Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 7ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 7ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 7ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಅಷ್ಟೇನೂ ಮುಖ್ಯವಾದದ್ದಲ್ಲ ಎಂದುಕೊಂಡು ಇತರರಿಗೆ ವಹಿಸಿದ ಕೆಲಸದಿಂದ ಸಮಸ್ಯೆ ಕುತ್ತಿಗೆಗೆ ಬರುವಂಥ ಸಾಧ್ಯತೆಗಳಿವೆ. ಆದ್ದರಿಂದ ನಿಮ್ಮ ಜವಾಬ್ದಾರಿಯನ್ನು ನೀವೇ ನಿರ್ವಹಿಸುವುದು ಉತ್ತಮ. ವೈದ್ಯರಾಗಿ ವೃತ್ತಿ ನಿರ್ವಹಿಸುತ್ತಿರುವವರಿಗೆ ವರ್ಚಸ್ಸಿಗೆ ಧಕ್ಕೆ ಆಗುವಂಥ ಸನ್ನಿವೇಶಗಳು ಎದುರಾಗಲಿವೆ. ಮುಖ್ಯವಾಗಿ ಸಂಪೂರ್ಣ ವಿಷಯವನ್ನು ತಿಳಿದುಕೊಳ್ಳದೆ ಅಭಿಪ್ರಾಯವನ್ನು ಹೇಳಲಿಕ್ಕೆ ಹೋಗದಿರಿ. ಸೂರ್ಯನಾರಾಯಣನ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಒಂದೇ ವಿಚಾರದ ಬಗ್ಗೆ ವಿಪರೀತ ಚರ್ಚೆಗಳು ನಡೆದು, ಮಾನಸಿಕ ಹಿಂಸೆ ಅನುಭವಿಸಲಿದ್ದೀರಿ. ದೀರ್ಘ ಕಾಲದ ಅನಾರೋಗ್ಯ ಸಮಸ್ಯೆಯೊಂದು ಕಾಣಿಸಿಕೊಳ್ಳುವ ಮುನ್ಸೂಚನೆ ದೊರೆಯಲಿದೆ. ಸಣ್ಣ- ಪುಟ್ಟ ಆರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಬೇಡಿ. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವವರು ಸಣ್ಣ- ಪುಟ್ಟ ಗಾಯವನ್ನಾದರೂ ಮಾಡಿಕೊಳ್ಳುವಂಥ ಯೋಗ ಇದ್ದು, ವಾಹನಗಳನ್ನು ಏರುವಾಗ, ಇಳಿಯುವಾಗ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ದೂರದ ಊರುಗಳಿಂದ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಬಹಳ ಮುಖ್ಯವಾದ ವಿಚಾರಗಳು ಇದ್ದಲ್ಲಿ ಒಂದು ಕಡೆ ದಾಖಲೆ ಮಾಡಿಟ್ಟುಕೊಳ್ಳುವುದು ಉತ್ತಮ. ಹಣಕಾಸಿನ ವಿಚಾರಗಳು ಇದ್ದಲ್ಲಿ ಈ ದಿನ ಮುಂದಕ್ಕೆ ಹಾಕುವುದು ಒಳ್ಳೆಯದು. ನೀವಾಗಿಯೇ ಮೈ ಮೇಲೆ ಹಾಕಿಕೊಂಡ ಜವಾಬ್ದಾರಿಗಳನ್ನು ಸರಿಯಾಗಿ ಮುಗಿಸುವ ಕಡೆಗೆ ಲಕ್ಷ್ಯ ನೀಡಿ. ಇತರರು ಹೊಗಳಿದರು ಎಂಬ ಕಾರಣಕ್ಕೆ ಕೈ ಮೀರಿದ ಕೆಲಸಗಳನ್ನು ಒಪ್ಪಿಕೊಳ್ಳದಿರಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಈ ಹಿಂದೆ ನೀವು ಸಹಾಯ ಮಾಡಿದ್ದ ವ್ಯಕ್ತಿಗಳಿಂದ ನಿಮಗೆ ಬೇಕಾದ ನೆರವು ದೊರೆಯಲಿದೆ. ವಾಹನಗಳ ಖರೀದಿಗೆ ಹಣಕಾಸಿನ ಕೊರತೆ ಇದ್ದಲ್ಲಿ ಹರಿವಿಗೆ ಪೂರಕವಾದ ನೆರವು ದೊರೆಯಲಿದೆ. ಒಂದು ವೇಳೆ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ದೊರೆಯಲಿದೆ. ನವ ವಿವಾಹಿತರಿದ್ದಲ್ಲಿ ಸಣ್ಣ- ಪುಟ್ಟ ಕಾರಣಗಳಿಗಾದರೂ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ಸಾಧ್ಯವಾದಷ್ಟೂ ಪಾರದರ್ಶಕವಾಗಿ ನಡೆದುಕೊಳ್ಳುವುದಕ್ಕೆ ಪ್ರಯತ್ನಿಸಿರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಈ ದಿನ ಪ್ರೇಮಿಗಳಿಗೆ ವಿರಹ ವೇದನೆ ಅನುಭವಿಸುವಂಥ ಯೋಗ ಇದೆ. ಒಂದು ವೇಳೆ ಭೇಟಿ ಮಾಡಬೇಕು ಅಥವಾ ಮಾತನಾಡಬೇಕು ಎಂದುಕೊಂಡಿದ್ದಲ್ಲಿ ನಾನಾ ಕಾರಣಗಳಿಗೆ ಸಾಧ್ಯವಾಗದೇ ಹೋಗಬಹುದು. ನಿಮ್ಮಲ್ಲಿ ಕೆಲವರಿಗೆ ಪರಸ್ಪರ ಅನುಮಾನ ಹಾಗೂ ಬೇಸರ ಸಹ ಮೂಡುವಂಥ ಸಾಧ್ಯತೆ ಇದೆ. ಗೃಹಿಣಿಯರಿಗೆ ಸಣ್ಣ- ಪುಟ್ಟ ಅಪಘಾತಗಳಾಗಬಹುದು. ಮಾಡುವ ಕೆಲಸದಲ್ಲಿ ಏಕಾಗ್ರತೆ ಬಹಳ ಮುಖ್ಯ, ಅನ್ಯ ಮನಸ್ಕರಾಗಿ ಕೆಲಸದಲ್ಲಿ ತೊಡಗಿಕೊಂಡಲ್ಲಿ ಸಮಸ್ಯೆ ಆದೀತು.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಸಿನಿಮಾ ರಂಗದಲ್ಲಿ ಇರುವವರಿಗೆ, ಷೇರು ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ, ಹಣಕಾಸು ಸಲಹೆಗಾರರಾಗಿ ಕೆಲಸ ಮಾಡುತ್ತಿರುವವರಿಗೆ, ಬ್ಯೂಟಿ ಪಾರ್ಲರ್ ನಡೆಸುತ್ತಿರುವವರಿಗೆ ವೃತ್ತಿಗೆ ಸಂಬಂಧಿಸಿದಂತೆ ವಿಸ್ತರಣೆಗೆ ಆಲೋಚನೆ ಮಾಡಲಿದ್ದೀರಿ. ಕುಟುಂಬ ವ್ಯವಹಾರ ನಡೆಸುತ್ತಾ ಇರುವವರು ಹೂಡಿಕೆಗಾಗಿ ಸಾಲ ಮಾಡುವಂಥ ಯೋಗ ಇದೆ. ಈ ಹಿಂದೆ ನೀವಾಡಿದ್ದ ಮಾತಿನ ಕಾರಣಕ್ಕೆ ಕೆಲವು ಅವಕಾಶಗಳನ್ನು ಕಳೆದುಕೊಳ್ಳಲಿದ್ದೀರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಮನೆಯ ದುರಸ್ತಿಗಾಗಿ ಖರ್ಚು ಮಾಡಬೇಕಾದ ಸುಳಿವು ದೊರೆಯಲಿದೆ. ಸಂಗಾತಿ ಜತೆಗೆ ನಾನಾ ವಿಚಾರಗಳಿಗೆ ಮನಸ್ತಾಪ ಆಗಬಹುದು. ಕೆಟ್ಟ ಮಾತನ್ನು ಆಡಿ, ಇತರರ ಕಣ್ಣಲ್ಲಿ ನಿಮ್ಮ ವರ್ಚಸ್ಸು ಕುಂದುವಂತಾಗಲಿದೆ. ರಾಜಕಾರಣದಲ್ಲಿ ಇರುವಂಥವರಿಗೆ ಹಣಕಾಸಿನ ಅಗತ್ಯ ತೀವ್ರವಾಗಲಿದೆ. ಅಥವಾ ಈ ಹಿಂದೆ ಮಾಡಿದ್ದ ಸಾಲಕ್ಕೆ ಭಾರೀ ಮೊತ್ತದ ಬಡ್ಡಿ ಕಟ್ಟಬೇಕಾದ ಸನ್ನಿವೇಶ ನಿರ್ಮಾಣ ಆಗಲಿದೆ. ಇತರರಿಂದ ಬೆದರಿಕೆ ಸಹ ಬರಬಹುದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗಬಹುದು ಅಥವಾ ನಿಮ್ಮಲ್ಲಿ ಕೆಲವರು ಪ್ರಯಾಣ ಮಾಡುವ ಸಾಧ್ಯತೆ ಸಹ ಇದೆ. ಹಣಕಾಸಿನ ವಿಚಾರದಲ್ಲಿ ನೀವು ಅಂದುಕೊಳ್ಳದ ರೀತಿಯಲ್ಲಿ ಬದಲಾವಣೆ ಆಗಲಿದೆ. ವಿವಾಹದ ಆಚೆಗಿನ ಸಂಬಂಧಗಳ ಕಡೆಗಿನ ಸೆಳೆತ ಬಂದಲ್ಲಿ ನಿಯಂತ್ರಣ ಮಾಡಿಕೊಳ್ಳುವುದು ಬಹಳ ಮುಖ್ಯ. ವಿದೇಶಗಳಲ್ಲಿ ವ್ಯಾಸಂಗ ಮಾಡಬೇಕು ಎಂದಿರುವವರಿಗೆ ಬ್ಯಾಂಕ್ ಲೋನ್ ಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಅನುಕೂಲ ಒದಗಿ ಬರಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ದೊಡ್ಡ ಮೊತ್ತವನ್ನು ಒಟ್ಟು ಹಾಕುವುದಕ್ಕೆ ನಿಮ್ಮ ಸಮಯವನ್ನು ಮೀಸಲಿಡಬೇಕಾಗುತ್ತದೆ. ಮ್ಯೂಚುವಲ್ ಫಂಡ್ಸ್, ಷೇರುಗಳು, ಡಿಬೆಂಚರ್ ಇತ್ಯಾದಿಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದ್ದೀರಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರು ಕೆಲಸದ ಒತ್ತಡವನ್ನು ಎದುರಿಸಬೇಕಾಗುತ್ತದೆ. ಭವಿಷ್ಯದ ಬಗ್ಗೆ ಆಲೋಚನೆ ಮಾಡದೆ ಈ ಹಿಂದೆ ಮಾಡಿದ್ದ ಕೆಲಸವೊಂದರಿಂದ ಈಗ ಕೈಯಿಂದ ಹೆಚ್ಚಿನ ಹಣ ಖರ್ಚಾಗುವ ಯೋಗ ಇದೆ.