Horoscope: ರಾಶಿಭವಿಷ್ಯ, ನಿಮ್ಮನ್ನು ನೆಮ್ಮದಿಯಿಂದ ಇರಲು ಶತ್ರುಗಳು ಬಿಡಲಾರರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 27, 2023 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 27) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ನಿಮ್ಮನ್ನು ನೆಮ್ಮದಿಯಿಂದ ಇರಲು ಶತ್ರುಗಳು ಬಿಡಲಾರರು
ರಾಶಿ ಭವಿಷ್ಯ
Follow us on

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಶಿವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:05 ರಿಂದ 09:30ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:55 ರಿಂದ 12:20ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:45 ರಿಂದ 03:10ರ ವರೆಗೆ.

ಧನು ರಾಶಿ : ನ್ಯಾಯಾಲಯದಲ್ಲಿ ಮತ್ತೆ ಹೊಸ ದೂರುಗಳನ್ನು ಎದುರಿಸಬೇಕಾದೀತು. ನಿಮ್ಮನ್ನು ನೆಮ್ಮದಿಯಿಂದ ಇರಲು ಶತ್ರುಗಳು ಬಿಡಲಾರರು. ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸಲು ನಿಮಗೆ ಕಷ್ಟವೆನಿಸುವುದು. ಉದ್ವೇಗಕ್ಕೆ ಒಳಗಾಗುವುದು ಬೇಡ, ಉತ್ತಮ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ದೂರದ ಬಂಧುಗಳ ಸಮಾಗಮವಾಗಬಹುದು. ಜನರ ಜೊತೆ ಬೆರೆಯುವುದು ನಿಮಗೆ ಇಷ್ಟವಾಗದು. ಅಧಿಕಾರವು ಅಹಂಕಾರವಾಗಿ ಬದಲಾಗುವುದು ಬೇಡ. ನಿಮ್ಮ ವರ್ತನೆಯು ಸಂದರ್ಭಕ್ಕೆ ಸರಿಯಾಗಿ ಇರಲಿ. ಸರಿಯಾಗಿ ಪ್ರತಿಕ್ರಯಿಸಲು ನಿಮಗೆ ಬಾರದೇ ಇರುವುದು. ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬೇಕಾದೀತು. ದಿನಗೂಲಿ ಕಾರ್ಮಿಕರಿಗೆ ಕೆಲಸವು ಸಿಗದೇ ಕಷ್ಟವಾದೀತು. ಹಣಕಾಸಿನ‌ ವಿಚಾರದಲ್ಲಿ ತಿಳಿದು ವ್ಯವಹರಿಸಿ. ನಿಮ್ಮ‌ ಭವಿಷ್ಯವನ್ನು ಮಿತ್ರರ ಜೊತೆ ಹಂಚಿಕೊಂಡು ಸಂತೋಷಪಡುವಿರಿ.

ಮಕರ ರಾಶಿ : ಋಣದಿಂದ ಮುಕ್ತರಾಗಲು ದೇವರ ಮೊರೆ ಹೋಗುವಿರಿ. ಕೆಲವರ ಮಾತು ನಿಮಗೆ ಕಹಿಯಾದೀತು. ಗೌಪ್ಯ ಸ್ಥಳದಲ್ಲಿ ತೊಂದರೆ ಕಾಣಿಸಿಕೊಂಡೀತು. ನಿಮ್ಮ ಆಸಕ್ತಿಯು ಹೊಸ ಕ್ರಮದ ಹಾದಿಯಲ್ಲಿ ತೋರಿಸಬಹುದು, ನಿಮ್ಮ ಆಲೋಚನೆಗಳನ್ನು ಸರಿಯಾದ ಕಡೆ ವ್ಯಕ್ತಪಡಿಸಿ. ಹೊಸ ವ್ಯವಹಾರಕ್ಕೆ ಹಿಂದೇಟು ಹಾಕುವಿರಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. ತುರ್ತು ಪ್ರಯಾಣವನ್ನು ನೀವು ಮಾಡಬೇಕಾಗಬಹುದು. ರಾಜಕೀಯ ವ್ಯಕ್ತಿಗಳಿಂದ ಆಗಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸ್ನೇಹಿತನ ಸಹವಾಸದಿಂದ ದುರಭ್ಯಾಸಕ್ಕೆ ಬೀಳುವಿರಿ. ಆರೋಗ್ಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ವಿಧವಿಧವಾದ ಔಷಧೋಪಚಾರಗಳನ್ನು ಮಾಡುವಿರಿ. ನಿಮ್ಮ ಬಗ್ಗೆ ಇರುವ ನಕಾರಾತ್ಮಕ ಮಾತುಗಳನ್ನು ಅಲ್ಲಗಳೆಯಲಾರಿರಿ.

