Astrology: ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಲ್ಲ, ಸಂದರ್ಭಕ್ಕೆ ತಕ್ಕಂತೆ ಬದಲಾಗುವುದು
ಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 22 ಜೂನ್ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶನಿವಾರ (ಜೂನ್. 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಹುಣ್ಣಿಮೆ, ನಿತ್ಯನಕ್ಷತ್ರ: ಮೂಲಾ, ಯೋಗ: ಶುಕ್ಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:21 ರಿಂದ 10:58ರ ವರೆಗೆ, ಯಮಘಂಡ ಕಾಲ 02:12ರಿಂದ 03:49ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:06ರಿಂದ ಬೆಳಗ್ಗೆ 07:44ರ ವರೆಗೆ.
ಮೇಷ ರಾಶಿ : ನಿಮ್ಮ ನಡವಳಿಕೆಯೇ ಸಮೀಪಕ್ಕೆ ಜನರು ಬರುವಂತೆ ಮಾಡಿದೆ. ಅತಿಯಾದ ಬಳಕೆಯಿಂದ ಸಂಬಂಧಗಳು ಹಳಸಬಹುದು. ನಿಮ್ನ ಸ್ವಂತ ಉದ್ಯೋಗಕ್ಕೆ ವರ್ತಮಾನಕ್ಕೆ ತಕ್ಕಂತೆ ರೂಪವನ್ನು ಬದಲಿಸಿ, ಸತ್ತ್ವನ್ನು ಉಳಿಸಿಕೊಳ್ಳುವುದು ಉತ್ತಮ. ನಿಮಗೆ ಗೊತ್ತಿಲ್ಲದೇ ದೈವವೊಂದು ನಿಮ್ಮನ್ನು ಪ್ರತಿಕೂಲದಿಂದ ಅನುಕೂಲ ವಾತಾವರಣಕ್ಕೆ ಒಯ್ಯಬಹುದು. ಆದರೆ ನಿಮ್ಮ ಪೂರ್ವಾರ್ಜಿತವು ಸರಿಯಾಗಿರಬೇಕು. ಇಂದು ಸ್ವಂತಿಕೆಯಿಂದ ವ್ಯವಹರಿಸುವ ಚಾಣಾಕ್ಷತನ ಅತ್ಯವಶ್ಯಕ. ಕಳೆದುಹೋದುದರ ಬಗ್ಗೆ ನೆನೆಯುವುದು ಬೇಡ. ಪಡೆದುಕೊಳ್ಳುವ ವಿಧಾನದ ಕಡೆ ಗಮನಿಸಿ. ಕಛೇರಿಯಲ್ಲಿ ಇಂದು ವಾದಗಳು ನಡೆಯಬಹುದು. ವಿದ್ಯಾರ್ಥಿಗಳಿಗೆ ಸಾಲಬಾಧೆ ತಟ್ಟುವ ಸಾಧ್ಯತೆ ಇದೆ. ಅದನ್ನು ಸರಿ ಮಾಡಿಕೊಳ್ಳುವ ಮಾರ್ಗವೂ ಇದೆ.
ವೃಷಭ ರಾಶಿ : ಇಂದು ನಿಮಗೆ ಕೆಲವು ಕಾರ್ಯಗಳು ವ್ಯರ್ಥವೆನಿಸಬಹುದು. ಒಂದಾದಮೇಲೊಂದರಂತೆ ಬರುವ ಕೆಲಸಗಳು ನಿಮಗೆ ಒತ್ತಡವಾಗಲಿದೆ. ಕ್ಷಣಕಾಲ ಏನನ್ನೂ ಯೋಚಿಸದೇ ಇರಿ. ಸದ್ಯ ಆಲಸ್ಯವೇ ಮೈತುಂಬಿಕೊಂಡಿರುವ ಕಾರಣ ಯಾವ ಅಂಶವೂ ನಿಮ್ಮೊಳಗೆ ಹೋಗದು. ಅತಿಯಾದ ಪ್ರಯಾಣದಿಂದ ಆಯಾಸವಾಗಲಿದೆ. ಅಪರಿಚಿತರ ಜೊತೆ ನಿಮ್ಮ ಮಾತು ಅಲ್ಪವಿರಲಿ. ಯಾರದಾರೂ ಬಂದು ವಿವಾಹವಾಗಲು ಕೇಳಿಕೊಂಡರೆ ಇಲ್ಲವೆನಬೇಡಿ. ಕಾಲವನ್ನು ಹಿಂದಕ್ಕೆ ಕಳುಹಿಸುವ ಪ್ರಯತ್ನ ಬೇಡ. ಯಾರೊಂದಿಗೂ ಮುಕ್ತವಾಗಿ ಮಾತನಾಡಲು ಅವಕಾಶ ಸಿಗದು. ಕೆಲವು ಸನ್ನಿವೇಶವು ನಿಮಗೆ ಇಷ್ಟವಾಗದು. ಕೆಲವು ವಿರೋಧವನ್ನು ನೀವು ಸಹಿಸಿಕೊಳ್ಳಲು ತಯಾರಿರಬೇಕು. ಅದರೂ ಅನಿವಾರ್ಯ ಎನಿಸೀತು. ಸನ್ನಿವೇಶವನ್ನು ಎದುರಿಸುವುದು ಕಷ್ಟವಾಗಲಾರದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ. ಸಮಾಧಾನದ ಚಿತ್ತವು ಅನೇಕ ವಿಚಾರಕ್ಕೆ ಪೂರಕ.
