AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ರಾಶಿಭವಿಷ್ಯ, ಇಂದು ಈ ರಾಶಿಯವರು ಸಮಯ ವ್ಯರ್ಥ ಮಾಡದೇ ಅಧಿಕ ಸಂಪಾದನೆ ಮಾಡಲಿದ್ದಾರೆ

ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 12) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ರಾಶಿಭವಿಷ್ಯ, ಇಂದು ಈ ರಾಶಿಯವರು ಸಮಯ ವ್ಯರ್ಥ ಮಾಡದೇ ಅಧಿಕ ಸಂಪಾದನೆ ಮಾಡಲಿದ್ದಾರೆ
ದಿನಭವಿಷ್ಯImage Credit source: Getty Images
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi|

Updated on: Jul 12, 2023 | 12:15 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 12 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ: ಭರಣೀ, ಯೋಗ: ಸುಕರ್ಮ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:38 ರಿಂದ 02:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:48 ರಿಂದ 09:25 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:01 ರಿಂದ ಮಧ್ಯಾಹ್ನ 12:38ರ ವರೆಗೆ.

ಮೇಷ: ಸರ್ಕಾರದ ಕೆಲಸವಾಗದೇ ಅಧಿಕ ಓಡಾಟವಾದೀತು. ಆರ್ಥಿಕ ನೆರವನ್ನು ನೀವು ಬಯಸುವಿರಿ. ಸಮಾಧಾನ ಚಿತ್ತದಿಂದ ನಿಮ್ಮ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುವಿರಿ. ಮಕ್ಕಳಿಗೆ ಸಂಪತ್ತನ್ನು ಹಂಚುವ ಯೋಚನೆ ಇರಲಿದೆ. ನಿಮ್ಮ ಸ್ವಭಾವದಿಂದ ದಾಂಪತ್ಯದಲ್ಲಿ ಕೆಲವು ಮಾತುಗಳು ಕೇಳಿಬರಬಹುದು. ಅನಗತ್ಯ ವಿಚಾರವನ್ನು ಪ್ರಸ್ತಾಪಿಸಿ ವಿವಾದವಾಗುವಂತೆ ಮಾಡುವಿರಿ. ನಿಮ್ಮ ಆದಾಯವು ಅಧಿಕವಾಗಿದ್ದು ನಿಮಗೆ ಸಂತೋಷವನ್ನು ಕೊಡುವ ವಿಚಾರವು ಇದಾಗಿದೆ. ಪಕ್ಷಪಾತವನ್ನು ಬಿಟ್ಟು ವ್ಯವಹರಿಸುವುದು ಉತ್ತಮ. ಅಧಿಕ ಶ್ರಮದಿಂದ ನಿಮಗೆ ಮುಕ್ತಿ ಸಿಗಲಿದೆ.

ವೃಷಭ: ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು. ವಿವಾಹದ ಮಾತುಕತೆಗಳು ಬಿರುಸಿನಿಂದ ನಡೆಯಲಿದೆ. ನಿಮ್ಮ‌ ಸುರಕ್ಷತೆಯಲ್ಲಿ ನೀವಿರುವುದು ಉತ್ತಮ. ಪತ್ನಿಯ ಬಗ್ಗೆ ನಿಮಗೆ ಗೌರವವು ಕಡಿಮೆ ಆಗಬಹುದು. ವಿದೇಶದ ಸಂಪರ್ಕದಿಂದ ನಿಮಗೆ ಅನನುಕೂಲವಾಗಲಿದೆ. ನಿಮ್ಮ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ಕೋಪಕ್ಕೆ ಕಾರಣವನ್ನು ನೀವು ವ್ಯಕ್ತಿಪಡಿಸಲು ಇಚ್ಛಿಸುವುದಿಲ್ಲ. ಸಂಪತ್ತಾಗಿ ಅನ್ಯ ವೃತ್ತಿಯನ್ನು ಆಶ್ರಯಿಸಬೇಕಾದೀತು. ವಾತಾವರಣದಿಂದ ನಿಮಗೆ ಕಷ್ಟವಾದೀತು. ದೂರಪ್ರಯಾಣವನ್ನು ನಿಷೇಧ ಮಾಡಿ.

ಮಿಥುನ: ಸ್ನೇಹಿರಿಂದ ನಿಮಗೆ ಬಹುಮಾನ ಸಿಗಲಿದೆ. ಸಮಾಜಮುಖೀ ಕೆಲಸದಿಂದ ನಿಮಗೆ ಗೌರವವು ಸಿಗಲಿದೆ. ಮಕ್ಕಳ ಯಶಸ್ಸಿನಿಂದ ಪೋಷಕರಿಗೆ ಸಂತಸವಾಗಲಿದೆ. ವಾಹನ ಚಲಿಸುವಾಗ ಜಾಗರೂಕತೆ ಮುಖ್ಯವಾಗಲಿದೆ. ವ್ಯಾಪರದಲ್ಲಿ‌ ಮಧ್ಯವರ್ತಿಗಳ ಮೇಲೆ‌ ಒಂದು ಕಣ್ಣಿರಲಿ. ಮೋಸದ ಜಾಲಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ನೀವು ನಿಮ್ಮ ಬಗ್ಗೆ ಜನರ ಅಭಿಪ್ರಾಯವನ್ನು ಪಡೆಯಲು ಇಚ್ಛಿಸುವಿರಿ. ವಿದೇಶದಲ್ಲಿ ಇದ್ದರೆ ನಿಮಗೆ ಸಂಕಷ್ಟವು ಬರಬಹುದು. ಉತ್ತಮ‌ ಆಹಾರವನ್ನು ಪಡೆಯಲು ಯತ್ನಿಸಿ.‌ ಪೂಜಾಯೋಗ್ಯರಿಗೆ ಆತಿಥ್ಯವನ್ನು ನೀಡಿ. ನಿಮ್ಮ ಬಗ್ಗೆ ಇರುವ ಸುಳ್ಳು ಸುದ್ದಿಯನ್ನು ಸರಿಪಡಿಸಿಕೊಳ್ಳಿ.

