Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 3ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 3ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 3ರ ದಿನಭವಿಷ್ಯ
ಸಾಂದರ್ಭಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: Ganapathi Sharma

Updated on: Nov 03, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 3ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಯಾರು ಏನೇ ಅಂದುಕೊಳ್ಳಲಿ ನನಗೆ ಬೇಕಾದಂತೆಯೇ ಇರುತ್ತೇನೆ ಎಂಬಂತಹ ಧೋರಣೆ ಈ ದಿನ ನಿಮ್ಮಲ್ಲಿ ಇರಲಿದೆ. ಈ ರೀತಿಯ ಧೋರಣೆ ಇರುವ ಕಾರಣಕ್ಕೆ ಆಪ್ತರ ಜೊತೆಗೆ ಕೆಲವು ವಿಷಯಗಳಿಗೆ ಅಸಮಾಧಾನ ಕಾಣಿಸಿಕೊಳ್ಳಬಹುದು. ಉದ್ಯೋಗ ನಿಮಿತ್ತವಾಗಿ ಪ್ರಯಾಣ ಮಾಡಬೇಕಾಗಲಿದೆ. ನಿಮ್ಮಲ್ಲಿ ವೃತ್ತಿಪರರು ಇದ್ದಲ್ಲಿ ವೃತ್ತಿಗೆ ಸಂಬಂಧಪಟ್ಟಂತಹ ಕೋರ್ಸ್ ಸೇರ್ಪಡೆ ಆಗುವ ಬಗ್ಗೆ ತೀರ್ಮಾನವನ್ನು ಮಾಡಲಿದ್ದೀರಿ. ಈ ದಿನದ ಎಚ್ಚರಿಕೆ ನಿಮಗೆ ಏನೆಂದರೆ, ಬೇಕರಿ ಪದಾರ್ಥಗಳ ಸೇವನೆಯನ್ನು ಮಾಡದಿರಿ. ಮಕ್ಕಳ ಶಿಕ್ಷಣದ ಸಲುವಾಗಿ ಹೂಡಿಕೆ ಅಥವಾ ಉಳಿತಾಯ ಮಾಡುವುದರ ಬಗ್ಗೆ ಸಂಗಾತಿ ಜೊತೆ ಚರ್ಚೆ ಮಾಡಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನೀವು ಯಾರನ್ನು ತುಂಬಾ ಹಚ್ಚಿಕೊಂಡಿರುತ್ತಿರೋ ಅಥವಾ ನಿಮ್ಮ ಅಂತರಂಗದ ವಿಚಾರಗಳನ್ನು ಸಹ ಹೇಳಿಕೊಂಡಿರುತ್ತೀರೋ ಅಂಥವರು ನಿಮ್ಮ ಭಾವನೆಗಳಿಗೆ ಗೌರವ ನೀಡುತ್ತಿಲ್ಲ ಎಂದು ಬಲವಾಗಿ ಅನಿಸಲು ಶುರುವಾಗುತ್ತದೆ. ನಿಮಗೆ ವಂಚನೆ ಆಯಿತು ಎಂಬ ಭಾವನೆ ಸಹ ಮೂಡಬಹುದು. ನೆನಪಿನಲ್ಲಿಡಿ, ಇಂಥದ್ದೊಂದು ಆಲೋಚನೆ ಈ ದಿನಕ್ಕೆ ಮಾತ್ರ ಸೀಮಿತ ಆಗಿರುತ್ತದೆ. ಆದ್ದರಿಂದ ಈ ಬಗ್ಗೆ ಎಲ್ಲರೊಂದಿಗೆ ಚರ್ಚೆ ಮಾಡುವುದಕ್ಕೂ ಹೋಗಬೇಡಿ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪರ್ಫಾರ್ಮೆನ್ಸ್ ಆ ಪ್ರೈಸಲ್ ಬಗ್ಗೆ ಮೇಲಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಿದ್ದೀರಿ ಅಂತಾದಲ್ಲಿ ಈ ದಿನ ತಾಳ್ಮೆಯಿಂದ ವರ್ತಿಸಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮಲ್ಲಿ ಯಾರು ದ್ವಿಚಕ್ರ ವಾಹನ ಅಥವಾ ಕಾರು ಖರೀದಿ ಮಾಡಬೇಕು ಎಂದಿದ್ದೀರೋ ಅಂಥವರಿಗೆ ಹಣಕಾಸಿನ ಹೊಂದಾಣಿಕೆ ಆಗಲಿದೆ. ಇತರರು ತಮ್ಮಿಂದ ಆಗುವುದಿಲ್ಲ ಎಂದು ಕೈ ಬಿಟ್ಟಿದ್ದ ಕೆಲಸವನ್ನು ನೀವು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ. ಉದ್ಯೋಗಸ್ಥರು ಅಥವಾ ವೃತ್ತಿ ನಿರತರಿಗೆ ತಮ್ಮದೇ ವೃತ್ತಿಯಲ್ಲಿ ಇರುವಂತಹವರು ಅಥವಾ ತಮ್ಮದೇ ಕಂಪನಿಯಲ್ಲಿ ಅಥವಾ ಜೊತೆಯಲ್ಲಿ ಕೆಲಸ ಮಾಡುವಂಥವರು ಇಷ್ಟವಾಗುವುದಕ್ಕೆ ಆರಂಭವಾಗಬಹುದು. ಪ್ರೇಮ ನಿವೇದನೆ ಮಾಡಿಕೊಳ್ಳುವಂತಹ ಅವಕಾಶಗಳು ಸಹ ಇವೆ. ಮೇಲ್ನೋಟಕ್ಕೆ ಒತ್ತಡದ ಸನ್ನಿವೇಶ ಕಂಡುಬಂದರೂ ಅಂತಿಮವಾಗಿ ಉತ್ತಮ ಫಲಿತಾಂಶ ಕಾಣುವ ಅವಕಾಶಗಳು ಹೆಚ್ಚಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಹಲವರು ಒಂದೇ ಹುದ್ದೆಗೆ ಅಥವಾ ಅವಕಾಶಕ್ಕೆ ಪ್ರಯತ್ನಿಸುವಂತೆ ನೀವು ಪ್ರಯತ್ನಿಸಬೇಕಾದ ಸನ್ನಿವೇಶ ಉದ್ಭವಿಸಲಿದೆ. ಈ ಪ್ರಕ್ರಿಯೆಯಲ್ಲಿ ನಿಮ್ಮ ಸಹೋದ್ಯೋಗಿಗಳೇ ಸ್ಪರ್ಧೆಗೆ ಇಳಿಯುವುದರಿಂದ ಕಾವೇರಿದ ವಾತಾವರಣ ಇರಲಿದೆ. ಪೋಷಕರಾಗಿದ್ದು, ಮಕ್ಕಳ ಮದುವೆಗಾಗಿ ಸಂಬಂಧಗಳಿಗೆ ಪ್ರಯತ್ನ ಪಡುತ್ತಿರುವವರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಹೊಸದಾಗಿ ಪರಿಚಯ ಆದವರೊಂದಿಗೆ ಎಷ್ಟು ಮಾತನಾಡಬೇಕು ಎಂಬ ಬಗ್ಗೆ ಒಂದು ನಿಯಂತ್ರಣ ಇಟ್ಟುಕೊಳ್ಳುವುದು ಉತ್ತಮ. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವಂಥವರಿಗೆ ಬೆಲೆ ಬಾಳುವ ವಸ್ತುಗಳು ಕಳೆದುಹೋಗುವ ಸಾಧ್ಯತೆ ಇದೆ, ಜಾಗ್ರತೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈಗಾಗಲೇ ನಿಶ್ಚಿತಾರ್ಥ ಆಗಿದೆ ಎಂದಿರುವವರು ಮಾತುಕತೆ ಆಡುವಾಗ ಎಚ್ಚರಿಕೆಯಿಂದ ಇರಿ. ಸಣ್ಣ ತಮಾಷೆಯ ಮಾತು ಅಥವಾ ಮಾತಿನಲ್ಲಿನ ಅಪಾರ್ಥದಿಂದಾಗಿ ಮದುವೆಯ ನಿಶ್ಚಿತಾರ್ಥವೇ ಮುರಿದು ಹೋಗುವ ಸಾಧ್ಯತೆ ಇದೆ, ಎಚ್ಚರ. ಹಾಲಿನಿಂದ ಮಾಡಿದ ಪದಾರ್ಥಗಳನ್ನು ಸೇವನೆ ಮಾಡುವಂತಹವರು ಅದರ ಗುಣಮಟ್ಟ ಹಾಗೂ ತಾಜಾತನ ಎಷ್ಟಿದೆ ಎಂಬುದರ ಬಗ್ಗೆ ನಿಗಾ ಮಾಡಿ. ಇಲ್ಲದಿದ್ದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸಂಗಾತಿ ವಹಿಸಿದ ಜವಾಬ್ದಾರಿಯನ್ನು ನೆನಪಿನಲ್ಲಿ ಇಟ್ಟುಕೊಂಡು, ಮುಗಿಸುವುದಕ್ಕೆ ಪ್ರಯತ್ನಿಸಿ. ದಿಢೀರ್ ಪ್ರಯಾಣ ಹೊರಡಬೇಕು ಎಂದಾದಲ್ಲಿ ಸಿದ್ಧತೆಯ ಕಡೆಗೆ ಗಮನ ಇರಲಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಚಾರ್ಟೆಡ್ ಅಕೌಂಟೆಂಟ್ ಗಳು, ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವವರು ಸಂಘ ಸಂಸ್ಥೆಗಳಿಗೆ ಪದಾಧಿಕಾರಿಗಳಾಗಿಯೋ ಅಥವಾ ಪ್ರಮುಖ ಹುದ್ದೆಗಳಿಗೋ ಆಯ್ಕೆಯಾಗುವ ಸಾಧ್ಯತೆಗಳಿವೆ. ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವವರು ಅದರಲ್ಲಿಯೂ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾ ಒಳ್ಳೆ ಪ್ರಚಾರ ಸಿಗಲಿದೆ. ಕೃಷಿ ಜಮೀನು ಹುಡುಕುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂತಹ ಜಮೀನು ದೊರೆಯುವ ಸಾಧ್ಯತೆಗಳಿವೆ. ಈ ದಿನದ ಎಚ್ಚರಿಕೆ ಏನೆಂದರೆ, ಬರಿಗಾಲಿನಲ್ಲಿ ನಡೆದಾಡುವವರು ಜಾಗ್ರತೆಯಿಂದ ಇರಬೇಕು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಈ ದಿನ ನಿಮಗೆ ದೂರ ಪ್ರಯಾಣ ಮಾಡುವಂತಹ ಯೋಗ ಇದೆ. ಸ್ವಂತ ಉದ್ಯೋಗ ಅಥವಾ ಕೆಲಸ ಮಾಡುವಂಥವರಿಗೆ ಆದಾಯದಲ್ಲಿ ಅಲ್ಪ ಪ್ರಮಾಣದ ಇಳಿಕೆ ಆಗಬಹುದು. ಈ ಹಿಂದೆ ನಿಮಗೆ ಕೆಲಸ ಮಾಡಿಕೊಡುತ್ತೇನೆ ಎಂದು ಮಾತು ನೀಡಿದವರು ಕೊನೆ ಕ್ಷಣದಲ್ಲಿ ತಮ್ಮಿಂದ ಕೆಲಸ ಮಾಡಿಕೊಡಲು ಸಾಧ್ಯವಿಲ್ಲ ಎಂದು ಹೇಳಬಹುದು. ಮಸಾಲೆ ಅಥವಾ ಕರಿದ ಪದಾರ್ಥಗಳ ಸೇವನೆಯಿಂದ ದೂರ ಇದ್ದರೆ ಒಳಿತು. ಈಗಾಗಲೇ ಎದೆ ಉರಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ಕಡ್ಡಾಯವಾಗಿ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ಇತರರಿಗೆ ವೈಯಕ್ತಿಕ ಸಲಹೆಯನ್ನು ನೀಡುವ ಪ್ರಯತ್ನದಲ್ಲಿ ಅವಮಾನಕ್ಕೆ ಗುರಿಯಾಗಲಿದ್ದೀರಿ. ಆದ್ದರಿಂದ ಬೇರೆಯವರ ವಿಷಯಗಳಿಗೆ ತಲೆಹಾಕಲು ಹೋಗಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಮನೆಯಲ್ಲಿ ದೇವತಾರಾಧನೆಯನ್ನು ಆಯೋಜಿಸುವಂತಹ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ತಂದೆ, ತಾಯಿಯ ಆಶೀರ್ವಾದ ಸಹ ದೊರೆಯಲಿದೆ. ಈ ಹಿಂದೆ ಪ್ರಯತ್ನವೇ ಪಟ್ಟಿರದಂತಹ ಒಂದು ಕೆಲಸವನ್ನು ಮಾಡಿ, ಅದರಲ್ಲಿ ಯಶಸ್ಸು ಪಡೆಯಲಿದ್ದೀರಿ, ಇದರಿಂದ ನಿಮ್ಮ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ತುಂಬಾ ದೊಡ್ಡ ಮಟ್ಟದಲ್ಲಿ ಜಾಸ್ತಿಯಾಗುತ್ತದೆ . ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಶುಭ ಸುದ್ದಿ ಕೇಳುವಂತಹ ಯೋಗ ಇದೆ.ಅದರಲ್ಲಿಯೂ ಅಲ್ಪ ಸಮಯಕ್ಕಾದರೂ ವಿದೇಶಗಳಿಗೆ ಪ್ರಯಾಣ ಮಾಡಬೇಕಾದಂತಹ ಅವಕಾಶ ನಿಮಗೆ ದೊರೆಯಬಹುದು ಎಂಬ ಸುಳಿವು ಸಿಗಲಿದೆ . ಯಾವುದಾದರೂ ಒಂದು ವಿಚಾರದಲ್ಲಿ ಭವಿಷ್ಯದಲ್ಲಿ ಏನಾಗಬಹುದು ಎಂಬ ಚಿಂತೆ ಕಾಡುತ್ತಿರುವವರಿಗೆ ಅದರ ನಿವಾರಣೆ ಆಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಒಬ್ಬ ವ್ಯಕ್ತಿ ನಿಮಗೆ ತಗುಲಿಕೊಂಡು ಇಡೀ ದಿನ ವ್ಯರ್ಥವಾಗುವಂತೆ ಮಾಡಬಹುದು ಎಚ್ಚರಿಕೆ ಇರಲಿ. ಒಂದು ವೇಳೆ ಅಂತಹವರು ಯಾರಾದರೂ ನಿಮಗೆ ತಗುಲಿಕೊಂಡಲ್ಲಿ ಆರಂಭದಲ್ಲೇ ಅವರೊಂದಿಗೆ ಯಾವುದೇ ಮುಚ್ಚು ಮರೆಯಿಲ್ಲದೆ ಹೇಳಿ, ಅವರಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ಸರಕಾರಿ ಕೆಲಸಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರಿಗೆ ಈ ದಿನ ಒಂದಿಷ್ಟು ಒತ್ತಡದ ಅಥವಾ ಗೊಂದಲದ ವಾತಾವರಣ ಸೃಷ್ಟಿಯಾಗಲಿದೆ. ನೆಲದ ಮೇಲೆ ನೀರು ಅಥವಾ ಜಾರುವಂಥ ವಸ್ತುಗಳು ಬಿದ್ದಿವೆಯೇ ಎಂಬುದನ್ನು ಸರಿಯಾಗಿ ನೋಡಿಕೊಂಡು ಓಡಾಡುವುದು ಮುಖ್ಯವಾಗುತ್ತದೆ. ಏಕೆಂದರೆ ಇದೇ ಕಾರಣದಿಂದ ಸಣ್ಣ ಪ್ರಮಾಣದಲ್ಲಿ ಆದರೂ ಪೆಟ್ಟು ಮಾಡಿಕೊಳ್ಳುವಂತಹ ಸಾಧ್ಯತೆಗಳು ಇವೆ. ಈ ದಿನ ಕಪ್ಪು ಬಟ್ಟೆಯನ್ನು ಧರಿಸದಿರುವುದು ಉತ್ತಮ.