Daily Horoscope 8 July: ಸರ್ಕಾರಿ ನೌಕರರು ಬಡ್ತಿ ಹೊಂದುವುದು, ಕೂಡಿಟ್ಟ ಹಣ ಇಂದು ಉಪಯೋಗಕ್ಕೆ ಬರಲಿದೆ
ಇಂದಿನ (2023 ಜುಲೈ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ಭಿನ್ನವಾಗಿರುತ್ತದೆ. ಕೆಲವರಿಗೆ ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುತ್ತಾರೆ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ ಇಂದಿನ (2023 ಜುಲೈ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಆಯುಷ್ಮಾನ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:24 ರಿಂದ 11:01ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:14 ರಿಂದ 05:51ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:10 ರಿಂದ 07:47ರ ವರೆಗೆ.
ಮೇಷ: ಶಾರೀರಿಕ ಅಸೌಖ್ಯದ ಕೊರತೆ ಕಾಡಲಿದ್ದು ಮನೆಮದ್ದನ್ನು ಮಾಡಿ. ಉದ್ಯೋಗದಲ್ಲಿ ಸ್ಥಿರತೆಯು ಕಾಣದ ಕಾರಣ ಬದಲಿಸುವ ಅಲೋಚನೆಯೂ ಇರಲಿದೆ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವುದು ಬೇಡ. ಇತರರ ದೃಷ್ಟಿಯಲ್ಲಿ ನೀವು ದೊಡ್ಡವರಾಗಿ ಕಾಣುವಿರಿ. ಬಂದಿದ್ದನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಸಂಬಂಧಗಳನ್ನು ಉಳಿಸಿಕೊಳ್ಳಲು ನೀವು ಹೆಚ್ಚು ಇಷ್ಟಪಡುವಿರಿ. ಅವರ ಜೊತೆ ಆತ್ಮೀಯತೆಯನ್ನು ಬೆಳೆಸಿಕೊಳ್ಳುವಿರಿ. ಅಸಹಜಭಾವವು ನಿಮ್ಮಲ್ಲಿ ಉಂಟಾಗಿ ಉದ್ವೇಗಗೊಳ್ಳುವಿರಿ. ಕೆಲವು ಬದಲಾವಣೆಯನ್ನು ನಿರೀಕ್ಷಿಸುವಿರಿ ಮತ್ತು ನೀವು ಬದಲಾಗುವಿರಿ.
ವೃಷಭ: ಮನೆಯಿಂದ ಹಣವನ್ನು ನೀವು ಪಡೆಯುವಿರಿ. ನೀವು ಸಮಾರಂಭಕ್ಕೆ ಹೋಗಿ ಸಂತೋಷಪಡುವ ಸಾಧ್ಯತೆ ಇದೆ. ಕೆಲವರನ್ನು ನೀವು ವಿನಾಕಾರಣ ದ್ವೇಷಿಸುವಿರಿ. ನಿಮ್ಮ ಮಾತು ಮನಸ್ಸನ್ನು ಘಾಸಿಗೊಳಿಸೀತು. ಕಿವಿಯ ನೋವಿನಿಂದ ಸಂಕಟ ಪಡುವಿರಿ. ಇಂದು ಫಲವನ್ನು ಅತಿಯಾಗಿ ನಿರೀಕ್ಷಿಸುವುದು ಬೇಡ. ಸ್ಬೇಹಿತರ ಒತ್ತಾಯದ ಮೇರೆಗೆ ನೀವಿಂದು ಪ್ರಯಾಣ ಮಾಡುವಿರಿ. ನಿಮ್ಮ ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಳ್ಳಿ. ನಿರ್ಲಕ್ಷ್ಯದ ಕಾರಣ ನಿಮಗೇ ಬೇಸರವಾದೀತು. ಸಂಗಾತಿಯ ಜೊತೆ ಸಮಯವನ್ನು ಕಳೆಯುವಿರಿ.
