Astrology: ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ, ಕಂಕಣ ಭಾಗ್ಯ ಕೂಡಿಬರಲಿದೆ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 24 ಜೂನ್​​ 2024ರ​​ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Astrology: ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ, ಕಂಕಣ ಭಾಗ್ಯ ಕೂಡಿಬರಲಿದೆ
ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ, ಕಂಕಣ ಭಾಗ್ಯ ಕೂಡಿಬರಲಿದೆ
Follow us
|

Updated on: Jun 24, 2024 | 12:02 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸೋಮವಾರ(ಜೂನ್. 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಐಂದ್ರ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:44 ರಿಂದ 09:21ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:58 ರಿಂದ 12:35ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:12 ರಿಂದ 03:49ರ ವರೆಗೆ.

ಮೇಷ ರಾಶಿ: ಹಣಕಾಸನ್ನು ನೋಡಿಕೊಳ್ಳುವವರು ಪಾರದರ್ಶಕತೆಯನ್ನು ಇಟ್ಟುಕೊಳ್ಳಬೇಕಾಗುವುದು. ನಿಮ್ಮಿಂದ ಕುಟುಂಬಕ್ಕೆ ಉತ್ತಮವಾದ ಹೆಸರು ಬರಲಿದೆ. ನೀವೇ ಆಯ್ಕೆ‌ ಮಾಡಿಕೊಂಡ ಉದ್ಯೋಗದ ಸ್ಥಳದಿಂದ ನಿಮಗೆ ತೊಂದರೆಯಾಗಿ ಕೆಲಸವನ್ನು ಬಿಡಲಿದಗದೀರಿ. ನಿಮ್ಮನ್ನು ನೆರೆಹೊರೆಯವರು ಆಡಿಕೊಂಡಾರು. ಆಪ್ತರು ಸಕಾರಣವಾಗಿ ನಿಮ್ಮಿಂದ ದೂರಾಗುವರು. ಅದು ಕಷ್ಟವಾದರೆ ಎಲ್ಲಿಗಾದರೂ ಹೋಗಿಬನ್ನಿ. ಭೂಮಿಯ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದ್ದರೂ ಇನ್ನೊಬ್ಬರಿಗೆ ಕೊಟ್ಟೇ ಖಾಲಿಯಾಗುವುದು. ಆಪ್ತರೆನಿಸಿಕೊಂಡವರೆ ವಿಶ್ವಾಸವಿಲ್ಲದೇ ಇದ್ದಿದ್ದು, ಇನ್ಮು ನಂಬಿಕೆ‌‌ ಬರಲಿದೆ. ಯಾರನ್ನೂ ಗೆಲ್ಲುವೆನು ಎಂಬ ಹುಂಬುತನ ಬೇಡ. ಸಿಟ್ಟಗೊಂಡು ಮಾತನಾಡಬೇಕಾದ ಅವಶ್ಯಕತೆ ಇಲ್ಲ. ಸಮಾಧಾನಚಿತ್ತರಾಗಿ ಮಾತನಾಡಿ. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿಯನ್ನು ತಪ್ಪಿಸಿಯಾರು.

ವೃಷಭ ರಾಶಿ: ಇಂದು ಚರಾಸ್ತಿಯ ವಿಚಾರಕ್ಕೆ ಸಹೋದರರ ನಡುವೆ ವಾಗ್ವಾದ ನಡೆಯಬಹುದು. ಇಂದು ಯಾವುದೇ ಪ್ಲಾನ್ಇಲ್ಲದೇ ಮಾಡಿದ ವ್ಯವಹಾರಗಳಲ್ಲಿ ಲಾಭವು ಅಧಿಕವಿಲ್ಲ. ಓದಿನಲ್ಲಿ ಆಸಕ್ತಿ ಕಡಿಮೆ‌ ಇರುವುದು ಸ್ಪಷ್ಟವಾಗಿ ಕಾಣುವುದು. ಸ್ತ್ರೀ ಸಂಬಂಧದಿಂದ ದ್ವೇಷವನ್ನು ಕಟ್ಟಿಕೊಳ್ಳುವಿರಿ. ದೈಹಿಕ ಶ್ರಮದಿಂದ ಕೆಲಸ ಮಾಡುವರವರು ಸ್ವಲ್ಪ ವಿಶ್ರಾಂತಿ ಪಡೆಯುವಿರಿ. ಶಕ್ತಿ ಮೀರಿ ಏನನ್ನೂ ಮಾಡುವುದು ಬೇಡ. ರಾಜಕೀಯ ವ್ಯಕ್ತಿಗಳು ಎಂದಿಗಿಂತಲೂ ಹೆಚ್ಚು ವಾಗ್ವಾದವನ್ನು ಮಾಡುವರು. ಯಾರನ್ನೋ ಗಾಬರಿಗೊಳಿಸವುದು ಸರಿಯಲ್ಲ. ಬೇಕೆಂದೇ ಸಮಸ್ಯೆಗಳನ್ನು ನಿಮ್ಮ ಬುಡಕ್ಕೆ ಎಳೆದುಕೊಳ್ಳಬೇಡಿ. ಹೇಳಬೇಕಾದ‌ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ.‌ ಆದುದರ ಬಗ್ಗೆ ನಿಮಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲ. ಬೇರೆಯವರನ್ನು ಗೊಂದಲಕ್ಕೆ ಸಿಕ್ಕಿ ಹಾಕಿಸುವುದು ಬೇಡ.

