Daily Horoscope 29 September 2024: ಈ ರಾಶಿಯವರು ಜನರ ಜೊತೆ ಬೆರೆಯುವಾಗ ಎಚ್ಚರಿಕೆ ಇರಲಿ

ಸೆಪ್ಟೆಂಬರ್​ 29,​ 2024ರ​​ ನಿಮ್ಮ ಭವಿಷ್ಯ ಹೇಗಿದೆ?: ಮ್ಮ ಬಾಂಧವ್ಯಗಳನ್ನು ಸದೃಢಗೊಳಿಸಲು ನೀವು ವಿಶೇಷ ಪ್ರಯತ್ನಗಳನ್ನು ಮಾಡುತ್ತೀರಿ. ಬದ್ಧತೆಗಳನ್ನು ಭವಿಷ್ಯಕ್ಕೆ ಭದ್ರತೆಯಾಗಿ ಕಾಣುತ್ತೀರಿ. ಸೌಲಭ್ಯಗಳನ್ನು ನೀವು ಪಡೆದುಕೊಳ್ಳಲಿದ್ದೀರಿ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 29 September 2024: ಈ ರಾಶಿಯವರು ಜನರ ಜೊತೆ ಬೆರೆಯುವಾಗ ಎಚ್ಚರಿಕೆ ಇರಲಿ
ರಾಶಿ ಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 29, 2024 | 12:00 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಮಘಾ, ಯೋಗ: ಸಾಧ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 22 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:52 ರಿಂದ 06:22, ಯಮಘಂಡ ಕಾಲ ಮಧ್ಯಾಹ್ನ 12:23ರಿಂದ 01:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:23 ರಿಂದ 04:52 ರ ವರೆಗೆ.

ಮೇಷ ರಾಶಿ : ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಇಂದು ನಿಮಗೆ ಒಳ್ಳೆಯ ಲಾಭದ ನಿರೀಕ್ಷೆಯನ್ನು ಮಾಡಬಹುದು. ಸಾರ್ವಜನಿಕ ವಲಯದಲ್ಲಿ ನೀವು ಗುರುತಿಸಿಕೊಳ್ಳಲು ಬಯಸುವಿರಿ. ರಪ್ತು ವ್ಯವಹಾರವನ್ನು ಇಂದು ಸುಗಮವಾಗಿ ನಡೆಸುವಿರಿ. ಸ್ತ್ರೀಯ ಕಾರಣದಿಂದ ನಿಮಗೆ ಲಾಭಗಳು ಆಗಲಿದೆ. ವಾಹನ ಖರೀದಿಗೆ ಬೇಕಾದ ವ್ಯವಸ್ಥೆಯನ್ನು ಇಂದು ಮಾಡಿಕೊಳ್ಳಲಿದ್ದೀರಿ. ಇಂದು ನಿಮ್ಮ ತಲೆಯಲ್ಲಿ ಅಪೂರ್ಣ ತುಂಬಿರಲಿವೆ. ಬೇಕಾದಾಗ ಸಿಗದಿದ್ದುದು ಈಗ ಸಿಗಬಹುದು. ನಿಮ್ಮ ಮಗನ ಮೇಲೆ ಸಂಪತ್ತಿನ‌ ವಿಚಾರವಾಗಿ ಅಪವಾದಗಳು ಕೇಳಿಬರಬಹುದು. ತುರ್ತು ಕಾರ್ಯಕ್ಕಾಗಿ ಮನೆಯಿಂದ ಹೊರಡುವಿರಿ. ಕುಟುಂಬದವರ ಸಹಾಯದಿಂದ‌ ನೀವು ಆತ್ಮವಿಶ್ವಾಸವನ್ನು ಪಡೆಯುವಿರಿ. ಮಾತಿನಂತೆ ಕೃತಿಯೂ ಇರಬೇಕಾಗುವುದು. ಯಾರ ಮಾತನ್ನೂ ಆಲಿಸುವ ವ್ಯವಧಾನ ಇಂದು ಇರದು. ಹಿರಿಯರ ಪ್ರೀತಿಗೆ ಪಾತ್ರರಾಗುವಿರಿ. ನಿಮ್ಮ ಪ್ರಭಾವವನ್ನು ಯಾರಾದರೂ ಬಳಸಿಕೊಳ್ಳಬಹುದು.