ಮಿಥುನ: ಕಳ್ಳರ ಭೀತಿಯು ನಿಮ್ಮನ್ನು ಕ್ಷಣವೂ ಕಾಡಬಹುದು. ಅತಿಯಾದ ನಿದ್ರೆಯಲ್ಲಿ ಮೈ ಮರೆಯುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಅಗತ್ಯ ಕಾರ್ಯಗಳು ವಿಳಂಬವಾಗಬಹುದು. ಮನೆಯನ್ನು ನೀವು ಖರೀದಿಸುವ ಅಲೋಚನೆ ಮಾಡುವಿರಿ. ಎಂದೋ ಕೂಡಿಟ್ಟ ಹಣವು ಇಂದು ಉಪಯೋಗಕ್ಕೆ ಬರಲಿದೆ. ಸರ್ಕಾರಿ ನೌಕರರು ಬಡ್ತಿಯ ನಿರೀಕ್ಷೆಯಲ್ಲಿ ಇರುವರು. ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವು ಇರಲಿದೆ. ಅದನ್ನು ಉಳಿಸಿಕೊಳ್ಳಲು ನೀವು ಇಷ್ಟಪಡುವಿರಿ. ನಿಮ್ಮ ಸಂತೋಷವನ್ನು ಕಸಿದುಕೊಳ್ಳಲು ಯಾರಾದರೂ ಇರುತ್ತಾರೆ.
ಕಟಕ: ಮನಸ್ಸಿನಲ್ಲಿ ನಾನಾ ಬಗೆಯ ಚಿಂತೆಗಳು ಹುಟ್ಟಿಕೊಳ್ಳಬಹುದು. ಭವಿಷ್ಯದ ಬಗ್ಗೆ ಆಲೋಚನೆಗಳನ್ನು ಮಾಡುವಿರಿ. ಸಂಗಾತಿಯ ಸಲಹೆಯನ್ನೂ ಪಡೆದು ಉತ್ತಮ ನಿರ್ಧಾರಕ್ಕೆ ಬನ್ನಿ. ಸ್ತ್ರೀಯರು ಸೌಂದರ್ಯಪ್ರಜ್ಞೆಯನ್ನು ಅಧಿಕವಾಗಿ ಬೆಳೆಸಿಕೊಳ್ಳುವರು. ಮನೆಯವರ ಜೊತೆ ಎಲ್ಲವನ್ನೂ ಹೇಳಿಕೊಳ್ಳುವಿರಿ. ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸಿ. ಹೂಡಿಕೆಯತ್ತ ನಿಮ್ಮ ಗಮನವಿರಲಿದೆ. ಸರಿಯಾದ ಮಾಹಿತಿ ಇರಲಿ. ಕೇಳಿದವರಿಗೆ ಯೋಗ್ಯವಾದ ಸಲಹೆಯನ್ನು ಕೊಡಿ.
ಸಿಂಹ: ಮನಸ್ಸು ಚಂಚಲವಾಗಲಿದ್ದು ಯಾವುದರ ಬಗ್ಗೆಯೂ ಏಕಾಗ್ರತೆಯಿಂದ ಇರಲು ಸಾಧ್ಯವಾಗದು. ಲಾಭವಿಲ್ಲದ ಕೆಲಸವನ್ನು ನೀವು ಮಾಡಲು ಇಚ್ಛಿಸುವುದಿಲ್ಲ. ಇಂದು ಸಮಯ ಸಿಗದೇ ಗಡಿಬಿಡಿಯಿಂದ ಕೆಲಸವನ್ನು ಮುಗಿಸುವಿರಿ. ವಾಹನದಲ್ಲಿ ಎಚ್ಚರವಾಗಿರಿ. ಕಣ್ಣಿಗೆ ಸಂಬಂಧಿಸಿದ ತೊಂದರೆಯು ಹೆಚ್ಚಾಗಬಹುದು. ಕಛೇರಿಯ ಸಮಯದಲ್ಲಿ ಸುಮ್ಮನೇ ಓಡಾಡುತ್ತಿದ್ದು ಹಿರಿಯ ಅಧಿಕಾರಿಗಳಿಂದ ನಿಮಗೆ ತೊಂದರೆಯಾಗಬಹುದು. ನಿಮಗೆ ಗೊತ್ತಿಲ್ಲದ ವಿಚಾರಗಳನ್ನು ಯಾರಿಂದಲಾದರೂ ಕೇಳಿ ಪಡೆಯಿರಿ. ಉನ್ನತ ವ್ಯಾಸಂಗದ ಬಯಕೆಯನ್ನು ಮನೆಯಲ್ಲಿ ಹೇಳಿಕೊಳ್ಳುವಿರಿ.
