Daily Horoscope: ದಾಂಪತ್ಯ ಜೀವನದಲ್ಲಿ ಹೊಂದಾಣಿಕೆಯ ಕೊರತೆ ಕಾಣಿಸಬಹುದು
ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 07) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 07 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಪ್ರೀತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:00 ರಿಂದ ಮಧ್ಯಾಹ್ನ 12:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:47 ರಿಂದ 09:24ರ ವರೆಗೆ.
ಮೇಷ: ಪಾಲುದಾರಿಕೆಯಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗಲಿದೆ. ಮಕ್ಕಳಿಂದ ನಿಮಗೆ ಧನವು ಪ್ರಾಪ್ತವಾಗಬಹುದು. ಆಸ್ತಿಯನ್ನು ಖರೀದಿಸುವ ಯೋಚನೆ ಇರಲಿದೆ. ತಿಳಿದವರ ಜೊತೆ ಆಧ್ಯಾತ್ಮಿಕ ವಿಚಾರವನ್ನು ಚರ್ಚಿಸುವಿರಿ. ಮಿತ್ರರ ಸಹವಾಸದಿಂದ ನೀವು ಬದಲಾಗುವಿರಿ. ನಿಮ್ಮ ನಡವಳಿಕೆಯಲ್ಲಿ ಆದ ವ್ಯತ್ಯಾಸವು ಅನುಮಾನಕ್ಕೆ ಕಾರಣವಾಗಲಿದೆ. ಹಳೆಯ ವಸ್ತುಗಳನ್ನು ಮಾರಾಟ ಮಾಡುವಿರಿ. ಆದಾಯದ ಮೂಲವನ್ನು ಗಟ್ಟಿ ಮಾಡಿಕೊಳ್ಳುವುದು ಉತ್ತಮ. ನಾನಾ ಪ್ರಕಾರವಾಗಿ ಹಣದ ಹರಿವು ಇರಲಿದೆ. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಬೇಸರಗೊಳ್ಳುವಿರಿ.
ವೃಷಭ: ಉದ್ಯೋಗದಲ್ಲಿ ನೀವು ಪ್ರಗತಿಯನ್ನು ಬಯಸುವಿರಿ. ನಿಮ್ಮ ಆಲೋಚನೆಗಳು ಸಫಲವಾಗಲು ಕೆಲವು ಸಮಯವು ಬೇಕಾದೀತು. ಸ್ನೇಹಿತರು ನಿಮ್ಮ ಜೊತೆ ಇರಲು ಬಯಸುವರು. ಎಲ್ಲರೂ ನಿಮಗೆ ಸಹಕಾರವನ್ನು ನೀಡಲಾರರು. ಹೊಸ ಉದ್ಯೋಗದಲ್ಲಿ ಉತ್ಸಾಹವು ಹೆಚ್ಚು ಇರಲಿದೆ. ಆತ್ಮವಿಶ್ವಾಸದ ಕೊರತೆಯನ್ನು ನಿಮ್ಮ ಶ್ರಮದ ಕೆಲಸವು ನೀಗಿಸುವುದು. ಆಪ್ತರು ನಿಮಗೆ ಇಷ್ಟವಾಗದೇ ಹೋಗಬಹುದು. ನಿಮ್ಮ ಜಗತ್ತನ್ನು ಸೃಷ್ಟಿಸಿಕೊಳ್ಳಲು ನೀವು ಇಷ್ಟಪಡುವಿರಿ. ಕುಲದೇವರ ಸ್ಮರಣೆಯನ್ನು ಮಾಡುವಿರಿ.
ಮಿಥುನ: ಇಂದು ನಿಮಗೆ ಸಣ್ಣ ಭಯವು ಕಾಡಬಹುದು. ಸಹೋದರರು ನಿಮಗೆ ಬೇಕಾದ ಸಹಾಯವನ್ನು ಮಾಡುವರು. ವೇತನವನ್ನು ಹೆಚ್ಚಿಸಿಕೊಳ್ಳಲು ವಿನಂತಿ ಮಾಡಿಕೊಳ್ಳುವಿರಿ. ಸ್ತ್ರೀಯರು ಕೆಲಸಕ್ಕೆ ಸಹಾಯಮಾಡುವರು. ನಿಮ್ಮ ಸಾಮರ್ಥ್ಯವನ್ನು ಇತರರಿಗೆ ತಿಳಿಸಿ. ಇಂದು ಅಲಂಕಾರಕ್ಕೆ ಹೆಚ್ಚು ಸಮಯವನ್ನು ತೆಗೆದಿಡುವಿರಿ. ಹಣದ ಹೂಡಿಕೆಯಲ್ಲಿ ಆಸಕ್ತಿಯು ಕಡಿಮೆ ಆಗಲಿದೆ. ಕೆಟ್ಟ ಕನಸು ನಿಮ್ಮ ಮನಸ್ಸನ್ನು ಕದಡಲಿದೆ. ದಿನವನ್ನು ಉತ್ಸಾಹದಿಂದ ಆರಂಭಿಸುವಿರಿ.