ವೃಷಭ ರಾಶಿ : ನೀವು ಆರಿಸಿಕೊಂಡ ಮಾರ್ಗವು ಹಲವು ದಿನಗಳ ಅನಂತರ ಬೇಡವೆನಿಸಬಹುದು. ಇಂದು ನಿಮ್ಮ ಕೆಲಸದಲ್ಲಿ ಸಂತೋಷ ಕಾಣಬಹುದು. ನಿಮ್ಮ ವೈಯಕ್ತಿಕ ಜೀವನವನ್ನು ವೃತ್ತಿಜೀವನಕ್ಕೆ ಸಮನ್ವಯ ಸಾಧಿಸುವಿರಿ. ಆರ್ಥಿಕವಾಗಿ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲ, ಆದರೆ ನಿರ್ಲಕ್ಷಿಸಬಹುದಾದ ವಿಷಯಗಳು ನಿಮ್ಮ ಮನಸ್ಸನ್ನು ತುಂಬಿಕೊಳ್ಳುತ್ತವೆ. ಶತ್ರುಗಳ ಬಾಧೆಯು ನಿಮಗೆ ಚಿಂತೆಯನ್ನು ಉಂಟುಮಾಡೀತು. ನಿಮ್ಮಷ್ಟಕ್ಕೆ ನೀವಿರಲು ಬಯಸುವಿರಿ. ಹಿಂದಿನಿಂದ ಮಾತನಾಡಿಕೊಳ್ಳುವರಿಗೆ ನೆಲೆಯನ್ನು ಕೊಡುವುದು ಬೇಡ. ಮಾತನಾಡಲು ನಿಮಗೆ ತೊಂದರೆಯಾದೀತು ಇಂದು ನಿಮಗಾದ ವಿಶ್ವಾಸದ್ರೋಹದಿಂದ ನೀವು ಸಿಟ್ಟಿಗೇಳುವಿರಿ. ನಿಮ್ಮದಲ್ಲದ ವಸ್ತುವನ್ನು ಪಡೆದುಕೊಳ್ಳಲು ಹಂಬಲಿಸುವಿರಿ. ಸಿಗದೇ ದುಃಖಿಸಬೇಕಾದೀತು. ಎಲ್ಲದಕ್ಕೂ ದೈವವನ್ನು ದೂರುತ್ತ ಆಲಸ್ಯದಿಂದ ಇರುವುದು ಬೇಡ.‌ ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣವಾದ ನಂಬಿಕೆ ಇರದು. ಯಾವುದನ್ನೂ ಉಳಿಸಿಕೊಂಡು ಹೋಗುವುದನ್ನು ಕಲಿಯಬೇಕು.