ಮಿಥುನ ರಾಶಿ: ಇಂದು ನಿರುಪಯೋಗಿ ವಸ್ತುಗಳನ್ನು ಅನ್ಯರಿಗೆ ಕೊಡುವಿರಿ. ಎಲ್ಲವನ್ನೂ ಮಾತಿನಿಂದಲೇ ಬಗೆಹರಿಸಲಾಗದು. ನಿಶ್ಚಿತ ಆದಾಯವು ನಂಬಿ ಸಾಲವನ್ನು ಪಡೆಯುವಿರಿ.‌ ಇಂದಿನ‌ ಪ್ರಯಾಣದ‌ ಪ್ರಯಾಸವನ್ನು ನೂತನ ವಾಹನವನ್ನು ಖರೀದಿಸುವ ಯೋಚನೆ ಮಾಡುವಿರಿ. ನಿಮ್ಮ ಇಂದಿನ ಮಾತು ಕೇಳಿ ನೀವೊಬ್ಬ ವಾಚಾಳಿ ಎಂಬ ಬಿರುದನ್ನು ಪಡೆಯುವಿರಿ. ಸರ್ಕಾರದಿಂದ‌ ಬರುವ ಹಣವು ವಿಳಂಬವಾಗಿ ಬರಲಿದೆ. ವಾಹನದಲ್ಲಿ ಸುತ್ತಾಡುವ ಬಯಕೆ ಇರಲಿದೆ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವ ಸ್ಥಿತಿ‌‌ವಬಂದಾಗ ಒಮ್ಮೆ‌ ಪರಿಶೀಲಿಸಿ ವಸ್ತುಗಳನ್ನು ತರುವಿರಿ. ಹೊಸ ಯೋಜನೆಗಳೂ ಅವರಿಗೆ ಸಿಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು. ಅಯಾಚಿತ ಸಹಾಯವನ್ನು ನೀವು ತಿರಸ್ಕರಿಸುವಿರಿ.

ಕಟಕ ರಾಶಿ: ಅವಿವಾಹಿತರಿಗೆ ಇಂದು ವಿವಾಹಕ್ಕೆ ಯೋಗ್ಯವಾದ ಮಾತುಗಳು ಕೇಳಿಸಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಇಂದು ಪತಿಯ ವರ್ತನೆಯು ಬದಲಾದಂತೆ ತೋರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಓದಲು ಸಮಯವಿಲ್ಲದೇ, ಅನ್ಯಮನಸ್ಕರಾದಕಾರಣ ಹಿನ್ನಡೆಯು ಆಗಬಹುದು. ಸುಮ್ಮನೇ ಎಲ್ಲರನ್ನು ಅನುಮಾನದ ಕಣ್ಣಿನಿಂದ ನೋಡಿ, ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ತೈಲದ ವ್ಯಾಪಾರದಲ್ಲಿ ಅಭಿವೃದ್ಧಿಯು ಕುಂಠಿತವಾಗಿರುತ್ತದೆ. ಸ್ಥಿರಾಸ್ತಿಯನ್ನು ಅಗ್ಗದ ಬೆಲೆಗೆ ಮಾರಾಟಕ್ಕೆ ಇಟ್ಟರೂ ಖರೀದಿಯಾಗದೇ ಇರುವುದು ಆತಂಕವನ್ನು ತರಿಸುವುದು. ಕಂಡಿದ್ದನ್ನು ಕಂಡಂತೆ ಹೇಳುವುದು ಸರಿಯೇ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ನಿಮ್ಮ‌ ಮೇಲಿರುವ ಭಾವನೆಯು ದೂರಾಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ. ಹಿರಿಯರಲ್ಲಿ ವಿನಮ್ರತೆ ಇರಲಿ.

ತಾಜಾ ಸುದ್ದಿ