Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 11ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 11ರ ಮಂಗಳವಾರ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 11ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ವಿವೇಕ ಬಿರಾದಾರ

Updated on:Jul 11, 2023 | 6:32 AM

 ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 11ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
  1. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ಇನ್ನೇನು ಎಲ್ಲ ಕೆಲಸಗಳು ಮುಗಿದಿದೆ, ಹಣ ಕೈಗೆ ತಲುಪಬೇಕು ಎಂಬ ಸ್ಥಿತಿಯಲ್ಲಿ ನಾಳೆ- ನಾಡಿದ್ದು ಕೊಡ್ತೀನಿ ಎಂದು ಸಂಬಂಧಪಟ್ಟವರು ಹೇಳಬಹುದು. ಮಕ್ಕಳಿಗೆ ನೀವು ಏನಾದರೂ ಕೆಲಸ ಅಥವಾ ಜವಾಬ್ದಾರಿ ವಹಿಸಿದ್ದಲ್ಲಿ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಿದ್ದಾರೆ. ನಾಲ್ಕಾರು ವ್ಯವಹಾರಗಳನ್ನು ಮಾಡುತ್ತಿರುವವರು ಸ್ವಲ್ಪ ಪ್ರಮಾಣದ ಉದ್ಯಮ ವ್ಯವಹಾರವನ್ನು ಮಾರಾಟ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.
  2. ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2): ನೀವು ಹೌದೋ ಅಲ್ಲವೋ ಎಂದು ಇತರರು ಅಚ್ಚರಿ ಪಡುವ ಮಟ್ಟಿಗೆ ನಿಮ್ಮ ವರ್ತನೆ ಇರಲಿದೆ. ಯಾವುದೇ ವಿಚಾರವನ್ನು ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ.  ಒಂದು ವೇಳೆ ನೀವೇ ಮಾಲೀಕರಾಗಿದ್ದಲ್ಲಿ ಕೆಲವರಿಗೆ ಸಂಬಳಕ್ಕೆ ಕತ್ತರಿ ಬೀಳಬಹುದು ಅಥವಾ ಹುದ್ದೆಯಿಂದಲೇ ತೆಗೆಯುವಂಥ ಸಾಧ್ಯತೆ ಇದೆ. ಒಬ್ಬ ವ್ಯಕ್ತಿಯ ವರ್ತನೆ, ಧೋರಣೆ ನಿಮ್ಮಲ್ಲಿ ಚಿಂತೆ ಹಾಗೂ ಸಿಟ್ಟು ಉಂಟು ಮಾಡಬಹುದು. ಇದನ್ನು ಎಲ್ಲರ ಮೇಲೂ ತೋರಿಸದಿರಿ.
  3. ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3): ಬ್ಯಾಂಕಿಂಗ್ ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ, ಬಡ್ಡಿಗೆ ಹಣ ಸಿಗಬಹುದಾ ಎಂದು ಪ್ರಯತ್ನ ಮಾಡುತ್ತಿರುವವರಿಗೆ ಒತ್ತಡದ ಸ್ಥಿತಿ ಸೃಷ್ಟಿ ಆಗಲಿದೆ. ಹಣಕಾಸಿನ ವಿಚಾರಕ್ಕೆ ಸ್ನೇಹಿತರು- ಸಂಬಂಧಿಕರಿಂದ ಅವಮಾನ ಆಗಬಹುದು. ಮೇಲುನೋಟಕ್ಕೆ ಕಾಣುವ ವರ್ತನೆ, ಮಾತು, ಭರವಸೆಯನ್ನು ನಂಬಿಕೊಂಡು ದೊಡ್ಡ ದೊಡ್ಡ ಯೋಜನೆಗಳಿಗೆ ಕೈ ಹಾಕದಿರಿ. ಹೇಗಾದರೂ ಸಮಯ ಮಾಡಿಕೊಂಡು ಹತ್ತು ನಿಮಿಷವಾದರೂ ಧ್ಯಾನ ಮಾಡಿ.