ಮಿಥುನ ರಾಶಿ : ಕಾರ್ಯದ ಒತ್ತಡದಿಂದ ಆರೋಗ್ಯವು ಹದ ತಪ್ಪಬಹುದು. ಸರ್ಕಾರದ ಅಧಿಕಾರಿಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಭಾವನೆಗಳಿಂದ ಯಾರನ್ನೂ ಸುಲಭವಾಗಿ ಬಗ್ಗಿಸಲಾಗದು. ಹಣಕಾಸಿನ ವಿಚಾರದಲ್ಲಿ ನಿಮಗೆ ಸಂಕಷ್ಟವು ಬರಬಹುದು. ಹಣಕಾಸಿಗೆ ಸಂಬಂಧಿಸಿದಂತೆ ಕೆಲವರನ್ನು ದೂರಮಾಡಿಕೊಳ್ಳುವಿರಿ. ಯಾರದೋ ಒತ್ತಾಯಕ್ಕಾಗಿ ಪ್ರಯಾಣ ಮಾಡಬೇಕಾಗಬಹುದು. ಪತ್ನಿಯ ಕಡೆಯಿಂದ ನಿಮಗೆ ಕೆಲವು ಸಹಾಯವನ್ನು ನಿರೀಕ್ಷಿಸಬಹುದು. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವು ಲಭಿಸುವುದು. ಖಾಸಗಿಯ ಸಮಾರಂಭದಲ್ಲಿ ಭಾಗವಹಿಸುವಿರಿ. ವ್ಯಾವಹಾರಿಕವಾಗಿ ಮೋಸ ಹೋಗುವ ಸಾಧ್ಯತೆ ಇದೆ. ನಿಮಗೆ ಒತ್ತಡದ ಕೆಲಸವು ಬಂದು ಮನೆಯ ಕೆಲಸವು ಮರೆಯಾಗಬಹುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ನೀವು ಕೇಳಲು ಸಂಕೋಚಪಡುವಿರಿ. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ. ಬಾಯಿ ತಪ್ಪಿ ಕೆಟ್ಟದ್ದನ್ನು ಆಡುವಿರಿ.

ಕರ್ಕಾಟಕ ರಾಶಿ : ಇಂದು ನಿಮ್ಮ ಜಾಣತನವೇ ಮುಳುವಾಗಬಹುದು. ಸಂಕೀರ್ಣವಾದ ಜೀವನವನ್ನು ಆಶಾವಾದದಿಂದ ಸರಳವಾಗಬಹುದು. ಅಗತ್ಯವಿದ್ದಾಗ ಮಾತ್ರ ಮಾತನಾಡಿ, ಅನಗತ್ಯ ಒತ್ತಡದಿಂದ ಕುಗ್ಗಿ ಹೋಗುವಿರಿ. ಭೂಮಿಯ ವ್ಯವಹಾರವನ್ನು ಮಾಡಲು ಬಹಳ ಉತ್ಸಾವಿರಲಿದ್ದು ಪಾಲುದಾರಿಕೆಯಲ್ಲಿ ಇನ್ನೊಬ್ಬರ ಜೊತೆ ಸೇರಿ ಮಾಡುವಿರಿ. ಕಛೇರಿಯಲ್ಲಿ ನಿಮ್ಮ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿರಲಿ. ನಿಮಗೆ ಬೇಡದ ವಸ್ತುಗಳನ್ನು ಯಾರಿಗಾದರೂ ಕೊಡುವ ಮನಸ್ಸಾಗುವುದು. ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಿಕೊಳ್ಳುವುದು ಉತ್ತಮ. ನೀವು ಶುಭವಾರ್ತೆಯ ನಿರೀಕ್ಷೆಯಲ್ಲಿ ಇರುವಿರಿ. ಮಕ್ಕಳ ಭವಿಷ್ಯವನ್ನು ನಿರೂಪಿಸಲು ನಿಮಗೆ ಒದ್ದಾಟವಾಗಬಹುದು. ನಿಮ್ಮ ಜೊತೆ ಉದ್ಯೋಗದ ವೃದ್ಧಿಗೆ ಸಂಬಂಧಿಸಿದ ಮಾತುಕತೆಗಳು ನಡೆಯುವುದು. ಕೆಲವನ್ನು ಬಿಟ್ಟುಕೊಡುವುದು ಅನಿವಾರ್ಯವಾಗಬಹುದು. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು.

ಸಿಂಹ ರಾಶಿ : ನಿಮಗೆ ಅತ್ಮ ಸ್ಥೈರ್ಯದ ಕೊರತೆ ಬಹುವಾಗಿ ಕಾಡುವುದು. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಒಪ್ಪಿಕೊಂಡ ಕೆಲಸದಿಂದ‌ ನಿಮಗೆ ಕಿರಿಕಿರಿಯಾದೀತು. ನಿಮಗೆ ಖಾಸಗಿ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ಸಿಗಬಹುದು. ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ನಿಮಗೆ ಆಗದು. ನೀವು ತೆಗೆದುಕೊಂಡ ತೀರ್ಮಾನವನ್ನು ಇತರರು ಬದಲಿಸಿದ್ದು ನಿಮ್ಮ ಕೋಪಕ್ಕೆ ಕಾರಣವಾಗಲಿದೆ. ನಿಮ್ಮ ಕೆಲಸಕ್ಕೆ ಕುಟುಂಬ ಬೆಂಬಲವಿರುವುದು. ಆರ್ಥಿಕ ಸಹಾಯವನ್ನು ನೀವು ಸ್ನೇಹಿರಿಂದ ಪಡೆದುಕೊಳ್ಳುವಿರಿ. ವ್ಯಾಪಾರದಲ್ಲಿ ಸ್ವಲ್ಪ ಲಾಭವು ಇರಲಿದೆ. ಜನರ ಜೊತೆ ಬೆರೆಯುವಾಗ ಎಚ್ಚರಿಕೆ ಇರಲಿ. ಖಾಸಗಿಯ ಸಮಯವನ್ನು ಯಾರಿಗೂ ಕೊಡುವುದು ಬೇಡ. ನಿಮ್ಮ ಬಗ್ಗೆ ಅಧಿಕರ ದುರುಪಯೋಗದ ಆರೋಪವು ಬರಬಹುದು. ಅಧಿಕಾರಕ್ಕೆ ನೀವು ಮಾಡಿದ ಪ್ರಯತ್ನವು ಸಫಲವಾಗಬಹುದು. ಧಾರ್ಮಿಕ ಕಾರ್ಯಗಳಿಗೆ ದೂರಪ್ರಯಾಣವನ್ನು ಮಾಡುವಿರಿ. ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ. ಕೇಳಿದಷ್ಟೇ ವಿಚಾರಕ್ಕೆ ಉತ್ತರಿಸಿದರೆ ಸಾಕು.

ಕನ್ಯಾ ರಾಶಿ : ನೀವು ಕಛೇರಿಯ ಕೆಲಸದಲ್ಲಿ ಅವಸರದ ನಿರ್ಧಾರವನ್ನು ತೆಗದುಕೊಳ್ಳುವುದು ಬೇಡ. ನೀವು ಸಂತೋಷವಾಗಿರುತ್ತೀರಿ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರಣಯದಲ್ಲಿ ಸಮಯ ಕಳೆಯುತ್ತೀರಿ. ನಿಮ್ಮ ಸಂಗಾತಿಯ ಜೊತೆ ನಿಮ್ಮ ಆಂತರಿಕ ಆಲೋಚನೆಗಳನ್ನು ಹಂಚುವಿರಿ. ಭಾವೀ ಸಂಗಾತಿಯ ಜೊತೆ ಸುತ್ತಾಡಿ ಅರ್ಥಮಾಡಿಕೊಳ್ಳುವಿರಿ. ಭೂಮಿಯ ವಿಚಾರದಲ್ಲಿ ನಿಮಗೆ ನಷ್ಟವಾಗಬಹುದು. ಮನಸ್ಸಿನ ನಿಯಂತ್ರಣವನ್ನು ಸಾಧಿಸುವ ಅವಶ್ಯಕತೆ ಇದೆ. ಹಣದ ದುರ್ಬಳಕೆಯನ್ನು ಮಾಡುವ ಸಾಧ್ಯತೆ ಇದೆ. ಕುಟುಂಬದ ತೊಡಕುಗಳನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸುವಿರಿ. ಇನ್ನೊಬ್ಬರಿಗೆ ಸಹಾಯವನ್ನು ಮಾಡುವ ಇಚ್ಛೆಯು ಇರಲಿದೆ. ಅಮೂಲ್ಯವಾದ ವಸ್ತುವು ಕಣ್ಮರೆಯಾಗಿ ಆತಂಕವನ್ನು ಸೃಷ್ಟಿಸಬಹುದು. ಆಪ್ತರು ನಿಮಗೆ ದುಷ್ಕೃತ್ಯಕ್ಕೆ ಪ್ರೇರಣೆ ಕೊಡಬಹುದು. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು. ಹೇಳಿಕೊಳ್ಳುವಷ್ಟು ಸುಲಭವಾಗಿ ಯಾವುದನ್ನೂ ಬದಲಿಸಲಾಗದು.