ಕುಂಭ ರಾಶಿ : ಮನೋವೇಗವನ್ನು ನೀವು ನಿಯಂತ್ರಿಸುವ ಅವಶ್ಯಕತೆ ಇದೆ. ಕಲ್ಪನೆಯನ್ನು ಪ್ರಯೋಗಕ್ಕೆ ಅಳವಡಿಸಲಾಗದು. ಆಶಾವಾದದಲ್ಲಿಯೇ ನಿಮ್ಮ ಇಂದಿನ ದಿನವನ್ನು ಕಳೆಯುವಿರಿ. ಯೋಜಿತ ಉದ್ಯಮದಲ್ಲಿ ಪಾಲುದಾರರನ್ನು ಸೇರಿಸಿಕೊಂಡು ಮುಂದುವರಿಯಿರಿ. ಮಿತ್ರರ ಸಹಾಯದಿಂದ ಪ್ರಭಾವೀ ವ್ಯಕ್ತಿಗಳ ಭೇಟಿಯಾಗುವುದು. ಸಾಮಾಜಿಕ ಕಾರ್ಯಗಳಿಗೆ ಒತ್ತಡಗಳು ಇರಲಿದೆ. ಪ್ರೀತಿಪಾತ್ರರ ಮೇಲೆ ಸುಖಾಸುಮ್ಮನೆ ಅನುಮಾನ ಬೇಡ. ಸ್ಥಿರಾಸ್ತಿಯ ವಿಚಾರಕ್ಕೆ ಬಿಸಿ ಮಾತುಗಳು ಕುಟುಂಬದಲ್ಲಿ ಬರಬಹುದು. ಕಾನೂನಾತ್ಮಕ ವಿಷಯವನ್ನು ಚರ್ಚಿಸಿ ಕಾರ್ಯರೂಪಕ್ಕೆ ತೆಗೆದುಕೊಂಡು ಬನ್ನಿ. ಕಡಿಮೆ ಖರ್ಚಿನಲ್ಲಿ ಇಂದಿನ ಕಾರ್ಯವು ನೋಡಿಕೊಳ್ಳಿ.
ಸ್ವಯಾರ್ಜಿತ ಆಸ್ತಿಯ ಮೇಲೆ ಇತರರ ಕಣ್ಣು ಬೀಳಬಹುದು. ಉತ್ಸಾಹವನ್ನು ನಿಮ್ಮವರ ಚುಚ್ಚು ಮಾತು ಕಡಿಮೆ ಮಾಡಬಹುದು. ಮಾತನಾಡಿ ತಪ್ಪಿನಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ.

ಮೀನ ರಾಶಿ : ಸಣ್ಣ ವ್ಯಾಪಾರದವರಿಗೆ ಲಾಭವಾಗುವುದು. ವೃತ್ತಿಯನ್ನು ಕಿರಿಕಿರಿಯನ್ನು ತಪ್ಪುಸಿಕೊಳ್ಳಲು ಮಾತನಾಡದೇ ಸುಮ್ಮನಿರುವುದು ಉಚಿತ. ಇಂದು ಕೌಂಟುಬಿಕ ವ್ಯವಹಾರದಲ್ಲಿ ಮಹತ್ತ್ವದ ತಿರುವು ಸಿಗುವುವುದು. ಕಠಿಣ ಪರಿಶ್ರಮದಿಂದ ನಿಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಪಾಲುದಾರಿಕೆಯಲ್ಲಿ ಉಂಟಾದ ಗೊಂದಲ್ಲವನ್ನು ಸರಿ ಮಾಡಿಕೊಂಡೂ ಮೈತ್ರಿ ಮಾಡಿಕೊಂಡಲ್ಲಿ ಇಬ್ಬರಿಗೂ ಅನುಕೂಲವಿದೆ. ನಿಮ್ಮ ಸ್ಥಿರಾಸ್ತಿ ಪರಿಶೀಲನೆಯನ್ನು ಇಂದು ಮಾಡಿಕೊಳ್ಳಿ. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ. ನಿಮ್ಮ‌ ಕಷ್ಟವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವುದೂ ಕಷ್ಟವಾದೀತು. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವಿರಿ. ನಿಮ್ಮ ಯಶಸ್ಸೇ ನಿಮಗೆ ಮುಳುವಾಗಬಹುದು. ಹಿರಿಯರ ಮಾರ್ಗದರ್ಶನವನ್ನು ಅಲ್ಲಗಳೆಯುವಿರಿ. ಸೌಲಭ್ಯಗಳನ್ನು ಸದುಪಯೋಗವಾಗುವಂತೆ ನೋಡಿಕೊಳ್ಳಿ.

-ಲೋಹಿತಶರ್ಮಾ – 8762924271 (what’s app only)