  4. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ನಿಮ್ಮ ಒಳ ಮನಸ್ಸು ಹೇಳುವಂತೆ ಕೇಳಿ. ದೊಡ್ಡ ಯೋಜನೆಗಳನ್ನು ಮುನ್ನಡೆಸುವಂತೆ ನಿಮಗೆ ಆಫರ್ ಬರಬಹುದು ಅಥವಾ ಹೊಸ ಉದ್ಯೋಗ ಮತ್ತು ಸಂಬಳದ ಬಗ್ಗೆ ಸ್ನೇಹಿತರೋ ಅಥವಾ ಈ ಹಿಂದೆ ನಿಮ್ಮ ಜತೆಗೆ ಕೆಲಸ ಮಾಡಿದವರೇ ಹೇಳುವಂಥ ಯೋಗ ಇದೆ. ಹೆಣ್ಣುಮಕ್ಕಳು ಕೆಲಸದ ಬ್ರೇಕ್ ತೆಗೆದುಕೊಂಡು, ಮತ್ತೆ ಉದ್ಯೋಗ ಹುಡುಕುವುದಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಶುಭ ಸುದ್ದಿಯನ್ನು ಕೇಳುವಂಥ ಸಾಧ್ಯತೆಗಳಿವೆ.
  5. ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5): ನಿಮ್ಮ ಭಾವನೆಗಳಿಗೆ ಆಪ್ತರೇ ಗೌರವ ನೀಡುತ್ತಿಲ್ಲ ಎಂದು ಬಲವಾಗಿ ಅನಿಸುತ್ತದೆ. ತಮಗೆ ಅಗತ್ಯ ಇದ್ದಾಗ ನಿಮ್ಮನ್ನು ಭಾವನಾತ್ಮಕವಾಗಿ ದುರ್ಬಲರನ್ನಾಗಿ ಮಾಡಿ, ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ. ಯಾರದೋ ಮೇಲಿನ ಕೋಪ ಇನ್ಯಾರ ಮೇಲೋ ತೋರಿಸಿ, ನಿಮ್ಮ ಮೇಲೆ ಇತರರಿಗೆ ಇರುವ ಗೌರವ ಕಳೆದುಕೊಳ್ಳುವಂತಾಗುತ್ತದೆ. ಹಳೇ ಕಹಿ ಸಂಗತಿಗಳನ್ನೇ ನೆನಪಿಸಿಕೊಂಡು, ಮಾನಸಿಕ ಹಿಂಸೆ ಮಾಡಿಕೊಳ್ಳಬೇಡಿ.
  6. ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6): ಏಕಾಏಕಿ ಎಲ್ಲ ಕೆಲಸಗಳು ಒಂದು ಕಡೆಯಿಂದ ಮುಗಿಯುತ್ತಾ ಬರುತ್ತಿದ್ದಂತೆ ಮನಸ್ಸಿಗೆ ನೆಮ್ಮದಿ ಆಗುತ್ತದೆ. ಹೊಸ ಮನೆ ನಿರ್ಮಾಣ ಮಾಡುತ್ತಿರುವವರಿಗೆ ಹಣಕಾಸಿನ ಅಡೆತಡೆಗಳು ಎದುರಾಗಿದ್ದಲ್ಲಿ ಅದು ನಿವಾರಣೆ ಆಗುತ್ತದೆ. ಹೊಸದಾಗಿ ಪರಿಚಯ ಆಗುವ ವ್ಯಕ್ತಿಯ ಮೂಲಕ ವೃತ್ತಿ ಬದುಕಿಗೆ ನೆರವಾಗಲಿದೆ. ನೀವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹಲವು ಕೆಲಸಗಳಲ್ಲಿ ಯಶಸ್ಸು ದೊರಕಲಿದೆ. ವೈಯಕ್ತಿಕವಾಗಿ ದಣಿವು ಅಂತಾದರೂ ತೃಪ್ತಿ ಸಿಗುತ್ತದೆ.