ಮಿಥುನ ರಾಶಿ : ನಿಮ್ಮ ಆಲೋಚನೆಗಳಿಂದ ನಿಮಗೆ ಯೋಗ್ಯ ಸ್ಥಾನವು ಲಭಿಸುವುದು. ನಿರ್ಲಕ್ಷ್ಯವನ್ನು ಮಾಡದೇ ಕೆಲಸಗಳನ್ನು ಮಾಡಿ ಮುಗಿಸಿ. ಹಣವನ್ನು ಹೂಡಿಕೆ ಮಾಡಲು ಮುಂದಾಲೋಚನೆಯನ್ನು ಇಟ್ಟುಕೊಂಡು ಮಾಡಿ. ಮಕ್ಕಳಿಂದ ಸಂತೋಷವನ್ನು ಪಡೆಯುವಿರಿ. ಇಂದು ನೀವು ಯಾರಿಗೋ ಕಾದು ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಭೂಮಿಯ ಖರೀದಿಯ ಬಗ್ಗೆ ಬಂಧುಗಳಿಂದ ಒತ್ತಡ ಬರಬಹುದು. ಕಛೇರಿಯ ಕೆಲಸವೂ ಈ ಕಾರಣದಿಂದ ವಿಳಂಬವಾಗುವುದು. ನಿಮ್ಮ ಸ್ಫೂರ್ತಿಯ ಮಾತುಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾದೀತು. ಶತ್ರುಗಳಿಂದ ತೊಂದರೆ ಇಲ್ಲದಿದ್ದರೂ ನಿಮ್ಮೊಳಗೆ ಇದ್ದಾರೆಂಬ ಭಾವನೆ ಇರಲಿದೆ. ಬೆಳಗಿನ ಜಾವ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ, ನಿಮ್ಮ ಅನೇಕ ಆರೋಗ್ಯದ ಸಮಸ್ಯೆಗಳು ದೂರಾಗಲಿದೆ. ಸೂಕ್ಷ್ಮ ವಿಚಾರಗಳನ್ನು ಪಕ್ಷಪಾತವಿಲ್ಲದೇ ನಿರ್ಣಯಿಸಬೇಕಾಗುವುದು. ಮನೆಯಲ್ಲಿ ಹರ್ಷದ ವಾತಾವರಣ ಇದ್ದು ಬಂಧುಗಳು ನಿಮ್ಮ ಜೊತೆಗಿರುವರು.
ಕರ್ಕ ರಾಶಿ : ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಿಲ್ಲ. ಸಂದರ್ಭಕ್ಕೆ ತಕ್ಕಂತೆ ಬದಲಾಗುವುದು. ನಿಮ್ಮ ಅಗತ್ಯದ ಹಣವನ್ನು ಪೂರೈಸಲು ಶ್ರಮಪಡುವಿರಿ. ನಾಳಿನ ಬಗ್ಗೆ ಚಿಂತೆ ನಿಮಗಿರಲಿದೆ. ಪಾಪಪ್ರಜ್ಞೆಯು ನಿಮ್ಮನ್ನು ಕಾಡಿ ಮನಸ್ಸು ದುರ್ಬಲವಾಗಬಹುದು. ಯಾರ ಸ್ಥಾನ, ಬುದ್ಧಿ, ಸ್ಥಳ, ಸಂದರ್ಭ, ವ್ಯಕ್ತಿಗಳನ್ನು ಅಪ್ರಯೋಜಕ ಎಂದು ತಿಳಿಯಬೇಡಿ. ನಿಮಗೆ ಉಪತೋಗವಿಲ್ಲದಿದ್ದರೆ ಮತ್ತಾರಿಗಾದರೂ ಆದಾರು, ಏನನ್ನಾದರೂ ಸಾಧಿಸಿಯಾರು. ಹಣೆಬರಹವನ್ನು ಯಾರೂ ತಿದ್ದಲಾಗದು ಎಂದು ನಂಬಿ ಕುಳಿತಿರಬೇಡಿ. ನಿಮ್ಮ ಪ್ರಯತ್ನವನ್ನು ಮಾಡಿ. ಸಾಲವನ್ನು ತೀರಿಸಲು ತುರ್ತಾಗಿ ಓಡಾಡಬೇಕಾದೀತು. ಅಸ್ಪಷ್ಟವಾದ ವಿಚಾರಕ್ಕೆ ಕೈ ಹಾಕಬೇಡಿ. ಸಂಗಾತಿಯು ನಿಮ್ಮ ಬಗ್ಗೆ ತವರಿನಲ್ಲಿ ದೂರು ನೀಡಬಹುದು. ಉಗುರಿನಲ್ಲಿ ಆಗುವ ಕೆಲಸಕ್ಕೆ ಕೊಡಲಿ ತಂದಂತಾಗುವುದು. ಯಾವುದನ್ನೂ ಅತಿಯಾಗಿಸಿಕೊಳ್ಳುವುದು ಬೇಡ. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವು ಇರುವುದು. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ.