Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 6ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 6ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 6ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಂತ ನೀರಿನಂತಾಗಿದೆ ಜೀವನ ಅಂದುಕೊಳ್ಳುತ್ತಿದ್ದಲ್ಲಿ ದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದಾಗಿದೆ. ಈ ಹಿಂದೆ ನೀವು ಬಹಳ ಆಸಕ್ತಿ ವಹಿಸಿ ಮಾಡಿದ್ದ ಕೆಲಸದ ಕಾರಣಕ್ಕೆ ಈಗ ಗೌರವ, ಮನ್ನಣೆ ಅಥವಾ ಹೊಸ ಜವಾಬ್ದಾರಿಯೊಂದು ಹುದ್ದೆಯ ಸಹಿತವಾಗಿ ದೊರೆಯುವಂತಹ ಅವಕಾಶಗಳಿವೆ. ಮನಸ್ಸಿನಲ್ಲಿರುವ ಸಂಗತಿಯನ್ನೆಲ್ಲ ಹೇಳಿಕೊಳ್ಳದೆ ಸಾಧ್ಯವಾದಷ್ಟೂ ಮೌನವಾಗಿರುವುದಕ್ಕೆ ಪ್ರಯತ್ನಿಸಿ. ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸ್ವಲ್ಪ ಮಟ್ಟಿಗೆ ಬೇಸರ ಕಾಡಬಹುದು.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ದೈಹಿಕವಾಗಿ ಆಯಾಸ ನಿಮ್ಮನ್ನು ಕಾಡಲಿದೆ. ಅತ್ಯಂತ ಮುತುವರ್ಜಿ ವಹಿಸಿ ಮಾಡಿದ್ದ ಕೆಲಸ ಅಂದುಕೊಂಡಂಥ ಫಲಿತಾಂಶವನ್ನು ನೀಡದ ಕಾರಣಕ್ಕೆ ಬೇಸರ ಆಗಬಹುದು. ನಿಮ್ಮಿಂದ ಬಹಳ ಪ್ರಯೋಜನ ಪಡೆದುಕೊಂಡ ವ್ಯಕ್ತಿಗಳು ನಿಮ್ಮ ವಿರುದ್ಧವೇ ಮಾತನಾಡಿದರು ಎಂಬ ಮಾಹಿತಿ ಕೇಳಿಬರುತ್ತದೆ. ಖರ್ಚಿನ ವಿಚಾರಕ್ಕೆ ಕುಟುಂಬದೊಳಗೆ ಅಭಿಪ್ರಾಯ ಭೇದಗಳು ತಲೆದೋರಲಿವೆ. ನಿಮಗೆ ಸಂಬಂಧಪಡದ ವಿಷಯಗಳಲ್ಲಿ ಮಾತನಾಡುವ ಸಂದರ್ಭ ಬಂದರೆ ಸುಮ್ಮನಿರುವುದು ಒಳ್ಳೆಯದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಅಷ್ಟೇನೂ ಆಸಕ್ತಿ ನೀಡದೆ ಅಥವಾ ಹೆಚ್ಚು ಶ್ರಮ ಹಾಕದೆ ಮಾಡಿದ್ದ ಕೆಲಸವೊಂದರಿಂದ ಪ್ರಯೋಜನಗಳು ಒದಗಿಬರುವಂಥ ಯೋಗ ಕಂಡುಬರುತ್ತಿದೆ. ಮೊದಮೊದಲು ಮಾಡಿದ ಕೆಲಸಗಳು ಇತರರ ಗಮನ ಸೆಳೆಯಲಿವೆ. ಹೊಸ ಬಟ್ಟೆ ಅಥವಾ ಗ್ಯಾಜೆಟ್ ಗಳನ್ನು