ಕಟಕ: ಸಂಗಾತಿಯನ್ನು ನೀವು ಅವಮಾನಸಲಿದ್ದೀರಿ. ಇದರಿಂದ ನಿಮಗೆ ಮುಂದೆ ತೊಂದರೆಯಾಗಬಹುದು. ಆಹಾರದಲ್ಲಿ ಪಥ್ಯವನ್ನು ಇಟ್ಟುಕೊಳ್ಳಬೇಕಾದೀತು. ಆರ್ಥಿಕಸ್ಥಿತಿಯು ನಿಮಗೆ ಸಮಾಧಾನವನ್ನು ಕೊಡುವುದು. ಕುಟುಂಬದಲ್ಲಿ ಐಕಮತ್ಯವಿರಲಿ. ಆತ್ಮೀಯರ ಜೊತೆ ನಿಮ್ಮ ಸಂಬಂಧವು ಚೆನ್ನಾಗಿರಲಿದೆ. ವೃತ್ತಿಯಲ್ಲಿ ಬಂದ ಮಾತಿನಿಂದ ನೀವು ಉದ್ವೇಗಗೊಳ್ಳುವಿರಿ. ನಿಮ್ಮ ದೃಷ್ಟಿಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮ್ಮ ಕುರಿತು ತಂದೆ ತಾಯಿಯರು ಚಿಂತಿಸುವರು. ನೀವು ಮಾತಿಗೆ ತಪ್ಪಿದವರು ಎಂಬ ಪಟ್ಟಕ್ಕೆ ಏರುವಿರಿ. ಭೂಮಿಯ ಪ್ರಕರಣವು ನಿಮ್ಮನ್ನು ಚಿಂತೆಗೀಡುಮಾಡೀತು. ನೌಕರರ ಮೇಲೆ ಕಿಡಿಕಾರುವಿರಿ.

ಸಿಂಹ: ಸರ್ಕಾರದಿಂದ ಸೌಲಭ್ಯವನ್ನು ನೀವು ನಿರೀಕ್ಷಿಸುತ್ತಿರುವಿರಿ. ಯಶಸ್ಸನ್ನು ಒಡೆಯುವ ಹಂಬಲವು ಅಧಿಕವಾಗುವುದು. ಪ್ರತ್ಯಕ್ಷವಾಗಿ ಕಂಡಿದ್ದನ್ನು ಹಾಗೆಯೇ ಹೇಳುವುದು ಬೇಡ. ಅವಶ್ಯಕತೆಗೆ ಅನುಸಾರವಾಗಿ ಮುಂದುವರಿಯಿರಿ.‌ ಸ್ನೇಹಿತರಿಗೆ ಸಾಲವಾಗಿ ಹಣವನ್ನು ಕೊಡುವಿರಿ. ಸಾಮಾಜಿಕ ತಾಣದಲ್ಲಿ ನಿಮಗೆ ಸ್ತ್ರೀಯ ಜೊತೆ‌ ಪ್ರೇಮವು ಉಂಟಾಗಬಹುದು. ಸಹೋದರರು ಹಣಕ್ಕಾಗಿ ನಿಮ್ಮನ್ನು ಪೀಡಿಸಬಹುದು. ಸಮಯವನ್ನು ವ್ಯರ್ಥ ಮಾಡದೇ ಅಧಿಕ ಸಂಪಾದನೆಯನ್ನು ಮಾಡುವಿರಿ. ಮನೆಯಲ್ಲಿ ಒಂಟಿಯಾಗಿದ್ದು ನಿಮಗೆ ಭಯವು ಉಂಟಾಗಬಹುದು.

ಕನ್ಯಾ: ಹೊಸ ಸಂಬಂಧವನ್ನು ಮಾಡಿಕೊಳ್ಳುವಿರಿ. ನಿರಂತರ ಕೆಲಸವು ನಿಮಗೆ ಇಂದು ಇಷ್ಟವಾಗಲಿದೆ. ಅಧಿಕ‌ ಆಹಾರವನ್ನು ನೀವು ಸ್ವೀಕರಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ವಾಹನದಿಂದ ಖರ್ಚಾಗಲಿದೆ. ಗೃಹನಿರ್ಮಾಣದ ಭೂಮಿಯ ವಿಚಾರದಲ್ಲಿ ದೂರನ್ನು ದಾಖಲಿಸಬಹುದು. ಇದಕ್ಕಾಗಿ ಓಡಾಟವಾಗಲಿದೆ. ಅವಕಾಶಗಳು ಇಲ್ಲದೇ ನೀವು ಇಂದು ಅಸಮಾಧಾನದಿಂದ ಇರುವಿರಿ. ಮಾರಾಟದಿಂದ ನಿಮಗೆ ಅಲ್ಪ ಲಾಭವಾಗಲಿದೆ. ವಿಷ್ಣುಸಹಸ್ರನಾಮದ ಪಠಣವನ್ನು ಮಾಡುವಿರಿ. ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು.

ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು