AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಇಂದಿನ ರಾಶಿಭವಿಷ್ಯ, ಹಿತಶತ್ರುಗಳಿಂದ ಈ ರಾಶಿಯವರ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 8) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಇಂದಿನ ರಾಶಿಭವಿಷ್ಯ, ಹಿತಶತ್ರುಗಳಿಂದ ಈ ರಾಶಿಯವರ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ
ಇಂದಿನ ರಾಶಿಭವಿಷ್ಯImage Credit source: Getty Images
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi|

Updated on: Jul 08, 2023 | 12:30 AM

Share

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 8) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಆಯುಷ್ಮಾನ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:24 ರಿಂದ 11:01ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:14 ರಿಂದ 05:51ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:10 ರಿಂದ 07:47ರ ವರೆಗೆ.

ತುಲಾ: ಹಿತಶತ್ರುಗಳಿಂದ ಇಂದಿನ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಹಿರಿಯರಿಂದ ಬೈಗುಳವು ಸಿಗಬಹುದು. ಇಷ್ಟದ ಊರಿಗೆ ನೀವು ಹೋಗಲಿದ್ದೀರಿ. ತಂದೆಯ ಜೊತೆ ನಿಮ್ಮ ಕುರಿತು ಚರ್ಚೆ ಮಾಡಲಿದ್ದೀರಿ. ಇಂದಿನ ಶುಭವಾರ್ತೆಯು ನಿಮ್ಮ ಕಾರ್ಯಕ್ಕೆ ಉತ್ತೇಜನ ಕೊಡಬಹುದು. ಖಾಸಗಿ ಸಂಸ್ಥೆಯು ನಿಮಗೆ ಒಂದು ಜವಾಬ್ದಾರಿಯುತ ಸ್ಥಾನವನ್ನು ಕೊಡಬಹುದು. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗಬಹುದು. ಸಾಹಸದಿಂದ ಏನನ್ನಾದರೂ ಮಾಡಲು ಹೋಗಬಹುದು. ಪೂರ್ವಾಪರ ಯೋಚನೆ ಇದ್ದರೆ ಒಳ್ಳೆಯದು. ಆಪತ್ತಿನಲ್ಲಿ ಇದ್ದರೆ ಇಷ್ಟದೇವರನ್ನು ಸ್ಮರಿಸಿ.

ವೃಶ್ಚಿಕ: ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ನಡೆಯು ಎಲ್ಲರಿಗೂ ಇಷ್ಡವಾಗಬಹುದು. ಹಣವನ್ನು ಸಾರ್ವಜನಿಕ ಕಾರ್ಯಗಳಿಗೆ ಬಳಸಲು ಆಲೋಚಿಸುವಿರಿ. ತಪ್ಪನ್ನು ಒಪ್ಪಿಕೊಳ್ಳಲು ನೀವು ಸಿದ್ಧರಾಗುವುದಿಲ್ಲ.‌ ಇದು ವಿವಾದವಾಗಿ ಪರಿವರ್ತನೆ ಆಗಬಹುದು. ಎಚ್ಚರಿಕೆಯಿಂದ ವ್ಯವಹಾರವನ್ನು ಮಾಡುವಿರಿ. ದಯೆಯ ವಿಚಾರದಲ್ಲಿ ನೀವು ಹಿಂದೆ. ಕೆಲಸ ವಿಚಾರದಲ್ಲಿ ನೀವು ಕಠೋರವಾಗಿ ವರ್ತಿಸುವುದು ಉದ್ಯೋಗಿಗಳಿಗೆ ಕಷ್ಟವಾಗುವುದು. ಮಕ್ಕಳಿಗೆ ಹಿತವಚನವನ್ನು ಹೇಳಿ ತಿದ್ದುವ ಪ್ರಯತ್ನವನ್ನು ಮಾಡುವಿರಿ.

ಧನುಸ್ಸು: ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ನೀವು ಕೇಳಬೇಕಾದೀತು. ಬಹಳ ದಿನಗಳ ಅನಂತರ ಮನೆಯಲ್ಲಿ ಶುಭಕಾರ್ಯವನ್ನು ಮಾಡಲು ಇಚ್ಛಿಸುವಿರಿ. ಸಣ್ಣ ವಿಚಾರಕ್ಕೂ ನೀವು ಕೋಪಗೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವುದು ಬೇಡ. ನಿಮ್ಮ ಮಾತು ವಿವಾದಕ್ಕೆ ಗುರಿಯಾಗಲಿದೆ. ನೀವು ಇಂದು ನಿರೀಕ್ಷಿಸಿರುವುದು ಸ್ವಲ್ಪಮಟ್ಟಿಗೆ ಸಾಕಾರಗೊಳ್ಳಬಹುದು. ಋಣಮುಕ್ತರಾಗಲು ನಿಮ್ಮ ಪ್ರಯತ್ನ ಇಂದು ಬಹಳ ಇರಲಿದೆ. ವಾಹನ ಖರೀದಿಗೆ ಆಪ್ತರ ಸಲಹೆಯನ್ನು ಪಡೆಯಿರಿ.

ಮಕರ: ಸ್ಥಿರ ಆಸ್ತಿಯನ್ನು ಗಳಿಸಲು ಹೆಚ್ಚು ಯೋಜನೆ ಅಗತ್ಯ. ಬಂಧುಗಳ ಜೊತೆ ಸಮಾಲೋಚಿಸಿ ಮುಂದುವರಿಯಿರಿ. ವಿದೇಶಕ್ಕೆ ಪ್ರಯಾಣ ಹೋಗುವ ಅವಕಾಶಗಳು ಸಿಗಬಹುದು. ನಿಮ್ಮ ಪ್ರಯತ್ನಕ್ಕೆ ಫಲವು ಇಂದೇ ಸಿಗಲಿದೆ. ಬರಬೇಕಾದ ಹಣವೂ ಸ್ವಲ್ಪ ಬರಲಿದೆ. ನಿಮ್ಮವರಿಗೆ ಸಹಾಯ ಮಾಡುವ ಮನಸ್ಸಾಗುವುದು. ಇಂದು ನೀವು ತಂದೆಯವರಿಗೆ ಎದುರು ಮಾತನಾಡಿರುವುದನ್ನು ಅವರು ಮಾನಸಿಕವಾಗಿ ತೆಗೆದುಕೊಳ್ಳಬಹುದು. ಇದಕ್ಕೆ ಕ್ಷಮೆ ಕೇಳಿ ಪಶ್ಚಾತ್ತಾಪಪಡಿ. ಸುಖ ದಾಂಪತ್ಯಕ್ಕೆ ಬೇಕಾದ ಸಲಹೆಯನ್ನು ಪಡೆಯಿರಿ. ನ್ಯಾಯಾಲಯ ಮೆಟ್ಟಿಲೇರಿ ಎಲ್ಲರ ಎದುರು ಮುಜುಗರ ಪಡಬೇಡಿ.

ಕುಂಭ: ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗಲಿದೆ. ನಿಮ್ಮ ವಾಸ ಸ್ಥಳವನ್ನು ಬದಲು ಮಾಡಬೇಕಾಗಬಹುದು. ಸರ್ಕಾರಿ ಕೆಲಸವು ಮುಂದೆಕ್ಕೆ ಹೋಗಲಿದೆ. ಬಾಲ್ಯ ಸ್ನೇಹಿತೆಯು ಇಂದು ಸಿಗಬಹುದು. ಇರುವ ಅವಕಾಶವನ್ನು ಕಳೆದುಕೊಂಡು ಸಂಕಟಪಡಬಹುದು. ಹಣಕಾಸಿನ ಅಭಾವಕ್ಕೆ ಕೆಲವು ಮಿತ್ರರ ಸಹಾಯವನ್ನು ಪಡೆಯುವಿರಿ. ಸಂಗಾತಿಗೆ ಸಮಯವನ್ನು ಕೊಡಲಾಗದೇ ವೈಮನಸ್ಯವು ಉಂಟಾಗಬಹುದು. ವಿದ್ಯಾಭ್ಯಾಸವನ್ನು ಮುಗಿಸಿ ಉದ್ಯೋಗವನ್ನು ಅರಸುವಿರಿ. ಅಂತರ್ಜಾಲದ ಉದ್ಯೋಗಕ್ಕೆ ಮಾರುಹೋಗಬಹುದು.

ಮೀನ: ಪ್ರಕ್ಷುಬ್ಧವಾಗಿದ್ದ ಮನಸ್ಸು ಇಂದು ಪ್ರಶಾಂತವಾಗಬಹುದು. ಆತ್ಮೀಯರನ್ನು ಭೇಟಿ ಮಾಡಬೇಕು ಎಂದು ಅನ್ನಿಸುವುದು. ಸಹೋದ್ಯೋಗಿಗಳ‌ ಜೊತೆ ಭಿನ್ನಾಭಿಪ್ರಾಯ ಬಂದು ಅದು ವೈಯಕ್ತಿಕ ಜಗಳವಾಗಿ ಮಾರ್ಪಾಡಾಗುವುದು. ಸಂತೋಷದ ಸಮಯವನ್ನು ನೆನಪಿಸಿಕೊಂಡು ಬೇಸರಿಸುವಿರಿ. ನಿಮಗೆ ಖ್ಯಾತಿಯ ಬಯಕೆ ಇರಲಿದೆ. ಸತ್ಯವನ್ನೇ ಹೇಳುವ ಉದ್ದೇಶವಿದ್ದರೂ ಅದನ್ನು ಹೇಳುವ ರೀತಿಯಲ್ಲಿ ನೀವು ಹೇಳಿ. ದಾಂಪತ್ಯದಲ್ಲಿ ಖುಷಿಯ ವಾತಾವರಣ ಇರಲಿದೆ. ಅಲ್ಪ ಲಾಭಕ್ಕೆ ಹೆಚ್ಚು ಶ್ರಮವನ್ನು ವಹಿಸಬೇಕಾಗುವುದು. ಮೋಸ ಹೋಗುವ ಸಾಧ್ಯತೆ ಇದೆ.

ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