  7. ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7): ನಿಮ್ಮ ಬಗ್ಗೆ, ನಿಮ್ಮ ಲಾಭ- ನಷ್ಟದ ಬಗ್ಗೆ ಮಾತ್ರ ಹೆಚ್ಚೆಚ್ಚು ಯೋಚನೆ ಮಾಡಲಿದ್ದೀರಿ. ಈ ಗುಣದ ಕಾರಣಕ್ಕೆ ಬಹಳ ಆಪ್ತರಾದವರಿಗೆ ಬೇಸರ ಆಗಲಿದೆ. ಇತರರ ವೈಯಕ್ತಿಕ ಭಾವನೆಗಳನ್ನು ಸಹ ಗೌರವಿಸುವುದು ಮುಖ್ಯ ಆಗುತ್ತದೆ. ವಾಹನ, ಆಭರಣ, ಹೊಸ ಗ್ಯಾಜೆಟ್ ಗಳು, ಟೀವಿ, ಲ್ಯಾಪ್ ಟಾಪ್ ಇಂಥವುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇದೇ ಮೊದಲ ಸಲ ಮಾಡುವಂಥ ಕೆಲಸ ಆಗಿದ್ದಲ್ಲಿ ಒಪ್ಪಿಕೊಳ್ಳುವ ಮುನ್ನ ನಾಲ್ಕು ಬಾರಿ ಆಲೋಚಿಸಿ.
  8. ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8): ಯಾರೋ ಹೊಸಬರು ಬಂದು, ತಾವಾಗಿಯೇ ದುಂಬಾಲು ಬಿದ್ದು, ನಿಮಗೆ ಕೆಲಸ ಒಪ್ಪಿಸಿದ್ದು ಈಗ ತಲೆ ನೋವಾಗಿ ಪರಿಣಮಿಸಲಿದೆ. ಕೆಲವರು ನಿಮ್ಮ ಸಾಮರ್ಥ್ಯದ ಬಗ್ಗೆಯೇ ತಪ್ಪು ತಪ್ಪಾಗಿ ಪ್ರಚಾರ ಮಾಡಿಕೊಂಡು ಬರಲಿದ್ದಾರೆ. ಸುಲಭಕ್ಕೆ ಮಾಡಿ ಮುಗಿಸಿಬಿಡ್ತೀನಿ ಎಂದು ನಿಮಗೂ ಅನಿಸಿದ್ದ ಕೆಲಸ ಭಾರೀ ಒತ್ತಡ ಎಂದೆನಿಸುವುದಕ್ಕೆ ಶುರು ಆಗುತ್ತದೆ. ಮನಸ್ಸಿನಲ್ಲಿ ಹನ್ನೊಂದು ಬಾರಿ ಓಂ ನಮೋ ನಾರಾಯಣಾಯ ಎಂದು ಪಠಿಸಿ. ಒತ್ತಡ ಕಡಿಮೆ ಆಗುತ್ತದೆ.
  9. ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9): ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಬೆಂಬಲ ಚೆನ್ನಾಗಿರುತ್ತದೆ. ಮೇಲಧಿಕಾರಿಗಳಿಗೆ ನಿಮ್ಮ ಶ್ರಮ ಕಾಣುತ್ತದೆ, ಅವರು ಹೇಳುವ ಮೆಚ್ಚುಗೆ ಮಾತುಗಳಿಂದ ಇನ್ನಷ್ಟು ಉತ್ಸಾಹ, ಉಲ್ಲಾಸ ಮೂಡಲಿದೆ. ದೂರ ಪ್ರಯಾಣ ಮಾಡಬೇಕೆಂದು ಸಿದ್ಧತೆ ನಡೆಸುತ್ತಿರುವವರಿಗೆ ಇದು ಇನ್ನಷ್ಟು ಸಮಯ ಮುಂದೆ ಹೋಗುವ ಸಾಧ್ಯತೆ ಇದೆ. ಈ ಹಿಂದೆ ನೀವು ಸಹಾಯ ಮಾಡಿದ್ದ ವ್ಯಕ್ತಿಯಿಂದ ಈಗ ನಿಮಗೆ ನೆರವು ಒದಗಿ ಬರುವಂಥ ಯೋಗ ಇದೆ.

Published On - 6:30 am, Tue, 11 July 23

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!