Horoscope: ಈ ರಾಶಿಯವರ ಶತ್ರುಗಳು ಸಂಧಾನಕ್ಕೆ ಬರುವ ಸಾಧ್ಯತೆ ಇದೆ, ಹಿರಿಯರಿಂದ ನಿಮಗೆ ಮೆಚ್ಚುಗೆ ಸಿಗಬಹುದು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 28) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ರಿಂದ 23 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:53 ರಿಂದ 03:23ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:23 ರಿಂದ 07:53ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:23 ರಿಂದ ಮಧ್ಯಾಹ್ನ 10:53ರ ವರೆಗೆ.
ಸಿಂಹ ರಾಶಿ: ಶತ್ರುಗಳು ಸಂಧಾನಕ್ಕೆ ಬರುವ ಸಾಧ್ಯತೆ ಇದೆ. ನೀವು ಯಾವ ಮಾತಿಗೂ ಜಗ್ಗದವರಂತೆ ಇರುವಿರಿ. ನಿಮ್ಮ ಮನೋವಿಕಾರಗಳು ಒಂದೊಂದಾಗಿಯೇ ಗೊತ್ತಾಗುವುದು. ಖರೀದಿಸಿದ ಭೂಮಿಯನ್ನು ಮತ್ತೊಬ್ಬರಿಗೆ ಕೊಟ್ಟುಬಿಡುವಿರಿ. ಹಿರಿಯರಿಂದ ನಿಮಗೆ ಮೆಚ್ಚುಗೆ ಸಿಗಬಹುದು. ದಾಂಪತ್ಯದಲ್ಲಿ ಪ್ರೀತಿಗೆ ನೀವು ಮಾರುಹೋಗಬಹುದು. ಅತಿಥಿಗಳ ಆಗಮನವು ನಿಮ್ಮ ಮನೆಗೆ ಆಗಲಿದೆ. ವೃತ್ತಿಯಲ್ಲಿ ನಿಮ್ಮ ಸಹಕಾರಕ್ಕೆ ಪ್ರಶಂಸೆಯು ಸಿಗುವುದು. ಭವಿಷ್ಯದ ಜೀವನದ ಬಗ್ಗೆ ಭಯವು ಇರುವುದು. ನಿಮ್ಮ ಬಗ್ಗೆ ಅಪ್ರಾಮಾಣಿಕತೆಯ ಬಗ್ಗೆ ಮಾತುಗಳು ಕೇಳಿಬರುವುದು. ಪರಿಚಿತರ ಮಾತು ನಿಮ್ಮ ಮನಸ್ಸಿಗೆ ನಾಟುವುದು. ಕಳೆದುಹೋದ ಸಂಬಂಧವನ್ನು ಮತ್ತೆ ಸರಿ ಮಾಡಿಕೊಳ್ಳುವಿರಿ.
ಕನ್ಯಾ ರಾಶಿ: ನಿಮಗೆ ಇಂದು ಧೈರ್ಯದ ಕೊರತೆ ಕಾಣಿಸಿಕೊಳ್ಳಬಹುದು. ಕೆಲವು ಮಾನಸಿಕ ಸ್ಥಿತಿಯನ್ನು ಬಿಡಲು ಪ್ರಯತ್ನಿಸುವಿರಿ. ಆದರೆ ಅದು ನಿಮಗೆ ಗೊತ್ತಿಲ್ಲದೇ ನಿಮ್ಮನ್ನು ಆವರಿಸಬಹುದು. ನಿಮ್ಮ ಶಕ್ತಿ ಮೀರಿದ ಕಾರ್ಯಕ್ಕೆ ಬೆಲೆ ಸಿಗದೇ ಹೋಗುವುದು. ವಾಹನ ಖರೀದಿಸಲು ನಿಮಗೆ ಹಣಕಾಸಿನ ಕೊರತೆಯಾಗಿ ಮುಂದೂಡುವಿರಿ. ದಾಂಪತ್ಯದ ಇಂದಿನ ಕಲಹವನ್ನು ಅಲ್ಲಿಗೇ ನಿಲ್ಲಿಸಿ. ಹೆಚ್ಚು ಪ್ರಯತ್ನದಿಂದ ಅಲ್ಪ ಲಾಭವಾಗುವುದು. ನೇರವಾದ ಮಾತಿನಿಂದ ನಿಮಗೇ ನೋವಾಗುವುದು. ಬಂಧುಗಳ ಭೇಟಿಯು ನಿಮಗೆ ಸಮಾಧಾನವನ್ನು ತರದು. ತಾಯಿಯ ಜೊತೆ ವಾಗ್ವಾದಕ್ಕೆ ನಿಲ್ಲುವುದು ಬೇಡ. ಅಚಾತುರ್ಯವು ನಿಮ್ಮಿಂದ ಆಗಬಹುದು.
