
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಶೋಭನ, ಕರಣ : ವಣಿಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 32 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:48 – 12:21, ಯಮಗಂಡ ಕಾಲ 15:26 – 16:59, ಗುಳಿಕ ಕಾಲ 07:42 – 09:15
ಮೇಷ ರಾಶಿ: ಬೇಡದ ವಿಚಾರಕ್ಕೆ ಮೂಗು ತೂರಿಸುವುದು ಬೇಡ. ನಿಮ್ಮ ಯೋಜನೆಗೆ ಹೊಂದಿಕೆಯಾಗುವಂತಹ ವ್ಯಕ್ತಿಗಳ ಭೇಟಿಯಾಗಲಿದೆ. ಅವರ ಜೊತೆ ಹೆಚ್ಚಿನ ಚರ್ಚೆಗಳನ್ನು ಮಾಡುವಿರಿ. ಆಪ್ತರ ಸಣ್ಣ ಬದಲಾವಣೆಯೂ ನಿಮಗೆ ಸಹಿಸಲು ಕಷ್ಟವಾದೀತು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯುವರು. ಅನೇಕ ದಿನಗಳಿಂದ ಮಾಡಬೇಕು ಎಂದುಕೊಂಡ ಕೆಲಸವನ್ನು ನೀವು ಆರಂಭಿಸುವಿರಿ.
ವೃಷಭ ರಾಶಿ: ವಿಷಯ ಹಳೆಯದಾದರೂ ನಿಮ್ಮ ಬುದ್ಧಿಗೆ ಕೆಲಸವು ಸಾಕಷ್ಟು ಸಿಗುತ್ತದೆ. ಇಂದು ನೀವು ಕೆಲಸದಿಂದ ವಿಶ್ರಾಂತಿ ಪಡೆಯುವಿರಿ. ಮಕ್ಕಳು ನಿಮ್ಮ ಕೆಲಸಗಳನ್ನು ಮಾಡಿಕೊಡುವರು. ಯಾರ ಋಣವನ್ನೂ ಇಟ್ಟುಕೊಳ್ಳಲು ಬಯಸಲಾರಿರಿ. ನಿಮ್ಮ ವಿವಾಹವನ್ನು ಮಾಡಿಸಲು ಬಂಧುಗಳು ಮಾಡಿದ ಪ್ರಯತ್ನವು ನಿಷ್ಪ್ರಯೋಜಕವಾದೀತು. ಕಡಿಮೆ ಶ್ರಮದಿಂದ ಇಂದಿನ ಅನೇಕ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಯಶಸ್ಸಿನ ಪಾಲುದಾರರನ್ನು ನೆನಪಿನಲ್ಲಿಟ್ಟುಕೊಳ್ಳುವಿರಿ.
ಮಿಥುನ ರಾಶಿ: ನಿಮ್ಮ ದೃಷ್ಟಿ ಬದಲಾದರೆ ಎಲ್ಲವೂ ತಾನಾಗಿಯೇ ಬದಲಾಗುತ್ತದೆ. ಇಂದು ನೀವು ಸಣ್ಣ ವಿಚಾರವೆಂದು ಕಡೆಗಣಿಸಿದ್ದು ದೊಡ್ಡದಾಗಬಹುದು. ಸರಳವಿಧಾನವನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಸರ್ಕಾರಿ ಕೆಲಸಗಳನ್ನು ಹಣದ ಮೂಲಕ ಬೇಗ ಮಾಡಿಸಿಕೊಳ್ಳುವಿರಿ. ಮಾತುಗಾರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಅವರು ಅವಕಾಶಗಳನ್ನು ಹುಡುಕುವರು. ನಿಮ್ಮವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು.
ಕರ್ಕಾಟಕ ರಾಶಿ: ಎಲ್ಲದಕ್ಕೂ ಉತ್ತರವಿರುತ್ತದೆಯಾದರೂ ನಿಮ್ಮ ಕಾರ್ಯವೇ ಉತ್ತರದಂತಿರಲಿ. ಈ ಕಾರಣಕ್ಕಾಗಿ ಕೆಲವರನ್ನು ಎದುರು ಹಾಕಿಕೊಳ್ಳಬೇಕಾದೀತು. ಕೃಷಿಯ ಚಟುವಟಿಕೆಯಲ್ಲಿ ಇಂದು ಆಸಕ್ತಿ ಕಡಿಮೆಯಾಗಿ ಮನೆಯಲ್ಲಿಯೇ ಇರುವಿರಿ. ಕೆಲವರ ಮಾತು ನಿಮ್ಮನ್ನು ಭ್ರಾಂತಗೊಳಿಸಬಹುದು. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ಇಂದು ಕೆಲಸದ ಕಾರಣಕ್ಕೆ ಏಕಾಂಗಿಯಾಗಬೇಕಾಗುವುದು.
ಸಿಂಹ ರಾಶಿ: ದುರಭ್ಯಾಸವು ಎಲ್ಲರಿಂದ ನಿಮ್ಮನ್ನು ದೂರವಿಡುವುದು. ರಾಜಕೀಯ ವ್ಯಕ್ತಿಗಳು ಒತ್ತಡದ ಮೇಲೆ ಅಭಿವೃದ್ಧಿಗೆ ಗಮನ ಕೊಡುವರು. ನಿಮ್ಮ ಸ್ನೇಹಿತನ ಜೊತೆ ದೂರ ಪ್ರಯಾಣ ಮಾಡುವಿರಿ. ನಿರ್ಮಾಣದ ಕಾರ್ಯವನ್ನು ನೀವು ವಹಿಸಿಕೊಳ್ಳುವಿರಿ. ಅನಗತ್ಯ ವಿಷಯವನ್ನು ಚರ್ಚಿಸಿ ಕಾಲಹರಣ ಮಾಡುವಿರಿ. ಸಿಗಬೇಕಾದವರು ಇಂದು ಸಿಗದೇ ಹೋಗುವರು. ನಿಮ್ಮ ಮಾತಿಗೆ ಸಮಜಾಯಿಷಿ ಕೊಡಲು ಹೋಗುವ ಅವಶ್ಯಕತೆ ಇಲ್ಲ.
ಕನ್ಯಾ ರಾಶಿ: ಸಾಧ್ಯವಾದಷ್ಟು ನಿಮ್ಮ ಕೆಲಸವನ್ನು ಸದ್ದಿಲ್ಲದೇ ಮಾಡಿ ಮುಗಿಸಿ. ಇಂದು ನೀವು ಮನೆಯಲ್ಲಿಯೇ ವಾಸ ಮಾಡಿ. ನಿಮ್ಮ ಸಂಬಂಧಿಸಿದ ವಸ್ತುಗಳು ಕಾಣೆಯಾಗಬಹುದು. ಅಧಿಕೃತ ಮಾಹಿತಿಯನ್ನು ಪಡೆದು ಮುಂದುವರಿಯುವುದು ಒಳ್ಳೆಯದು. ಯಾರದೋ ಮಾತಿಗೆ ನೀವು ಚಿಂತಿತರಾಗದೇ ನಿಮ್ಮ ಕೆಲಸದಲ್ಲಿ ಮಗ್ನರಾಗುವಿರಿ. ವಿದ್ಯಾರ್ಥಿಗಳಿಗೆ ಮನೆಯಿಂದ ಹೊರಗುಳಿಯಲು ಕಷ್ಟವಾಗುವುದು.
ತುಲಾ ರಾಶಿ: ಅನವಶ್ಯಕ ವಸ್ತುಗಳನ್ನು ಖರೀದಿ ಮಾಡಿದ್ದಕ್ಕೆ ಮನೆಯಲ್ಲಿ ಸಂಗಾತಿಯ ಜೊತೆ ಕಲಹವಾಗಲಿದೆ. ಸಹೋದರರ ನಡುವೆ ಕಲಹವಾಗುವ ಸಾಧ್ಯತೆ ಇದೆ. ಕುಟುಂಬ ಶಾಂತಿಯಿಂದ ಇರಲು ಒಬ್ಬರನ್ನು ಒಬ್ಬರು ಅನುಸರಿಸಬೇಕಾದೀತು. ನೀವಿಬ್ಬರೂ ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ನೀವಾಡಿದ ದುಡುಕಿನ ಮಾತು ಸಂಗಾತಿಯ ಮೇಲೆ ವಿಪರೀತ ಪರಿಣಾಮ ಬೀರುವುದು.
ವೃಶ್ಚಿಕ ರಾಶಿ: ನಿಮ್ಮ ಅಂದಾಜನ್ನು ಮೀರಿ ಹಣವು ಖರ್ಚಾಗಬಹುದು. ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ವಿಷಯದಲ್ಲಿ ಗಮನಕೊಟ್ಟು ನೀವು ಯಾವುದನ್ನೂ ಸರಿಯಾಗಿ ನಿರ್ವಹಿಸಲಾಗದೇ ಒದ್ದಾಡುವಿರಿ. ನಿಮ್ಮ ವ್ಯಕ್ತಿತ್ವ ಗಟ್ಟಿಯಾಗಲು ಮಾತು ಕಡಿಮೆಯಾಗಬೇಕು. ಅಸಾಧ್ಯವಾದುದನ್ನು ಸಾಧಿಸುವ ಹುಂಬುತನ ಬೇಡ. ನಿಮ್ಮ ದಾರಿಯು ಸರಿ ಇದೆಯೇ ಎಂಬ ಯೋಚನೆಗೆ ಬಂದು ಅನಂತರ ಮುಂದುವರಿಯಿರಿ.