ಖರೀದಿ ಮಾಡುವಂಥ ಯೋಗ ಕಂಡುಬರುತ್ತಿದೆ. ನಿಮ್ಮ ವಿರುದ್ಧ ಹಗೆ ಅಥವಾ ಶತ್ರುತ್ವ ಸಾಧಿಸುವುದಕ್ಕೆ ಪ್ರಯತ್ನಿಸಿದವರು ನಾನಾ ರೀತಿಯಲ್ಲಿ ಸಮಸ್ಯೆಗಳಿಗೆ ಸಿಲುಕಿಕೊಳ್ಳಲಿದ್ದಾರೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಯಾರ ಮಾತನ್ನು ನಾನೇಕೆ ಕೇಳಬೇಕು ಹಾಗೂ ಕೇಳಿಸಿಕೊಳ್ಳಬೇಕು ಎಂಬ ಧೋರಣೆ ನಿಮ್ಮಲ್ಲಿ ಇರಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಈ ರೀತಿಯ ಧೋರಣೆಯೇ ಸಮಸ್ಯೆಯಾಗಿ ಮಾರ್ಪಡಬಹುದು. ಅಷ್ಟೇ ಅಲ್ಲ, ಪ್ರೇಮ ಸಂಬಂಧವೇ ಮುರಿದುಬೀಳುವ ಮಟ್ಟದ ತನಕ ಹೋಗಬಹುದು. ಯಾರದೋ ಮೇಲಿನ ಸವಾಲಿಗೋ ಅಥವಾ ಪ್ರತಿಷ್ಠೆಗೋ ದುಬಾರಿ ಖರೀದಿ ಮಾಡುವಂಥ ಯೋಗ ಕಂಡುಬರುತ್ತಿದೆ. ಆದ್ದರಿಂದ ಮನಸ್ಸಿನ ಮೇಲೆ ನಿಯಂತ್ರಣ ಇರುವುದು ಬಹಳ ಮುಖ್ಯ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ತಂದೆ ಅಥವಾ ತಂದೆಗೆ ಸಮಾನರಾದವರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಮಕ್ಕಳ ಶಿಕ್ಷಣ, ಮನೆ ಕೆಲಸ ಹಾಗೂ ಒಂದು ವೇಳೆ ಉದ್ಯೋಗಸ‌್ಥ ಮಹಿಳೆಯರಿದ್ದಲ್ಲಿ ಕೆಲಸದ ಒತ್ತಡ ಇವೆಲ್ಲವೂ ಒಟ್ಟಿಗೆ ಸೇರಿಕೊಳ್ಳುತ್ತದೆ. ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿಗಾಗಿ ಪ್ರಯತ್ನಿಸುತ್ತಾ ಇರುವವರಿಗೆ ಹಿನ್ನಡೆ ಇದೆ. ನೀವಾಗಿಯೇ ತಂದುಕೊಂಡ ಜವಾಬ್ದಾರಿಯೊಂದು ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಯಾರನ್ನು ಎಲ್ಲಿಯ ತನಕ ಬಿಟ್ಟುಕೊಳ್ಳಬಹುದು ಅಥವಾ ಎಷ್ಟು ಸಲುಗೆ ಎಂಬ ಬಗ್ಗೆ ವಿಪರೀತ ಆಲೋಚನೆ ಮಾಡಲಿದ್ದೀರಿ. ನಿಮ್ಮ ಆಂತರಿಕ ವಿಚಾರವನ್ನು ಯಾವ ವ್ಯಕ್ತಿಯ ಮುಂದೆ ಬಹಳ ನಂಬಿಕೆಯಿಂದ ಹೇಳಿಕೊಂಡಿದ್ದಿರೋ ಅದೇ ವ್ಯಕ್ತಿಯು ಸಲುಗೆಯನ್ನು ದುರುಪಯೋಗ ಮಾಡಿಕೊಳ್ಳಬಹುದು. ಒಂದು ರೂಪಾಯಿಯಲ್ಲಿ ಮುಗಿದುಹೋಗುತ್ತದೆ ಎಂದುಕೊಂಡ ಕೆಲಸಕ್ಕೆ ನಾಲ್ಕು ರೂಪಾಯಿ ಖರ್ಚಾಗಲಿದೆ. ಸೋದರ- ಸೋದರಿಯರ ಜತೆಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಆದಾಯ ಜಾಸ್ತಿ ಮಾಡಿಕೊಳ್ಳಲೇಬೇಕು ಎಂದು ಬಲವಾಗಿ ಪ್ರಯತ್ನವನ್ನು ಆರಂಭಿಸಲಿದ್ದೀರಿ. ಇಷ್ಟು ಸಮಯ ಮಾಡಿದರಾಯಿತು, ನೋಡಿದರಾಯಿತು ಎಂಬ ಧೋರಣೆ ತೋರುತ್ತಿದ್ದಲ್ಲಿ ಏಕಾಏಕಿ ಕೆಲಸದಲ್ಲಿ ಚುರುಕಾಗಿ ತೊಡಗಿಕೊಳ್ಳಲಿದ್ದೀರಿ. ಈ ಹಿಂದೆ ಯಾವಾಗಲೋ ಪ್ರಯತ್ನ ಪಟ್ಟು, ಮರೆತೇ ಹೋಗಿದ್ದ ಕೆಲಸವೋ ಪ್ರಾಜೆಕ್ಟೋ ಈಗ ಮತ್ತೆ ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಈ ದಿನ ನಿಮ್ಮ ಮೊಬೈಲ್ ಫೋನ್ ನಾಟ್ ರೀಚಬಲ್ ಅಥವಾ ಸ್ವಿಚ್ ಆಫ್ ಆಗದಂತೆ ಜಾಗ್ರತೆ ವಹಿಸಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ತಂದೆಯ ಅನಾರೋಗ್ಯ ಸಮಸ್ಯೆಯು ಚಿಂತೆಗೆ ಗುರಿ ಮಾಡಬಹುದು. ಇನ್ನೇನು ಎಲ್ಲ ಕೆಲಸ ಮುಗಿದೇ ಹೋಯಿತು, ಕೈಗೆ ಹಣ ಬಂದೇ ಬಿಟ್ಟಿತು ಎಂದುಕೊಂಡು ಬೇರೆಯವರಿಗೆ ಮಾತು ಕೊಟ್ಟಿದ್ದಲ್ಲಿ ಆ ಹಣ ಬಾರದೇ ಹೋಗಿ ಅವಮಾನದ ಪಾಲಾಗುವಂತಹ ಸಾಧ್ಯತೆ ಇದೆ. ಇದರ ಜತೆಗೆ ಸಂಗಾತಿ ಅಥವಾ ಅವರ ಕುಟುಂಬದವರಿಂದ ನಿಮ್ಮ ಸಾಮರ್ಥ್ಯದ ಬಗ್ಗೆ ಮೂದಲಿಕೆ ಅಥವಾ ಹೀಯಾಳಿಕೆ ಮಾತುಗಳನ್ನು ಕೇಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಇತರರ ನಿರೀಕ್ಷೆ, ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಾದ ಅನಿವಾರ್ಯ ಎದುರಾಗಲಿದೆ. ಮನೆಯಲ್ಲಿ ಕೂಡ ಎಲ್ಲರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅವರಿಗೆ ಇಷ್ಟವಾಗುವಂತೆ ನಡೆದುಕೊಳ್ಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಹಣಕಾಸು ವಿಚಾರದಲ್ಲಿ ತಂದೆ- ತಾಯಿ ಜತೆಗೆ ಅಥವಾ ತಂದೆ- ತಾಯಿ ಸಮಾನರ ಜತೆಗೆ ಜೋರು ಧ್ವನಿಯ ಮಾತುಕತೆಗಳು ಆಗಬಹುದು. ಒಟ್ಟಾರೆಯಾಗಿ ಈ ದಿನಾ ಭಾವನಾತ್ಮಕವಾಗಿ ಸವಾಲಿನಿಂದ ಕೂಡಿರುತ್ತದೆ.