Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 21ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 21ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 21ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: Ganapathi Sharma

Updated on: Jun 21, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 21ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಯಾರದೋ ಅಗತ್ಯಕ್ಕೆ ಈ ದಿನ ನೆರವು ನೀಡಲಿದ್ದೀರಿ. ಈ ಘಟನೆಯಿಂದ ಭವಿಷ್ಯದಲ್ಲಿ ನಿಮಗೆ ಅನುಕೂಲ ಒದಗಿಬರಲಿದೆ. ಆತ್ಮವಿಶ್ವಾಸ ಹೆಚ್ಚಾಗುವಂಥ ಕೆಲವು ಬೆಳವಣಿಗೆಗಳು ಆಗಲಿವೆ. ಸ್ವಂತ ಉದ್ಯಮ, ವ್ಯವಹಾರ ನಡೆಸುತ್ತಿರುವವರು ಬ್ಯಾಂಕ್ ಗಳಲ್ಲಿ ಸಾಲ ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಅನುಕೂಲ ಆಗಲಿದೆ. ಮಧ್ಯಾಹ್ನದ ನಂತರದಲ್ಲಿ ಕೆಲವು ಹಳೇ ಘಟನೆಗಳು ನೆನಪಾಗಿ, ಸ್ವಲ್ಪ ಮಟ್ಟಿಗೆ ಮನಸ್ಸಿಗೆ ಬೇಸರ ಆಗುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಯಾರು ಏನಾದರೂ ಅಂದುಕೊಳ್ಳಲಿ, ನನಗೆ ಬೇಕಾದಂತೆ ಬದುಕುತ್ತೇನೆ ಎಂಬ ಮನೋಭಾವ ಈ ದಿನ ನಿಮ್ಮನ್ನು ಪ್ರಬಲವಾಗಿ ಆವರಿಸಲಿದೆ. ಸಣ್ಣ- ಸಣ್ಣ ಸಂಗತಿಗಳಿಗೂ ಹೆಚ್ಚಿನ ಗಮನ ಕೊಟ್ಟು ಅರ್ಥ ಮಾಡಿಕೊಳ್ಳುವುದಕ್ಕೆ ಹಾಗೂ ವ್ಯಾಖ್ಯಾನಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಒಂದು ಸಲಕ್ಕೆ ಬಾಕಿ ಉಳಿದಿರುವ ಕೆಲಸಗಳನ್ನೆಲ್ಲ ಪೂರ್ಣಗೊಳಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ದೇವತಾ ಕಾರ್ಯಗಳಿಗೆ ದೇಣಿಗೆ ನೀಡುವಂಥ ಯೋಗ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಏಕಾಂಗಿತನ ನಿಮ್ಮನ್ನು ಈ ದಿನ ಕಾಡಬಹುದು. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರದ ಬಗ್ಗೆ ಪರಾಮರ್ಶೆ ಮಾಡಲಿದ್ದೀರಿ. ಮನೆಯಿಂದ ದೂರದಲ್ಲಿ ಕೆಲಸ ಮಾಡುತ್ತಿರುವವರಿಗೆ ಒತ್ತಡದ ಸನ್ನಿವೇಶ ಇರಲಿದೆ. ಕುಟುಂಬದ ಸದಸ್ಯರ ಸಲುವಾಗಿ ಕೆಲವು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ಆಹಾರ ಸೇವನೆ ಮಾಡುವಾಗ ನಿಮಗೆ ಅಲರ್ಜಿ ಆಗುವಂಥ ಪದಾರ್ಥಗಳನ್ನು ಸೇವನೆ ಮಾಡದಿರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಇತರರು ಹಂಗಿಸುವ, ಛೇಡಿಸುವ, ಮೂದಲಿಸುವ ಮಾತುಗಳನ್ನು ಆಡಿದಲ್ಲಿ ತೀರಾ ಮನಸ್ಸಿಗೆ ತೆಗೆದುಕೊಳ್ಳಬೇಡಿ. ಇದನ್ನು ಹೇಳುತ್ತಿರುವವರಿಗೆ ನಿಮ್ಮ ಬಗ್ಗೆ ಪ್ರಾಮಾಣಿಕವಾದ ಕಾಳಜಿ, ಸ್ನೇಹವೋ ಅಥವಾ ಪ್ರೀತಿ ಇದೆಯೇ ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ. ಆ ನಂತರ ಹೇಗೆ ಪ್ರತಿಕ್ರಿಯೇ ನೀಡಬೇಕು ಎಂದು ತೀರ್ಮಾನಿಸಿ. ಸ್ವಂತ ಉದ್ಯಮ, ವ್ಯವಹಾರವನ್ನು ನಡೆಸುತ್ತಿದ್ದಲ್ಲಿ ವಿಸ್ತರಣೆ ಬಗ್ಗೆ ಆಲೋಚನೆ ಬರಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಯಶಸ್ಸು, ಪ್ರಯತ್ನ, ಶ್ರಮ ಮೇಲಧಿಕಾರಿಗಳ ಅಥವಾ ಸಂಬಂಧಪಟ್ಟವರ ಗಮನಕ್ಕೆ ಬರಲಿದೆ. ಮನೆ ಕಟ್ಟುತ್ತಿರುವವರಿಗೆ ಹಣಕಾಸಿನ ಅನುಕೂಲ ಆಗಲಿದೆ. ಆಪ್ತರ ಅನಾರೋಗ್ಯ ಸಮಸ್ಯೆಗಳು ಇದ್ದಲ್ಲಿ ಅವರು ಚೇತರಿಸಿಕೊಳ್ಳಲಿದ್ದಾರೆ. ಹೊಸ ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಅಥವಾ ಉದ್ಯೋಗ, ವೃತ್ತಿ ಅಥವಾ ಶಿಕ್ಷಣಕ್ಕೆ ಅಗತ್ಯ ಇರುವಂಥ ಸಲಕರಣೆಗಳನ್ನು ಖರೀದಿಸುವ ಯೋಗ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಪ್ರೀತಿ- ಪ್ರೇಮದಲ್ಲಿ ಬೀಳುವಂಥ ಯೋಗ ಇದೆ. ದುಬಾರಿ ಉಡುಗೊರೆಗಳನ್ನು ಪ್ರೀತಿಪಾತ್ರರಿಗೆ ನೀಡಲಿದ್ದೀರಿ. ದಿನದ ವರಮಾನವನ್ನು ಆಯಾ ದಿನಕ್ಕೆ ಎಂಬಂತೆ ಸಂಪಾದನೆ ಮಾಡುತ್ತಿರುವವರು ಒಂದಿಷ್ಟು ಆದಾಯ ಇಳಿಕೆ ಆಯಿತು ಎಂಬುದು ಅನುಭವಕ್ಕೆ ಬರುತ್ತದೆ. ನಿರ್ದಾಕ್ಷಿಣ್ಯವಾಗಿ ಈ ಕೆಲಸ ಆಗುವುದಿಲ್ಲ ಎಂದು ನಿಮ್ಮ ಕೈ ಕೆಳಗೆ ಇರುವವರೇ ಹೇಳುವುದರಿಂದ ಮನಸ್ಸಿಗೆ ಒಂದಿಷ್ಟು ಬೇಸರ ಆಗಬಹುದು. ಕಣ್ಣಾರೆ ಕಂಡ ಸತ್ಯವೆನಿಸಿದರೂ ಪರಾಮರ್ಶೆ ಮಾಡಿ, ತೀರ್ಮಾನ ಕೈಗೊಳ್ಳಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಆರೋಗ್ಯ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ಸೂಕ್ತ ವೈದ್ಯೋಪಚಾರಗಳಿಗೆ ಮಾರ್ಗದರ್ಶನ ದೊರೆಯಲಿದೆ. ಶತ್ರುಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯ ಹೆಚ್ಚಾಗಲಿದೆ. ವಾಹನ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಅನುಕೂಲವಿದೆ. ಹೊಸದಾಗಿ ಆಗುವ ಸ್ನೇಹಿತೆಯರು- ಸ್ನೇಹಿತರಿಂದ ನಿಮ್ಮ ಉದ್ಯೋಗ, ವೃತ್ತಿಗೆ ಸಹಾಯ. ಮನೆಗೆ ಗೃಹಾಲಂಕಾರ ವಸ್ತುಗಳನ್ನು ತರುವ ಯೋಗ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಈಗಾಗಲೇ ಕಾರು ಅಥವಾ ಬೈಕ್ ಇದೆ ಅನ್ನುವವರು ಮತ್ತೊಂದು ವಾಹನ ಖರೀದಿಸುವುದಕ್ಕೆ ಯೋಜನೆ ಹಾಕುತ್ತೀರಿ. ಲಕ್ಷುರಿಯಾದ ವಾಹನ ಅದಾಗಿರುವ ಸಾಧ್ಯತೆ ಇದೆ. ಮನೆಗೆ ಪೀಠೋಪಕರಣ, ತುಂಬ ಚೆನ್ನಾಗಿರುವಂಥ ಮಂಚ- ಹಾಸಿಗೆ, ವಜ್ರ- ಪ್ಲಾಟಿನಂ ಆಭರಣ ಖರೀದಿ, ಹಿಲ್ ಸ್ಟೇಷನ್ ಗಳಿಗೆ ಪ್ರವಾಸ ತೆರಳುವುದಕ್ಕೆ ಯೋಜನೆ ಹಾಕುತ್ತೀರಿ. ಭೂಮಿ, ಆಸ್ತಿ, ಒಡವೆ, ಹಣವನ್ನು ಬಾಯಿಬಿಟ್ಟು ಕೇಳಿ ಪಡೆದುಕೊಳ್ಳಬೇಕು ಎಂಬ ಆಲೋಚನೆ, ಧೈರ್ಯ ಬರಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಉದ್ಯೋಗಸ್ಥರಿಗೆ ವಿನಾಕಾರಣದ ಪ್ರಯಾಣ ಅದರಿಂದ ದಣಿವು, ಕೆಲಸದಲ್ಲಿ ವಿಪರೀತ ಒತ್ತಡ, ಅದರಲ್ಲೂ ಫೈನಾನ್ಸ್ ರಿಕವರಿ ವಿಭಾಗಗಳಲ್ಲಿ ಇರುವವರಿಗೆ ಮಾನಸಿಕವಾಗಿ ಬಲು ಹಿಂಸೆ ಆಗುತ್ತದೆ. ಇದರ ಜತೆಗೆ ಅಕೌಂಟ್ಸ್ ವಿಭಾಗದಲ್ಲಿ ಇದ್ದರಂತೂ ಕೈಯಿಂದ ಹಣ ಕಟ್ಟಿಕೊಡಬೇಕಾದ ಸಂದರ್ಭ ಬರಲಿದೆ. ನಿಮ್ಮ ಹಠಮಾರಿತನದಿಂದಾಗಿ ಬೇರೆಯವರು ನಿಮ್ಮನ್ನು ಮೋಸ ಮಾಡುವ ಸಾಧ್ಯತೆ ಹೆಚ್ಚಿದೆ.