ತುಲಾ ರಾಶಿ: ನಿಮ್ಮ ಹಳೆಯ ವಸ್ತುಗಳನ್ನು ಹೊರಹಾಕಿ ಸಮಾಧಾನಪಟ್ಟುಕೊಳ್ಳುವಿರಿ. ಆದಾಯದ ವೃದ್ದಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಿರಿ. ತಂದೆಯ ವಿಚಾರದಲ್ಲಿ ಅನಾದರವು ಬರಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ನಿಮಗೆ ಅವಸರ ಹೆಚ್ಚಾಗಿರುವುದು. ಧನದ ಸಹಾಯವನ್ನು ನಿಮ್ಮ ಸ್ನೇಹಿತರು ನಿಮ್ಮಿಂದ ಬಯಸುವರು. ಇಂದು ಅಧಿಕ ಒತ್ತಡವಿಲ್ಲದೇ ಕಾರ್ಯವು ಮುಗಿಯುವುದು. ವಿದೇಶಪ್ರಯಾಣದಿಂದ ಖುಷಿಯು ಇರಲಿದೆ. ಸೌಂದರ್ಯಪ್ರಜ್ಞೆಯು ಇಂದು ಅಧಿಕವಾಗಿ ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ಕೊಡುವರು. ನಿಮ್ಮ ಭಾವನೆಗೆ ಸ್ಪಂದಿಸುವವರನ್ನು ಹುಡುಕುವಿರಿ. ಮನೆಯಲ್ಲಿ ನಡೆಯುವ ವಿವಾಹದ ಮಾತುಕತೆಗಳಿಂದ ನಿಮಗೆ ಖುಷಿಯಾಗುವುದು. ಪಿತ್ತಕ್ಕೆ ಸಂಬಂಧಿಸಿದಂತೆ ಖಾಯಿಲೆಯು ಪುನಃ ಕಾಣಿಸಿಕೊಳ್ಳಬಹುದು.
ವೃಶ್ಚಿಕ ರಾಶಿ: ವ್ಯಾಪರದಲ್ಲಿ ಸಣ್ಣ ಬದಲಾವಣೆಯನ್ನು ತಂದುಕೊಳ್ಳುವಿರಿ. ಅಪ್ರಬುದ್ಧ ಆಲೋಚನೆಗಳು ನಿಮ್ಮಿಂದ ದೂರವಿರಲಿ. ಸಾಹಸದ ಕೆಲಸಕ್ಕೆ ನೀವು ಹೆಚ್ಚು ಉತ್ಸುಕರಾಗಿದ್ದೀರಿ. ನಿಮ್ಮ ವ್ಯಕ್ತಿತ್ವವು ಬೆಳಕಿಗೆ ಬರಲು ಇಂದು ಸಹಾಯಕವಾಗುವುದು. ಮೆಚ್ಚುಗೆಯ ಮಾತಿನಿಂದ ಸಂಕೋಚಗೊಳ್ಳುವಿರಿ. ಆರಿಸಿಕೊಂಡ ಆಯ್ಕೆಯು ನಿಮಗೆ ಇಷ್ಟವಾಗದೇ ಈಗ ಇರುವುದು. ಸಾಮಾಜಿಕ ಗೌರವದಿಂದ ಅಹಂಕಾರವು ಬರುವ ಸಾಧ್ಯತೆ ಇದೆ. ಪರಿಚಿತರ ವಿಚಾರದಲ್ಲಿ ನೀವು ನಕಾರಾತ್ಮಕವಾಗಿ ಮಾತನಾಡುವಿರಿ. ಮಕ್ಕಳಿಗೆ ನಿಮ್ಮ ಪ್ರೀತಿಯ ಅವಶ್ಯಕತೆ ಇರುವುದು. ಸಂಪಾಡನೆಯ ಕಡೆ ಅಧಿಕ ಗಮನ ಇರಲಿದ್ದು ಸಂಬಂಧಗಳ ಬಗ್ಗೆ ಆಲೋಚನೆಯನ್ನು ಬಿಡುವಿರಿ. ಭೂಮಿಯ ಮೇಲೆ ಹೂಡಿಕೆ ಮಾಡುವುದು ನಿಮಗೆ ಸೂಖ್ತ ಎನಿಸಬಹುದು.