Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮೇ 28ರ ದಿನಭವಿಷ್ಯ 

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 28ರ ಭಾನುವಾರದ ದಿನ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿ.  

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮೇ 28ರ ದಿನಭವಿಷ್ಯ 
ಸಾಂದರ್ಭಿಕ ಚಿತ್ರ
Follow us
ರಮೇಶ್ ಬಿ. ಜವಳಗೇರಾ
|

Updated on: May 28, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ(Numerology Prediction) ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 28ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ವೃತ್ತಿನಿರತರಿಗೆ ಹೊಸ ಪ್ರಾಜೆಕ್ಟ್ ದೊರೆಯಲಿವೆ. ಈಗಾಗಲೇ ಕೆಲಸ ಮಾಡಿಕೊಟ್ಟಿದ್ದು, ಅದರ ಹಣ ಬರಬೇಕು ಎಂದಿದ್ದಲ್ಲಿ ಈ ದಿನ ಪ್ರಯತ್ನ ಪಟ್ಟಲ್ಲಿ ಹಣ ಕೈ ಸೇರಲಿದೆ. ಭೂಮಿ ವ್ಯವಹಾರಗಳಲ್ಲಿ ಅಡೆತಡೆಗಳು ಇದ್ದಲ್ಲಿ ನಿವಾರಣೆ ಆಗುತ್ತದೆ. ಹೊಸದಾಗಿ ವ್ಯಾಪಾರ- ವ್ಯವಹಾರ ಶುರು ಮಾಡಬೇಕು ಎಂದಿರುವವರಿಗೆ ಹಣಕಾಸಿನ ಅನುಕೂಲ ಒದಗಿ ಬರಲಿದೆ. ಮಾಡೆಲಿಂಗ್, ನಟನೆ, ಚಿತ್ರಕಲೆ ಇಂಥದ್ದರಲ್ಲಿ ತೊಡಗಿಕೊಂಡವರಿಗೆ ಹೆಸರು, ಕೀರ್ತಿ, ಆದಾಯ ಸಿಗಲಿದೆ. ಆರ್ಥಿಕವಾಗಿ, ಅಧಿಕಾರದ ದೃಷ್ಟಿಯಿಂದ ನಿಮಗಿಂತ ಬಲಿಷ್ಠರಾದವರ ಜತೆಗೆ ವಾಗ್ವಾದ, ಜಗಳ, ಕಲಹಗಳು ಏರ್ಪಡಬಹುದು, ಜಾಗ್ರತೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಸ್ನೇಹಿತರ ವಲಯದಲ್ಲಿ ಅವಮಾನ, ನಿಮ್ಮ ಮೇಲೆ ವೃಥಾ ಆರೋಪಗಳು, ವಾದ- ವಿವಾದ ಆಗುವಂಥ ಸಾಧ್ಯತೆಗಳು ಹೆಚ್ಚು. ಇನ್ನು ನಿಮ್ಮದೇ ವೃತ್ತಿಯಲ್ಲಿ ಇರುವವರು ಮತ್ಸರ ಸಾಧಿಸುವ ಸಾಧ್ಯತೆಗಳಿವೆ. ಅವರು ನಿಮ್ಮ ಮೇಲೆ ನಿಂದೆ, ಆರೋಪ ಹೊರಿಸಬಹುದು. ನಿಮ್ಮಲ್ಲಿ ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆ ಇದೆ. ನೀವು ಯುವಜನರಾಗಿದ್ದಲ್ಲಿ ಪೋಷಕರ ಬಳಿ ದೂರುಗಳು ಹೇಳುವವರ ಸಂಖ್ಯೆ ಹೆಚ್ಚಾಗಲಿವೆ. ದುರಭ್ಯಾಸಗಳು ಇವೆ ಅಂತಲೋ ದುಷ್ಟ ಜನರ ಸಹವಾಸ ಮಾಡುತ್ತಿದ್ದಾರೆ ಅಂತಲೋ ದೂರುಗಳು ಹೇಳುತ್ತಾರೆ. ನೀವೇನೂ ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತು ಮಾಡುವಷ್ಟರಲ್ಲಿ ಹೈರಾಣಾಗುತ್ತೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ವ್ಯಾಪಾರ- ವ್ಯವಹಾರಸ್ಥರು ಬರಬೇಕಾದ ಹಣವನ್ನು ವಸೂಲಿ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಶ್ರಮ ಹಾಕಿದರೆ ಬಾಕಿ ವಾಪಸ್ ಬರುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಬುದ್ಧಿವಂತಿಕೆಯಿಂದ ಶತ್ರುಗಳು ಬಹಳ ಗೊಂದಲಕ್ಕೆ ಗುರಿ ಆಗುವಂತೆ ಮಾಡುತ್ತೀರಿ. ಹೊಸ ವಸ್ತ್ರ, ಬ್ರ್ಯಾಂಡೆಡ್ ವಾಚ್, ಶೂ, ಗ್ಯಾಜೆಟ್ ಗಳನ್ನು ಪಡೆಯುವ ಯೋಗ ಇದೆ. ವಿದೇಶಗಳಿಂದ, ದೂರದ ಊರುಗಳಿಂದ ಉಡುಗೊರೆ ಸಹ ದೊರೆಯಬಹುದು. ಕೂಡಿಟ್ಟುಕೊಂಡಿದ್ದ ಹಣ ಒಳ್ಳೆ ಉದ್ದೇಶಕ್ಕೆ ಬಳಕೆ ಅಥವಾ ಸರಿಯಾದ ಕಡೆಗೆ ಹೂಡಿಕೆ ಆಗುತ್ತದೆ. ಅಥವಾ ನಿಮ್ಮಲ್ಲಿ ಕೆಲವರು ಚಿನ್ನಾಭರಣಗಳನ್ನು ಖರೀದಿಸಲಿದ್ದೀರಿ. ನೀವು ಬಹಳ ಸಮಯದಿಂದ ಇಷ್ಟಪಡುತ್ತಿದ್ದ ವಸ್ತುಗಳನ್ನು ಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಕಳುವು, ನಷ್ಟದ ಅನುಭವ ಆಗಲಿದೆ. ಸಣ್ಣ- ಪುಟ್ಟದಾದರೂ ಅಪಘಾತ ಮಾಡಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಮದುವೆ ನಿಶ್ಚಯ ಆಗಿದೆ ಅನ್ನುವಂಥವರು ಮಾತು-ಕತೆ ಆಡುವಾಗ ನಾಲಗೆ ಮೇಲೆ ಹತೋಟಿ ಇಟ್ಟುಕೊಳ್ಳಿ. ತಮಾಷೆಗೆ ಆಡಿದ ಮಾತಿನಿಂದ ಕೂಡ ಸಮಸ್ಯೆಗಳು ಎದುರಾಗಬಹುದು. ಕುಟುಂಬದಲ್ಲಿ ವಿನಾಕಾರಣದ ಜಗಳ, ಆಸ್ಪತ್ರೆಗಾಗಿ ಹೆಚ್ಚಿನ ಖರ್ಚು ಆಗುವಂಥ ಸಾಧ್ಯತೆ ಇದೆ. ಮಹಿಳೆಯರಿಗೆ ಹೊಟ್ಟೆಯುಬ್ಬರ, ಸೊಂಟದ ನೋವು ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವ ಕಡೆಗೆ ಲಕ್ಷ್ಯ ನೀಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ದಿನ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ವಿವಿಧ ಮಾರ್ಗಗಳು ದೊರೆಯುತ್ತವೆ. ಆರೋಗ್ಯದಲ್ಲೂ ಸ್ವಲ್ಪ ಚೇತರಿಕೆ ಕಂಡು, ಕೆಲಸ- ಕಾರ್ಯಗಳಲ್ಲಿ ಉತ್ಸಾಹ ಮೂಡುತ್ತದೆ. ಹಿಡಿದ ಕೆಲಸ ಯಶಸ್ವಿಯಾಗಿ ಮುಗಿಯಲಿದೆ. ನಿಮ್ಮ ಕೆಲಸಕ್ಕೆ ಅಡೆತಡೆ ಮಾಡಬೇಕು ಎಂಬ ಉದ್ದೇಶ ಇರಿಸಿಕೊಂಡವರೇ ಸಮಸ್ಯೆಗೆ ಸಿಲುಕಿಕೊಳ್ಳಲಿದ್ದಾರೆ. ಹಣಕಾಸಿನ ಅನುಕೂಲ ಒದಗಿಬರಲಿದೆ. ಈಗ ಮಾಡುತ್ತಿರುವ ಉಳಿತಾಯದಿಂದ ಹೆಚ್ಚಿನ ಪ್ರತಿಫಲ ಸಿಗಲಿದೆ. ಚೀಟಿ ಹಾಕಿಕೊಂಡಿರುವವರು, ಆಭರಣ ಖರೀದಿಗೆ ಹಣ ಉಳಿಸುತ್ತಿರುವವರಿಗೆ ಉತ್ತಮ ಲಾಭ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಸೋಷಿಯಲ್ ಸ್ಟೇಟಸ್ ಬದಲಾಯಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಿದ್ದೀರಿ. ಅದಕ್ಕೆ ಬೇಕಾದ ಹಣಕಾಸಿನ ಹರಿವು ಸಹ ದೊರೆಯಲಿದೆ. ವ್ಯಾಪಾರ ವ್ಯವಹಾರ ಮಾಡುವವರು ವಿಸ್ತರಣೆಗೆ ಯೋಜನೆ ರೂಪಿಸಲಿದ್ದೀರಿ. ಇದರಿಂದ ಭವಿಷ್ಯಕ್ಕೆ ಅನುಕೂಲ ಇದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ವೃದ್ಧಿ ಆಗುತ್ತದೆ. ಭವಿಷ್ಯದ ಬಗ್ಗೆ ಗೊಂದಲಗಳು ಇದ್ದಲ್ಲಿ ಸ್ಪಷ್ಟತೆ ದೊರೆಯಲಿದೆ. ವಿದೇಶಗಳಲ್ಲಿ ವ್ಯಾಸಂಗ ಮಾಡಬೇಕು ಎಂದಿರುವವರಿಗೆ ಅಥವಾ ಯಾವುದಾದರೂ ನಿರ್ದಿಷ್ಟ ವಿಷಯವನ್ನು ಕಲಿಸುವುಕ್ಕೆ ಸೂಕ್ತ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಅದರಲ್ಲಿ ಯಶಸ್ಸು ದೊರೆಯಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಒಂದೇ ಕೆಲಸವನ್ನು ಹಲವು ಸಲ ಮಾಡಬೇಕಾಗುತ್ತದೆ. ಆದರೂ ಅದು ಪೂರ್ತಿ ಆಗುವುದಿಲ್ಲ. ವ್ಯಾಪಾರಸ್ಥರು- ಉದ್ಯೋಗಸ್ಥರು, ಕೃಷಿಕರು ಮನಸಾರೆ ಕೆಲಸ ಮಾಡುವುದಕ್ಕೆ ಆಗುವುದಿಲ್ಲ.  ಇದರಿಂದ ಮಾನಸಿಕ ಕುಗ್ಗುತ್ತೀರಿ. ಮನೆಯಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ಒತ್ತಡ ಸೃಷ್ಟಿಯಾಗಿ ತಾಳ್ಮೆ ಕಳೆದುಕೊಂಡು ಕೂಗಾಟ, ಕಿರುಚಾಟ ಮಾಡುತ್ತೀರಿ. ಇನ್ನು ಗೃಹಿಣಿಯರಿಗೆ ಪ್ರತಿಯೊಂದಕ್ಕೂ ಇತರರ ಜತೆಗೆ ಹೋಲಿಕೆ ಮಾಡುವ ಕುಟುಂಬ ಸದಸ್ಯರಿಂದ ಕಿರುಕುಳ ಎನಿಸುತ್ತದೆ. ಒಂಟಿತನ ಕಾಡಲಿದೆ. ವಿನಾಕಾರಣ ಹಣ ಖರ್ಚಾಗುತ್ತದೆ. ದೊಡ್ಡ ಮೊತ್ತ ಖರ್ಚು ಮಾಡಿ ಖರೀದಿಸಿದ ವಸ್ತುಗಳು ಕಳಪೆ ಗುಣಮಟ್ಟದ್ದು ಎಂಬುದು ಗೊತ್ತಾಗುತ್ತದೆ. ತುಂಬ ನಂಬಿದವರಿಂದಲೇ ವಂಚನೆ- ದ್ರೋಹ ಆಗುವ ಯೋಗ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಏನೇ ಕೆಲಸ ಮಾಡಿದರೂ ತಪ್ಪು ನಿರ್ಧಾರ ಆಯಿತು ಎನಿಸತೊಡಗುತ್ತದೆ. ಶತ್ರುಗಳ ಕೈ ಮೇಲಾಗುತ್ತದೆ. ಇಷ್ಟು ಸಮಯ ನಿಮಗೆ ಸಮಯಕ್ಕೆ ಸರಿಯಾಗಿ ಸಲಹೆ- ಸೂಚನೆ, ಮಾರ್ಗದರ್ಶನ ಮಾಡುತ್ತಿದ್ದವರು ಸಹ ಈ ಸಂದರ್ಭದಲ್ಲಿ ನೆರವಿಗೆ ಬರುವುದಿಲ್ಲ. ತಲೆ ಹೊಟ್ಟು, ಕೂದಲು ಉದುರುವುದು, ಕಣ್ಣು ಮಂಜಾಗುವುದು, ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳಬಹುದು ಅಥವಾ ಈಗಾಗಲೇ ಸಮಸ್ಯೆ ಇದ್ದಲ್ಲಿ ಉಲ್ಬಣ ಆಗುವ ಸಾಧ್ಯತೆ ಇದೆ. ವಾಹನಗಳನ್ನು ಚಲಾಯಿಸುವವರು ಅಥವಾ ಇನ್ನೊಬ್ಬರ ಜತೆ ವಾಹನದಲ್ಲಿ ಹೋಗುವಾಗ ಕೂಡ ಎಚ್ಚರಿಕೆಯಿಂದ ಇರುವುದು ಮುಖ್ಯ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ವ್ಯಾಪಾರ, ವ್ಯವಹಾರದಲ್ಲಿ ನಿಮ್ಮ ಶ್ರಮ, ಪ್ರಯತ್ನವನ್ನು ಜಾಸ್ತಿ ಮಾಡಲಿದ್ದೀರಿ. ಇದು ಸಂಬಂಧಪಟ್ಟವರ ಗಮನಕ್ಕೂ ಬರಲಿದೆ. ನಿಮ್ಮ ಸಮಯಪ್ರಜ್ಞೆ, ಸಮಯೋಚಿತ ಸಲಹೆ- ನಿರ್ಧಾರಗಳಿಂದ ಲಾಭ- ಅನುಕೂಲ ಆಗಲಿದ್ದು, ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ರಾಜಕಾರಣದಲ್ಲಿ ಇರುವವರು ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ಹೊಸ ಬಟ್ಟೆಯೋ, ವಾಹನವೋ ಅಥವಾ ಏನು ಅಗತ್ಯವೋ ಅದಕ್ಕಾಗಿ ಹಣಕಾಸು ಅನುಕೂಲ ಸಹ ಒದಗಿಬರಲಿದೆ. ಮನೆಯ ನವೀಕರಣ, ದುರಸ್ತಿ ಅಥವಾ ವಿಸ್ತರಣೆ ಮಾಡುವ ಸಲುವಾಗಿ ಮಾತುಕತೆ ನಡೆಸಲಿದ್ದೀರಿ.

ಲೇಖನ- ಎನ್.ಕೆ. ಸ್ವಾತಿ

ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