ಕಟಕ: ಆದಾಯಕ್ಕಿಂತ ಖರ್ಚು ಹೆಚ್ಚಾಗಿ ನಿಮ್ಮ ಮನಸ್ಸಿನಲ್ಲಿ ತಳಮಳವಾಗಬಹುದು. ಅಧಿಕಾರಿಗಳಾಗಿದ್ದರೆ ನೀವೇ ಇಂದು ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಕೊಡಿಸುವಿರಿ. ಎಲ್ಲವನ್ನೂ ಇನ್ನೊಬ್ಬರಿಗೆ ವಹಿಸಿ ನೀವು ನಿಶ್ಚಿಂತರಾಗಿರುವಿರಿ. ನಿಮ್ಮ ಕೆಲಸವು ಪೂರ್ಣವಾಗದೇ ಇನ್ನೊಬ್ಬರ ಬಳಿಯಲ್ಲಿ ಹೇಳಿಸಿಕೊಳ್ಳುವಿರಿ. ನೆಮ್ಮದಿಯನ್ನು ಪಡೆಯಲು ನಿಮಗೆ ಸಮಯ ಬೇಕಾದೀತು. ಅಪ್ರಾಮಾಣಿಕರಂತೆ ನಿಮಗೆ ಅನ್ನಿಸಬಹುದು. ಸಮಯವು ಕಳೆದುಹೋದದ್ದು ಗೊತ್ತಾಗದೇ ಹೋದೀತು.
ಸಿಂಹ: ನಿಮ್ಮ ಬಹಳ ದಿನದ ಆಸೆಗಳನ್ನು ಇಂದು ಪೂರೈಸಿಕೊಳ್ಳುವಿರಿ. ಹಣವು ಸಿಗದೇ ನಿಮಗೆ ನಿರಾಸೆಯಾಗಲಿದೆ. ಆರೋಗ್ಯವನ್ನು ಸುಧಾರಿಸಿಕೊಂಡು ಕೆಲಸದಲ್ಲಿ ಪ್ರವೃತ್ತರಾಗಿರಿ. ಅಧಿಕ ಖರ್ಚಾಗಲಿದೆ. ವಸ್ತುಗಳನ್ನು ಕಳೆದುಕೊಂಡು ದುಃಖಿಸುವಿರಿ. ಹಳೆಯ ಖಾಯಿಲೆಗಳು ಮತ್ತೆ ಬರಲಿದೆ. ಏಕಾಂತದಲ್ಲಿ ಸಮಯವನ್ನು ಕಳೆದುಕೊಳ್ಳುವಿರಿ. ನಿಮ್ಮ ಸ್ನೇಹಿತವು ದೂರಾಗಲಿದೆ. ಕಛೇರಿಯ ಕೆಲಸವನ್ನು ಬೇಗ ಮುಗಿಸಿಕೊಳ್ಳುವಿರಿ. ಬಂಧುಗಳ ಮನೆಗೆ ನೀವು ಹೋಗಲಿದ್ದೀರಿ. ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿರುವಿರಿ.
ಕನ್ಯಾ: ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಕಾಣಿಸಬಹುದು. ನಿಮ್ಮ ವಾಸದ ಮನೆಯನ್ನು ಬದಲಿಸುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬಹುದಾಗಿದೆ. ನಿಮ್ಮ ಬಗ್ಗೆ ಆಡುಕೊಳ್ಳುವರು. ಮನಸ್ಸುನ್ನು ಸ್ಥಿರವಾಗಿ ಇಟ್ಟುಕೊಳ್ಳಿ. ಭವಿಷ್ಯವನ್ನು ಕಟ್ಟಿಕೊಳ್ಳಲು ಬಹಳ ಶ್ರಮಿಸುವಿರಿ. ನಿಮ್ಮ ಉತ್ಸಾಹವನ್ನು ಅನಾರೋಗ್ಯವು ಕುಗ್ಗಿಸಲಿದೆ. ಅಪವಾದಕ್ಕೆ ಹೆದರಿಹೋಗುವಿರಿ. ಇದಕ್ಕಾಗಿ ನಿಮ್ಮವರನ್ನು ಶಪಿಸುವಿರಿ. ಸುತ್ತಾಟವನ್ನು ಬಯಸುವಿರಿ. ದೇವತಾರ್ಚನೆಯನ್ನು ಮಾಡಲು ಆಸಕ್ತಿ ಇರಲಿದೆ.