Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 28ರ ದಿನಭವಿಷ್ಯ 

| Updated By: ಗಂಗಾಧರ​ ಬ. ಸಾಬೋಜಿ

Updated on: Sep 28, 2023 | 1:02 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 28ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 28ರ ದಿನಭವಿಷ್ಯ 
ಪ್ರಾತಿನಿಧಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 28ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ವಿವಾಹಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳಿ ಬರುವ ಯೋಗವಿದೆ. ಗೃಹ ಸಾಲ ಸೇರಿದಂತೆ ವಾಹನ ಸಾಲ ಅಥವಾ ಪರ್ಸನಲ್ ಲೋನ್ ಗಾಗಿ ಬ್ಯಾಂಕಿನಲ್ಲಿ ಪ್ರಯತ್ನ ಪಡುತ್ತಿರುವವರಿಗೆ ಸಾಲ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಹೊಸ ಕಾರು ಖರೀದಿ ಮಾಡಬೇಕು ಎಂದಿರುವವರಿಗೆ ಹಣಕಾಸಿನ ಹೊಂದಾಣಿಕೆ ಆಗಲಿದೆ. ರಾಜಕಾರಣದಲ್ಲಿ ಇರುವವರಿಗೆ ಪದೋನ್ನತಿ ದೊರೆಯಲಿದೆ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಚೂಪಾದ ವಸ್ತುಗಳನ್ನು ಬಳಸುತ್ತಿದ್ದೀರಿ ಎಂದಾದರೆ ಸಾಮಾನ್ಯ ದಿನಗಳಲ್ಲಿ ಇರುವುದಕ್ಕಿಂತ ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹೊಸದಾಗಿ ಪರಿಚಯ ಆದವರ ಜೊತೆಗೆ ಅಂತರಂಗದ ವಿಚಾರಗಳನ್ನು ಹಂಚಿಕೊಳ್ಳಬೇಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಹಣಕಾಸಿನ ವಿಚಾರವಾಗಿ ಅಥವಾ ಆಸ್ತಿ ವಿಚಾರವಾಗಿ ತಂದೆಯೊಂದಿಗೆ ಅಥವಾ ತಂದೆ ಸಮಾನರಾದವರೊಂದಿಗೆ ಅಭಿಪ್ರಾಯ ಭೇದಗಳು ಅಥವಾ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಬಹುದು. ಉದ್ಯೋಗ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರಶ್ನೆ ಮಾಡುವಂತಹ ಸನ್ನಿವೇಶ ಎದುರಾಗಲಿದೆ. ಯಾರೋ ಒಬ್ಬರ ಸಲುವಾಗಿ ಈ ದಿನ ನಿಮ್ಮ ಹಲವು ಯೋಜನೆಗಳನ್ನು ಬದಲಿಸಿಕೊಳ್ಳಬೇಕಾಗಬಹುದು. ಇತರರು ತಮ್ಮ ಸ್ವಂತ ಹಿತಾಸಕ್ತಿ ಕಾಪಾಡಿಕೊಳ್ಳುವ ಸಲುವಾಗಿ ನಿಮ್ಮ ಮೇಲೆ ಕೆಲಸದ ಒತ್ತಡ ಹೇರಲಿದ್ದಾರೆ. ಆದ್ದರಿಂದ ಎಲ್ಲದಕ್ಕೂ ಹೂಗುಟ್ಟುವ ಮೊದಲು ಅದರ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ವಿರುದ್ಧ ಯಾರಾದರೂ ಮೇಲಧಿಕಾರಿಗಳಲ್ಲಿ ದೂರು ಹೇಳಿದ್ದಲ್ಲಿ ಈ ಘಟನೆಯಿಂದ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಯಾರು ನಿಮ್ಮ ಸಾಮರ್ಥ್ಯದ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೋ ಅವರೇ ನಿಮ್ಮ ಸಹಾಯವನ್ನು ಕೇಳಿಕೊಂಡು ಬರುವಂತಹ ಪರಿಸ್ಥಿತಿ ಉದ್ಭವಿಸಲಿದೆ. ಕೃಷಿ ಜಮೀನನ್ನು ಮಾರಾಟಕ್ಕೆ ಇಟ್ಟವರಿಗೆ ಉತ್ತಮವಾದಂತಹ ಮೌಲ್ಯ ಅಥವಾ ಬೆಲೆ ದೊರೆಯುವಂತಹ ಅವಕಾಶಗಳು ಕಾಣಿಸಿಕೊಳ್ಳಲಿವೆ. ಸಂಗೀತಗಾರರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರು, ಪ್ರವಚನಕಾರರು, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇರುವವರು ಇಂತಹವರಿಗೆ ಸಮಾಜದ ಪ್ರಮುಖ ಸಂಸ್ಥೆಗಳಿಂದ ಸನ್ಮಾನಗಳು ಆಗುವಂಥ ಯೋಗ ಇದೆ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಈ ದಿನ ಯಾವುದೇ ಪ್ರಮುಖ ಕೆಲಸದ ಮೇಲೆ ಮನೆಯಿಂದ ಆಚೆ ಹೊರಡುವಾಗ ಮನಸ್ಸಿನಲ್ಲಿ ಶಿರಡಿ ಸಾಯಿಬಾಬರನ್ನ ನೆನಪಿಸಿಕೊಳ್ಳಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ದಿನ ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ನೀವು ಹೆಚ್ಚು ತೊಡಗಿಸಿಕೊಳ್ಳಲಿದ್ದೀರಿ. ಒಂದು ವೇಳೆ ದೇವತಾರಾಧನೆಗಾಗಿ ದೇಣಿಗೆ ಕೇಳಿಕೊಂಡು ಬಂದಲ್ಲಿ ಅದನ್ನು ನೀಡಿದರೆ ಉತ್ತಮ ಫಲಿತಾಂಶವನ್ನು ಕಾಣಲಿದ್ದೀರಿ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿರುವವರಿಗೆ ಹಿರಿಯರ ಮಾರ್ಗದರ್ಶನ ಅಥವಾ ಅನುಭವಿಗಳು ನೀಡುವ ಸಲಹೆಯಿಂದ ಲಾಭದ ಪ್ರಮಾಣ ಹೆಚ್ಚಾಗುವಂತಹ ಯೋಗ ಇದೆ. ಹೋಟೆಲ್, ಕಾಂಡಿಮೆಂಟ್ಸ್ ನಡೆಸುತ್ತಿರುವವರು ತಮ್ಮ ವ್ಯಾಪಾರ ವಿಸ್ತರಣೆಗಾಗಿ ಚರ್ಚೆ ನಡೆಸಲಿದ್ದೀರಿ. ಮಾತಿನ ಮೂಲಕ ಆದಾಯ ಬರುವಂತ ವೃತ್ತಿಯಲ್ಲಿ ಯಾರಿದ್ದೀರಿ ಅಂತಹವರಿಗೆ ಆದಾಯವನ್ನು ಹೆಚ್ಚು ಮಾಡಿಕೊಳ್ಳುವಂತಹ ಅವಕಾಶಗಳು ದೊರೆಯಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ದೂರ ಪ್ರಯಾಣಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಹೆಚ್ಚಿನ ಖರ್ಚನ್ನು ಮಾಡಲಿದ್ದೀರಿ. ತವರು ಮನೆಯಲ್ಲಿ ನಡೆಯುವಂತಹ ಕಾರ್ಯಕ್ರಮಗಳಿಗಾಗಿ ನಿಮಗೆ ಆಹ್ವಾನ ಬರಲಿದೆ. ಪ್ರೀತಿ ಪ್ರೇಮದಲ್ಲಿ ಇದ್ದು ಒಂದು ವೇಳೆ ಮನಸ್ತಾಪ ಬಂದಿದೆ ಅಂತಾದಲ್ಲಿ ಅದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ವೇದಿಕೆ ಮತ್ತು ಅವಕಾಶ ದೊರೆಯಲಿದೆ. ಯಾರು ತಾತ್ಕಾಲಿಕ ಕೆಲಸಗಳನ್ನು ಮಾಡುತ್ತಿದ್ದೀರಾ ಅಂತಹವರಿಗೆ ಕೆಲಸ ಕಾಯಂ ಆಗುವಂಥ ಅವಕಾಶಗಳು ಹೆಚ್ಚಾಗುತ್ತವೆ. ಶಿಕ್ಷಕ ವೃತ್ತಿಯಲ್ಲಿ ಇರುವವರಿಗೆ ಅಧ್ಯಯನ ಪ್ರವಾಸಕ್ಕೆ ತೆರಳಬೇಕಾಗಬಹುದು. ಈ ದಿನಕ್ಕೆ ಒಂದು ಪ್ರಮುಖವಾದಂತಹ ಎಚ್ಚರಿಕೆ ಏನೆಂದರೆ, ಕರಿದ ಪದಾರ್ಥಗಳನ್ನು ಅಥವಾ ಮಸಾಲೆಯುಕ್ತ ಪದಾರ್ಥಗಳನ್ನು ಸೇವನೆ ಮಾಡದಿದ್ದರೆ ಒಳಿತು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಇತರರಿಗೆ ಸಹಾಯ ಮಾಡಲು ಹೋಗಿ ನೀವೇ ಸಮಸ್ಯೆಗೆ ಸಿಲುಕಿಕೊಳ್ಳಲಿದ್ದೀರಿ. ಸರಕಾರಿ ನೌಕರಿಯಲ್ಲಿದ್ದು, ಪ್ರಮುಖ ಹುದ್ದೆಯನ್ನು ನಿರ್ವಹಿಸುತ್ತಿರುವವರಿಗೆ ಯಾಕಾದರೂ ಈ ಪರಿಸ್ಥಿತಿ ನನಗೆ ಬೇಕಿತ್ತು ಎಂದು ಬಹಳ ನೊಂದುಕೊಳ್ಳುವಂತಾಗುತ್ತದೆ. ಈ ದಿನ ಯಾವುದೇ ಕಾರಣಕ್ಕೂ ಕಾನೂನು ಮೀರುವಂತಹ ಸಣ್ಣ ಕೆಲಸವನ್ನು ಕೂಡ ಮಾಡಲಿಕ್ಕೆ ಹೋಗಬೇಡಿ. ಬೆಂಕಿಯ ಮುಂದೆ ಕೆಲಸ ಮಾಡುವಂಥವರು ಸಾಮಾನ್ಯ ದಿನಗಳಲ್ಲಿ ಇರುವಂತಹ ಎಚ್ಚರಿಕೆಗಿಂತ ಹೆಚ್ಚು ಜಾಗ್ರತೆ ವಹಿಸುವುದು ಮುಖ್ಯವಾಗುತ್ತದೆ. ನಿಮ್ಮ ಕೈ ಸೇರದ ಹಣವನ್ನು ನೆಚ್ಚಿಕೊಂಡು, ಹಣ ಕೊಡುವುದಾಗಿ ಇತರರ ಬಳಿ ಮಾತು ಕೊಡಬೇಡಿ. ಸೋಷಿಯಲ್ ಮೀಡಿಯಾಗಳಲ್ಲಿ ಇತರರ ವೈಯಕ್ತಿಕ ವಿಚಾರಗಳನ್ನು ಪೋಸ್ಟ್ ಮಾಡುವುದಕ್ಕೆ ಹೋಗಬೇಡಿ, ಒಂದು ವೇಳೆ ಮಾಡಿದಲ್ಲಿ ವಿವಾದಕ್ಕೆ ಸಿಲುಕಿಕೊಳ್ಳುತ್ತೀರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮನೆ ಅಥವಾ ಜಮೀನು ಅಥವಾ ಖಾಲಿ ಸೈಟನ್ನು ಮಾರಾಟಕ್ಕೆ ಇಟ್ಟಿದ್ದಲ್ಲಿ ನಿಮಗೆ ಸೂಕ್ತವಾದಂತಹ ಖರೀದಿದಾರರು ದೊರೆಯುವಂತಹ ಅವಕಾಶಗಳು ಹೆಚ್ಚಿವೆ. ಅಗತ್ಯ ಕಂಡುಬಂದಲ್ಲಿ ಸ್ನೇಹಿತರು ಅಥವಾ ನಿಮಗಿಂತ ಅನುಭವಿಗಳು ಅಥವಾ ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಿ. ಈ ದಿನ ನರಸಿಂಹದೇವರ ಆರಾಧನೆಯನ್ನು ಮಾಡುವುದರಿಂದ ಕೆಲವು ಉತ್ತಮ ಬೆಳವಣಿಗೆಗಳನ್ನು ಕಾಣಲಿದ್ದೀರಿ. ಸಂತಾನಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಕೇಳುವಂತಹ ಯೋಗ ಇದೆ. ನೀವಾಗಿಯೇ ವಹಿಸಿಕೊಂಡಂತ ಜವಾಬ್ದಾರಿಯೊಂದನ್ನು ತುಂಬಾ ಯಶಸ್ವಿಯಾಗಿ ಮಾಡಿಸಲಿದ್ದೀರಿ. ಇದರಿಂದಾಗಿ ನಿಮ್ಮ ಪ್ರಾಮುಖ್ಯ ಮತ್ತು ವರ್ಚಸ್ಸು ಎರಡೂ ಹೆಚ್ಚಾಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಎಲ್ಲವನ್ನೂ ನಾನೇ ಮಾಡಬೇಕು ಮತ್ತು ಅಚ್ಚುಕಟ್ಟಾಗಿ ಮಾಡಬೇಕು ಎಂದುಕೊಂಡು ಎಲ್ಲ ಕೆಲಸ ಮೈ ಮೇಲೆ ಹಾಕಿಕೊಂಡು, ಕೊನೆಗೆ ಯಾವುದೂ ಮುಗಿಯುವುದಿಲ್ಲ ನೆನಪಿನಲ್ಲಿಡಿ. ವಿದೇಶ ಪ್ರಯಾಣಗಳಿಗೆ ತೆರಳಬೇಕು ಎಂದು ಸಿದ್ಧತೆ ನಡೆಸಿಕೊಳ್ಳುತ್ತಿರುವವರಿಗೆ ವೀಸಾ ಸೇರಿದಂತೆ ನಾನಾ ಸಮಸ್ಯೆ ಕಾಣಿಸಿಕೊಳ್ಳಬಹುದು. ನೀವು ಬಹಳ ಭರವಸೆ ಇಟ್ಟುಕೊಂಡು ಹಾಗೂ ಈಗಾಗಲೇ ಹಣ ಕೊಟ್ಟು ಕಾಯುತ್ತಿರುವ ಕೆಲಸದಲ್ಲಿ ಒಂದಲ್ಲಾ ಒಂದು ಸಮಸ್ಯೆ ಕಾಣಿಸಿಕೊಳ್ಳಲಿದೆ. ಆದ್ದರಿಂದ ಕೆಲಸ ಆಗುವ ಮುಂಚೆಯೇ ಎಲ್ಲರ ಮುಂದೆ ಹೇಳಿಕೊಂಡು ಬರಲಿಕ್ಕೆ ಹೋಗಬೇಡಿ. ಹೀಗೆ ಮಾಡಿದಲ್ಲಿ ಅವಮಾನದ ಪಾಲಾಗುತ್ತೀರಿ. ಬ್ಯಾಂಕಿಂಗ್ ಕೆಲಸಗಳಲ್ಲಿ ಹಿನ್ನಡೆ ಆಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನೀವು ಆಡುವ ಮಾತಿಗೆ, ಬಳಸುವ ಪದಗಳಿಗೆ ನಾನಾ ಅರ್ಥಗಳನ್ನು ಕಲ್ಪಿಸಿ, ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ನೀವು ಬಹಳ ಭರವಸೆ ಇಟ್ಟುಕೊಂಡು ಆಪ್ತವಾದ ವಿಷಯವನ್ನು ಹಂಚಿಕೊಂಡ ವ್ಯಕ್ತಿಯು ಅದನ್ನು ಎಲ್ಲ ಕಡೆಗೂ ಪ್ರಚಾರ ಮಾಡಿಕೊಂಡು ಬರಲಿದ್ದಾರೆ. ಪುರುಷರಾದಲ್ಲಿ ಸ್ತ್ರೀಯರ ವಿಚಾರಕ್ಕೆ ಹಾಗೂ ಸ್ತ್ರೀಯರಾದಲ್ಲಿ ಪುರುಷರ ವಿಚಾರಕ್ಕೆ ಈ ದಿನ ಬಹಳ ಎಚ್ಚರಿಕೆಯಿಂದ ಇರಬೇಕು. ಉದ್ಯೋಗ ಸ್ಥಳದಲ್ಲಿ ಇದು ಬಹಳ ಮುಖ್ಯ ಕೆಲಸ, ನೀವೇ ಮಾಡಬೇಕು ಎಂದು ಹೇಳಿದ್ದನ್ನು ಯಾವುದೇ ಕಾರಣಕ್ಕೂ ಇತರರಿಗೆ ವಹಿಸಿಕೊಡಲು ಹೋಗಬೇಡಿ. ಮನೆ ಬದಲಾಯಿಸಬೇಕು ಅಥವಾ ಹೊಸ ಮನೆಗೆ ಹೋಗಬೇಕು ಎಂದುಕೊಳ್ಳುತ್ತಿರುವವರು ಪದೇಪದೇ ನಿರ್ಧಾರಗಳನ್ನು ಬದಲಾಯಿಸಿಕೊಳ್ಳುವುದಕ್ಕೆ ಹೋಗಬೇಡಿ.

ಲೇಖನ- ಎನ್‌.ಕೆ.ಸ್ವಾತಿ