ಕನ್ಯಾ: ಶತ್ರುಗಳು ಏನಾದರೂ ಮಾನಸಿಕ ಕಿರುಕುಳವನ್ನು ಉಂಟುಮಾಡಿಯಾರು. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಅಳವಡಿಸಿಕೊಳ್ಳಿ. ಹಿರಿಯರ ಹಿತವಚನವು ನಿಮಗೆ ಅಪಮಾನದಂತೆ ಅನ್ನಿಸಬಹುದು. ಆಲಸ್ಯದಿಂದ ಇಂದಿನ ಕಾರ್ಯವು ಪೂರ್ಣವಾಗದು. ಸಂಗಾತಿಯನ್ನು ನೀವು ಕಡೆಗಣಿಸುವಿರಿ. ತಾಯಿಯ ಕಡೆಯಿಂದ ಉದ್ಯೋಗಕ್ಕೆ ಬೇಕಾದ ಸಹಾಯ ಸಿಗಬಹುದು. ಒತ್ತಡ ನಿವಾರಣೆಗೆ ಧ್ಯಾನವನ್ನು ಮಾಡಿ. ಅಪರಿಚಿತರು ವೇಗವಾಗಿ ಆಪ್ತರಾದಾರು. ಅಂದುಕೊಂಡಿದ್ದು ಆಗಲಿಲ್ಲ ಎಂಬ ಬೇಸರವು ಉಂಟಾದೀತು. ಲೆಕ್ಕ ಪರಿಶೋಧಕರು ಹೆಚ್ಚಿನ ಕಾರ್ಯದಲ್ಲಿ ಮಗ್ನರಾಗುವರು.
ತುಲಾ: ಹಿತಶತ್ರುಗಳಿಂದ ಇಂದಿನ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಹಿರಿಯರಿಂದ ಬೈಗುಳವು ಸಿಗಬಹುದು. ಇಷ್ಟದ ಊರಿಗೆ ನೀವು ಹೋಗಲಿದ್ದೀರಿ. ತಂದೆಯ ಜೊತೆ ನಿಮ್ಮ ಕುರಿತು ಚರ್ಚೆ ಮಾಡಲಿದ್ದೀರಿ. ಇಂದಿನ ಶುಭವಾರ್ತೆಯು ನಿಮ್ಮ ಕಾರ್ಯಕ್ಕೆ ಉತ್ತೇಜನ ಕೊಡಬಹುದು. ಖಾಸಗಿ ಸಂಸ್ಥೆಯು ನಿಮಗೆ ಒಂದು ಜವಾಬ್ದಾರಿಯುತ ಸ್ಥಾನವನ್ನು ಕೊಡಬಹುದು. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗಬಹುದು. ಸಾಹಸದಿಂದ ಏನನ್ನಾದರೂ ಮಾಡಲು ಹೋಗಬಹುದು. ಪೂರ್ವಾಪರ ಯೋಚನೆ ಇದ್ದರೆ ಒಳ್ಳೆಯದು. ಆಪತ್ತಿನಲ್ಲಿ ಇದ್ದರೆ ಇಷ್ಟದೇವರನ್ನು ಸ್ಮರಿಸಿ.