ಧನು ರಾಶಿ: ನಿಮ್ಮ ಹೇಳಿಕೆಗಳು ಮತ್ಯಾರಿಗೋ ಅಪಾಯವನ್ನು ಕೊಡುವುದು. ನಿಮ್ಮ ನಡತೆಯನ್ನು ನೀವೇ ಗಮನಿಸಿಕೊಂಡು ಸರಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಕಾರ್ಯ ವೈಫಲ್ಯಕ್ಕೆ ಇನ್ನೊಬ್ಬರನ್ನು ದೂರುವುದು ಸರಿಯಲ್ಲ. ನಿಮ್ಮ ಮಾತು ಔಚಿತ್ಯಪೂರ್ಣವಾಗಿ ಇರಲಿ. ಕಳೆದು ಕೊಂಡ ಮಾನವನ್ನು ಮರಳಿ ಪಡೆಯಲಾಗದು. ಸಹೋದ್ಯೋಗಿಯನ್ನು ನೀವು ಮಿತ್ರರನ್ನಾಗಿ ಪಡೆಯುವಿರಿ. ಇನ್ನೊಬ್ಬರಿಂದ ಒಳ್ಳೆಯದನ್ನು ಕಲಿಯುವಿರಿ.
ಮಕರ ರಾಶಿ: ಸೋಲನ್ನು ಒಪ್ಪಿಕೊಳ್ಳಲು ನೀವು ಹಿಂದೇಟು ಹಾಕುವಿರಿ. ದುರಭ್ಯಾಸವನ್ನು ನೀವು ಮಿತ್ರರಿಂದ ಪಡೆಯುವಿರಿ. ನೀವು ಮಾಡಿದ ಸಹಾಯವು ನಿಮಗೇ ಬರುವುದು. ಎಲ್ಲರೆದುರು ಮಾತನಾಡುವ ಸಂದರ್ಭ ಬರಲಿದ್ದು ನೀವು ಮುಜಗರಗೊಳ್ಳುವಿರಿ. ತಂದೆಯ ಮಾತನ್ನು ನೀವು ಖಂಡಿಸುವಿರಿ. ಶತ್ರುಗಳ ಭಯವು ನಿಮ್ಮನ್ನು ಕಾಡಬಹುದು. ಯಾರಿಂದಲೋ ಸಿಕ್ಕ ವಸ್ತುಗಳನ್ನು ಜೋಪಾನ ಮಾಡುವಿರಿ.
ಕುಂಭ ರಾಶಿ: ಆರ್ಥಿಕತೆಯ ಪ್ರಗತಿಗೆ ಯಾರದ್ದಾದರೂ ಸಹಕಾರ ಪಡೆಯುವಿರಿ. ತುರ್ತಾಗಿ ಹಣದ ಅಗತ್ಯ ಕಂಡುಬಂದು, ಸಾಲ ಮಾಡಬೇಕಾಗಿ ಬರುವುದು. ಅಹಂಕಾರದಿಂದ ಕೂಡಿದ ಮನಸ್ಸಿನ ಜೊತೆ ಯಾರೂ ಬರುವುದಿಲ್ಲ. ನೀವು ಒಂಟಿಯಾಗುವಿರಿ. ಸರಿಯಾದ ವಿಚಾರವನ್ನು ತಿಳಿದು ಮಾತನಾಡುವುದು ಉತ್ತಮ. ಆರ್ಥಿಕ ಸಹಾಯಕ್ಕೆ ಸಿಗುವವರು ನಿಮ್ಮಿಂದ ಮತ್ತೇನನ್ನೋ ಬಯಸುವರು. ನಿಮ್ಮ ಮಾತು ನೇರವಾಗಿರಲಿ.
ಮೀನ ರಾಶಿ: ಸಾಲ ಪಡೆಯುವಾಗ ಜಾಗರೂಕತೆಯಿಂದ ಮಾಡಿ. ವ್ಯಾಪರವು ಮಧ್ಯಮಫಲದಿಂದ ಇರಲಿದೆ. ಹೆಚ್ಚು ಪರಿಶ್ರಮದಿಂದ ನಿಮಗೆ ಆಯಾಸವಾದೀತು. ವಿಶ್ರಾಂತಿಯನ್ನು ಒಡೆದು ಮುಂದುವರಿಯುವುದು ಉತ್ತಮ. ಯೋಜಿತ ಕಾರ್ಯದಲ್ಲಿ ಅತಿಯಾದ ಫಲಾಪೇಕ್ಷೆ ಬೇಡ. ಮನೆಯನ್ನು ಖರೀದಿಸುವುದು ಅನಿವಾರ್ಯವಾಗಿಬಿಡುವುದು. ಆಪ್ತರ ಜೊತೆ ಹಳೆಯ ನೆನಪನ್ನು ಹಂಚಿಕೊಳ್ಳುವಿರಿ. ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡಲಿದ್ದೀರಿ. ಮನೆಯವರ ಮನಸ್ಸನ್ನು ನೋಯಿಸಿ ಕಾರ್ಯ ಮಾಡಲಾಗದು.
ಲೋಹಿತ ಹೆಬ್ಬಾರ್ – 8762924271 (what’s app only)