ತುಲಾ ರಾಶಿ : ಇಂದು ನೀವು ಎಲ್ಲ ಒತ್ತಡಗಳನ್ನು ಬದಿಸರಿಸಿ ನಿರಾಳವಾಗಿ ಕಾಲ ಕಳೆಯುತ್ತೀರಿ. ವ್ಯವಸ್ಥೆಯ ಮುಖ್ಯಸ್ಥರಾದವರಿಗೆ ಜವಾಬ್ದಾರಿಯನ್ನು ಮುನ್ನಡೆಸುವುದು ಕಷ್ಟವಾಗುವುದು. ನಿಮ್ಮ ವಿರೋಧಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಇಂದು ನಿಮಗೆ ಒತ್ತಡವನ್ನು ನಿಭಾಯಿಸುವುದು ಕಷ್ಟವಸಲಾದೀತು. ಕಷ್ಟದಲ್ಲಿ ಇರುವವರಿಗೆ ಕರುಣೆ ತೋರಿಸುವಿರಿ. ನಿಮಗೆ ಇಷ್ಟವಾಗದ ವ್ಯವಹಾರವು ನಿಮ್ಮ ಬಳಿಗೆ ಬರುತ್ತಲೇ ಇರುವುದು. ಅಸಭ್ಯ ವರ್ತನೆಯಿನಿಂದ ಬೈಗುಳವು ಸಿಗಬಹುದು. ಒಂದೇ ವಿಚಾರಕ್ಕೆ ದಂಪತಿಗಳ ನಡುವೆ ಕಲಹವಾಗುತ್ತಲೇ ಇರುವುದು. ಆಪ್ತರು ನಿಮಗೆ ಪ್ರೀತಿಯಿಂದ ಆತಿಥ್ಯವನ್ನು ಕೊಡಿಸುವರು. ಅನಾರೋಗ್ಯವು ತುರ್ತು ಚಿಕಿತ್ಸೆ ಮಾಡುವತನಕ ಕರೆದುಕೊಂಡು ಹೋಗುವುದು. ಭೂಮಿಯ ವಿಚಾರದಲ್ಲಿ ನಷ್ಟವಾಗಿ ತೊಂದರೆ ಪಡುವಿರಿ.

ವೃಶ್ಚಿಕ ರಾಶಿ : ಯಾರಿಗೋ ಕೊಡಬೇಕಾದ ಹಣವು ಅನಿರೀಕ್ಷಿತವಾಗಿ ನಿಮ್ಮ ಕೈ ಸೇರುವುದು. ನೀವು ಹೂಡಿಕೆದಾರರಾಗಿದ್ದರೆ, ನಿಮ್ಮ ಹೂಡಿಕೆಯಿಂದ ಗಮನಾರ್ಹ ಲಾಭವಿದೆ. ದೀರ್ಘಕಾಲದಿಂದ ಉಳಿದಿರುವ ಸಾಲಗಳು ಕೂಡಾ ಮುಕ್ತಾಯವಾಗುವುದು. ರಾಜಕಾರಣಿಗಳಿಗೆ ಹೆಚ್ಚಿನ ಬೆಂಬಲವು ಸಿಗಲಿದ್ದು ಜನರ ಕಾರ್ಯವನ್ನು ಮಾಡಲು ಇಚ್ಛೆಪಡುವಿರಿ. ಮಾನಸಿಕ ಒತ್ತಡದಿಂದ ದೂರವಾಗಲು ಏಕಾಂತವನ್ನು ಬಯಸುವಿರಿ. ಹಣಕಾಸಿನ ವ್ಯವಹಾರವು ಸರಿಯಾಗಿ ಇಟ್ಟುಕೊಳ್ಳಿ. ಪೋಷಕರ ಜೊತೆ ನಿಮ್ಮ ಸಮಯವು ಆನಂದದಿಂದ ಇರಲಿದೆ. ನಿಮ್ಮ ಮನಸ್ಸು ಯಾವುದೋ ಆಲೋಚನೆಯಲ್ಲಿ ಮಗ್ನವಾಗುವುದು. ಸ್ನೇಹಿತರ ಸಲಹೆಗಳು ನಿಮ್ಮ ಉದ್ಯಮಕ್ಕೆ ಸಹಕಾರಿಯಲಿದೆ. ಸಮಾಲೋಚನೆಯಿಂದ ಬಗೆಹರಿಯುವುದನ್ನು ಸರಿಮಾಡಿಕೊಳ್ಳಿ. ವಿದ್ಯಾಭ್ಯಾಸವನ್ನು ಹೆಚ್ಚು ಮಾಡಬೇಕಾಗಿ ಬರಬಹುದು. ಮಕ್ಕಳ ಸುಖವನ್ನು ಅನುಭವಿಸುವಿರಿ. ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳುವಿರಿ. ವಿದ್ಯಾಭ್ಯಾಸದ ಕಾರಣಕ್ಕೆ ಮನೆಯನ್ನು ಬಿಡುವುದು ನಿಮಗೆ ಕಷ್ಟವಾದೀತು.

ಧನು ರಾಶಿ : ಯಾವುದರಲ್ಲಿಯೂ ಸುಖ ಕಾಣುವ ಮನಸ್ಸು ಆಗದು. ಶುಭಕಾರ್ಯದಲ್ಲಿ ಭಾಗವಹಿಸುವಿರಿ. ನಿಮ್ಮ ದಿನವು ಉಲ್ಲಾಸದ ಸ್ಫೂರ್ತಿಗಳಿಂದ ಕೂಡಿರುತ್ತದೆ. ನೀವು ಸಂಪೂರ್ಣ ಜೀವಂತಿಕೆಯ ಭಾವನೆ ಹೊಂದಿದ್ದು, ಅತ್ಯಂತ ಉತ್ಸಾಹದಲ್ಲಿರುವುದರಿಂದ ಅದು ಅರ್ಥವಿಲ್ಲದ ಚಟುವಟಿಕೆಗಳು ಅಥವಾ ಕೆಲಸಗಳಾದರೂ ನೀವು ತಲೆ ಕೆಡಿಸಿಕೊಳ್ಳುವುದಿಲ್ಲ. ಸಜ್ಜನರ ಸಹವಾಸವನ್ನು ಇಷ್ಟಪಡುವಿರಿ. ಮಾತುಗಳನ್ನು ನೋವಾಗುವಂತೆ ಆಡುವಿರಿ. ಭೋಗವಸ್ತುಗಳ ಖರೀದಿಯನ್ನು ಮಾಡುವಿರಿ. ನಿಮ್ಮ ಗೌರವಕ್ಕೆ ತೊಂದರೆಯಾಗುವ ಕೆಲಸವನ್ನು ಮಾಡುವುದು ಬೇಡ. ಹಿರಿಯ ಹಿತವಚನವು ನಿಮಗೆ ಅಸಹ್ಯವಾಗುವುದು. ಆಹಾರದಿಂದ ನಿಮಗೆ ಅನಾರೋಗ್ಯವು ಆಗುವುದು. ಸಂಗಾತಿಯ ಮಾತುಗಳನ್ನು ವಿರೋಧಿಸುವಿರಿ. ಇನ್ನೊಬ್ಬರಿಗೆ ಚುಚ್ಚಿ ಮಾತನಾಡಲಿದ್ದೀರಿ. ಸುಲಭವಾಗಿ ಸಿಗುವುದನ್ನು ಬಿಟ್ಟುಕೊಡುವಿರಿ. ನಿಮ್ಮ ಪ್ರಯಾಣದಿಂದ ಇಂದು ತುಂಬಾ ಪ್ರಯೋಜನ ಆಗದು.

