ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 3ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ತೀರ್ಥ ಕ್ಷೇತ್ರಗಳಿಗೆ ತೆರಳುವಂಥ ಯೋಗ ಇದೆ. ಪ್ರೀತಿಪಾತ್ರರ ಸಲುವಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ನಿಮ್ಮದಲ್ಲದ ತಪ್ಪಿಗೆ ನಿಂದನೆಯನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಎದುರಿನವರಿಗೆ ಅವರ ತಪ್ಪಿನ ಅರಿವಾಗುವಂತೆ ಮಾಡುತ್ತೇನೆ ಎಂದು ಹೊರಟು ನಿಲ್ಲಬೇಡಿ. ಇದರಿಂದ ಏನೂ ಪ್ರಯೋಜನ ಇಲ್ಲ.
ಒಂದು ಹೊಸ ಉತ್ಸಾಹದಲ್ಲಿ, ಹೊಸ ಕೆಲಸದಲ್ಲಿ ತೊಡಗಿಕೊಳ್ಳುವುದಕ್ಕೆ ಈ ದಿನ ಸೂಕ್ತವಾಗಿದೆ. ನಿಮ್ಮದೇ ಬದುಕಿನ ಮರೆತು ಹೋಗಬೇಕು ಅಂದುಕೊಂಡಿದ್ದ ಪುಟವೊಂದು ಮತ್ತೆ ತೆರೆದುಕೊಳ್ಳಲಿದೆ. ನಿಮ್ಮ ವೈಫಲ್ಯದ ಹೊಣೆಯನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡಬೇಡಿ. ಒಂದಿಷ್ಟು ಸಾಲ ಮಾಡಬೇಕಾದ ಪರಿಸ್ಥಿತಿ ಬರಲಿದೆ
ಬಂದದ್ದೆಲ್ಲ ಬರಲಿ, ಆ ಭಗವಂತನ ದಯೆ ಒಂದಿರಲಿ ಎಂದು ಈ ದಿನ ನಿಮ್ಮ ಪಾಲಿಗೆ ಏನು ಬರುತ್ತದೋ ಅದು ಸ್ವೀಕರಿಸಿ. ವ್ಯಾಪಾರ- ವ್ಯವಹಾರ ಮಾಡುವವರಿಗೆ ಇತರರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಬಹಳವಾಗಿ ಅನಿಸುತ್ತದೆ. ದೂರದ ಊರುಗಳಿಂದ ಬರಬೇಕಾದ ವಸ್ತುಗಳು ನಿಮ್ಮನ್ನು ತಲುಪುವುದು ತಡ ಆಗಬಹುದು.
ದೇವತಾರಾಧನೆ, ಪೂಜೆ ಕಾರ್ಯಗಳು, ಔತಣ ಕೂಟ ಇಂಥದ್ದಕ್ಕೆ ನಿಮಗೆ ಆಹ್ವಾನ ಇರಲಿದೆ. ನಿಮ್ಮ ವ್ಯಾಪ್ತಿಗೆ ಅಥವಾ ಸಂಬಂಧ ಪಡದ ವಿಚಾರಗಳಿಗೆ ಮೌನವಾಗಿದ್ದು ಬಿಡುವುದು ಒಳಿತು. ವಿನಾಕಾರಣದ ಖರ್ಚುಗಳು ಒಂದಷ್ಟು ಹುಡುಕಿಕೊಂಡು ಬರಲಿವೆ. ಅದಕ್ಕೆ ಸಿದ್ಧವಾಗಿರುವುದು ಅಗತ್ಯ.
ಅಂದುಕೊಂಡಂತೆ ಖರ್ಚುಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ನಿಮ್ಮಲ್ಲಿನ ಉತ್ಸಾಹವೂ ಹೆಚ್ಚಾಗಿ ಆ ನಂತರದಲ್ಲಿ ಯೋಚನೆ ಮಾಡುವಂತಾಗುತ್ತದೆ. ನೀವೇ ಸ್ವತಃ ಡ್ರೈವ್ ಮಾಡುವಂಥದ್ದಾಗಿದಲ್ಲಿ ಜಾಸ್ತಿ ವೇಗ ಬೇಡ. ಹೊಸ ಜಾಗಕ್ಕೆ ತೆರಳಿದಾಗ ನೀರು, ಆಹಾರದ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಿ.
ನಿಮ್ಮ ಬಹು ಸಮಯದ ಆಸೆ ಈಡೇರಿಸಿಕೊಳ್ಳುವ ಸಂದರ್ಭ ಇದು. ಸಜ್ಜನರ ಸಹವಾಸದಿಂದ ಮನಸ್ಸಿನಲ್ಲಿ ಆತ್ಮವಿಶ್ವಾಸ, ನಂಬಿಕೆ ಹೆಚ್ಚಾಗುತ್ತದೆ. ಮದ್ಯಪಾನದ ಅಭ್ಯಾಸ ಇರುವವರು ಸಾಧ್ಯವಾದಷ್ಟೂ ಈ ದಿನ ಅದರಿಂದ ದೂರ ಇರಿ. ಏಕೆಂದರೆ ನಿಮ್ಮ ಸ್ವಭಾವವನ್ನು ಯಾರೋ ಗಮನಿಸುತ್ತಿದ್ದಾರೆ. ಒಂದೊಳ್ಳೆ ಫಲ ದೊರೆಯುವ ಹೊತ್ತಿನಲ್ಲಿ ಅದನ್ನು ತಪ್ಪಿಸಿಕೊಳ್ಳದಿರಿ.
ನಿಮ್ಮ ಮನಸಿಗೆ ಒಪ್ಪುವಂತಹ ಹುಡುಗ/ಹುಡುಗಿ ದೊರೆಯುವ ಅವಕಾಶಗಳಿವೆ. ಹಾಗಂತ ನೋಡಿದಾಕ್ಷಣ ಪ್ರೇಮ ನಿವೇದನೆ ಮಾಡಬೇಕು ಅಂತ ಅಲ್ಲ. ಪರಸ್ಪರರು ಸ್ನೇಹದಿಂದ ಇರಲು, ಅಭಿರುಚಿ ಬಗ್ಗೆ ತಿಳಿಯಲು ಸಮಯ ಮಾಡಿಕೊಳ್ಳಿ. ಆದರೆ ಸಂಬಂಧ ಗಟ್ಟಿ ಆಗುವುದಕ್ಕೆ ಸಮಯ ನೀಡಿ.
ಹೊಸ ಸ್ಥಳಗಳಿಗೆ ಭೇಟಿ ನೀಡಲಿದ್ದೀರಿ. ಕುಟುಂಬದೊಂದಿಗೆ ಉತ್ತಮವಾದ ಸಮಯ ಕಳೆಯಲಿದ್ದೀರಿ. ಕೆಲಸ ಬದಲಾವಣೆ ಮಾಡಬೇಕು ಅಂದುಕೊಳ್ಳುತ್ತಿರುವವರಿಗೆ ಇರುವ ಉದ್ಯೋಗದಲ್ಲೇ ಉತ್ತಮ ಅವಕಾಶ ದೊರೆಯುವ ಸೂಚನೆ ಸಿಗಲಿದೆ. ದೇಹದ ತೂಕದ ಕಡೆಗೆ ಒಂದಿಷ್ಟು ಲಕ್ಷ್ಯ ನೀಡಿ.
ವಿಮಾನ ಪ್ರಯಾಣ ಮಾಡುವಂಥವರು ಟಿಕೆಟ್, ಐಡಿ ಪ್ರೂಫ್ ಇತ್ಯಾದಿಗಳನ್ನು ಸರಿಯಾಗಿಟ್ಟುಕೊಳ್ಳಿ. ಕೊನೆ ಕ್ಷಣದಲ್ಲಿ ಒಂದಿಷ್ಟು ಆತಂಕದ ಸನ್ನಿವೇಶಗಳು ನಿರ್ಮಾಣ ಆಗಬಹುದು. ಇನ್ನು ಅಂತಾರಾಷ್ಟ್ರೀಯ ಪ್ರವಾಸಕ್ಕೆ ತೆರಳುತ್ತಿರುವವರು ಅಲ್ಲಿನ ಕರೆನ್ಸಿ ಮಿತಿಗಳನ್ನು ಸರಿಯಾಗಿ ನೋಡಿಕೊಳ್ಳಿ.
ಲೇಖನ- ಎನ್.ಕೆ.ಸ್ವಾತಿ