ವೃಶ್ಚಿಕ: ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ನಡೆಯು ಎಲ್ಲರಿಗೂ ಇಷ್ಡವಾಗಬಹುದು. ಹಣವನ್ನು ಸಾರ್ವಜನಿಕ ಕಾರ್ಯಗಳಿಗೆ ಬಳಸಲು ಆಲೋಚಿಸುವಿರಿ. ತಪ್ಪನ್ನು ಒಪ್ಪಿಕೊಳ್ಳಲು ನೀವು ಸಿದ್ಧರಾಗುವುದಿಲ್ಲ. ಇದು ವಿವಾದವಾಗಿ ಪರಿವರ್ತನೆ ಆಗಬಹುದು. ಎಚ್ಚರಿಕೆಯಿಂದ ವ್ಯವಹಾರವನ್ನು ಮಾಡುವಿರಿ. ದಯೆಯ ವಿಚಾರದಲ್ಲಿ ನೀವು ಹಿಂದೆ. ಕೆಲಸ ವಿಚಾರದಲ್ಲಿ ನೀವು ಕಠೋರವಾಗಿ ವರ್ತಿಸುವುದು ಉದ್ಯೋಗಿಗಳಿಗೆ ಕಷ್ಟವಾಗುವುದು. ಮಕ್ಕಳಿಗೆ ಹಿತವಚನವನ್ನು ಹೇಳಿ ತಿದ್ದುವ ಪ್ರಯತ್ನವನ್ನು ಮಾಡುವಿರಿ.
ಧನುಸ್ಸು: ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ನೀವು ಕೇಳಬೇಕಾದೀತು. ಬಹಳ ದಿನಗಳ ಅನಂತರ ಮನೆಯಲ್ಲಿ ಶುಭಕಾರ್ಯವನ್ನು ಮಾಡಲು ಇಚ್ಛಿಸುವಿರಿ. ಸಣ್ಣ ವಿಚಾರಕ್ಕೂ ನೀವು ಕೋಪಗೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವುದು ಬೇಡ. ನಿಮ್ಮ ಮಾತು ವಿವಾದಕ್ಕೆ ಗುರಿಯಾಗಲಿದೆ. ನೀವು ಇಂದು ನಿರೀಕ್ಷಿಸಿರುವುದು ಸ್ವಲ್ಪಮಟ್ಟಿಗೆ ಸಾಕಾರಗೊಳ್ಳಬಹುದು. ಋಣಮುಕ್ತರಾಗಲು ನಿಮ್ಮ ಪ್ರಯತ್ನ ಇಂದು ಬಹಳ ಇರಲಿದೆ. ವಾಹನ ಖರೀದಿಗೆ ಆಪ್ತರ ಸಲಹೆಯನ್ನು ಪಡೆಯಿರಿ.
ಮಕರ: ಸ್ಥಿರ ಆಸ್ತಿಯನ್ನು ಗಳಿಸಲು ಹೆಚ್ಚು ಯೋಜನೆ ಅಗತ್ಯ. ಬಂಧುಗಳ ಜೊತೆ ಸಮಾಲೋಚಿಸಿ ಮುಂದುವರಿಯಿರಿ. ವಿದೇಶಕ್ಕೆ ಪ್ರಯಾಣ ಹೋಗುವ ಅವಕಾಶಗಳು ಸಿಗಬಹುದು. ನಿಮ್ಮ ಪ್ರಯತ್ನಕ್ಕೆ ಫಲವು ಇಂದೇ ಸಿಗಲಿದೆ. ಬರಬೇಕಾದ ಹಣವೂ ಸ್ವಲ್ಪ ಬರಲಿದೆ. ನಿಮ್ಮವರಿಗೆ ಸಹಾಯ ಮಾಡುವ ಮನಸ್ಸಾಗುವುದು. ಇಂದು ನೀವು ತಂದೆಯವರಿಗೆ ಎದುರು ಮಾತನಾಡಿರುವುದನ್ನು ಅವರು ಮಾನಸಿಕವಾಗಿ ತೆಗೆದುಕೊಳ್ಳಬಹುದು. ಇದಕ್ಕೆ ಕ್ಷಮೆ ಕೇಳಿ ಪಶ್ಚಾತ್ತಾಪಪಡಿ. ಸುಖ ದಾಂಪತ್ಯಕ್ಕೆ ಬೇಕಾದ ಸಲಹೆಯನ್ನು ಪಡೆಯಿರಿ. ನ್ಯಾಯಾಲಯ ಮೆಟ್ಟಿಲೇರಿ ಎಲ್ಲರ ಎದುರು ಮುಜುಗರ ಪಡಬೇಡಿ.