ಮಕರ ರಾಶಿ : ಇಂದು ಕೆಲವು ಘಟನೆಗಳನ್ನು ಹೇಗೆ ಸ್ವಕರಿಸಬೇಕು ಎಂಬ ಇರುಸುಮುರುಸಾಗಬಹುದು. ನೀವು ಹಳೆಯ ನೆನಪುಗಳ ಮನಸ್ಥಿತಿಯಲ್ಲಿರುತ್ತೀರಿ. ಬೌದ್ಧಿಕ ಅನ್ವೇಷಣೆಗಳು ನಿಮ್ಮನ್ನು ಆಕರ್ಷಿಸುತ್ತವೆ. ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಿ. ಭೂಮಿಯ ಕ್ರಯ ಮತ್ತು ವಿಕ್ರಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಇಂದು ನೀವು ಮಾಡಿದ ಖರ್ಚು ಸದುಪಯೋಗವಾಗಿದೆ ಎಂದುಕೊಳ್ಳುವುದು ಬೇಡ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಕಷ್ಟ. ನಿಮ್ಮ ಸಾಮಾಜಿಕ ಚಟುವಟಿಕೆಗಳಿಗೆ ಅಡ್ಡಗಾಲು ಹಾಕಬಹುದು. ಸಂಗಾತಿಯ ಗುಣವನ್ನು ಅತಿಯಾಗಿ ಇಷ್ಟಪಡುವಿರಿ. ಅತಿಯಾದ ಕೆಲಸದ ಕಾರಣ ನಿಮಗಾದ ಮಾನಸಿಕ‌ ಒತ್ತಡಕ್ಕೆ ವಿಶ್ರಾಂತಿ ಅವಶ್ಯಕವಾದೀತು. ಎಲ್ಲ ಜವಾಬ್ದಾರಿಗಳೂ ನಿಮಗೆ ಬೇಕು ಎಂಬ ದುರಾಸೆ ಬೇಡ. ಆರೋಗ್ಯ ಸಮಸ್ಯೆಗಳು ನಿಮ್ಮ ಸರಿಯಿಲ್ಲದ ದಿನಚರಿಯಿಂದ ಬರಲಿದೆ. ಅಮೂಲ್ಯ ವಸ್ತುವಿನ ಬಗ್ಗೆ ನಿಷ್ಕಾಳಜಿ ಸರಿಯಲ್ಲ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು.

