕಾದ ಹಣವು ವಿಳಂಬವಾಗಬಹುದು.‌ ನೀವು ಇಂದು ಎಲ್ಲ ಜವಾಬ್ದಾರಿಗಳಿಂದ ಹೊರಬರುವಿರಿ. ನಿಮ್ಮ ಅಗತ್ಯತೆಯು ಇಲ್ಲದ ಕಡೆ ಹೋಗಲು ಇಚ್ಛಿಸುವುದಿಲ್ಲ. ಯಾರಿಂದಲೂ ನೀವು ಸಹಾಯವನ್ನು ಪಡೆಯಲು ಇಚ್ಛಿಸುವುದಿಲ್ಲ. ವ್ಯಾಪರವು ನಿಮಗೆ ಲಾಭದಾಯಕವಾದುದು. ಅತಿಯಾದ ನಿರೀಕ್ಷೆಯಲ್ಲಿ ನೀವು ಉಳಿದ ವಿಚಾರಗಳಲ್ಲಿ ಮೈ ಮರೆಯುವಿರಿ. ಹೆಚ್ಚಿದ ಕುಟುಂಬದ ಜವಾಬ್ದಾರಿಗಳಿಂದ ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಗಮನ ಕಡಿಮೆ ಆಗುವುದು. ಅನಗತ್ಯ ಹಸ್ತಕ್ಷೇಪದಿಂದ ನಿಮ್ಮ ಗೌರವ ಕಡಿಮೆ ಆಗಬಹುದು. ದ್ವೇಷವನ್ನು ಮುಂದುವರಿಸುವುದು ನಿಮಗೆ ಇಷ್ಟವಾಗದು.