ಕುಂಭ: ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗಲಿದೆ. ನಿಮ್ಮ ವಾಸ ಸ್ಥಳವನ್ನು ಬದಲು ಮಾಡಬೇಕಾಗಬಹುದು. ಸರ್ಕಾರಿ ಕೆಲಸವು ಮುಂದೆಕ್ಕೆ ಹೋಗಲಿದೆ. ಬಾಲ್ಯ ಸ್ನೇಹಿತೆಯು ಇಂದು ಸಿಗಬಹುದು. ಇರುವ ಅವಕಾಶವನ್ನು ಕಳೆದುಕೊಂಡು ಸಂಕಟಪಡಬಹುದು. ಹಣಕಾಸಿನ ಅಭಾವಕ್ಕೆ ಕೆಲವು ಮಿತ್ರರ ಸಹಾಯವನ್ನು ಪಡೆಯುವಿರಿ. ಸಂಗಾತಿಗೆ ಸಮಯವನ್ನು ಕೊಡಲಾಗದೇ ವೈಮನಸ್ಯವು ಉಂಟಾಗಬಹುದು. ವಿದ್ಯಾಭ್ಯಾಸವನ್ನು ಮುಗಿಸಿ ಉದ್ಯೋಗವನ್ನು ಅರಸುವಿರಿ. ಅಂತರ್ಜಾಲದ ಉದ್ಯೋಗಕ್ಕೆ ಮಾರುಹೋಗಬಹುದು.
ಮೀನ: ಪ್ರಕ್ಷುಬ್ಧವಾಗಿದ್ದ ಮನಸ್ಸು ಇಂದು ಪ್ರಶಾಂತವಾಗಬಹುದು. ಆತ್ಮೀಯರನ್ನು ಭೇಟಿ ಮಾಡಬೇಕು ಎಂದು ಅನ್ನಿಸುವುದು. ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಬಂದು ಅದು ವೈಯಕ್ತಿಕ ಜಗಳವಾಗಿ ಮಾರ್ಪಾಡಾಗುವುದು. ಸಂತೋಷದ ಸಮಯವನ್ನು ನೆನಪಿಸಿಕೊಂಡು ಬೇಸರಿಸುವಿರಿ. ನಿಮಗೆ ಖ್ಯಾತಿಯ ಬಯಕೆ ಇರಲಿದೆ. ಸತ್ಯವನ್ನೇ ಹೇಳುವ ಉದ್ದೇಶವಿದ್ದರೂ ಅದನ್ನು ಹೇಳುವ ರೀತಿಯಲ್ಲಿ ನೀವು ಹೇಳಿ. ದಾಂಪತ್ಯದಲ್ಲಿ ಖುಷಿಯ ವಾತಾವರಣ ಇರಲಿದೆ. ಅಲ್ಪ ಲಾಭಕ್ಕೆ ಹೆಚ್ಚು ಶ್ರಮವನ್ನು ವಹಿಸಬೇಕಾಗುವುದು. ಮೋಸ ಹೋಗುವ ಸಾಧ್ಯತೆ ಇದೆ.