ಕುಂಭ ರಾಶಿ : ನಿಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗದು. ವಿಷಯ ಎಷ್ಟೇ ದೊಡ್ಡದಾಗಿದ್ದರೂ, ನಿಮ್ಮ ಸಾಮರ್ಥ್ಯ, ನಿಮ್ಮ ವ್ಯವಹಾರ ಕುಶಲತೆ ನಿಮ್ಮನ್ನು ಮುನ್ನಡೆಸುತ್ತದೆ. ಗಮನ ಕೇಂದ್ರೀಕರಿಸಿ ಹಾಗೂ ಎಚ್ಚರದಿಂದಿರಿ. ಜಾಗರೂಕತೆ ಮತ್ತು ಹುಷಾರಿನಲ್ಲಿರಿ. ಶಾಂತವಾಗಿ ಹಾಗೂ ಸೂಕ್ಷ್ಮವಾಗಿ ವ್ಯವಹರಿಸಿ. ಆಲಂಕಾರಿಕ ವಸ್ತುಗಳ ಬಗ್ಗೆ ಹೆಚ್ಚು ಮೋಹವಿರುವುದು. ನಿಮ್ಮ ವರ್ತನೆಯು ಹಲವರಿಗೆ ಇಷ್ಟವಾಗಲಿದೆ. ಬಂಧುಗಳು ನಿಮ್ಮ ಬಗ್ಗೆ ಹಗುರವಾದ ಮನಃಸ್ಥಿತಿಯನ್ನು ಇಟ್ಟುಕೊಳ್ಳುವರು. ಸಂಗಾತಿಯ ಜೊತೆ ಪ್ರೀತಿಯನ್ನು ಹಂಚಿಕೊಳ್ಳುವಿರಿ. ಕೃಷಿಕರು ಅಧಿಕ ಲಾಭವನ್ನು ಪಡೆಯುವರು. ಅಪರಿಚಿತರ ಸಹವಾಸವನ್ನು ಕಡಿಮೆ ಮಾಡಿಕೊಳ್ಳಿ. ಹೂಡಿಕೆಯಲ್ಲಿ ಜಾಗರೂಕತೆ ಇರಲಿ. ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಚಂಚಲ ಮನಸ್ಸು ಸಹಜವಾದುದನ್ನು ಗುರುತಿಸಲಾರದು. ಇಂದಿನ ಒತ್ತಡದಲ್ಲಿ ಗಂಭೀರವಾದ ತೀರ್ಮಾನಗಳು ಕಷ್ಟ.

ಮೀನ ರಾಶಿ : ನಿಮ್ಮ ಬಾಂಧವ್ಯಗಳನ್ನು ಸದೃಢಗೊಳಿಸಲು ನೀವು ವಿಶೇಷ ಪ್ರಯತ್ನಗಳನ್ನು ಮಾಡುತ್ತೀರಿ. ಬದ್ಧತೆಗಳನ್ನು ಭವಿಷ್ಯಕ್ಕೆ ಭದ್ರತೆಯಾಗಿ ಕಾಣುತ್ತೀರಿ. ಸೌಲಭ್ಯಗಳನ್ನು ನೀವು ಪಡೆದುಕೊಳ್ಳಲಿದ್ದೀರಿ. ಗೌರವಗಳು ನಿಮಗೆ ಸಿಗಬಹುದು. ಕೆಲವು ವಿಚಾರವು ನಿಮಗೆ ಗೊತ್ತಾಗದೇ ಇರುವುದು ಬೇಸರ ತರಿಸಬಹುದು. ಮನೆಯರ ಮೇಲೆ ನೀವು ಸಿಟ್ಟಾಗುವಿರಿ. ಯಾರ ಮಾತನ್ನೂ ಕೇಳುವ ಮಾನಸಿಕತೆ ಇರುವುದಿಲ್ಲ. ತಾಳ್ಮೆಯಿಂದ ಇಂದಿನ ವ್ಯವಹಾರವನ್ನು ಮಾಡಿ. ಉತ್ತಮ ಸ್ನೇಹಿತರ ಸಮೂಹವೂ ಸಹ ಹೆಚ್ಚಾಗಲಿದೆ. ನಿಮಗೆ ಗೊತ್ತಾಗದಂತೆ ಖರ್ಚು ಅಧಿಕವಾಗುವುದು. ಸ್ತ್ರೀಯರಿಗೆ ಕೆಲವು ಲಾಭಗಳು ಆಗಬಹುದು. ನಿಮ್ಮ ನೇರ ನುಡಿಗಳೇ ಇಂದು ನಿಮಗೆ ತೊಂದರೆ ತರುವುದು. ಇಂದು ನಿಮ್ಮ ತಲೆಯಲ್ಲಿ ಅಪೂರ್ಣ ಕಾರ್ಯಗಳೇ ತುಂಬಿರುವುದು.

-ಲೋಹಿತ ಹೆಬ್ಬಾರ್-8762924271 (what’s app only)

ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು