Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 9ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 9ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 9ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: Ganapathi Sharma

Updated on: Nov 09, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 9ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಶಿಸ್ತು ಬಹಳ ಮುಖ್ಯವಾಗುತ್ತದೆ. ನಿಮಗೆ ತುಂಬ ಆಪ್ತರು, ಬಹಳ ಬೇಕಾದವರು ಹೀಗೆ ಯಾರದೇ ಮನೆಗೆ ಹೋಗುವುದಾಗಲೀ ಅಥವಾ ಅವರ ಯಾವುದಾದರೂ ಕೆಲಸ ವಿಚಾರಕ್ಕೆ ಭೇಟಿ ಮಾಡುವುದೇ ಆಗಲಿ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತೆರಳುವುದು ಉತ್ತಮ. ನಿಮ್ಮ ಜತೆಗೆ ತುಂಬ ಆಪ್ತರಾಗಿದ್ದಾರೆ ಎಂಬ ಕಾರಣಕ್ಕೆ ಸಲುಗೆ ತೆಗೆದುಕೊಳ್ಳಬೇಡಿ. ಮನೆಯ ಸಂಪ್ ಕ್ಲೀನ್ ಮಾಡುವುದಕ್ಕಾಗಿ ಅಥವಾ ನೀರಿನ ಫಿಲ್ಟರ್ ಸರ್ವೀಸ್ ಗಾಗಿ ಹಣ ಖರ್ಚು ಮಾಡಬೇಕಾಗಲಿದೆ. ಖಾರವಾದ ಆಹಾರ ತಿನಿಸುಗಳನ್ನು ಇಷ್ಟ ಪಡುವಂಥವರು ಈ ದಿನ ಇಂಥ ಆಹಾರ ಸೇವಿಸುವುದರಿಂದ ದೂರ ಇರುವುದು ಒಳ್ಳೆಯದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಸಿನಿಮಾ ರಂಗದಲ್ಲಿ ಇರುವವರು ನಿಮ್ಮ ಪಾಲಿಗೆ ಬರುವ ಅವಕಾಶಗಳ ಬಗ್ಗೆ ತಕ್ಷಣ ಸ್ಪಂದಿಸುವುದು ಮುಖ್ಯವಾಗುತ್ತದೆ. ಆಲೋಚಿಸಿದ ನಂತರ ಹೇಳ್ತೀನಿ, ಸಮಯ ತೆಗೆದುಕೊಂಡು ಹೇಳ್ತೀನಿ ಎಂದಲ್ಲಿ ಅವಕಾಶ ಕಳೆದುಕೊಳ್ಳಲಿದ್ದೀರಿ. ಎನ್ ಜಿಒಗಳಿಗಾಗಿ ಕೆಲಸ ಮಾಡುತ್ತಿರುವವರಿಗೆ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ಮೊದಲ ಬಾರಿಗೆ ಕೈಗೊಂಡ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ. ಮನೆಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಂಥ ಯೋಗ ಇದೆ. ಈ ಬಗ್ಗೆ ಕುಟುಂಬ ಸದಸ್ಯರ ಜತೆಗೆ ಚರ್ಚೆ ನಡೆಸಲಿದ್ದೀರಿ. ಇದಕ್ಕಾಗಿ ನೀವು ಲೆಕ್ಕ ಹಾಕಿಟ್ಟುಕೊಂಡ ಬಜೆಟ್ ಗಿಂತ ಹೆಚ್ಚು ಖರ್ಚಾಗಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಸ್ವಂತ ವಿಚಾರದಲ್ಲಿ ಯಾರಾದರೂ ಸಲಹೆ ನೀಡಿದಲ್ಲಿ ಅದನ್ನು ಸರಿಯಾಗಿ ಕೇಳಿಸಿಕೊಳ್ಳಿ. ಹಾಗೂ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಸರಿಯಾದ ಯೋಜನೆ ರೂಪಿಸುವುದು ಮುಖ್ಯ. ಜಮೀನು- ಆಸ್ತಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗುವಂಥ ಸೂಚನೆ ದೊರೆಯಲಿದೆ. ಹೊಸದಾಗಿ ವಾಹನಗಳನ್ನು ಖರೀದಿ ಮಾಡಬೇಕು ಎಂದುಕೊಂಡವರಿಗೆ ಹಣಕಾಸಿನ ಮೂಲ ದೊರೆಯಲಿದೆ. ಸಂಗಾತಿಯ ಜತೆಗೆ ಉತ್ತಮ ಸಮಯ ಕಳೆಯುವುದಕ್ಕೆ ಅವಕಾಶಗಳಿವೆ. ನವದಂಪತಿಗೆ ಹಿಲ್ ಸ್ಟೇಷನ್ ಗೆ ತೆರಳುವಂಥ ಯೋಗ ಇದ್ದು, ಅದರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಮನಸ್ಸಿನಲ್ಲಿ ಇರುವಂಥ ಪ್ರೀತಿ- ಪ್ರೇಮದ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳಲಿವೆ. ವೃತ್ತಿನಿರತರು ಬಂಡವಾಳದ ಕೊರತೆಯಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕೆ ಪ್ರಯತ್ನಿಸಬೇಕು ಎಂದು ತೀರ್ಮಾನ ಮಾಡಲಿದ್ದೀರಿ. ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಕೈ ಹಾಕಬೇಕು ಎಂದಿದ್ದಲ್ಲಿ ಏಕಾಗ್ರತೆಯನ್ನು ಸಾಧಿಸುವುದಕ್ಕೆ ಸಾಧ್ಯವಾ ಎಂಬ ಬಗ್ಗೆ ನಿಮ್ಮನ್ನು ನೀವೇ ಕೇಳಿಕೊಳ್ಳುವುದು ಮುಖ್ಯವಾಗುತ್ತದೆ. ದೂರದ ಊರು ಅಥವಾ ದೇಶದಲ್ಲಿ ಹೂಡಿಕೆ ಮಾಡಿದವರಿಗೆ ಅದನ್ನು ಹಿಂತೆಗೆದುಕೊಂಡು ಬೇರೆ ಕಡೆ ಹೂಡಿಕೆ ಮಾಡುವ ಬಗ್ಗೆ ಆಲೋಚನೆ ಬರಲಿದೆ. ಈಗಾಗಲೇ ಮದುವೆ ನಿಶ್ಚಯ ಆಗಿದ್ದಲ್ಲಿ ಗೊಂದಲದ ವಾತಾವರಣ ಸೃಷ್ಟಿ ಆಗುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನೀವು ಸಲಹೆ ಕೊಟ್ಟರೆ ಕೇಳಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳದಿರಿ. ಇದರಿಂದ ನಿಮ್ಮ ಮನಸಿಗೆ ಬೇಸರ ಆಗಬಹುದು. ಹೇಳುವುದಷ್ಟೇ ನಿಮ್ಮ ಕರ್ತವ್ಯ ಅಥವಾ ಜವಾಬ್ದಾರಿ. ಅಲ್ಲಿಗೆ ಮುಗಿಯಿತು. ಅದಕ್ಕಿಂತ ಮುಂದೆ ಏನನ್ನೂ ಅಪೇಕ್ಷಿಸಬೇಡಿ. ಚಿನ್ನದ ಚೀಟಿ ಹಾಕಿಕೊಂಡಿದ್ದಲ್ಲಿ ಅದರ ಬಗ್ಗೆ ಸರಿಯಾಗಿ ವಿಚಾರಿಸಿಕೊಂಡು, ಯಾವಾಗ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಸರಿಯಾಗಿ ಮಾತನಾಡಿಕೊಳ್ಳುವುದು ಉತ್ತಮ. ಹೆಣ್ಣುಮಕ್ಕಳು ಇರುವವರು ಅವರ ಆರೋಗ್ಯ ಮತ್ತು ಶಿಕ್ಷಣದ ಕಡೆಗೆ ಹೆಚ್ಚಿನ ಲಕ್ಷ್ಯ ಮಾಡಬೇಕಾಗುತ್ತದೆ. ಸಂಗಾತಿಯ ಕೆಲವು ಮಾತಿನಿಂದ ಮನಸ್ಸಿಗೆ ಬೇಸರ ಆಗಬಹುದು. ಬಳಸುವ ಪದಗಳ ಬಗ್ಗೆ ನಿಗಾ ಇರಲಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈ ದಿನ ಬೇರೆಯವರಿಗೆ ಸಹಾಯ ಮಾಡಿದ ನಂತರ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನೀವು ಏನು ಅಂದಾಜು ಮಾಡಿರುತ್ತೀರೋ ಅದಕ್ಕಿಂತ ಬಹಳ ದೊಡ್ಡ ಪ್ರಮಾಣದ ಖರ್ಚು ಆಗಲಿದೆ. ಯಾರ ಜೊತೆಗೂ ವಾದ, ವಾಗ್ವಾದಗಳನ್ನು ಮಾಡಿಕೊಳ್ಳಲು ಹೋಗಬೇಡಿ. ಸ್ನೇಹಿತರು ಹಾಗೂ ನಿಮ್ಮ ಆಪ್ತರ ಜೊತೆಗೆ ಮಾತನಾಡುವಾಗ ತಮಾಷೆಗೆ ಒಂದು ಮಿತಿ ಇರಲಿ. ಏಕೆಂದರೆ ಈ ದಿನ ನಿಮ್ಮ ಸಂಬಂಧ- ಸ್ನೇಹಗಳು ಹಾಳಾಗುವಂತಹ ಸಾಧ್ಯತೆಗಳು ಹೆಚ್ಚಿವೆ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು, ನಿಮ್ಮ ಸಾಮರ್ಥ್ಯಕ್ಕೂ ಮೀರಿದ ಕೆಲಸ ವಹಿಸಿಕೊಂಡ ಪರಿಣಾಮವನ್ನು ಈ ದಿನ ಎದುರಿಸಲಿದ್ದೀರಿ. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವಂಥವರು ಮುಖ್ಯ ವಸ್ತುಗಳ ಬಗ್ಗೆ ಜಾಗ್ರತೆಯನ್ನು ವಹಿಸಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ಮನಸ್ಸಿಗೆ ಒಪ್ಪುವಂತಹ ವ್ಯಕ್ತಿ ಒಬ್ಬರನ್ನು ಈ ದಿನ ಭೇಟಿಯಾಗುವ ಯೋಗ ಇದೆ. ಮೊದಲಿಗೆ ಸ್ನೇಹ, ಆ ನಂತರ ಪ್ರೀತಿ ಹಾಗೂ ಅದೇ ಸಂಬಂಧಕ್ಕೆ ತಿರುಗುವ ಅವಕಾಶಗಳು ಇವೆ. ಕುಟುಂಬದವರ ಜತೆಗೂಡಿ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೀರಿ. ತಂದೆ- ತಾಯಿ ಸಲುವಾಗಿ ತೀರ್ಥಕ್ಷೇತ್ರ ಪ್ರವಾಸಗಳಿಗೆ ಹಣ ಖರ್ಚು ಮಾಡುವಂತಹ ಯೋಗ ಅಥವಾ ಅವಕಾಶ ನಿಮಗೆ ದೊರೆಯಲಿದೆ. ಸಂಗೀತಗಾರರು, ಪ್ರವಚನಕಾರರು, ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಸನ್ಮಾನಗಳು ಆಯೋಜನೆ ಆಗುವ ಯೋಗ ಇದೆ. ವಿದೇಶಕ್ಕೆ ತರಬೇಕು ಎಂದು ಸಿದ್ಧತೆ ನಡೆಸುತ್ತಿರುವವರಿಗೆ ಬಾಕಿ ಉಳಿದ ಕೆಲಸಗಳು ತುಂಬಾ ವೇಗವಾಗಿ ಮುಗಿಯಲಿವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಅನುಭವದ ವ್ಯಾಪ್ತಿಯಲ್ಲಿ ಮಾಡಬಹುದಾದ ಕೆಲಸ, ತುಂಬ ಸಲೀಸಾಗಿ ಮುಗಿಯುತ್ತದೆ ಎಂದುಕೊಂಡಿದ್ದು ಬಹಳ ಸಮಯ ಹಿಡಿಸುವಂಥ ಸಾಧ್ಯತೆಗಳು ಗೋಚರಿಸುತ್ತವೆ. ನಿಮ್ಮ ಪಾಲಿಗೆ ಬರಬಹುದು ಎಂದುಕೊಂಡಿದ್ದ ಮೊತ್ತವು ಕೈ ಸೇರುವುದಿಲ್ಲ ಎಂದೆನಿಸಲಿದೆ. ಈ ದಿನ ಯಾವುದೇ ಮುಖ್ಯ ನಿರ್ಧಾರಗಳು ಮಾಡದಿರುವುದು ಉತ್ತಮ. ಒಂದು ವೇಳೆ ಅನಿವಾರ್ಯ ಎಂದಿದ್ದಲ್ಲಿ ಮನೆ ದೇವರ ಸ್ಮರಣೆಯನ್ನು ಮಾಡುವುದು ಉತ್ತಮ. ಇದರಿಂದ ಸರಿಯಾದ ತೀರ್ಮಾನವನ್ನು ಮಾಡುವುದಕ್ಕೆ ಪ್ರೇರಣೆ ದೊರೆಯಲಿದೆ. ಕಣ್ಣಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಈಗಾಗಲೇ ಕಾಡುತ್ತಿದ್ದಲ್ಲಿ ಅದು ಉಲ್ಬಣ ಆಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಇತರರ ವೈಯಕ್ತಿಕ ವಿಚಾರಗಳನ್ನು ಮಾತನಾಡಬೇಡಿ. ಮಾರ್ಕೆಟಿಂಗ್ ವಿಭಾಗದಲ್ಲಿ ಇರುವವರಿಗೆ ಗುರಿ ತಲುಪುವುದು ಬಹಳ ಕಷ್ಟವಾಗಿ ಮಾರ್ಪಡಲಿದೆ. ನಿಮ್ಮದಲ್ಲದ ವಸ್ತುಗಳಿಗೆ ಆಸೆ ಪಡಬೇಡಿ. ಸಣ್ಣ ತಪ್ಪು ಎಂದುಕೊಂಡು ನೀವು ಈ ಹಿಂದೆ ಮಾಡಿದ್ದು ಇದೀಗ ಕುತ್ತಿಗೆಗೆ ಬರಲಿದೆ. ಸೋದರ ಸಂಬಂಧಿಗಳು ನಿಮ್ಮಿಂದ ಹೆಚ್ಚಿನದನ್ನು ನಿರೀಕ್ಷೆ ಮಾಡಿಕೊಂಡು, ಸಹಾಯ ಕೇಳಿಕೊಂಡು ಬರುವಂಥ ಸಾಧ್ಯತೆಗಳಿವೆ. ಹೌದು ಎಂದರೂ ತೊಂದರೆ, ಇಲ್ಲ ಅಂದರೆ ಸಂಬಂಧಕ್ಕೆ ಪೆಟ್ಟು ಬೀಳಬಹುದು ಎಂಬ ಸನ್ನಿವೇಶ ಎದುರಾಗಬಹುದು. ಉದ್ಯಮಕ್ಕೆ ಸಂಬಂಧಿಸಿದ ವ್ಯವಹಾರಗಳು ನಿಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು. ಸರಿಯಾದ ದಾಖಲೆ ಪತ್ರಗಳ ಜತೆಗೆ ವ್ಯವಹರಿಸಿ.